ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯೊಬ್ಬ, ರಾಜೀ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ನಡೆದಿದೆ.

ಬಳ್ಳಾರಿ (ಜು.07): ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯೊಬ್ಬ, ರಾಜೀ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಗುಗ್ಗರಹಟ್ಟಿಯಲ್ಲಿ ನಡೆದಿದೆ. ಮೃತರನ್ನು ನಾಗಲಕ್ಷ್ಮಿ (24) ಮತ್ತು ಅವರ ತಂದೆ ಶ್ರೀನಿವಾಸ (48) ಎಂದು ಗುರುತಿಸಲಾಗಿದೆ. ಆರೋಪಿ ತೇಜಾ (29) ಹಾಗೂ ಆತನ ತಂದೆ ಗುರುಶಂಕರ (50) ಈ ದ್ವಿಹ*ತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ತೇಜಾ ತನ್ನ ಪತ್ನಿ ನಾಗಲಕ್ಷ್ಮಿ ಮೇಲೆ ಅನುಮಾನ ಪಟ್ಟು ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ರಾಜೀ ಸಂಧಾನ ನಡೆಸಲು ಶ್ರೀನಿವಾಸ ಸ್ಥಳಕ್ಕೆ ಬಂದಿದ್ದರು. ಆದರೆ ಮಾತುಕತೆ ವೇಳೆ ವಾಗ್ವಾದ ತಾರಕಕ್ಕೇರಿ, ಆರೋಪಿ ತೇಜಾ ಹಾಗೂ ಆತನ ತಂದೆ ಸೇರಿ ನಾಗಲಕ್ಷ್ಮಿ ಮತ್ತು ಶ್ರೀನಿವಾಸ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಕೌಟುಂಬಿಕ ಕಲಹವೇ ದುರಂತಕ್ಕೆ ಕಾರಣ?

ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳು ದೋಬಿ (ಇಸ್ತ್ರಿ) ಕೆಲಸ ಮಾಡಿಕೊಂಡಿದ್ದು, ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಪಿಎಂಸಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದ್ವಿಹ*ತ್ಯೆಗೆ ನಿಖರ ಕಾರಣವೇನು ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಏನು ಎಂಬುದರ ಕುರಿತು ಎಪಿಎಂಸಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.