ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆತ, ಠಾಣೆ ಮುಂಭಾಗ ಜಮಾಯಿಸಿದ ಜನ, ಕಲ್ಲೆಸೆತ ಘಟನೆಯಲ್ಲಿ ಓಂ ಶಕ್ತಿ ಮಾಲಾಧಾರಿ ಮಗುವಿಗೆ ಗಾಯವಾಗಿದೆ. ಅನ್ಯಕೋಮಿನ ಗುಂಪಿನಿಂದ ಕಲ್ಲೆಸತವಾಗಿದೆ ಎಂಬ ಆರೋಪ ಕೇಳಿಬಂದದಿದೆ. 

ಬೆಂಗಳೂರು (ಜ.04) ಹಿಂದು ದೇವರ ಮೆರವಣಿಗೆ ವೇಳೆ ಕಲ್ಲು ತೂರಾಟ ನಡದ ಘಟನೆ ಬೆಂಗಳೂರಿನ ಜೆ ಜೆ ಆರ್ ನಗರದ ವಿಎಸ್ ಗಾರ್ಡನ್ ನ ಓಂ ಶಕ್ತಿ ದೇವಸ್ಥಾನದ ಬಳಿ ನಡೆದಿದೆ. ಓಂ ಶಕ್ತಿ ಮಾಲಾಧಾರಿಗಳು ದೇವಿಯ ತೇರು ಎಳೆಯತ್ತಿರುವ ವೇಳೆ ಕಲ್ಲೆಸತ ನಡೆದಿದೆ. ತೇರಿಗೆ ಅನ್ಯಕೋಮಿನವರು ಕಲ್ಲು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಲ್ಲೇಟಿಗೆ ಓಂ ಶಕ್ತಿ ಮಾಲಾಧಾರಿ ಮಗು ಗಾಯಗೊಂಡಿದೆ. ಹಿಂದೂ ದೇವರ ಉತ್ಸವವೇಳೆ ಕಲ್ಲೆಸೆತಕ್ಕೆ ಹಿಂದೂ ಸಂಘಟನೆಗಳು ಕೆರಳಿದೆ. ಪರಿಣಾಮ ಜೆಜೆನಗರ ಪೊಲೀಸ್ ಠಾಣೆ ಮಂದೆ ಹಿಂದೂಗಳು ಜಮಾಯಿಸಿದ್ದಾರೆ. ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ನಮ್ಮ ಮಗಳ ತಲೆ ಮೇಲೆ ಬಂದು ಕಲ್ಲು ಬಿದ್ದಿದೆ

ಓಂ ಶಕ್ತಿ ದೇವಿಯ ಉತ್ಸವ ನಡೆಯುತ್ತಿದೆ. ಇಂದು ವಿಶೇಷ ದಿನವಾಗಿತ್ತು ಓಂ ಶಕ್ತಿ ಮಾಲಾಧಿಕಾರಿಗಳು ವೃತ ಕೈಗೊಂಡು ದೇವಿಯ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇಂದು ದೇವಿಯ ತೇರು ಎಳೆಯುವಾಗ ಅನ್ಯಕೋಮಿನ ಏರಿಯಾದಿಂದ ಕಲ್ಲು ತೂರಾಟವಾಗಿದೆ ಎಂದು ಓಂ ಶಕ್ತಿ ಮಾಲಾಧಾರಿ ವರದರಾಜ್ ಹಳಿದ್ದಾರೆ. 8.10ರ ಸುಮಾರಿಗೆ ಕಲ್ಲು ತೂರಾಟ ನಡೆದಿದೆ. ನನ್ನ ಮಗಳ ಮೇಲೆ ಕಲ್ಲು ಬಿದ್ದಿದೆ. ಮಗಳು ಗಾಯಗೊಂಡಿದ್ದಾಳೆ ಎಂದು ವರದರಾಜ್ ಹೇಳಿದ್ದಾರೆ.

ಕಲ್ಲು ಎಸೆಯಲಾಗಿದೆ. ಹಿಂದೂ ದೇವರ ಉತ್ಸವದ ಮೇಲೆ ದಾಳಿ ಮಾಡಲಾಗಿದೆ. ಯಾರು ಮಾಡಿದ್ದಾರೆ ಅನ್ನೋದು ನಮಗೆ ಗೊತ್ತಿಲ್ಲ. ಶಾಂತಿಯುತವಾಗಿ ಸಾಗುತ್ತಿದ್ದ ದೇವಿ ತೇರು ಉತ್ಸವದ ಮೇಲೆ ಕಲ್ಲೆಸೆದು ಭಕ್ತರಿಗೆ ಗಾಯ ಮಾಡಿದ್ದು ಮಾತ್ರವಲ್ಲ, ಪವಿತ್ರ ಉತ್ಸವಕ್ಕೆ ಕಳಂಕ ತಂದಿದ್ದಾರೆ. ಭಕ್ತರಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದು ಭಕ್ತರು ಆರೋಪಿಸಿದ್ದಾರೆ.

ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಸೇರಿರೋ ಸಾರ್ವಜನಿಕರು

ಜೆಜೆ ನಗರ ಠಾಣೆ ಎದರು ಭಕ್ತರು ಸೇರಿದಂತೆ ನೂರೂರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದಾರೆ. ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಆರೋಪಿಗಳ ಬಂಧಿಸುವಂತೆ ಆಗ್ರಹಿಸಿದ್ದಾರೆ. ದೇವಿ ತೇರು ಉತ್ಸವ ಅಪವಿತ್ರಗೊಳಿಸುವ ಹುನ್ನಾರ ಇದು ಎಂದು ಭಕ್ತರು ಆರೋಪಿಸಿದ್ದಾರೆ. ಸಾರ್ವಜನಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜೆಜೆ ನಗರ ಸ್ಟೇಷನ್ ಮುಂಭಾಗ ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಠಾಣೆ ಮುಂಭಾಗದಲ್ಲಿ ಸೇರಿದ್ದ ಭಕ್ತರನ್ನು ಕಳುಹಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ಬಾರಿ ಉತ್ಸವದ ವೇಳೆ ಈ ರೀತಿ ಕಲ್ಲು ತೂರಾಟವಾಗುತ್ತಿದೆ. ನಾವು ಎಲ್ಲವನ್ನು ಸಹಿಸಿಕೊಂಡು ಉತ್ಸವ ಮಾಡಿದ್ದೇವೆ. ಈ ವರ್ಷ ಮತ್ತೆ ಕಲ್ಲು ತೂರಾಟವಾಗಿದೆ. ಹೀಗಾಗಿ ಇನ್ನು ಸಹಿಸಲು ಸಾಧ್ಯವಿಲ್ಲ. ಆರೋಪಿಗಳ ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿದ್ದಾರೆ.