MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • TV Talk
  • ಕುತೂಹಲದ ಲವ್​ಸ್ಟೋರಿ ಹೇಳಿದ ನಟಿ ದಿಶಾ: ಪೂರ್ಣ ಸಂದರ್ಶನದಲ್ಲಿ 8 ಕನ್ನಡ ಪದ ಬಳಕೆಗೆ ನೆಟ್ಟಿಗರ ಧನ್ಯವಾದ!

ಕುತೂಹಲದ ಲವ್​ಸ್ಟೋರಿ ಹೇಳಿದ ನಟಿ ದಿಶಾ: ಪೂರ್ಣ ಸಂದರ್ಶನದಲ್ಲಿ 8 ಕನ್ನಡ ಪದ ಬಳಕೆಗೆ ನೆಟ್ಟಿಗರ ಧನ್ಯವಾದ!

'ಲಕ್ಷ್ಮೀನಿವಾಸ' ಸೀರಿಯಲ್ ಖ್ಯಾತಿಯ ನಟಿ ದಿಶಾ ಮದನ್ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶಶಾಂಕ್ ವಾಸುಕಿ ಗೋಪಾಲ್ ಜೊತೆ ಶುರುವಾದ ಪ್ರೀತಿ, ಸುಲಭವಾಗಿ ಮದುವೆಯಾದ ಕಥೆಯನ್ನು ಹಂಚಿಕೊಂಡಿದ್ದಾರೆ. 

1 Min read
Author : Suchethana D
Published : Jan 04 2026, 10:17 PM IST
Share this Photo Gallery
  • FB
  • TW
  • Linkdin
  • Whatsapp
15
ಸೈಲೆಂಟ್​ ಭಾವನಾ
Image Credit : Instagram

ಸೈಲೆಂಟ್​ ಭಾವನಾ

ನಟಿ ದಿಶಾ ಮದನ್​ (Disha Madan) ಎಂದರೆ ಕಿರುತೆರೆ ವೀಕ್ಷಕರಿಗೆ ಯಾರೆಂದು ತಿಳಿಯದೇ ಹೋಗಬಹುದು. ಆದರೆ ಲಕ್ಷ್ಮೀನಿವಾಸ ಸೀರಿಯಲ್​ ಭಾವನಾ, ಸಿದ್ದೇಗೌಡ್ರ ಮುದ್ದಿನ ಹೆಂಡ್ತಿ ಎಂದರೆ, ಸಾಫ್ಟ್​ ಆಗಿರೋ ತುಂಬಾ ಮಿತವಾಗಿ ಮಾತನಾಡುವ ಹೆಣ್ಣುಮಗಳೊಬ್ಬಳು ಕಣ್ಣೆದುರು ಬರುತ್ತಾಳೆ. ಆಕೆಯೇ ನಿಜ ಜೀವನದಲ್ಲಿ ಸ್ಟೈಲಿಷ್​ ಆಗಿರೋ ನಟಿ ದಿಶಾ ಮದನ್​.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕರ್ನಾಟಕಕ್ಕೆ ಕೀರ್ತಿ
Image Credit : @Disha Madan

ಕರ್ನಾಟಕಕ್ಕೆ ಕೀರ್ತಿ

ಕಳೆದ ವರ್ಷ ಕೇನ್ಸ್​ ಫಿಲ್ಮ್​ಫೆಸ್ಟಿವಲ್​ನ ರೆಡ್​​ ಕಾರ್ಪೆಟ್​ ಮೂಲಕ ಮಿಂಚುವ ಮೂಲಕ ಕರುನಾಡಿಗೂ ಕೀರ್ತಿ ತಂದಿರುವ ನಟಿ ಈಕೆ. ಅಸಲಿ ಜೀವನದಲ್ಲಿ ಇಬ್ಬರು ಮಕ್ಕಳ ಅಮ್ಮನಾಗಿರುವ ನಟಿ ದಿಶಾ ಅವರು ರೇಡಿಯೋಸಿಟಿ ಕನ್ನಡ ಚಾನೆಲ್​ಗೆ ಸಂದರ್ಶನ ನೀಡಿದ್ದು, ಅದರಲ್ಲಿ ತಮ್ಮ ಕುತೂಹಲದ ಲವ್​ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

Related Articles

Related image1
ಅಪಘಾತದ ಶೂಟಿಂಗ್​ ವೇಳೆ ಅವಘಡ: ಸ್ವಲ್ಪದರಲ್ಲಿಯೇ ಪಾರಾದ ನಟಿ- ಶಾಕಿಂಗ್​ ವಿಡಿಯೋ ವೈರಲ್
Related image2
Disha Madan: ಕನ್ನಡ ಮಾತಾಡಿಲ್ಲ ಅಂತ ಗಲಾಟೆ ಮಾಡೋರಿಗೆ ಹೀಗೆ ಕ್ಲಾಸ್​​ ತೆಗೆದುಕೊಳ್ಳೋದಾ ಲಕ್ಷ್ಮೀನಿವಾಸ ಭಾವನಾ?
35
ಜಾಲತಾಣದಲ್ಲಿ ಲವ್​ಸ್ಟೋರಿ ಶುರು
Image Credit : our own

ಜಾಲತಾಣದಲ್ಲಿ ಲವ್​ಸ್ಟೋರಿ ಶುರು

ನನಗೆ ಸೋಷಿಯಲ್​ ಮೀಡಿಯಾದಲ್ಲಿ 25 ಸಾವಿರ ಫಾಲೋವರ್ಸ್​ ಇದ್ರು. ನನ್ನ ಪ್ರೊಫೈಲ್ ನೋಡಿದ ಶಶಾಂಕ್​ ವಾಸುಕಿ ಗೋಪಾಲ್​ ಅವರು ನಿಮ್ಮ ಪ್ರೊಫೈಲ್​ ನೋಡಿದ್ರೆ ಫನ್ನಿ ಎನ್ನಿಸುತ್ತದೆ ಎಂದು ಮೆಸೇಜ್​ ಮಾಡಿದ್ರು. ನಾನು ಕೂಡ ಅವರ ಮೆಸೇಜ್​ ನೋಡಿ ರಿಪ್ಲೈ ಮಾಡಿದೆ. ಹೀಗೆ ಮಾತನಾಡುತ್ತಾ ನಮ್ಮಿಬ್ಬರಲ್ಲಿ ಎಲ್ಲವೂ ಕಾಮನ್​ ಇದೆ ಎನ್ನುವುದು ತಿಳಿಯಿತು ಎಂದಿದ್ದಾರೆ.

45
ಈಸಿಯಾಗಿ ಮದ್ವೆಯಾಯ್ತು
Image Credit : our own

ಈಸಿಯಾಗಿ ಮದ್ವೆಯಾಯ್ತು

ಆಗಿನ್ನೂ ನನಗೆ 24 ವರ್ಷ ವಯಸ್ಸಾಗಿತ್ತು. ಆದರೆ ಅದಾಗಲೇ ಮನೆಯಲ್ಲಿ ಮದುವೆಗೆ ಸಿಕ್ಕಾಪಟ್ಟೆ ಪ್ರೆಷರ್​ ಇತ್ತು. ಬ್ರೋಕರ್​ಗೆಲ್ಲಾ ಜಾತಕ ಕೊಟ್ಟುಬಿಟ್ಟಿದ್ರು. ಆದ್ದರಿಂದ ನಾನು ಶಶಾಂಕ್​ ಅವರಲ್ಲಿ ಈ ಬಗ್ಗೆ ಮಾತನಾಡಿದಾಗ ಅವರು ಮದುವೆಗೆ ಒಪ್ಪಿಗೆ ಕೊಟ್ಟೇ ಬಿಟ್ಟರು. ಆದ್ದರಿಂದ ಕುತೂಹಲದ ತಿರುವಿನಲ್ಲಿ ನಾವಿಬ್ಬರು ತುಂಬಾ ಈಸಿಯಾಗಿ ಮದ್ವೆಯಾದ್ವಿ ಎಂದಿದ್ದಾರೆ ನಟಿ. ಅವರು ಈಗ ವಿಯಾನ್​, ಅವೈರಾ ಎನ್ನುವ ಮಕ್ಕಳ ಅಪ್ಪ-ಅಮ್ಮ.

55
ಎಂಟು ಕನ್ನಡ ಶಬ್ದ
Image Credit : Instagram

ಎಂಟು ಕನ್ನಡ ಶಬ್ದ

ಆದರೆ, ಇವರ ಈ ಸಂಪೂರ್ಣ ಸಂದರ್ಶನದಲ್ಲಿ ಇವರ ಲವ್​ಸ್ಟೋರಿ ಕೇಳುವುದನ್ನು ಬಿಟ್ಟು ನೆಟ್ಟಿಗರು ನಿಮ್ಮ ಎರಡು ನಿಮಿಷಗಳ ಲವ್​ಸ್ಟೋರಿಯಲ್ಲಿ 8 ಶಬ್ದ ಬಳಕೆ ಮಾಡಿರುವುದಕ್ಕೆ ಧನ್ಯವಾದ ಎಂದು ಹೇಳುತ್ತಿದ್ದಾರೆ! ಇದು ಇಂಗ್ಲಿಷ್​ ಸಂದರ್ಶನ ಎಂದುಕೊಂಡ್ವಿ. ಆದರೆ ಕನ್ನಡ ಮಾತನಾಡಿದ ಕಾರಣ, ಕನ್ನಡದ ಸಂದರ್ಶನ ಎಂದು ತಿಳಿಯಿತು, ಕೆಲವು ಶಬ್ದ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಶೂಟಿಂಗ್​ ವೇಳೆ ನಟಿಯನ್ನೇ ನುಂಗಿ ಹಾಕಿದ ದೈತ್ಯ ತಿಮಿಂಗಲ: ಆಮೇಲೇನಾಯ್ತು? ಭಯಾನಕ ವಿಡಿಯೋ ವೈರಲ್​
Recommended image2
ಟಿವಿ ವೀಕ್ಷಕರಿಗೆ ಕೇಂದ್ರದ ಬಿಗ್ ಶಾಕ್! 20 ವರ್ಷಗಳ ಬಳಿಕ ರೂಲ್ಸ್ ಬದಲಾವಣೆ
Recommended image3
Annayya Serial ನಟಿ ತ್ರಿವೇಣಿ ಮನೆಯಲ್ಲಿ ಹಬ್ಬದ ಸಡಗರ: ಸೆಲೆಬ್ರಿಟಿಗಳ ದಂಡು- ಕ್ಯೂಟ್​ ಫೋಟೋಸ್​ ಇಲ್ಲಿವೆ
Related Stories
Recommended image1
ಅಪಘಾತದ ಶೂಟಿಂಗ್​ ವೇಳೆ ಅವಘಡ: ಸ್ವಲ್ಪದರಲ್ಲಿಯೇ ಪಾರಾದ ನಟಿ- ಶಾಕಿಂಗ್​ ವಿಡಿಯೋ ವೈರಲ್
Recommended image2
Disha Madan: ಕನ್ನಡ ಮಾತಾಡಿಲ್ಲ ಅಂತ ಗಲಾಟೆ ಮಾಡೋರಿಗೆ ಹೀಗೆ ಕ್ಲಾಸ್​​ ತೆಗೆದುಕೊಳ್ಳೋದಾ ಲಕ್ಷ್ಮೀನಿವಾಸ ಭಾವನಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved