ರಕ್ಷಿತಾ ಮಾತು ಕೇಳಿ ಮೀನಿಗೆ ಮಸಾಲೆ ಹಾಕೋದರಲ್ಲಿ ಕಳೆದು ಹೋದ ಸುದೀಪ್
kannada bigg boss season 12: ತುಳುನಾಡಿನ ರಕ್ಷಿತಾ ಶೆಟ್ಟಿ ಅವರು ಕನ್ನಡ ಕಲಿಯುವ ಉದ್ದೇಶದಿಂದ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ವೇದಿಕೆಯಲ್ಲಿ ಸುದೀಪ್ ಅವರೊಂದಿಗೆ ಕನ್ನಡ ಮಾತನಾಡಲು ಕಷ್ಟಪಟ್ಟ ಅವರು, ತಮ್ಮ ಯೂಟ್ಯೂಬ್ ಜರ್ನಿ ಮತ್ತು ಬಿಗ್‌ಬಾಸ್‌ಗೆ ಬಂದ ಕಾರಣವನ್ನು ಹಂಚಿಕೊಂಡರು.

ತುಳು ನಾಡಿನ ಕನ್ನಡತಿ
ತುಳು ನಾಡಿನ ಕನ್ನಡತಿಯಾಗಿರುವ ರಕ್ಷಿತಾ ಶೆಟ್ಟಿ ಅವರಿಗೆ ಸುಲಲಿತವಾಗಿ ಕನ್ನಡ ಮಾತನಾಡಲು ಸ್ವಲ್ಪ ಕಷ್ಟವಾಗುತ್ತದೆ. ಬಿಗ್‌ಬಾಸ್ ಮನೆಯಲ್ಲಿ ಎಲ್ಲರೂ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ಹಾಗಾಗಿ ನಾನು ಚೆಂದವಾಗಿ ಕನ್ನಡ ಕಲಿಯಬಹುದು ಎಂಬ ಕಾರಣಕ್ಕಾಗಿ ಬಿಗ್‌ಬಾಸ್‌ಗೆ ಬರುತ್ತಿದ್ದೇನೆ ಎಂದು ರಕ್ಷಿತಾ ಶೆಟ್ಟಿ ಹೇಳಿದರು.
ರಕ್ಷಿತಾ ಅವರ ಮಾತು
ಸುದೀಪ್ ಜೊತೆ ವೇದಿಕೆ ಹಂಚಿಕೊಂಡ ರಕ್ಷಿತಾ ಶೆಟ್ಟಿ, ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನ ಮಾಡುತ್ತಿರೋದು ಕಂಡು ಬಂತು. ಆದ್ರೆ ರಕ್ಷಿತಾ ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಸುದೀಪ್ ಅವರಿಗೆ ಸ್ವಲ್ಪ ಸಮಯ ಬೇಕಾಯ್ತು. ಸುದೀಪ್ ಮುಂದೆ ರಕ್ಷಿತಾ ಹೇಳಿದ್ದು ಏನು ಎಂಬುದರ ಮಾಹಿತಿ ಇಲ್ಲಿದೆ.
ಯಾರು ಈ ರಕ್ಷಿತಾ ಶೆಟ್ಟಿ?
ನಾನು ಹುಟ್ಟಿ, ಬೆಳೆದು ಮತ್ತು ಶಿಕ್ಷಣವೆಲ್ಲಾ ಆಗಿದ್ದು ಮುಂಬೈನಲ್ಲಿ. ಏಪ್ರಿಲ್ ರಜೆ ವೇಳೆ ಮಾತ್ರ ನಾನು ಉಡುಪಿಯ ಅಜ್ಜಿ ಮನೆಗೆ ಬರುತ್ತಿದ್ದೆ. ಕೊರೊನಾ ಸಮಯದಲ್ಲಿ ಸುಮಾರು ಮೂರು ತಿಂಗಳು ಉಡುಪಿಯಲ್ಲಿದ್ದೆ. ಮತ್ತೆ ಕಾಲೇಜು ಶುರುವಾದ್ಮೇಲೆ ಮುಂಬೈಗೆ ಹೋದೆ. ಸಂಪೂರ್ಣ ಶಿಕ್ಷಣದ ಬಳಿಕ ಉಡುಪಿಯಲ್ಲಿರಬೇಕೆಂದು ಮುಂಬೈನಿಂದ ಇಲ್ಲಿಗೆ ಬಂದೆ ಎಂದು ರಕ್ಷಿತಾ ಶೆಟ್ಟಿ ಹೇಳಿದರು.
ಸುದೀಪ್ ತಮಾಷೆ
ಈ ಎಲ್ಲಾ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಿದ್ದ ಸುದೀಪ್, ನಾನು ಮೀನಿಗೆ ಮಸಾಲೆ ಹಾಕೋದರಲ್ಲಿ ಕಳೆದು ಹೋದೆ ಎಂದು ರಕ್ಷಿತಾ ಅವರನ್ನು ತಮಾಷೆ ಮಾಡಿದರು. ಸುದೀಪ್ ಅವರ ಮುಂದೆ ಮಾತನಾಡಲು ರಕ್ಷಿತಾ ಶೆಟ್ಟಿ ಹೆದರಿಕೊಂಡಂತೆ ಕಂಡು ಬಂತು. ನಂತರ ಅಡುಗೆ ಮಾಡುವ ಮೂಲಕ ತಮ್ಮ ಯುಟ್ಯೂಬ್ ಜರ್ನಿ ಶುರುವಾಯ್ತು ಎಂದು ತಮ್ಮ ಕೆರಿಯರ್ ಕುರಿತು ರಕ್ಷಿತಾ ಮಾತನಾಡಿದರು
ಯಾಕೆ ಬಿಗ್‌ಬಾಸ್?
ಓವರ್ ಕ್ವೀನ್, ಓವರ್ ಡ್ರಾಮಾ ಅಂತ ಜನರು ಕಮೆಂಟ್ ಹಾಕ್ತಾರೆ. ಆದ್ರೆ ನಾನು ಇರೋದು ಹೀಗೆಯೇ ಎಂದು ತೋರಿಸಲು ಬಿಗ್‌ಬಾಸ್‌ಗೆ ಬಂದಿದ್ದೇನೆ. ಮನೆಯಲ್ಲಿ ಯಾರೊಂದಿಗೆ ನನ್ನ ಜಗಳ ಆಗಲ್ಲ. ಯಾಕೆಂದ್ರೆ ಅವರಿಗೆ ನನ್ನ ಭಾಷೆ ಅರ್ಥ ಆಗಲ್ಲ ಎಂದಿದ್ದಾರೆ. ಮಗಳು ಬಿಗ್‌ಬಾಸ್‌ಗೆ ಹೋಗುತ್ತಿರೋದಕ್ಕೆ ಖುಷಿಯಾಗುತ್ತಿದೆ ಎಂದು ರಕ್ಷಿತಾ ತಾಯಿ ಹೇಳಿದರು. ಜನರು ರಕ್ಷಿತಾ ಅವರನ್ನು ಜಂಟಿಯಾಗಿ ನೋಡಲು ಬಯಸಿದ್ದರಿಂದ ಸ್ಪರ್ಧಿಯನ್ನು ತೆರೆಯ ಹಿಂದೆ ಮುಚ್ಚಿದ ಕೋಣೆಯಲ್ಲಿ ಕೂರಿಸಲಾಗಿದೆ.
ಇದನ್ನೂ ಓದಿ: ಮಲ್ಲಮ್ಮ ಎಂಟ್ರಿ ಆಗ್ತಿದ್ದಂತೆ ಬಿಗ್‌ಬಾಸ್‌ಗೆ ಸಂದೇಶ ಕೊಟ್ರು ಸುದೀಪ್; ಸ್ಟೇಜ್ ಮೇಲಾಗಿದ್ದು ಏನು?
ಮಲ್ಲಮ್ಮ ಮತ್ತು ರಕ್ಷಿತಾ ಜೋಡಿ
ಸುದೀಪ್ ಅವರ ಪ್ರಕಾರ, ಬಿಗ್‌ಬಾಸ್ ಮನೆಯಲ್ಲಿ ಮಲ್ಲಮ್ಮ ಮತ್ತು ರಕ್ಷಿತಾ ಜೋಡಿ ಹೆಚ್ಚು ಮನರಂಜನೆ ನೀಡಬಹುದು ಎಂದು ಅಂದಾಜಿಸಿದ್ದಾರೆ. ಮಲ್ಲಮ್ಮ ಅವರಿಗೆ ತಮ್ಮ ಭಾಷೆ ಬಿಟ್ರೆ ಬೇರೆ ಯಾವುದೇ ಭಾಷೆ ಅರ್ಥ ಆಗಲ್ಲ. ಇತ್ತ ಇತ್ತೀಚೆಗೆ ಕನ್ನಡ ಕಲಿಯುತ್ತಿರುವ ರಕ್ಷಿತಾ ಅವರಿಗೆ ತುಳು ಮತ್ತು ಹಿಂದಿ ಚೆನ್ನಾಗಿ ಬರುತ್ತದೆ. ಇಬ್ಬರ ಕಾಂಬಿನೇಷನ್ ತೆರೆ ಮೇಲೆ ಚೆನ್ನಾಗಿ ಕಾಣಿಸಲಿದೆ ಎಂದು ವೀಕ್ಷಕರು ಸಹ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕೇಕ್ ಕತ್ತರಿಸಿ ಬಿಗ್‌ಬಾಸ್‌ಗೆ ಹೊರಟ ಮಲ್ಲಮ್ಮ; ನನ್ನ ಗಂಡ ಇದ್ದಿದ್ರೆ ಕಪಾಳಕ್ಕೆ ಹೊಡಿತಿದ್ರು!