- Home
- Entertainment
- TV Talk
- BBK 12: ಹೊರಗಡೆಯೇ ಕಾಂಟ್ರವರ್ಸಿ ಮಾಡ್ಕೊಂಡು ಬಿಗ್ ಬಾಸ್ ಮನೆಗೆ ಬಂದ ಧ್ರುವಂತ್ ಯಾರು?
BBK 12: ಹೊರಗಡೆಯೇ ಕಾಂಟ್ರವರ್ಸಿ ಮಾಡ್ಕೊಂಡು ಬಿಗ್ ಬಾಸ್ ಮನೆಗೆ ಬಂದ ಧ್ರುವಂತ್ ಯಾರು?
Bigg Boss Kannada Season 12: ‘ಮುದ್ದುಲಕ್ಷ್ಮೀ’ ಧಾರಾವಾಹಿ ಹೀರೋಯಿನ್ ಅಶ್ವಿನಿ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಈಗ ಈ ಸೀರಿಯಲ್ ಹೀರೋ ಚರಿತ್ ಬಾಳಪ್ಪ ಅಲಿಯಾಸ್ ಧ್ರುವಂತ್ ಕೂಡ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಕಾಂಟ್ರವರ್ಸಿಯಿಂದಲೇ ಸೌಂಡ್ ಮಾಡಿದ್ರು
ಹೊರಗಡೆ ಕಾಂಟ್ರವರ್ಸಿಗಳಿಂದ ಸದ್ದು ಮಾಡಿರುವ ಧ್ರುವಂತ್ ಅವರು, ಬಿಗ್ ಬಾಸ್ ಮನೆಯ ಕಾಂಟ್ರವರ್ಸಿಗಳನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
ಆರೋಪ ಏನು?
ಚರಿತ್ ಬಾಳಪ್ಪ ಅವರು ಸಹನಟಿಯ ಜೊತೆ ಸಂಬಂಧದಲ್ಲಿದ್ದಾರೆ ಎಂದು ಅವರ ಪತ್ನಿ ಆರೋಪ ಮಾಡಿದ್ದರು, ಅಷ್ಟೇ ಅಲ್ಲದೆ ಕೋರ್ಟ್ ಮೆಟ್ಟಿಲೇರಿದ್ದರು. ಈ ನಡುವೆ ಪತಿ-ಪತ್ನಿ ನಡುವೆ ಒಂದಿಷ್ಟು ಮಾತುಕತೆ ನಡೆದಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪತ್ನಿ ಇನ್ನೋರ್ವನ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾಳೆ, ನನ್ನ ಮುಂದೆ ಯಾಕೆ ಅವಳು ಬೇರೆಯವರ ಜೊತೆ ಫೋನ್‌ನಲ್ಲಿ ಮಾತನಾಡೋದಿಲ್ಲ ಎಂದು ಚರಿತ್ ಅವರು ಆರೋಪ ಮಾಡಿದ್ದರು.
ಅ*ತ್ಯಾಚಾರ ಆರೋಪ
ಇನ್ನೋರ್ವ ನಟಿ ಕೂಡ ಚರಿತ್ ಬಾಳಪ್ಪ ಅವರು ಪ್ರೀತಿ ಮಾಡೋದಾಗಿ ಮೋಸ ಮಾಡಿದ್ದಾರೆ, ದೈಹಿಕ ಸಂಬಂಧ ಬೆಳೆಸಿದ್ದಾರೆ ಎಂದು ಆರೋಪ ಮಾಡಿದ್ದರು. ಈ ವಿಚಾರವಾಗಿ ಚರಿತ್ ಬಾಳಪ್ಪ ಸುತ್ತ ಒಂದಿಷ್ಟು ಕಾಂಟ್ರವರ್ಸಿಗಳು ಸೃಷ್ಟಿ ಆಗಿತ್ತು.
ಚರಿತ್ ಬಾಳಪ್ಪ ನಿಲುವು ಏನು?
ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಮಾತನಾಡಿರೋ ಚರಿತ್, “ನನ್ನ ಮೇಲಿನ ಆರೋಪಗಳಿಂದ ಪಾಲಕರಿಗೆ ಬೇಸರ ಆಗಿದೆ. ನನ್ನ ತಂದೆ-ತಾಯಿಗೆ ಬೇಸರ ಆದರೆ ಸಹಿಸೋಕೆ ಆಗೋದಿಲ್ಲ. ಯಾರು ನನ್ನ ಜೊತೆ ಹೇಗೆ ಇರುತ್ತಾರೋ ಹಾಗೆ ನಾನು ಇರುತ್ತೇನೆ” ಎಂದು ಹೇಳಿದ್ದಾರೆ.
ಐಟಿ ಉದ್ಯೋಗಿ
ಅಂದಹಾಗೆ ‘ಮುದ್ದುಲಕ್ಷ್ಮೀ’, ‘ಲವಲವಿಕೆ’ ಧಾರಾವಾಹಿ ಸೇರಿದಂತೆ ಒಟ್ಟು ಎಂಟು ಧಾರಾವಾಹಿಗಳಲ್ಲಿ ಚರಿತ್ ಬಾಳಪ್ಪ ಅವರು ನಟಿಸಿದ್ದಾರೆ. ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಧ್ರುವಂತ್, ನಟನೆಯ ಮೇಲಿನ ಆಸೆಯಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.