- Home
- Entertainment
- TV Talk
- BBK 12: ಎಷ್ಟೇ ಬಾರಿ ಕೇಳಿದ್ರೂ ಕೂಡ Kiccha Sudeep ಪ್ರಶ್ನೆಗೆ ಗಿಲ್ಲಿ ನಟ ಉತ್ತರಿಸಲಿಲ್ಲ: ಭಾರೀ ಮುಖಭಂಗ!
BBK 12: ಎಷ್ಟೇ ಬಾರಿ ಕೇಳಿದ್ರೂ ಕೂಡ Kiccha Sudeep ಪ್ರಶ್ನೆಗೆ ಗಿಲ್ಲಿ ನಟ ಉತ್ತರಿಸಲಿಲ್ಲ: ಭಾರೀ ಮುಖಭಂಗ!
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಕ್ಯಾಪ್ಟನ್ ಆಗಿದ್ದರು. ಆಗ ಅವರು ಕಾವ್ಯ ಶೈವ ಪರವಾಗಿ ನಿರ್ಧಾರಗಳನ್ನು ತಗೊಂಡಿದ್ದಾರೆ. ಈಗ ಸ್ಪರ್ಧಿಗಳ ಆರೋಪ ನಿಜ ಎಂಬಂತಾಗಿದೆ. ಹಾಗಾದರೆ ಏನಾಯ್ತು?

ನಾಮಿನೇಶನ್ ಟಾಸ್ಕ್ ಹೇಗಿತ್ತು?
ನಾಮಿನೇಶನ್ ಟಾಸ್ಕ್ ವೇಳೆ ಓರ್ವ ವ್ಯಕ್ತಿ ಇಬ್ಬರು ಮನೆಯಲ್ಲಿ ಯಾಕೆ ಇರಲು ಅರ್ಹರಲ್ಲ ಎಂದು ಹೇಳಬೇಕಿತ್ತು. ಆ ವಾದದಲ್ಲಿ ಯಾರ ವಾದ ವೀಕ್ ಇರುತ್ತದೆಯೋ ಅವರು ನಾಮಿನೇಶನ್‌ನಿಂದ ಬಚಾವ್ ಆದರು.
ಕಾವ್ಯರನ್ನು ನಾಮಿನೇಟ್ ಮಾಡಲ್ಲ
ನಾಮಿನೇಶನ್ ಮಾಡುವ ಅಧಿಕಾರವು ಕ್ಯಾಪ್ಟನ್ ಗಿಲ್ಲಿ ನಟರಿಗೆ ಇರುವುದು. ಬಿಗ್ ಬಾಸ್ ಮನೆಯಲ್ಲಿ ಯಾರು ಏನೇ ಕಾರಣ ಕೊಟ್ಟರೂ ಕೂಡ ಗಿಲ್ಲಿ ನಟ ಮಾತ್ರ ಕಾವ್ಯ ಶೈವ ಅವರನ್ನು ನಾಮಿನೇಟ್ ಮಾಡಲಿಲ್ಲ.
ಕಾವ್ಯ ಪರವಾಗಿ ಗಿಲ್ಲಿ ನಟ
ಕಿಚ್ಚನ ಪಂಚಾಯಿತಿ ವೇಳೆ ಕಾವ್ಯ ಅವರನ್ನು ನಾಮಿನೇಟ್ ಮಾಡಲು ಕಾರಣ ಕೊಡಿ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಯಾವಾಗಲೂ ಕಾವ್ಯ ಪರವಾಗಿ ಗಿಲ್ಲಿ ನಟ ಇದ್ದಾರೆ ಎಂದು ಇಡೀ ಮನೆಗೆ ಮನೆಯೇ ಹೇಳಿತ್ತು.
ಧನುಷ್‌ಗೆ ಸಲಹೆ
ಧನುಷ್ ಗೌಡ ಅವರು ಬುದ್ಧಿವಂತರಾಗಿದ್ದರೆ, ಕಾವ್ಯ ಶೈವ ಮನೆಯವರು ಬಂದು ಮಾತನಾಡಿದ್ದು ತಪ್ಪು ಎಂಬ ಕಾರಣ ನೀಡಿ, ಇನ್ನೊಬ್ಬರ ಬಗ್ಗೆ ಏನೂ ಮಾತನಾಡದೆ ಇದ್ದಿದ್ದರೂ ಕೂಡ ನಾನು ಕಾವ್ಯ ಅವರನ್ನೇ ನಾಮಿನೇಟ್ ಮಾಡಬೇಕಾಗಿತ್ತು ಎಂದು ಗಿಲ್ಲಿ ನಟ ಹೇಳುತ್ತಾರೆ.
ಉತ್ತರ ಕೊಡಲೇ ಇಲ್ಲ
ಆಗ ಸುದೀಪ್ ಅವರು ಕಾವ್ಯ ಅವರನ್ನು ನಾಮಿನೇಟ್ ಮಾಡಲು ಫ್ಯಾಮಿಲಿ ವಿಷಯ ಬಿಟ್ಟು ಬೇರೆ ಕಾರಣ ಕೊಡಿ. ಐದು ಬೇಡ, ಮೂರು ಕಾರಣ ಕೊಡಿ ಎಂದು ಹೇಳಿದ್ದಾರೆ. ಸುದೀಪ್ ಎಷ್ಟೇ ಬಾರಿ ಪ್ರಶ್ನೆ ಮಾಡಿದರೂ ಕೂಡ ಗಿಲ್ಲಿ ನಟ ಮಾತ್ರ ಯಾವುದೇ ಕಾರಣ ಕೊಟ್ಟಿಲ್ಲ. ಅಲ್ಲಿಗೆ ಸ್ಪರ್ಧಿಗಳು ಮಾಡಿದ ಆರೋಪವನ್ನು ಗಿಲ್ಲಿ ಒಪ್ಪಿಕೊಂಡಂತಾಯಿತು. ಗಿಲ್ಲಿಯಿಂದ ಕಾವ್ಯ ಹೆಸರು ಕೇಳಿ ಬರುತ್ತದೆಯೇ ವಿನಃ ಕಾವ್ಯ ಸ್ವತಂತ್ರ ಆಟ ಆಡುತ್ತಿದ್ದಾರೆ ಎಂದು ಯಾರೂ ಕೂಡ ಹೇಳಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

