11:38 PM (IST) Jan 04

Karnataka News Live 4 January 2026ಅಮೆರಿಕದ ಸೆರೆಯಲ್ಲಿದ್ರೂ ಗುರುವಿನ ಸ್ಮರಣೆ? ವೆನೆಜುವೆಲಾ ಅಧ್ಯಕ್ಷನ ಬದುಕನ್ನೇ ಬದಲಿಸಿದ ಆ ಭಾರತೀಯ ಸಂತ ಯಾರು?

ಅಮೆರಿಕ ಸೇನೆಯಿಂದ ಬಂಧಿತರಾಗಿರುವ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬದುಕಿನ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಬಸ್ ಡ್ರೈವರ್ ಆಗಿದ್ದ ಮಡುರೊ, ಆ.ಪ್ರ ಪುಟ್ಟಪರ್ತಿ ಸತ್ಯ ಸಾಯಿಬಾಬಾ ಅವರ ಕಟ್ಟಾ ಭಕ್ತರಾಗಿದ್ದರು ಮತ್ತು ತಮ್ಮ ಗುರುವಿನ ನಿಧನಕ್ಕೆ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದರು.

Read Full Story
10:17 PM (IST) Jan 04

Karnataka News Live 4 January 2026ಕುತೂಹಲದ ಲವ್​ಸ್ಟೋರಿ ಹೇಳಿದ ನಟಿ ದಿಶಾ - ಪೂರ್ಣ ಸಂದರ್ಶನದಲ್ಲಿ 8 ಕನ್ನಡ ಪದ ಬಳಕೆಗೆ ನೆಟ್ಟಿಗರ ಧನ್ಯವಾದ!

'ಲಕ್ಷ್ಮೀನಿವಾಸ' ಸೀರಿಯಲ್ ಖ್ಯಾತಿಯ ನಟಿ ದಿಶಾ ಮದನ್ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶಶಾಂಕ್ ವಾಸುಕಿ ಗೋಪಾಲ್ ಜೊತೆ ಶುರುವಾದ ಪ್ರೀತಿ, ಸುಲಭವಾಗಿ ಮದುವೆಯಾದ ಕಥೆಯನ್ನು ಹಂಚಿಕೊಂಡಿದ್ದಾರೆ. 

Read Full Story
10:14 PM (IST) Jan 04

Karnataka News Live 4 January 2026ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆತ, ಠಾಣೆ ಮುಂಭಾಗ ಜಮಾಯಿಸಿದ ಜನ

ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆತ, ಠಾಣೆ ಮುಂಭಾಗ ಜಮಾಯಿಸಿದ ಜನ, ಕಲ್ಲೆಸೆತ ಘಟನೆಯಲ್ಲಿ ಓಂ ಶಕ್ತಿ ಮಾಲಾಧಾರಿ ಮಗುವಿಗೆ ಗಾಯವಾಗಿದೆ. ಅನ್ಯಕೋಮಿನ ಗುಂಪಿನಿಂದ ಕಲ್ಲೆಸತವಾಗಿದೆ ಎಂಬ ಆರೋಪ ಕೇಳಿಬಂದದಿದೆ.

Read Full Story
09:07 PM (IST) Jan 04

Karnataka News Live 4 January 2026ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಕುಟುಂಬದ ರಂಪಾಟಕ್ಕೆ 29ರ ಯುವಕ ಬಲಿ

ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಕುಟುಂಬದ ರಂಪಾಟಕ್ಕೆ 29ರ ಯುವಕ ಬಲಿಯಾಗಿದ್ದಾನೆ. ಅಪ್ಪ ಮಗ ಪದೇ ಪದೇ ಜಗಳವಾಡುತ್ತಿದ್ದ ಕಾರಣ ಕುಟುಂಬ ಮೂರು ದಿಕ್ಕಾಗಿತ್ತು. ಒಬ್ಬನೇ ಮಗ ಇದೀಗ ದುರಂತ ಅಂತ್ಯಕಂಡಿದ್ದಾನೆ.

Read Full Story
08:05 PM (IST) Jan 04

Karnataka News Live 4 January 2026ವೆನೆಜುವೆಲಾದಲ್ಲಿ 'ಮಡುರೊ' ಯುಗ ಅಂತ್ಯ - ಇಸ್ರೇಲ್ ಶತ್ರು ರಾಷ್ಟ್ರಗಳಿಗೆ ಶುರುವಾಯ್ತು ಕೌಂಟ್ ಡೌನ್!

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಸೇನೆ ಸೆರೆಹಿಡಿದಿದ್ದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ಲಾಘಿಸಿದ್ದಾರೆ. ಈ ಕ್ರಮವು ಇರಾನ್‌ಗೆ ಬಲವಾದ ಎಚ್ಚರಿಕೆ ಎಂದು ಅವರು ಬಣ್ಣಿಸಿದ್ದಾರೆ.

Read Full Story
07:39 PM (IST) Jan 04

Karnataka News Live 4 January 2026ರಾಜ್ಯದ ಕಾರ್ಮಿಕರ ದಾರಿತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ - ಸಚಿವ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು, ನರೇಗಾ ಯೋಜನೆ 'ವಿಬಿಜಿ ರಾಮ್ ಜಿ' ಎಂದು ಪರಿವರ್ತಿಸಿರುವುದರ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಹೇಳಿ ದಾರಿತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹೊಸ ಯೋಜನೆಯಡಿ ಉದ್ಯೋಗದ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Read Full Story
07:37 PM (IST) Jan 04

Karnataka News Live 4 January 2026ವಿವಾಹ ಪೂರ್ವ ವೈದ್ಯಕೀಯ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ; ಮದುವೆಗೂ ಮುನ್ನವೇ ಉರಿದಾಡೋರಿಗೆ ಬ್ರೇಕ್!

ಮದುವೆ ದೇಶದ ಒಳಗೆ ಅಥವಾ ಹೊರಗೆ ನಡೆದರೂ, ಅಥವಾ ವಧು-ವರರಲ್ಲಿ ಒಬ್ಬರು ವಿದೇಶಿಗರಾಗಿದ್ದರೂ, ಮದುವೆ ಒಪ್ಪಂದಕ್ಕೆ ಈ ವೈದ್ಯಕೀಯ ಪರೀಕ್ಷೆ ಮೂಲಭೂತ ನಿಯಮವಾಗಿರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ವ್ಯವಸ್ಥೆಯನ್ನು ಮಾಡಿದೆ.

Read Full Story
07:15 PM (IST) Jan 04

Karnataka News Live 4 January 2026ತನಿಖೆಯ ನೆಪದಲ್ಲಿ ಥೀಮ್ ಪಾರ್ಕ್ ಅನಾಥ - ಪರಶುರಾಮನಿಗೇ ಕನ್ನ ಹಾಕಿದ ಕಳ್ಳರು - ಕಾಂಗ್ರೆಸ್ ದ್ವೇಷಕ್ಕೆ ಪ್ರತಿಷ್ಠಿತ ಯೋಜನೆ ಬಲಿ?

ಕಾರ್ಕಳದ ವಿವಾದಿತ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳರು ಬೆಲೆಬಾಳುವ ತಾಮ್ರದ ಹೊದಿಕೆಗಳನ್ನು ಕದ್ದೊಯ್ದಿದ್ದಾರೆ. ನಿರ್ವಹಣೆಯಿಲ್ಲದೆ ಪಾಳುಬಿದ್ದಿರುವ ಈ ಯೋಜನೆಗೆ ಕಾಂಗ್ರೆಸ್ ಸರ್ಕಾರದ ದ್ವೇಷ ರಾಜಕಾರಣವೇ ಕಾರಣ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
Read Full Story
07:10 PM (IST) Jan 04

Karnataka News Live 4 January 2026ಬಾದಾಮಿ ದನದ ಕೊಟ್ಟಿಗೆಗೆ ಬೆಂಕಿಹಚ್ಚಿ ಪರಾರಿಯಾದ ದುಷ್ಕರ್ಮಿಗಳು; ರೈತ ಕುಬೇರನ ಎತ್ತಿನ ಸ್ಥಿತಿ ಗಂಭೀರ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ದುಷ್ಕರ್ಮಿಗಳು ರೈತರೊಬ್ಬರ ದನದ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದಾರೆ. ಈ ಅಮಾನವೀಯ ಘಟನೆಯಲ್ಲಿ ಕೊಟ್ಟಿಗೆ, ಮೇವು ಸಂಪೂರ್ಣ ಸುಟ್ಟುಹೋಗಿದ್ದು, ಒಂದು ಎತ್ತು ಗಂಭೀರವಾಗಿ ಗಾಯಗೊಂಡಿದೆ.

Read Full Story
06:51 PM (IST) Jan 04

Karnataka News Live 4 January 2026ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ; ಹಳಿಯಾಳ ಯುವಕ ಸ್ಥಳದಲ್ಲೇ ಸಾವು

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾವಲವಾಡ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ 28 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ದುರ್ಘಟನೆಗೆ ಕಾರಣ ಎನ್ನಲಾಗಿದೆ.

Read Full Story
06:36 PM (IST) Jan 04

Karnataka News Live 4 January 2026ಯಲ್ಲಾಪುರ ರಂಜಿತಾ ಕುಟುಂಬಕ್ಕೆ ವಿಜಯೇಂದ್ರ ಸಾಂತ್ವನ, ₹5 ಲಕ್ಷ ವೈಯಕ್ತಿಕ ಪರಿಹಾರ ವಿತರಣೆ

ಉತ್ತರ ಕನ್ನಡದಲ್ಲಿ ವಿವಾಹ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಹತ್ಯೆಯಾದ ಮಹಿಳೆ ರಂಜಿತಾ ಬನ್ಸೋಡೆ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ, 5 ಲಕ್ಷ ರೂ. ಪರಿಹಾರ ನೀಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರು,.

Read Full Story
06:32 PM (IST) Jan 04

Karnataka News Live 4 January 2026Theater Mafia - 'ದುಡ್ಡು-ಪವರ್ ಇದ್ದ ನನಗೇ ಯಾಮಾರಿಸಿದ್ರು' ಸ್ಯಾಂಡಲ್‌ವುಡ್‌ನಲ್ಲಿ 'ಥಿಯೇಟರ್ ಮಾಫಿಯಾ' ಬಗ್ಗೆ ಝೈದ್ ಖಾನ್ ಸ್ಫೋಟಕ ಹೇಳಿಕೆ!

ನಟ ಝೈದ್ ಖಾನ್ ಕನ್ನಡ ಚಿತ್ರರಂಗದಲ್ಲಿನ 'ಥಿಯೇಟರ್ ಮಾಫಿಯಾ' ಪೈರಸಿಗಿಂತಲೂ ಅಪಾಯಕಾರಿ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೊದಲ ಚಿತ್ರಕ್ಕೆ ಸ್ಕ್ರೀನ್‌ಗಳ ಸಂಖ್ಯೆ ಕಡಿಮೆ ಮಾಡಿದ್ದನ್ನು ಉಲ್ಲೇಖಿಸಿ, ಹಣ ಮತ್ತು ಪ್ರಭಾವವಿದ್ದ ತಮಗೇ ಅನ್ಯಾಯವಾದರೆ ಹೊಸಬರ ಗತಿಯೇನು ಎಂದು ಪ್ರಶ್ನಿಸಿದ್ದಾರೆ. 

Read Full Story
06:00 PM (IST) Jan 04

Karnataka News Live 4 January 2026ಸಂಘಿಗಳ ಅಟ್ಟಹಾಸ ಮಿತಿಮೀರುತ್ತಿದೆ, ಸುಹಾಸ್ ಶೆಟ್ಟಿ ಟ್ರೀಟ್‌ಮೆಂಟ್ ಕೊಡಬೇಕು; 'muslim__leader' ಖಾತೆಯ ಪೋಸ್ಟ್!

ಮಂಗಳೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ 'muslim__leader' ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ನೈತಿಕ ಪೊಲೀಸ್‌ಗಿರಿ ಘಟನೆಯನ್ನು ಮುಂದಿಟ್ಟುಕೊಂಡು ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಜಪೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Read Full Story
05:46 PM (IST) Jan 04

Karnataka News Live 4 January 2026Z ಸೆಕ್ಯೂರಿಟಿ ಬೇಕಾದ್ರೆ ಇಟ್ಕೊಳ್ಳಿ, ನೂರು ಜನ ಪಾರ್ಟಿ ಕಾರ್ಯಕರ್ತರನ್ನೇ ನಿಯೋಜಿಸಲಿ, ಜನಾರ್ದನ ರೆಡ್ಡಿ ಭದ್ರತೆ ವಿಚಾರದಲ್ಲಿ ಡಿಕೆ ಶಿವಕುಮಾರ್ ವ್ಯಂಗ್ಯ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಳ್ಳಾರಿ ಕೊಲೆ ಪ್ರಕರಣದ ತನಿಖೆ, ಜನಾರ್ದನ ರೆಡ್ಡಿ ಭದ್ರತೆ, ವಾಲ್ಮೀಕಿ ಪ್ರತಿಮೆ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ. ರೆಡ್ಡಿ ಭದ್ರತೆ ಬಗ್ಗೆ ವ್ಯಂಗ್ಯವಾಡಿದ ಅವರು, ಬಳ್ಳಾರಿ ಪ್ರಕರಣದ ತನಿಖೆ ಅಂತಿಮ ತೀರ್ಮಾನ ಸಿಎಂ, ಗೃಹ ಸಚಿವರು ನೋಡ್ಕೊಳ್ತಾರೆ ಎಂದರು.

Read Full Story
05:22 PM (IST) Jan 04

Karnataka News Live 4 January 2026ಅಪಘಾತದ ಶೂಟಿಂಗ್​ ವೇಳೆ ಅವಘಡ - ಸ್ವಲ್ಪದರಲ್ಲಿಯೇ ಪಾರಾದ ನಟಿ- ಶಾಕಿಂಗ್​ ವಿಡಿಯೋ ವೈರಲ್

ಸೀರಿಯಲ್ ಒಂದರ ಅಪಘಾತದ ದೃಶ್ಯದ ಚಿತ್ರೀಕರಣದ ವೇಳೆ ನಟಿಯೊಬ್ಬರು ಅಪಾಯಕ್ಕೆ ಸಿಲುಕಿದ್ದಾರೆ. ಸುರಕ್ಷತೆಗಾಗಿ ಹಗ್ಗ ಕಟ್ಟಿದ್ದರೂ, ಹಾರಿದ ರಭಸಕ್ಕೆ ನಟಿ ವಾಹನಕ್ಕೆ ಗುದ್ದಿ ಗಾಯಗೊಂಡಿದ್ದು, ಈ ಘಟನೆಯು ತೆರೆಯ ಹಿಂದೆ ಕಲಾವಿದರು ಎದುರಿಸುವ ಸವಾಲು ಮತ್ತು ಅಪಾಯಗಳನ್ನು ತೋರಿಸುತ್ತದೆ.
Read Full Story
05:13 PM (IST) Jan 04

Karnataka News Live 4 January 2026ಕನ್ನಡ ಇಂಗ್ಲೀಷ್ ಎರಡರಲ್ಲೂ ಸೊಗಸಾದ ವೀಕ್ಷಕ ವಿವರಣೆ - ಸುಳ್ಯದ ಪೋರನ ಕ್ರಿಕೆಟ್ ಕಾಮೆಂಟರಿಗೆ ಮನಸೋತ ನೆಟ್ಟಿಗರು -

ದಕ್ಷಿಣ ಕನ್ನಡದ ಸುಳ್ಯದ 14 ವರ್ಷದ ಬಾಲಕ ಜಸ್ವಿತ್, ತನ್ನ ನಿರರ್ಗಳ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕ್ರಿಕೆಟ್ ಕಾಮೆಂಟರಿಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ. ಸ್ಥಳೀಯ ಟೂರ್ನಿಯೊಂದರಲ್ಲಿ ಆತ ವೀಕ್ಷಕ ವಿವರಣೆ ನೀಡುತ್ತಿರುವ ವೀಡಿಯೋ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story
05:02 PM (IST) Jan 04

Karnataka News Live 4 January 2026ಮುಖ್ಯಮಂತ್ರಿಗಳು ರಾಜ್ಯವನ್ನ ಯಶಸ್ವಿಯಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ - ಹೆಚ್‌ಸಿ ಮಹದೇವಪ್ಪ

ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು, ಕಾಂಗ್ರೆಸ್ ಸರ್ಕಾರವು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ, ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

Read Full Story
04:48 PM (IST) Jan 04

Karnataka News Live 4 January 2026ಬಳ್ಳಾರಿ ಈಗ 'ಗುಂಡು-ಗೂಂಡಾ'ಗಳ ರಿಪಬ್ಲಿಕ್ - 'ಜನಾರ್ದನ ರೆಡ್ಡಿ ಕೊಲೆಗೆ ಸಂಚು ನಡೆದಿದೆ' ಆರ್. ಅಶೋಕ ಆರೋಪ

ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಮತ್ತು ಗುಂಡಿನ ಚಕಮಕಿಯು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮುಗಿಸಲು ನಡೆದ ಸಂಚು ಎಂದು ವಿಪಕ್ಷ ನಾಯಕ ಆರ್. ಅಶೋಕ ಗಂಭೀರವಾಗಿ ಆರೋಪಿಸಿದ್ದಾರೆ. ಸರ್ಕಾರದ ವೈಫಲ್ಯ, ಪೊಲೀಸ್ ಇಲಾಖೆಯ ದುರ್ಬಳಕೆ ಮತ್ತು ಎಸ್‌ಪಿ ಅಮಾನತನ್ನು ಖಂಡಿಸಿದರು.

Read Full Story
04:31 PM (IST) Jan 04

Karnataka News Live 4 January 2026BBK 12 - ಎಷ್ಟೇ ಬಾರಿ ಕೇಳಿದ್ರೂ ಕೂಡ Kiccha Sudeep ಪ್ರಶ್ನೆಗೆ ಗಿಲ್ಲಿ ನಟ ಉತ್ತರಿಸಲಿಲ್ಲ - ಭಾರೀ ಮುಖಭಂಗ!

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಕ್ಯಾಪ್ಟನ್‌ ಆಗಿದ್ದರು. ಆಗ ಅವರು ಕಾವ್ಯ ಶೈವ ಪರವಾಗಿ ನಿರ್ಧಾರಗಳನ್ನು ತಗೊಂಡಿದ್ದಾರೆ. ಈಗ ಸ್ಪರ್ಧಿಗಳ ಆರೋಪ ನಿಜ ಎಂಬಂತಾಗಿದೆ. ಹಾಗಾದರೆ ಏನಾಯ್ತು?

Read Full Story
04:31 PM (IST) Jan 04

Karnataka News Live 4 January 2026ಯಲ್ಲಾಪುರದ ರಂಜಿತಾಳ ಸಹೋದರ ರಫೀಕ್‌ನ ಆಪ್ತ ಗೆಳೆಯ; ಬೆಚ್ಚಿಬೀಳಿಸುವ ಮಾಹಿತಿ ಬಿಚ್ಚಿಟ್ಟ ಕುಟುಂಬ

ಯಲ್ಲಾಪುರದ ರಂಜಿತಾ ಬನ್ಸೋಡೆ ಕೊಲೆ ಪ್ರಕರಣದಲ್ಲಿ, ಆರೋಪಿ ರಫೀಕ್ ಮೃತಳ ಸಹೋದರನ ಆಪ್ತ ಸ್ನೇಹಿತ ಎಂಬುದು ಫೋಟೋಗಳಿಂದ ಬಹಿರಂಗವಾಗಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿ, ನಂತರ ಆರೋಪಿ ಕಾಡಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಘಟನೆಯು ಯಲ್ಲಾಪುರದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ.
Read Full Story