ಚಂದನ್ ಶೆಟ್ಟಿಯೊಂದಿಗೆ ವಿಚ್ಛೇದನ ಪಡೆದ ನಂತರ ನಟಿ ನಿವೇದಿತಾ ಗೌಡ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸಿಂಗಲ್ ಆಗಿದ್ದ ಬಾರ್ಬಿಡಾಲ್ ಬ್ಯೂನಿ ನಿವೇದಿತಾ ಗೌಡಗೆ ನ್ಯೂ ಬಕರಾ ಸಿಕ್ಕಿದ್ದಾರೆ ಎಂಬುದು ಭಾರೀ ವೈರಲ್ ಆಗುತ್ತಿದೆ. ಯಾರೀ ಬಕರಾ ನೀವೇ ನೋಡಿ..
ರೀಲ್ಸ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ ಇದೀಗ ನಟಿಯಾಗಿ ಹಲವು ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಬ್ಯೂಸಿ ಆಗಿದ್ದಾರೆ. ಸಿನಿಮಾ ಕೆರಿಯರ್‌ನಲ್ಲಿ ತುಸು ದೂರವೇ ಸಾಗಿರುವ ಬಾರ್ಬಿಡಾಲ್ ನಿವೇದಿತಾ ಗೌಡ, ವೈಯಕ್ತಿಕ ಜೀವನದಲ್ಲಿ ಒಬ್ಬಂಟಿಯಾಗಿದ್ದಾರೆ. ಆದರೆ, ಐ ಆಮ್ ಗಾಡ್ ಸಿನಿಮಾದಲ್ಲಿ ನಿವೇದಿತಾ ಗೌಡಗೆ ಹೊಸ ಬಕರಾ ಸಿಕ್ಕಾಯ್ತು ಎಂಬುದು ಭಾರೀ ಟ್ರೆಂಡ್ ಆಗುತ್ತಿದೆ.
ಅಂದಾಜು 90s ಮತ್ತು 20ಕೆ ಕಿಡ್ಸ್ ಎಲ್ಲರಿಗೂ ನಿವೇದಿತಾ ಗೌಡ ತುಸು ಹೆಚ್ಚಾಗಿಯೇ ಪರಿಚಯ ಆಗಿರುತ್ತಾರೆ. ಟಿಕ್ ಟಾಕ್ ರೀಲ್ಸ್ ಮೂಲಕ ಏಕಾಏಕಿ ಭಾರೀ ಪ್ರಸಿದ್ಧಿಗೆ ಬಂದ ನಿವೇದಿತಾ ಗೌಡ, ರೀಲ್ಸ್‌ನಲ್ಲಿ ಬಾರ್ಬಿಡಾಲ್ ರೀತಿ ಕಾಣಿಸುತ್ತಾ ಕೋಟ್ಯಾಂತರ ಪಡ್ಡೆಗಳ ನಿದ್ದೆ ಕದ್ದ ನೀರೆಯಾಗಿದ್ದರು. ಆದರೆ, ಆಗಿನ್ನೂ ಕಾಲೇಜು ಹಂತವಾದರೂ ನಮ್ಮಮ್ಮನ ಸೊಸೆ ನೀನೇ ಆಗಬೇಕು ಎಂದವರ ಸಂಖ್ಯೆಗೇನೂ ಕಡಿಮೆ ಇರಲಿಲ್ಲ. ಆದರೆ, ಚೀನಾ ಮೂಲದ ಹೆಚ್ಚು ಸುರಕ್ಷಿತವಲ್ಲದ ಆಪ್ ಆಗಿದ್ದ ಟಿಕ್ ಟಾಕ್ ಅನ್ನು ಕೇಂದ್ರ ಸರ್ಕಾರದಿಂದ ಬ್ಯಾನ್ ಮಾಡಲಾಯಿತು. ಆಗ ತಲೆಮೇಲೆ ಕೈಹೊತ್ತು ಕುಳಿತಿದ್ದ ನಿವೇದಿತಾ ಸೇರಿ ನೂರಾರು ರೀಲ್ಸ್ ಕಲಾವಿದರ ಕೈ ಹಿಡಿದಿದ್ದು, ಇನ್‌ಸ್ಟಾಗ್ರಾಂ ರೀಲ್ಸ್. ನಂತರ ಮತ್ತೆ ಎಲ್ಲರೂ ಮುನ್ನೆಲೆಗೆ ಬಂದರು.
ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಪ್ರಸಿದ್ಧಿಗೆ ಸೋಶಿಯಲ್ ಮಿಡಿಯಾ ಸ್ಟಾರ್‌ಗಳ ಪೈಕಿ ಹಲವರು ಬಿಗ್ ಬಾಸ್ ಮನೆಗೆ ಹೋದರು. ಅದರಲ್ಲಿ ನಿವೇದಿತಾ ಗೌಡ ಕೂಡ ಬಿಗ್ ಬಾಸ್ ಮನೆಗೆ ಹೋಗಿ ರಾಪರ್ ಚಂದನ್ ಶೆಟ್ಟಿ ಪ್ರೇಮದ ಬಲೆಗೆ ಬಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬರುತ್ತಲೇ ಮೈಸೂರು ದಸರಾ ಮಹೋತ್ಸವದ ವೇದಿಕೆ ಮೇಲೆ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿ, ಆಕೆಯ ಮನವೊಲಿಸಿ ಮದುವೆಯನ್ನೂ ಮಾಡಿಕೊಂಡರು. ಜೊತೆಗೆ, ಒಂದಷ್ಟು ವರ್ಷಗಳ ಸರಸ, ವಿರಸದ ಜೀವನ ಸಂಸಾರ ಮಾಡುತ್ತಾ ನನಗೂ ಸಿನಿಮಾ ಕೆರಿಯರ್ ಇದೆ ಎನ್ನುತ್ತಲೇ ಪ್ರೀತಿಸಿ ಮದುವೆಯಾದ ಜೋಡಿ ಬಹಿರಂಗವಾಗಿ ಡಿವೋರ್ಸ್ ನೀಡಿ ದೂರಾದರು.
ಸಿನಿಮಾದಲ್ಲಿ ಬ್ಯೂಸಿ ಆದ ನಿವೇದಿತಾ:
ಇದಾಗಿ ಒಂದೆರಡು ವರ್ಷಗಳು ಕಳೆಯುತ್ತಿವೆ. ಇದರ ನಡುವೆ ರಿಯಲ್ ಗಂಡ ಹೆಂಡತಿ ದೂರಾದ ನಂತರವೂ ಮುದ್ದು ರಾಕ್ಷಸಿ ಸಿನಿಮಾ ಒಟ್ಟಿಗೆ ಮಾಡುತ್ತಿದ್ದಾರೆ. ಇನ್ನು ಹಲವು ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ, ರ್ಯಾಪ್ ಹಾಗೂ ಆಲ್ಬಂ ಹಾಡುಗಳಲ್ಲಿ ನಿವೇದಿತಾ ಗೌಡ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಾಜಿ ಅಧ್ಯಕ್ಷ ಬಸವೇಗೌಡ ಮಗ ರವಿಗೌಡ ಅವರು ನಿರ್ದೇಶನ, ನಿರ್ಮಾಣದಲ್ಲಿ ಬರುತ್ತಿರುವ 'ಐ ಆಮ್ ಗಾಡ್' ಸಿನಿಮಾದಲ್ಲಿ ಐಟಂ ಹಾಡೊಂದಕ್ಕೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಇಲ್ಲಿ ನಿವೇದಿತಾ ಗೌಡ ಹಾಗೂ ನಟ ದಿಗಂತ್ ಮಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಈ ಹಾಡಿನ ಸಾಲುಗಳು ಯುವಕರನ್ನು ಕುಣಿಯುವಂತೆ ಮಾಡುತ್ತವೆ. ಪ್ರತಿನಿತ್ಯ ಯುವಜನರು ಜಗಳದಲ್ಲಿ ಮಾಮೂಲಿಯಾಗಿ ಬಳಸುವ ಕೆಲವು ಕೆಟ್ಟ ಪದಗಳನ್ನು ಬಳಸಿಕೊಂಡು, ಅದಕ್ಕೆ ಕೊನೆಯ ಕೆಟ್ಟ ಪದದ ಬದಲು ಬೇರೊಂದು ಪದ ಬಳಸಿಕೊಂಡು ಹಾಡಿನ ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಹಾಡಿನಲ್ಲಿ ಅವನಯ್ಯನ್ ಹಾವನ್ ಬೇಕಾರ್ ಕಟ್ಕೋ, ನರೀನ್ ಬೇಕಾರ್ ಇಟ್ಕೋ, ಇಸ್ಕೋ ಮಾತ್ರ ನಕೋ ನನ್ ಮಾತ್ ಕೇಳಲೇ ಎಂದು ಹಾಡಿನ ಸಾಹಿತ್ಯ ಆರಂಭವಾಗುತ್ತದೆ. ನಂಗೆ ಟ್ರೂ ಲವ್ ಆಗೈತೆ, ಅವಳಿಗೆ ನ್ಯೂ ಬಕ್ರಾ ಸಿಕ್ಕೈತೆ, ನಮ್ಮ ಫಸ್ಟ್ ಕಿಸ್ಸು ಆಗೋಯ್ತೇ, ಅವಳಿಗೆ ಲೆಕ್ಕಾ ಮಿಸ್ಸು ಆಗೈತೆ... ಫಸ್ಟ್ ಲವ್ ಹ್ಯಾಂಗ್ ಆಗೋಯ್ತು, ಲಾಸ್ಟ್ ಒನ್ ಲೂಸಾಗೋಯ್ತು, ಮಿಡ್ಲಲ್ಲಿ ಇನ್ನೇನಾನಯ್ತೋ ನಿನ್ನ ಫ್ಯೂಚರ್ ಪಂಚರ್ ಆಗೋಯ್ತೋ... ಎಂದು ಹಾಡು ಮುಂದುವರೆಯುತ್ತದೆ. ಇದರಲ್ಲಿ ನಿವೇದಿತಾ ಗೌಡಗೆ ನ್ಯೂ ಬಕ್ರಾ ಸಿಕ್ಕೈತೆ ಎಂಬ ಸಾಲು ಹಾಗೂ ಅದಕ್ಕೆ ನಟಿ ಕೊಡುವ ಮಾದಕ ನೋಟಗಳು ಹೆಚ್ಚು ಆಕರ್ಷಣೀಯವಾಗಿವೆ.
