ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಖಾಲಿಯಾಗಿದ್ದ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಐದು ದಿನಗಳಲ್ಲಿ 50 ಟಿಎಂಸಿಗೂ ಅಧಿಕ ನೀರು ಹರಿದು ಬಂದಿದ್ದು, ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಬಹುತೇಕ ದ್ವಿಗುಣಗೊಂಡಿದೆ.
ಬೆಂಗಳೂರು (ಜು.11) ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಮುಂಗಾರು ಆರಂಭವಾಗಿ ತಿಂಗಳಾದರೂ ಖಾಲಿಯಾಗಿದ್ದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಐದು ದಿನದಲ್ಲೇ ಡ್ಯಾಂಗಳಿಗೆ 50 ಟಿಎಂಸಿಗೂ ಅಧಿಕ ನೀರು ಹರಿದುಬಂದಿದ್ದು, ಈ ಅವಧಿಯಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಬಹುತೇಕ ಡಬಲ್ ಆಗಿದೆ
ತುಂಗಭದ್ರಾ ಡ್ಯಾಂಗೆ 4 ಟಿಎಂಸಿಗಿಂತ ಅಧಿಕ ನೀರು
ಮುನಿರಾಬಾದ್ (ಜು.11): ಕಲ್ಯಾಣ ಕರ್ನಾಟಕದ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯಕ್ಕೆ ಶುಕ್ರವಾರ 4 ಟಿಎಂಸಿಗಿಂತ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದು, ಈ ಪ್ರಸಕ್ತ ಸಾಲಿನಲ್ಲಿ 3 ದಿನದಲ್ಲಿ 8 ಟಿಎಂಸಿ ನೀರು ಹರಿದು ಬಂದಿದೆ. ಜು.8ರಂದು 24,000 ಕ್ಯೂಸೆಕ್, ಜು.9ರಂದು 31,456 ಕ್ಯೂಸೆಕ್, ಜು.10ರಂದು 49,726 ಕ್ಯೂಸೆಕ್ ನೀರು ಜಲಾಶಯಕ್ಕೆ ಬಂದಿದೆ.
ಇದನ್ನೂ ಓದಿ:
ರಾಜ್ಯದ ಜಲಾಶಯಗಳ ನೀರಿನ ಸಂಗ್ರಹ ಡಬಲ್
ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಮುಂಗಾರು ಆರಂಭವಾಗಿ ತಿಂಗಳಾದರೂ ಖಾಲಿಯಾಗಿದ್ದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಐದು ದಿನದಲ್ಲೇ ಡ್ಯಾಂಗಳಿಗೆ 50 ಟಿಎಂಸಿಗೂ ಅಧಿಕ ನೀರು ಹರಿದುಬಂದಿದ್ದು, ಈ ಅವಧಿಯಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಬಹುತೇಕ ಡಬಲ್ ಆಗಿದೆ
ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ
- ಕಬಿನಿ 53% 2284 2267.35
- ಹೇಮಾವತಿ 57% 2922 2902.07
- ತುಂಗಭದ್ರಾ 17% 1624.83 1596.66
- ಸೂಪಾ(ಮೀ.) 25% 564 529.00
- ಕೆಆರ್‌ಎಸ್ 29% 124.80 87.50
- ಘಟಪ್ರಭಾ 34% 2175 2120.60
- ಲಿಂಗನಮಕ್ಕಿ 19% 1819.12 1762.05
- ಭದ್ರಾ 44% 2158.00 2118.08
- ಹಾರಂಗಿ 53% 2859 2843.66
- ಆಲಮಟ್ಟಿ(ಮೀ.) 46% 519.60 514.27
- ನಾರಾಯಣಪುರ(ಮೀ.) 59% 492.25 488.74
- ಮಲಪ್ರಭಾ 31% 2079.50 2053.10


