ಬಿಗ್‌ಬಾಸ್ ಮನೆಗೆ ಆಮೀರ್ - ಶಾರೂಖ್ ಜೋಡಿ ಎಂಟ್ರಿ: ಇದು ನಮ್ಮ ಭಾಗ್ಯ ಎಂದ ಸುದೀಪ್
Bigg Boss Kannada Season 12 contestants: ಕನ್ನಡ ಬಿಗ್‌ಬಾಸ್ ಸೀಸನ್ 12 ಅದ್ಧೂರಿಯಾಗಿ ಆರಂಭವಾಗಿದ್ದು, ಸ್ಪರ್ಧಿಗಳು ಮನೆ ಪ್ರವೇಶಿಸುತ್ತಿದ್ದಾರೆ. ಈ ಬಾರಿ ವೀಕ್ಷಕರ ನಿರ್ಧಾರದಂತೆ ಸ್ಪರ್ಧಿಗಳು ಜಂಟಿಯಾಗಿ ಮನೆ ಪ್ರವೇಶಿಸುತ್ತಿದ್ದಾರೆ.

ಕನ್ನಡ ಬಿಗ್‌ಬಾಸ್ ಸೀಸನ್ 12
ಕನ್ನಡ ಬಿಗ್‌ಬಾಸ್ ಸೀಸನ್ 12 ಅದ್ಧೂರಿಯಾಗಿ ಓಪನ್ ಆಗ್ತಿದೆ. ಕಾಕ್ರೋಚ್ ಸುಧಿ, ನಿರೂಪಕಿ ಜಾನ್ವಿ, ನಟಿ ಕಾವ್ಯಾ ಶ್ರಾವ್ಯ, ಹಾಸ್ಯ ಕಲಾವಿದ ಗಿಲ್ಲಿ ನಟ ದೊಡ್ಮನೆಯನ್ನು ಪ್ರವೇಶಿಸಿದ್ದಾರೆ. ಇದೆಲ್ಲದರ ನಡುವೆ ಅದ್ಧೂರಿಯಾದ ಅರಮನೆಗೆ ಆಮೀರ್ ಖಾನ್ ಮತ್ತು ಶಾರೂಖ್ ಖಾನ್ ಜೋಡಿ ಎಂಟ್ರಿಯಾಗಿದೆ. ಇದು ನಮ್ಮ ಭಾಗ್ಯ ಎಂದು ಸುದೀಪ್ ಅವರೇ ಹೇಳಿದ್ದಾರೆ.
ಬಿಗ್‌ಬಾಸ್ ವೇದಿಕೆಯಿಂದಲೇ ಆಟ ಶುರು
ಈ ಬಾರಿ ಬಿಗ್‌ಬಾಸ್ ವೇದಿಕೆಯಿಂದಲೇ ಆಟ ಶುರುವಾಗಿದೆ. ಸ್ಪರ್ಧಿಗಳು ಒಂಟಿಯಾಗಿ ಹೋಗಬೇಕಾ ಅಥವಾ ಜಂಟಿಯಾಗಿ ಹೋಗಬೇಕಾ ಎಂಬುದನ್ನು ಅಲ್ಲಿ ನೆರೆದಿರುವ ಜನರು ನಿರ್ಧರಿಸುತ್ತಾರೆ. ವೀಕ್ಷಕರ ನಿರ್ಧಾರದಂತೆ ಜಂಟಿಯಾಗಿ ಮೊದಲು ಕಾವ್ಯಾ ಮತ್ತು ಗಿಲ್ಲಿನಟ ತೆರಳಿದ್ದಾರೆ. ಇವರ ಬೆನ್ನಲ್ಲೇ ಖಾನ್ ಜೋಡಿ ಹೋಗಿದೆ.
ಯಾರು ಈ ಶಾರೂಖ್- ಆಮೀರ್ ಜೋಡಿ?
ಡಾಗ್ ಸತೀಶ್ ಅವರು ಜಂಟಿಯಾಗಿ ಹೋಗಬೇಕೆಂದು ವೀಕ್ಷಕರು ಬಯಸಿದ್ದರು. ಹಾಗಾಗಿ ಸತೀಶ್ ಅವರನ್ನು ತೆರೆಯ ಹಿಂದೆ ವೇಟ್ ಮಾಡಿಸಲಾಗಿತ್ತು. ಇವರ ನಂತರ ವೇದಿಕೆಗೆ ಬಂದ ಹಾಸ್ಯ ಕಲಾವಿದ ಚಂದ್ರಪ್ರಭ ಅವರನ್ನು ಸಹ ಜಂಟಿಯಾಗಿ ನೋಡಲು ವೀಕ್ಷಕರು ಇಷ್ಟಪಟ್ಟಿದ್ದರು. ಈಗಾಗಲೇ ತೆರೆಯ ಹಿಂದೆ ಕುಳಿತಿದ್ದ ಸತೀಶ್ ಜೊತೆ ಹೋಗಲು ಚಂದ್ರಪ್ರಭ ಒಪ್ಪಿಕೊಂಡರು.
ಚಂದ್ರಪ್ರಭ ಮತ್ತು ಸತೀಶ್
ಸತೀಶ್ ಜೊತೆ ಹೋಗಲ್ಲ ಅಂದ್ರೆ ಆ ತೆರೆಯ ಹಿಂದೆ ಅಥವಾ ಮುಚ್ಚಿದ ಕೋಣೆಯಲ್ಲಿ ಅರ್ಧ ರಾತ್ರಿಯವರೆಗೂ ಕುಳಿತುಕೊಳ್ಳಬೇಕು. ಹಾಗಾಗಿ ಅಲ್ಲಿರುವ ಬದಲು ಬಿಗ್‌ಬಾಸ್ ಮನೆಯೊಳಗೆ ಇರೋದು ಉತ್ತಮ ಎಂದು ಚಂದ್ರಪ್ರಭ ಹೇಳಿದರು. ಚಂದ್ರಪ್ರಭ ಮತ್ತು ಸತೀಶ್ ಇಬ್ಬರು ವೇದಿಕೆ ಮೇಲೆಯೇ ಪರಸ್ಪರ ಪರಿಚಯ ಮಾಡಿಕೊಂಡರು.
ಸತೀಶ್ ಹೇರ್‌ಸ್ಟೈಲ್
ಬಿಗ್‌ಬಾಸ್ ಮನೆಯೊಳಗೆ ತೆರಳುವ ಮುನ್ನ ಮಾತನಾಡಿದ ಸತೀಶ್, ಈ ಹಿಂದೆ ನನ್ನ ಕೂದಲು ನೋಡಿ ಆಮೀರ್ ಖಾನ್ ಅಂತಿದ್ದರು. ಈಗ ಹೇರ್‌ಸ್ಟೈಲ್ ನೋಡಿ ಚಂದ್ರಪ್ರಭ ಅಂತಿದ್ದಾರೆ. ಅಮ್ಮನೊಂದಿಗೆ ಕುಳಿತು ಎಲ್ಲಾ ಸೀರಿಯಲ್ ನೋಡುತ್ತೇನೆ. ಹಾಗಾಗಿ ಚಂದ್ರಪ್ರಭ ಅವರ ಕೆಟ್ಟ ಕಾಮಿಡಿಯನ್ನು ನೋಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: BBK 12: ತೀರ ಪರ್ಸನಲ್ ವಿಷಯ ಮಾತನಾಡಿದ ಪತ್ನಿ; ವೇದಿಕೆಯಲ್ಲೇ ತಡೆದ 'ಗೀತಾ' ನಟ ಧನುಷ್ ಗೌಡ
ಸತೀಶ್ ಮತ್ತು ಚಂದ್ರಪ್ರಭ ಜೋಡಿ
ಸತೀಶ್ ಮತ್ತು ಚಂದ್ರಪ್ರಭ ಜೋಡಿ ನೋಡಿದ ಸುದೀಪ್, ನೀವು ಆಮೀರ್ ಖಾನ್ ಆದ್ರೆ, ಚಂದ್ರಪ್ರಭ ಶಾರೂಖ್ ಖಾನ್ ಅಂತ ತಮಾಷೆ ಮಾಡಿದರು. ನಮ್ಮ ಕನ್ನಡದ ವೇದಿಕೆ ಮೇಲೆ ಆಮೀರ್ ಮತ್ತು ಶಾರೂಖ್ ಅವರನ್ನು ನೋಡುವುದು ನಮ್ಮ ಭಾಗ್ಯ ಎಂದು ಇಬ್ಬರು ಸ್ಪರ್ಧಿಗಳಿಗೆ ಶುಭ ಹಾರೈಸಿ ಮನೆಗೆ ಸುದೀಪ್ ಕಳುಹಿಸಿದರು. ಚಂದ್ರಪ್ರಭ ಬಳಿಕ ಬಂದ ನಟಿ ಮಂಜು ಭಾಷಿನಿ ಅವರನ್ನು ಜಂಟಿಯಾಗಿ ನೋಡಲು ಬಯಸಿದ್ದಾರೆ.
ಇದನ್ನೂ ಓದಿ: BBK 12: ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳ ಉದ್ದೇಶ ಕೊನೆಗೂ ಬಯಲು; ಇದೇ ಸತ್ಯ, ಇದೇ ನಿತ್ಯ