- Home
- Entertainment
- TV Talk
- BBK 12: ಬಿಗ್ ಬಾಸ್ ಮನೆಯಿಂದಾಚೆ ಈ ಸ್ಪರ್ಧಿಗಳನ್ನು ಅಂಟಿಕೊಂಡಿರೋ ಕಾಂಟ್ರವರ್ಸಿಗಳೇನು?
BBK 12: ಬಿಗ್ ಬಾಸ್ ಮನೆಯಿಂದಾಚೆ ಈ ಸ್ಪರ್ಧಿಗಳನ್ನು ಅಂಟಿಕೊಂಡಿರೋ ಕಾಂಟ್ರವರ್ಸಿಗಳೇನು?
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12 ಶುಭಾರಂಭಗೊಂಡಿದೆ. ಸ್ಪರ್ಧಿಗಳು ದೊಡ್ಮನೆ ಪ್ರವೇಶ ಮಾಡಿದ್ದಾರೆ. ವಿಧ ವಿಧವಾದ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ ಸ್ಪರ್ಧಿಗಳಲ್ಲಿ ಕೆಲವರ ಸುತ್ತ ಕಾಂಟ್ರವರ್ಸಿಗಳು ಸುತ್ತುಕೊಂಡಿವೆ.

ಧ್ರುವಂತ್
ಧ್ರುವಂತ್ ಅವರಿಗೆ ಅಕ್ರಮ ಸಂಬಂಧ ಇದೆ ಎಂದು ಪತ್ನಿ ಆರೋಪ ಮಾಡಿದ್ದರು. ಪತ್ನಿ ವಿರುದ್ಧ ಧ್ರುವಂತ್ ಆರೋಪ ಮಾಡಿದ್ದರು. ಇನ್ನು ಸಹನಟಿಯೋರ್ವರು ಧ್ರುವಂತ್ ವಿರುದ್ಧ ಅ*ತ್ಯಾಚಾರ ಆರೋಪ ಮಾಡಿದ್ದರು.
ಡಾಗ್ ಸತೀಶ್
ನಾರ್ಮಲ್ ನಾಯಿಗೆ ದೊಡ್ಡ ತಳಿಯ ನಾಯಿ ಎಂದು ಸುಳ್ಳು ಹೇಳಿ ಯಾಮಾರಿಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಜಾರಿ ನಿರ್ದೇಶನಾಲಯವು ಸುಳ್ಳು ಎಂದು ಹೇಳಿತ್ತು.
ಚಂದ್ರಪ್ರಭ
'ಗಿಚ್ಚಿ ಗಿಲಿ ಗಿಲಿ' ಸೇರಿದಂತೆ ಕೆಲವು ಕಾಮಿಡಿ ಶೋಗಳಲ್ಲಿ ನಟಿ ಚಂದ್ರಪ್ರಭ ಭಾಗವಹಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಬೈಕ್ ಸವಾರನಿಗೆ ಚಂದ್ರಪ್ರಭ ಕಾರ್ ಡಿಕ್ಕಿ ಹೊಡೆದಿದ್ದರು. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಚಂದ್ರಪ್ರಭ ಹೆಸರು ಕೇಳಿ ಬಂದಿತ್ತು.
ಅಶ್ವಿನಿ ಗೌಡ
ಕರ್ನಾಟಕ ರಕ್ಷಣಾ ವೇದಿಕೆ ಅಥವಾ ಕನ್ನಡ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಅವರು ಸಾಕಷ್ಟು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ.
ಆರ್‌ಜೆ ಅಮಿತ್
ಆರ್‌ಜೆ ಅಮಿತ್ ಅವರು ವಿಡಿಯೋಗಳಲ್ಲಿ, ಒಂದಿಷ್ಟು ಮಾತು ಆಡಿ ಕಾಂಟ್ರವರ್ಸಿ ಮಾಡಿಕೊಂಡಿದ್ದರು. “ನಾನು ಸತ್ಯ ಹೇಳ್ತೀನಿ, ಅದೇ ಕಾಂಟ್ರವರ್ಸಿ ಅಂದರೆ ನಾನು ಏನೂ ಮಾಡೋಕೆ ಆಗೋದಿಲ್ಲ” ಎಂದು ಅವರು ಹೇಳಿದ್ದಾರೆ. ಬಿಗ್ ಬಾಸ್ ಮನೆಗೆ ಬಂದಿರೋ ಆರ್‌ಜೆ ಅಮಿತ್ ಅವರು, “ನಾನು ಡ್ರಾಮಾ ಮಾಡಲ್ಲ, ಡ್ರಾಮಾ ಮಾಡೋದಿಕ್ಕೆ ಸೀರಿಯಲ್ ಆರ್ಟಿಸ್ಟ್ ಇದ್ದಾರೆ” ಎಂದು ಇನ್ನೊಂದು ಸ್ಟ್ರಾಂಗ್ ಹೇಳಿಕೆ ನೀಡಿದ್ದಾರೆ.