ಭಟ್ಕಳದ ಮೀನು ಮಾರುಕಟ್ಟೆ ವಿವಾದಕ್ಕೆ ಧಾರ್ಮಿಕ ಬಣ್ಣ ಬಳಿಯಲಾಗುತ್ತಿದ್ದು, ಹಿಂದೂ ಮೀನುಗಾರ ಮಹಿಳೆಯರನ್ನು ಗುರಿಯಾಗಿಸಿ ಅಪಪ್ರಚಾರದ ವಿಡಿಯೋವೊಂದು ಹರಿದಾಡುತ್ತಿದೆ. ಗಲ್ಫ್ ದೇಶಗಳಿಂದ ಈ ದ್ವೇಷ ಭಿತ್ತರಿಸುವ ಯತ್ನ ನಡೆದಿದೆ. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
- Home
- News
- State
- Karnataka News Live: ಭಟ್ಕಳದಲ್ಲಿ ಹಿಂದೂ ಮಹಿಳೆಯರ ಬಳಿ ಮೀನು ಖರೀದಿಸದಂತೆ ಮಕ್ಕಳಿಂದ ಸ್ಕಿಟ್! ಧಾರ್ಮಿಕ ದ್ವೇಷಕ್ಕೆ ಸೊಮೊಟೋ ಕೇಸ್!
Karnataka News Live: ಭಟ್ಕಳದಲ್ಲಿ ಹಿಂದೂ ಮಹಿಳೆಯರ ಬಳಿ ಮೀನು ಖರೀದಿಸದಂತೆ ಮಕ್ಕಳಿಂದ ಸ್ಕಿಟ್! ಧಾರ್ಮಿಕ ದ್ವೇಷಕ್ಕೆ ಸೊಮೊಟೋ ಕೇಸ್!

ಬೆಳಗಾವಿ: ಕ್ಷೇತ್ರದಾದ್ಯಂತ ನಿರಂತರವಾಗಿ ಮಂದಿರ, ಸಮುದಾಯ ಭವನ, ಶಾಲಾ ಕೊಠಡಿ, ಅಂಗನವಾಡಿ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ. ಅಭಿವೃದ್ಧಿ ಮಾಡುವ ಮೂಲಕ ನನಗೆ ಮತ ಹಾಕಿದ ಕ್ಷೇತ್ರದ ಜನರಲ್ಲಿ ಸಾರ್ಥಕ ಭಾವನೆ ಮೂಡುವಂತೆ ಮಾಡುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
Karnataka News Live 28 September 2025 ಭಟ್ಕಳದಲ್ಲಿ ಹಿಂದೂ ಮಹಿಳೆಯರ ಬಳಿ ಮೀನು ಖರೀದಿಸದಂತೆ ಮಕ್ಕಳಿಂದ ಸ್ಕಿಟ್! ಧಾರ್ಮಿಕ ದ್ವೇಷಕ್ಕೆ ಸೊಮೊಟೋ ಕೇಸ್!
Karnataka News Live 28 September 2025 ಸತ್ತುಹೋದ ಸಾಕು ನಾಯಿಯ ಫೋಟೋ ಹೊತ್ತು ತಿರುಗುವ ಆಟೋ ಚಾಲಕ - ಹೃದಯಸ್ಪರ್ಶಿ ಘಟನೆ ವೈರಲ್!
ಬೆಂಗಳೂರಿನ ಓರ್ವ ಆಟೋ ಚಾಲಕ ತನ್ನ ಮೃತ ಸಾಕು ನಾಯಿಯ ಭಾವಚಿತ್ರವನ್ನು ಆಟೋದ ಮುಂಭಾಗದಲ್ಲಿ ಇಟ್ಟುಕೊಂಡು ಸವಾರಿ ಮಾಡುತ್ತಿರುವ ಹೃದಯಸ್ಪರ್ಶಿ ಘಟನೆ ವೈರಲ್ ಆಗಿದೆ. ರೆಡ್ಡಿಟ್‌ನಲ್ಲಿ ಪ್ರಯಾಣಿಕರೊಬ್ಬರು ಹಂಚಿಕೊಂಡ ಈ ಪೋಸ್ಟ್, ಚಾಲಕನ ಪ್ರಾಣಿ ಪ್ರೀತಿ, ಜನರ ಭಾವನಾತ್ಮಕ ಪ್ರತಿಕ್ರಿಯೆಯನ್ನು ವಿವರಿಸುತ್ತದೆ.
Karnataka News Live 28 September 2025 BBK 12 - ಬಿಗ್ ಬಾಸ್ ಮನೆಯಿಂದಾಚೆ ಈ ಸ್ಪರ್ಧಿಗಳನ್ನು ಅಂಟಿಕೊಂಡಿರೋ ಕಾಂಟ್ರವರ್ಸಿಗಳೇನು?
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಶುಭಾರಂಭಗೊಂಡಿದೆ. ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಿದ್ದಾರೆ. ವಿಧ ವಿಧವಾದ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಸ್ಪರ್ಧಿಗಳಲ್ಲಿ ಕೆಲವರ ಸುತ್ತ ಕಾಂಟ್ರವರ್ಸಿಗಳು ಸುತ್ತುಕೊಂಡಿವೆ.
Karnataka News Live 28 September 2025 ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಪರಿಸರ ಸಂರಕ್ಷಿಸಿ - ಸಚಿವ ಕೆ.ಎಚ್ ಮುನಿಯಪ್ಪ
ಪ್ರತಿಯೊಬ್ಬರೂ ಗಿಡ-ಮರಗಳನ್ನು ಬೆಳೆಸುವ ಜತೆಗೆ ಪರಿಸರ ಸಮತೋಲನಕ್ಕಾಗಿ ಸ್ವಚ್ಛತೆಗೆ ಆದ್ಯತೆ ನೀಡುವ ಜವಾಬ್ದಾರಿ ಇದ್ದು, ಇದರಿಂದ ಉತ್ತಮ ಆರೋಗ್ಯ, ಶುದ್ಧ ವಾತಾವರಣ ಪಡೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದರು.
Karnataka News Live 28 September 2025 ನಿವೇದಿತಾ ಗೌಡಗೆ 'ನ್ಯೂ ಬಕ್ರಾ' ಸಿಕ್ಕಾಯ್ತು; ಡಿವೋರ್ಸ್ ಬಳಿಕ ಬ್ಯೂಸಿ ಆದ ನಟಿ!
ಚಂದನ್ ಶೆಟ್ಟಿಯೊಂದಿಗೆ ವಿಚ್ಛೇದನ ಪಡೆದ ನಂತರ ನಟಿ ನಿವೇದಿತಾ ಗೌಡ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸಿಂಗಲ್ ಆಗಿದ್ದ ಬಾರ್ಬಿಡಾಲ್ ಬ್ಯೂನಿ ನಿವೇದಿತಾ ಗೌಡಗೆ ನ್ಯೂ ಬಕರಾ ಸಿಕ್ಕಿದ್ದಾರೆ ಎಂಬುದು ಭಾರೀ ವೈರಲ್ ಆಗುತ್ತಿದೆ. ಯಾರೀ ಬಕರಾ ನೀವೇ ನೋಡಿ..
Karnataka News Live 28 September 2025 ರಕ್ಷಿತಾ ಮಾತು ಕೇಳಿ ಮೀನಿಗೆ ಮಸಾಲೆ ಹಾಕೋದರಲ್ಲಿ ಕಳೆದು ಹೋದ ಸುದೀಪ್
kannada bigg boss season 12: ತುಳುನಾಡಿನ ರಕ್ಷಿತಾ ಶೆಟ್ಟಿ ಅವರು ಕನ್ನಡ ಕಲಿಯುವ ಉದ್ದೇಶದಿಂದ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ವೇದಿಕೆಯಲ್ಲಿ ಸುದೀಪ್ ಅವರೊಂದಿಗೆ ಕನ್ನಡ ಮಾತನಾಡಲು ಕಷ್ಟಪಟ್ಟ ಅವರು, ತಮ್ಮ ಯೂಟ್ಯೂಬ್ ಜರ್ನಿ ಮತ್ತು ಬಿಗ್‌ಬಾಸ್‌ಗೆ ಬಂದ ಕಾರಣವನ್ನು ಹಂಚಿಕೊಂಡರು.
Karnataka News Live 28 September 2025 ಮೈಸೂರು ದಸರಾ - ಬಾನಂಗಳದಲ್ಲಿ ಡ್ರೋನ್‌ಗಳ ಚಿತ್ತಾರ, ಹುಲಿ ಕಲಾಕೃತಿಯಿಂದ ವಿಶ್ವದಾಖಲೆ
ಮೈಸೂರು ದಸರಾ ಮಹೋತ್ಸವಕ್ಕೆ ಹೊಸ ಮೆರಗು ನೀಡಿದ ಅತ್ಯಾಕರ್ಷಕ ಡ್ರೋನ್ ಪ್ರದರ್ಶನ ಪ್ರೇಕ್ಷಕರ ಮನಸೂರೆ ಮಾಡಿತು. ಬಾನಂಗಳದಲ್ಲಿ ವಿವಿಧ ಕಲಾಕೃತಿಗಳ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಿದ 3,000 ಡ್ರೋನ್‌ಗಳು ಹೊಸ ಲೋಕವನ್ನು ಸೃಷ್ಟಿಸಿತು.
Karnataka News Live 28 September 2025 BBK 12 - ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದು, ಇಸ್ಲಾಮಾಬಾದಿನಲ್ಲಿ ರಾಷ್ಟ್ರಗೀತೆ ಹಾಡಿಸಿದ್ದ ಕರಿಬಸಪ್ಪ!
Bigg Boss Kannada Season 12 Show Karibasappa: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕರಿಬಸಪ್ಪ ಅವರು ಭಾಗವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕರಿಬಸಪ್ಪ ಅವರು ಪೌರಕಾರ್ಮಿಕರ ಮಗನಂತೆ.
Karnataka News Live 28 September 2025 ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರ ಪಟ್ಟಿ ಪ್ರಕಟ, ಅಚ್ಚರಿ ಫಲಿತಾಂಶ
ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರ ಪಟ್ಟಿ ಪ್ರಕಟ, ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಮೊದಲ ಸ್ಥಾನದಲ್ಲಿರುವ ನಗರ ದೆಹಲಿ, ಮುಂಬೈ ಅಲ್ಲ ಹಾಗಾದರೆ ಮತ್ಯಾವುದು ಅನ್ನೋ ಕುತೂಹಲ ಜೊತೆಗೆ ಎಚ್ಚರಿಕೆಯೂ ಅಗತ್ಯ.
Karnataka News Live 28 September 2025 BBK 12 - ಹೊರಗಡೆಯೇ ಕಾಂಟ್ರವರ್ಸಿ ಮಾಡ್ಕೊಂಡು ಬಿಗ್ ಬಾಸ್ ಮನೆಗೆ ಬಂದ ಧ್ರುವಂತ್ ಯಾರು?
Bigg Boss Kannada Season 12: ‘ಮುದ್ದುಲಕ್ಷ್ಮೀ’ ಧಾರಾವಾಹಿ ಹೀರೋಯಿನ್ ಅಶ್ವಿನಿ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈಗ ಈ ಸೀರಿಯಲ್ ಹೀರೋ ಚರಿತ್ ಬಾಳಪ್ಪ ಅಲಿಯಾಸ್ ಧ್ರುವಂತ್ ಕೂಡ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
Karnataka News Live 28 September 2025 ಶುದ್ಧಗಾಳಿ ದೊರೆಯುವ ಕೊಡಗಿನಲ್ಲಿ ಉಸಿರುಗಟ್ಟಿಸುತ್ತಿವೆ ಕಲ್ಲುಗಣಿಗಳು - ಕ್ರಮಕೈಗೊಳ್ಳದ ಅಧಿಕಾರಿಗಳು
ಸಾಕಷ್ಟು ಸೌಂದರ್ಯ ಹೊಂದಿರುವ ಈ ಜಿಲ್ಲೆಯಲ್ಲಿ ದೇಶದಲ್ಲೇ ಅತೀ ಹೆಚ್ಚು ಶುದ್ಧಗಾಳಿ ಇದೆ ಎಂದು ಕೇಂದ್ರ ಪರಿಸರ ಇಲಾಖೆಯೇ ಮಾಹಿತಿ ನೀಡಿದೆ. ಆದರೂ ಜನರು ಉಸಿರಾಟಕ್ಕೆ ಪರಿಶುದ್ಧ ಗಾಳಿ ಸಿಗದೆ ಉಸಿರುಗಟ್ಟಿ ಸಾವನ್ನಪ್ಪಬೇಕಾದ ಪರಿಸ್ಥಿತಿ ಎದುರಾಗಿದೆ.
Karnataka News Live 28 September 2025 ಮಲ್ಲಮ್ಮನ ಮುಂದೆ ತಮ್ಮ ಆಸೆ ಹೇಳಿಕೊಂಡ್ರು ಸುದೀಪ್ - ಇದು 12 ರೂಪಾಯಿ ಕತೆ
Karnataka News Live 28 September 2025 ಬನ್ನೇರುಘಟ್ಟ ಸಫಾರಿಯಲ್ಲಿ ಹುಲಿ, ಸಿಂಹ ನೋಡುತ್ತಲೇ ಹೃದಯಬಡಿತ ಸ್ಥಗಿತ; ನಾಗರಬಾವಿ ನಂಜಪ್ಪ ಮೃತ!
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕುಟುಂಬದೊಂದಿಗೆ ಸಫಾರಿಗೆ ತೆರಳಿದ್ದ ನಾಗರಬಾವಿ ನಿವಾಸಿ ನಂಜಪ್ಪ (45) ಎಂಬುವವರು, ಹುಲಿ ಮತ್ತು ಸಿಂಹಗಳನ್ನು ನೋಡುತ್ತಿದ್ದಾಗ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಸಾವು.
Karnataka News Live 28 September 2025 ಅನ್ನಭಾಗ್ಯ, ಶಕ್ತಿ ಯೋಜನೆಯಲ್ಲಿ ಬದಲಾವಣೆ ತರಲು ಚಿಂತನೆ - ಡಿ.ಕೆ.ಶಿವಕುಮಾರ್
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಗಳು ದುರುಪಯೋಗ ಆಗುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಯೋಜನೆಗಳಲ್ಲಿ ಕೆಲ ಬದಲಾವಣೆ ತರಲು ಚಿಂತನೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
Karnataka News Live 28 September 2025 ಬಿಗ್‌ಬಾಸ್ ಮನೆಗೆ ಆಮೀರ್ - ಶಾರೂಖ್ ಜೋಡಿ ಎಂಟ್ರಿ - ಇದು ನಮ್ಮ ಭಾಗ್ಯ ಎಂದ ಸುದೀಪ್
Bigg Boss Kannada Season 12 contestants: ಕನ್ನಡ ಬಿಗ್‌ಬಾಸ್ ಸೀಸನ್ 12 ಅದ್ಧೂರಿಯಾಗಿ ಆರಂಭವಾಗಿದ್ದು, ಸ್ಪರ್ಧಿಗಳು ಮನೆ ಪ್ರವೇಶಿಸುತ್ತಿದ್ದಾರೆ. ಈ ಬಾರಿ ವೀಕ್ಷಕರ ನಿರ್ಧಾರದಂತೆ ಸ್ಪರ್ಧಿಗಳು ಜಂಟಿಯಾಗಿ ಮನೆ ಪ್ರವೇಶಿಸುತ್ತಿದ್ದಾರೆ.
Karnataka News Live 28 September 2025 ಬಿಜೆಪಿಯಿಂದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ನಕಲು - ಎಚ್.ಎಂ.ರೇವಣ್ಣ ಟೀಕೆ
ಗ್ಯಾರಂಟಿ ಯೋಜನೆಗಳು ಜನರಿಗೆ ಶಕ್ತಿ ತುಂಬಿದ್ದು, ರಾಜ್ಯದ ತಲಾ ಆದಾಯ 2 ಲಕ್ಷಕ್ಕೆ ಮುಟ್ಟಿದೆ. ಬಿಟ್ಟಿ ಭಾಗ್ಯಗಳೆಂದು ಲೇವಡಿ ಮಾಡುತ್ತಿದ್ದ ಬಿಜೆಪಿಯವರು ತಾವು ಆಡಳಿತವಿರುವ ರಾಜ್ಯಗಳಲ್ಲಿಯೇ ಗ್ಯಾರಂಟಿಗಳನ್ನು ಜಾರಿ ಮಾಡಿದ್ದಾರೆ ಎಂದು ಎಚ್.ಎಂ.ರೇವಣ್ಣ ಟೀಕಿಸಿದರು.
Karnataka News Live 28 September 2025 ಪಕ್ಷಿಯಂತೆ ಸ್ವಯಂ ಹಾರುವ ರೋಬೋಟ್ ಸಂಶೋಧನೆ; ಡ್ರೋನ್‌ಗೆ ಬಳಸುವಂತೆ ರಿಮೋಟ್ ಬೇಕಿಲ್ಲ!
ವಿಜ್ಞಾನಿಗಳು ರೋಬೋ ಫಾಲ್ಕನ್ 2.0 ಎಂಬ ಸುಧಾರಿತ ಪಕ್ಷಿ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಪಕ್ಷಿಗಳಂತೆ ರೆಕ್ಕೆಗಳನ್ನು ಮಡಚುವ, ಬೀಸುವ ಸಾಮರ್ಥ್ಯ ಹೊಂದಿದ್ದು, ಸಹಾಯವಿಲ್ಲದೆ ಟೇಕ್-ಆಫ್ ಆಗಬಲ್ಲದು ಮತ್ತು ಕಡಿಮೆ ವೇಗದಲ್ಲಿ ಸ್ಥಿರವಾಗಿ ಹಾರಬಲ್ಲದು.
Karnataka News Live 28 September 2025 ಸ್ವಿಗ್ಗಿಯಲ್ಲಿ ಬೆಳ್ಳಿ ನಾಣ್ಯ ಆರ್ಡರ್ ಮಾಡಿದವನಿಗೆ ಬಂತು ಮ್ಯಾಗಿ - ಸ್ವಿಗ್ಗಿ ಹೇಳಿದ್ದೇನು?
ordered silver coin got noodles:ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಬೆಳ್ಳಿ ನಾಣ್ಯಗಳನ್ನು ಆರ್ಡರ್ ಮಾಡಿದ ವ್ಯಕ್ತಿಯೊಬ್ಬರಿಗೆ, ಮ್ಯಾಗಿ ನೂಡಲ್ಸ್ ಮತ್ತು ಹಲ್ದಿರಾಮ್ ತಿಂಡಿಗಳು ಡೆಲಿವರಿಯಾಗಿವೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Karnataka News Live 28 September 2025 ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ವಿಫಲ - ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪ
ದೇಶ ವ್ಯಾಪಿ ನಿರುದ್ಯೋಗ ಹೆಚ್ಚಾಗುತ್ತಿದ್ದು, ಮೋದಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿನಿ ಅಂದಿದ್ದರು. ಆದರೆ, ಇನ್ನೂ ಉದ್ಯೋಗ ಸೃಷ್ಟಿ ಮಾಡಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.