ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರ ಪಟ್ಟಿ ಪ್ರಕಟ, ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಮೊದಲ ಸ್ಥಾನದಲ್ಲಿರುವ ನಗರ ದೆಹಲಿ, ಮುಂಬೈ ಅಲ್ಲ ಹಾಗಾದರೆ ಮತ್ಯಾವುದು ಅನ್ನೋ ಕುತೂಹಲ ಜೊತೆಗೆ ಎಚ್ಚರಿಕೆಯೂ ಅಗತ್ಯ.

ಬೆಂಗಳೂರು (ಸೆ.28) ಭಾರತ ಸಂಬಂಧ, ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ದೇಶ. ತಂದೆ ತಾಯಿ, ಪತಿ ಪತ್ನಿ, ಅಣ್ಣ ತಂಗಿ ಸೇರಿದಂತೆ ಪ್ರತಿ ಸಂಬಂಧಗಳು ಅತ್ಯಂತ ಪವಿತ್ರ ಎಂದು ಭಾವಿಸುತ್ತದೆ. ಈ ಸಂಬಂಧಗಳ ಸುತ್ತವೇ ಭಾರತೀಯ ಸಂಸ್ಕೃತಿ, ಹಬ್ಬ, ಸಂಪ್ರದಾಯಗಳು ಮಿಳಿತಗೊಂಡಿದೆ. ಆದರೆ ಆಧುನಿಕತೆ ಪ್ರವಾಹದಲ್ಲಿ ಭಾರತ ತನ್ನ ತನ ಕಳೆದುಕೊಂಡಿತಾ? ಅನ್ನೋ ಚರ್ಚೆಗಳು ಹಲವು ಬಾರಿ ನಡೆದಿದೆ. ಇದೀಗ ಗ್ಲೀಡನ್ ಆ್ಯಪ್ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಭಾರತದಲ್ಲಿ ಅಕ್ರಮ ಸಂಬಂಧಗಳ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಯಾವ ನಗರದಲ್ಲಿ ಅತೀ ಹೆಚ್ಚು ಅಕ್ರಮಸಂಬಂಧವಿದೆ ಅನ್ನೋ ಪಟ್ಟಿಯನ್ನು ಗ್ಲೀಡನ್ ಪ್ರಕಟಿಸಿದೆ. ಈ ಗ್ಲೀಡನ್ ಪ್ರಕಾರ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ಭಾರತದ ನಗರ ಬೆಂಗಳೂರು.

ಟ್ರಾಫಿಕ್ ಜೊತೆಗೆ ಅಂಟಿಕೊಂಡಿತಾ ಮತ್ತೊಂದು ಕಳಂಕ

ಗ್ಲೀಡನ್ (Gleeden) ಹೊರತಂದಿರುವ ಅಧ್ಯಯನ ಸಮೀಕ್ಷೆ ವರದಿಯಲ್ಲಿ ಬೆಂಗಳೂರು ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರ ಎಂದಿದೆ. ಬೆಂಗಳೂರಿಗೆ ಅತೀ ಹೆಚ್ಚು ಟ್ರಾಫಿಕ್ ನಗರ ಅನ್ನೋ ಟೀಕೆ, ಕಳಂಕ ಅಂಟಿಕೊಂಡಿದೆ. ಇದರ ಜೊತೆಗೆ ಅತೀ ಹೆಚ್ಚು ಅಕ್ರಮ ಸಂಬಂಧ ನಗರ ಅನ್ನೋ ಕಳಂಕವೂ ಅಂಟಿಕೊಂಡಿತಾ? ಈ ಗ್ಲೀಡನ್ ವರದಿ ಕುರಿತು ಭಾರಿ ಚರ್ಚೆಯೊಂದು ನಡೆಯುತ್ತಿದೆ.

ಗ್ಲೀಡನ್ ವರದಿ ಪ್ರಕಾರ ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧದ ಟಾಪ್ 5 ನಗರ

  1. ಬೆಂಗಳೂರು
  2. ಮುಂಬೈ
  3. ಕೋಲ್ಕತಾ
  4. ದೆಹಲಿ
  5. ಪುಣೆ

ಸಣ್ಣ ನಗರಗಳಲ್ಲಿ ಡೇಟಿಂಗ್, ರಿಲೇಶನ್‌ಶಿಪ್ ಆ್ಯಪ್ ಹೆಚ್ಚು ಪರಿಮಮಕಾರಿ

ಈ ಸಮೀಕ್ಷೆಯಲ್ಲಿ ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸಣ್ಣ ನಗರ ಅಂದರೆ ಟೈರ್ 2, ಟೈರ್ 3 ನಗರಗಳು ಹೆಚ್ಚು ಸುರಕ್ಷಿತ ಎಂದು ಭಾವಿಸಿದರೆ ತಪ್ಪು. ಇದೇ ನಗರಗಳಲ್ಲಿ ಅತೀ ಹೆಚ್ಚು ಡೇಟಿಂಗ್ ಆ್ಯಪ್, ಅಕ್ರಮ ಸಂಬಂಧ, ರಿಲೇಶನ್‌ಶಿಪ್ ಸಕ್ರಿಯವಾಗಿದೆ ಎಂದು ವರದಿ ಹೇಳುತ್ತಿದೆ. ಈ ಸಣ್ಣ ನಗರದಳಲ್ಲಿ ಡೇಟಿಂಗ್, ಅಕ್ರಮ ಸಂಬಂಧ , ರಿಲೇಶನ್‌ಶಿಪ್ ಆ್ಯಪ್ ಸಕ್ರಿಯತೆ ಹಾಗೂ ಬೆಳವಣಿಗೆ ವೇಗ ಮಹಾ ನಗರಗಳಿಂದ ದುಪ್ಪಟ್ಟು ಎಂದು ವರದಿ ಹೇಳುತ್ತಿದೆ.

ಡೇಟಿಂಗ್, ರಿಲೇಶನ್‌ಶಿಪ್ ಆ್ಯಪ್ ಬಳಸುವ ಸಣ್ಣ ನಗರ

  • ಜೈಪುರ
  • ಚಂಡೀಘಡ
  • ಲಖನೌ
  • ಪಾಟ್ನ

ಈ ಬದಲಾವಣೆಗೆ ಮುಖ್ಯ ಕಾರಣ, ಸಣ್ಣ ನಗರದಲ್ಲಿ ಬಹುತೇಕರು, ಕುಟುಂಬ, ಸಂಪ್ರದಾಯಗಳ ಜೊತೆ ಬದುಕುತ್ತಾರೆ. ಆದರೆ ಇದೇ ವೇಳೆ ಕದ್ದು ಮುಚ್ಚಿ ಡೇಟಿಂಗ್ ಆ್ಯಪ್, ರಿಲೇಶನ್‌ಶಿಪ್ ಆ್ಯಪ್, ಅಕ್ರಮಸಂಬಂಧ ಇಟ್ಟುಕೊಳ್ಳುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ.