10:48 PM (IST) Jun 12

Karnataka News Live Kodagu Kidnap Case - ಶಾಲೆ ಮುಂದೆ 5 ವರ್ಷದ ಮಗುವನ್ನು ಕರೆದೊಯ್ದ ತಂದೆ? ತಾಯಿಯ ಕಣ್ಣೀರು!

Kodagu ಜಿಲ್ಲೆಯ ಮೂರ್ನಾಡಿನಲ್ಲಿ 5 ವರ್ಷದ ಮಗುವನ್ನು ತಂದೆಯೇ ಅಪಹರಿಸಿರುವ ಆರೋಪ ಕೇಳಿಬಂದಿದೆ. ಗಂಡನ ವಿರುದ್ಧ ದೂರು ನೀಡಿರುವ ತಾಯಿ, ಮಗುವನ್ನು ಹುಡುಕಿಕೊಡುವಂತೆ ಪೊಲೀಸ್ ಇಲಾಖೆ ಹಾಗೂ ಎಸ್ಪಿ ಅವರನ್ನು ಮನವಿ ಮಾಡಿದ್ದಾರೆ.

Read Full Story
09:18 PM (IST) Jun 12

Karnataka News Live ರೂಪಸಿಯಾದ ನಿವೇದಿತಾ ಗೌಡ, ಕಾಮೆಂಟ್‌ ಬಾಕ್ಸ್‌ ಕವಿಗಳಾದ ನೆಟ್ಟಿಗರು

ಬಿಗ್‌ಬಾಸ್‌ ಸ್ಪರ್ಧಿ ನಿವೇದಿತಾ ಗೌಡ ಹಸಿರು ಲಂಗ, ಕಿತ್ತಳೆ ಬ್ಲೌಸ್‌ನಲ್ಲಿ ಹೊಸ ಫೋಟೋಶೂಟ್‌ ಮಾಡಿಸಿದ್ದು, ವಿಡಿಯೋ ಹಂಚಿಕೊಂಡಿದ್ದಾರೆ. ಈ ಹಿಂದೆ ತುಂಡುಡುಗೆಗೆ ಟೀಕೆ ಎದುರಿಸುತ್ತಿದ್ದ ಅವರು, ಇದೀಗ ಸಾಂಪ್ರದಾಯಿಕ ಉಡುಗೆಯಲ್ಲಿನ ಸೌಂದರ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಗಳಿಸುತ್ತಿದ್ದಾರೆ.
Read Full Story
09:17 PM (IST) Jun 12

Karnataka News Live ಮೂಕಾಂಬಿಕೆಗೆ ದರ್ಶನ ಬಳಿಕ ಎಐಎಡಿಎಂಕೆ ಪಕ್ಷ ಸ್ಥಾಪಿಸಿದ್ದ ಎಂಜಿಆರ್, ಪಾರ್ಟಿ ಚಿಹ್ನೆಗೂ ಇದೆ ಕೊಲ್ಲೂರು ನಂಟು

ಸಿಎಂ ವಿಜಯ್ ಮೂಕಾಂಬಿಕೆ ದರ್ಶನ ಇದೀಗ ತಮಿಳುನಾಡು ಹಾಗೂ ಕೊಲ್ಲೂರು ನಡುವಿನ ಸಂಬಂಧ, ದೇವಿ ಶಕ್ತಿ ಕುರಿತು ಹಲವು ಇಂಟ್ರೆಸ್ಟಿಂಗ್ ಮಾಹಿತಿ ಬಯಲಾಗಿದೆ. ದೇವಸ್ಥಾನದ ಅರ್ಚಕ ಪೂರೋಹಿತರು ಮಾಹಿತಿ ನೀಡಿದ್ದಾರೆ.

 

Read Full Story
08:29 PM (IST) Jun 12

Karnataka News Live Bigg Boss​ ಪ್ರಿಯರಿಗೆ ಭರ್ಜರಿ ಗುಡ್​ ನ್ಯೂಸ್​ - ಕೊನೆಗೂ ಡೇಟ್​ ಫಿಕ್ಸ್​- ಸೆಲೆಬ್ರಿಟಿಗಳು ಯಾರು

ಕನ್ನಡ ಬಿಗ್​ಬಾಸ್​ ಶೀಘ್ರದಲ್ಲೇ ಆರಂಭವಾಗಲಿದ್ದು, ಸ್ಪರ್ಧಿಗಳ ಬಗ್ಗೆ ಗಾಸಿಪ್​ ಹರಿದಾಡುತ್ತಿದೆ. ಇದರ ನಡುವೆ,  ಬಿಗ್​ಬಾಸ್​  ಕುರಿತು ಇನ್ನೊಂದು ಬಿಗ್​ ಅಪ್​ಡೇಟ್​ ಹೊರಬಿದ್ದಿದ್ದು, ರಿಯಾಲಿಟಿ ಷೋ ವೀಕ್ಷಕರು ಫುಲ್​ ಖುಷ್​ ಆಗಿದ್ದಾರೆ. ಹಾಗಿದ್ದರೆ ಏನದು ಎನ್ನುವ ಮಾಹಿತಿ ಇಲ್ಲಿದೆ.

Read Full Story
08:13 PM (IST) Jun 12

Karnataka News Live ರಶ್ಮಿಕಾ ಮಂದಣ್ಣ ಸೀರೆ ಕಾಂಬಿನೇಷನ್‌ಗೆ ಮುಗಿಬಿದ್ದ ಮಹಿಳೆಯರು - 10 ಕೋಟಿ ಮೌಲ್ಯದ ಸೀರೆ ಸೇಲ್‌

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಉಟ್ಟಿದ್ದ ಕೆಂಪು ಮತ್ತು ಕಪ್ಪು ಬಣ್ಣದ ಸೀರೆಯೊಂದು ಸೃಷ್ಟಿಸಿದ ಅಲೆಯ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. ಈ ಸೀರೆಗೆ ಬಂದ ಬೇಡಿಕೆಯಿಂದಾಗಿ ಸೀರೆ ಮಳಿಗೆಯೊಂದು ಹತ್ತು ಕೋಟಿ ರೂಪಾಯಿ ಲಾಭ ಗಳಿಸಿದ್ದು, ಇದು ಸೆಲೆಬ್ರಿಟಿಗಳ ಪ್ರಭಾವ ಎಷ್ಟಿದೆ ಎಂಬುದನ್ನು ತೋರಿಸುತ್ತದೆ.
Read Full Story
07:48 PM (IST) Jun 12

Karnataka News Live Pregnant Woman - ಬೆಂಗಳೂರಿನ 9 ತಿಂಗಳ ಗರ್ಭಿಣಿ ತಲೆಕೆಳಗಾಗಿ ಯೋಗ - 2 ಕೋಟಿಗೂ ಹೆಚ್ಚು ಜನ ನೋಡಿದ ವಿಡಿಯೋ ವೈರಲ್!

9 Month Pregnant Woman: ಬೆಂಗಳೂರಿನ ಯೋಗ ಶಿಕ್ಷಕಿ ಶಶಿಪ್ರಭಾ ದ್ವಿವೇದಿ 9 ತಿಂಗಳ ಗರ್ಭಿಣಿಯಾಗಿದ್ದರೂ ಶೀರ್ಷಾಸನ, ಚಕ್ರಾಸನ ಸೇರಿದಂತೆ ಕಠಿಣ ಯೋಗಾಸನಗಳನ್ನು ಮಾಡಿ ವೈರಲ್ ಆಗಿದ್ದಾರೆ.

Read Full Story
07:18 PM (IST) Jun 12

Karnataka News Live Amit Shah ಮುಂದೆ ಸಿಎಂ ಡಿಕೆಶಿ ಇಟ್ಟ ಆ ಬೇಡಿಕೆಗಳೇನು? ಕರ್ನಾಟಕಕ್ಕೆ ಸಿಗುತ್ತಾ ಸಾವಿರ ಕೋಟಿ ರೂ. ನೆರವು?

Delhi ಭೇಟಿಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಡಿ.ಕೆ.ಶಿವಕುಮಾರ್ 9 ಪ್ರಮುಖ ಮನವಿಗಳನ್ನು ಸಲ್ಲಿಸಿದ್ದಾರೆ. ಪೊಲೀಸ್ ಆಧುನೀಕರಣ, ಹೆಚ್ಚುವರಿ IRB ಬೆಟಾಲಿಯನ್, ಜೈಲು ಸುಧಾರಣೆಗೆ ಕೇಂದ್ರದ ನೆರವು ಕೋರಿದ್ದಾರೆ.

Read Full Story
06:35 PM (IST) Jun 12

Karnataka News Live Bomb Blast Accused - ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ಅಬ್ದುಲ್ ಖಾದರ್ ಸಾವು - ಆಗಿದ್ದೇನು?

Abdul Khader Death: 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಶಂಕಿತ ಉಗ್ರ ಅಬ್ದುಲ್ ಖಾದರ್ (60) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

Read Full Story
06:30 PM (IST) Jun 12

Karnataka News Live ಮೇಖ್ರಿ ಸರ್ಕಲ್‌-ಗಂಗಾನಗರ ನಿವಾಸಿಗಳಿಗೆ BMRCL ಶಾಕ್ - ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗದ ಪ್ರಮುಖ ನಿಲ್ದಾಣ ರದ್ದು

ವೆಚ್ಚ ಕಡಿತದ ಭಾಗವಾಗಿ, ಬೆಂಗಳೂರು ಮೆಟ್ರೋದ ಹೆಬ್ಬಾಳ-ಸರ್ಜಾಪುರ ಕಾರಿಡಾರ್‌ನಿಂದ ವೆಟರ್ನರಿ ಕಾಲೇಜು ನಿಲ್ದಾಣವನ್ನು ಕೈಬಿಡಲಾಗಿದೆ. ಪರಿಷ್ಕೃತ ₹25,999 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಬಾಕಿಯಿದ್ದು, ಡಬಲ್ ಡೆಕ್ಕರ್ ವಿನ್ಯಾಸದ ಕುರಿತ ವಿವಾದದಿಂದಾಗಿ ವಿಳಂಬವಾಗಿದೆ.
Read Full Story
06:03 PM (IST) Jun 12

Karnataka News Live Rain Yellow Alert - ಮುಂದಿನ 3 ಗಂಟೆ ಭಾರಿ ಎಲ್ಲೋ ಅಲರ್ಟ್‌, ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ

ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
Read Full Story
05:52 PM (IST) Jun 12

Karnataka News Live CM Vijay- Kollur - ಸಿಎಂ ವಿಜಯ್‌ ಜೊತೆಗೆ ಕೊಲ್ಲೂರಿಗೆ ತಮಿಳುನಾಡಿನಿಂದ ಬಂದ ಆ ಸ್ಪೆಷಲ್‌ ವ್ಯಕ್ತಿ ಯಾರು ಗೊತ್ತಾ?

ಕೊಲ್ಲೂರಿನಲ್ಲಿ ವಿಜಯ್ ಅವರ ಪಕ್ಕದಲ್ಲೇ ನಯೀಮ್ ಮೂಸಾ ಅವರನ್ನು ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. "ನಮ್ಮ ಅಣ್ಣನಿಗೆ ಸರ್ಕಾರಿ ಸೆಕ್ಯೂರಿಟಿ ಏನೇ ಇರಲಿ, ಈ ನಯೀಮ್ ಒಬ್ಬರು ಜೊತೆಗಿದ್ದರೆ ಸಾಕು, ಅಣ್ಣನಿಗೆ ಸಾವಿರ ಆನೆಗಳ ಬಲ ಬಂದಂತೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಯಾರು ಅವರು?

Read Full Story
04:48 PM (IST) Jun 12

Karnataka News Live TN CM Vijay - ಕೊಲ್ಲೂರು ದೇಗುಲದಲ್ಲಿ ಆ ಸಂಕಲ್ಪ ಮಾಡಿ, ಅರ್ಚಕರ ಮುಂದೆ ಅದೊಂದು ಮನವಿ ಮಾಡಿಕೊಂಡ ಸಿಎಂ ವಿಜಯ್!

ದಳಪತಿ ವಿಜಯ್ ಅವರ ಕೊಲ್ಲೂರು ಭೇಟಿ ಕೇವಲ ಒಂದು ಧಾರ್ಮಿಕ ಪ್ರವಾಸವಾಗಿರದೆ, ಅವರ ಅಪ್ಪಟ ಭಕ್ತಿ ಮತ್ತು ತಮಿಳುನಾಡಿನ ರಾಜಕೀಯ ಪರಂಪರೆಯನ್ನು ಮುಂದುವರೆಸುವ ಸಂಕೇತವಾಗಿ ಮೂಡಿಬಂದಿದೆ. ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್ ಅರ್ಚಕರಲ್ಲಿ ವಿಜಯ್ ಮಾಡಿದ ಆ ಒಂದು ಸ್ಪೆಷಲ್ ರಿಕ್ವೆಸ್ಟ್ ಏನು?"

Read Full Story
04:34 PM (IST) Jun 12

Karnataka News Live ಕೊಲ್ಲೂರು ಮೂಕಾಂಬಿಕೆಗೆ 1.6 ಕೆ.ಜಿ ಬೆಳ್ಳಿ ಖಡ್ಗ ಅರ್ಪಿಸಿದ ಸಿಎಂ ವಿಜಯ್, ಸುದೀರ್ಘ ಆಳ್ವಿಕೆ ಸೂಚನೆ?

ತಮಿಳುನಾಡು ಸಿಎಂ ವಿಜಯ್ ಜೊಸೆಫ್ ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ್ದಾರೆ. ವಿಶೇಷ ಅಂದರೆ ಈ ಸಂಪ್ರದಾಯ ಮೂಲಕ ವಿಜಯ್ ತಮಿಳುನಾಡಿನಲ್ಲಿ ಸುದೀರ್ಘ ಆಳ್ವಿಕೆಯ ಸೂಚೆ ನೀಡಿದ್ದಾರೆ.

Read Full Story
04:23 PM (IST) Jun 12

Karnataka News Live ಗಮನದಲ್ಲಿರಲಿ - ಯಶವಂತಪುರದಿಂದ ಹೊರಡುವ 2 ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿಸ್ತರಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ಯಶವಂತಪುರದಿಂದ ಬಿಕಾನೇರ್‌ಗೆ ಸಂಚರಿಸುವ ವಿಶೇಷ ರೈಲಿನ ಅವಧಿಯನ್ನು ವಿಸ್ತರಿಸಲಾಗಿದ್ದು, ಯಶವಂತಪುರ-ಜೈಪುರ ಎಕ್ಸ್‌ಪ್ರೆಸ್ ರೈಲನ್ನು ಖತಿಪುರ ನಿಲ್ದಾಣದವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.
Read Full Story
04:20 PM (IST) Jun 12

Karnataka News Live 26 ಗಂಟೆಗಳ ಶೂಟಿಂಗ್ ಬಳಿಕ ಆ ಕ್ಲೈಮ್ಯಾಕ್ಸ್ ಸೀನ್ - ಕಿಚ್ಚ ಸುದೀಪ್ ಅಳಿಯ ಹೇಳಿದ್ದೇನು?

ಮ್ಯಾಂಗೋ ಪಚ್ಚ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ, 26 ಗಂಟೆಗಳ ಶೂಟಿಂಗ್ ಅನುಭವ, ನಟನೆಯ ಮೂಲಕ ಭಾವನೆಗಳನ್ನು ಹೊರಹಾಕಿದ ಕ್ಷಣಗಳು ಹಾಗೂ ‘ಜಿಮ್ಮಿ’ ಚಿತ್ರದ ಬಗ್ಗೆ ಸಂಚಿತ್ ಸಂಜೀವ್ ಮನದಾಳದ ಮಾತು.

Read Full Story
04:16 PM (IST) Jun 12

Karnataka News Live ಲಕ್ಸುರಿ ಕಾರಿನಲ್ಲಿ ಕೊಲ್ಲೂರಿಗೆ ಬಂದ ಸಿಎಂ ವಿಜಯ್; ಆ ಐಷಾರಾಮಿ ಕಾರಿನ ರಹಸ್ಯ, ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರಾ!

ಮಂಗಳೂರಿನಿಂದ ಕೊಲ್ಲೂರಿಗೆ ದಳಪತಿ ಸವಾರಿ ಮಾಡಿದ್ದು ಯಾವ ಸಾಮಾನ್ಯ ಕಾರಿನಲ್ಲಲ್ಲ, ಅದರ ಫೀಚರ್ಸ್ ಮತ್ತು ಬೆಲೆ ಕೇಳಿದರೆ ಯಾರಿಗಾದರೂ ಒಂದು ಕ್ಷಣ ತಲೆ ಸುತ್ತುವುದು ಗ್ಯಾರಂಟಿ. ಹಾಗಿದ್ರೆ ಅದು ಯಾವಕಾರು, ಅದರ ರಹಸ್ಯವೇನು, ಬೆಲೆ ಎಷ್ಟು? ಈ ಸ್ಟೋರಿ ನೋಡಿ…

Read Full Story
04:00 PM (IST) Jun 12

Karnataka News Live ಕೊಂಕಣ ರೈಲ್ವೆ ಅಭಿವೃದ್ಧಿಗೆ ಕೇಂದ್ರದಿಂದ 7000ಕೋಟಿ ಅನುದಾನಕ್ಕೆ ಯತ್ನ, ಕಾರವಾರ-ಮಡಗಾಂವ್ ರೈಲು ವೇಳಾಪಟ್ಟಿ ಪರಿಷ್ಕರಣೆ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೊಂಕಣ ರೈಲ್ವೆ ಮಾರ್ಗದ ಅಭಿವೃದ್ಧಿಗಾಗಿ ₹7,000 ಕೋಟಿ ಅನುದಾನ ಪಡೆಯುವ ಪ್ರಯತ್ನಗಳ ಬಗ್ಗೆ ತಿಳಿಸಿದ್ದಾರೆ. ಕಾರವಾರ-ಮಡಗಾಂವ್ ರೈಲು ಸೇವೆಯನ್ನು ಶಾಶ್ವತಗೊಳಿಸಲಾಗಿದ್ದು, ಕಾರವಾರ ನಿಲ್ದಾಣದಲ್ಲಿ ಮಹಿಳೆಯರಿಗಾಗಿ 'ಪಿಂಕ್ ಬಬಲ್' ಸೌಲಭ್ಯವನ್ನು ಉದ್ಘಾಟಿಸಲಾಗಿದೆ.

Read Full Story
02:48 PM (IST) Jun 12

Karnataka News Live BBK13 Audition - ಜೋರಾಗಿ ಆಡಿಷನ್ಸ್‌ ನಡೆಯುತ್ತಿದೆ, 'ಬಿಗ್ ಬಾಸ್ ಕನ್ನಡ-13'ರಲ್ಲಿ ನೀವೂ ಭಾಗವಹಿಸಬೇಕೇ? ಹೀಗೆ ಮಾಡಿ!

ನಿಮ್ಮಲ್ಲಿ ವಿಭಿನ್ನ ವ್ಯಕ್ತಿತ್ವವಿದೆಯೇ? ನಿಮ್ಮ ಮಾತಿನ ಚತುರತೆ ಮತ್ತು ಗುಣಗಳಿಂದ ಜಗತ್ತನ್ನು ಗೆಲ್ಲಬಲ್ಲಿರಾ? ಹಾಗಿದ್ದರೆ ತಡಮಾಡಬೇಡಿ. ತಕ್ಷಣವೇ ಅಧಿಕೃತ ಲಿಂಕ್‌ಗೆ ಭೇಟಿ ನೀಡಿ, ನಿಮ್ಮ ವಿಡಿಯೋ ಅಪ್‌ಲೋಡ್ ಮಾಡಿ. ಯಾರು ಬಲ್ಲರು? ನೀವೂ ಅವರಲ್ಲಿ ಒಬ್ಬರಾಗಬಹುದು!

Read Full Story
02:38 PM (IST) Jun 12

Karnataka News Live ಮಂಡ್ಯ - ಉಳುಮೆ ಮಾಡುವಾಗ ನೇಗಿಲಿಗೆ ಸಿಕ್ಕ ಕಲ್ಲು, ಬಯಲಾಯ್ತು 500 ವರ್ಷದ ಹಿಂದಿನ ಸತ್ಯ! ಕನ್ನಡ ಶಾಸನದಲ್ಲಿ ಏನಿತ್ತು?

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದಡಗ ಗ್ರಾಮದಲ್ಲಿ ರೈತರೊಬ್ಬರಿಗೆ ಜಮೀನು ಉಳುಮೆ ಮಾಡುವಾಗ 15-16ನೇ ಶತಮಾನಕ್ಕೆ ಸೇರಿದ ಕನ್ನಡ ಶಾಸನವೊಂದು ದೊರೆತಿದೆ. ಸಂಶೋಧಕ ಮಹಮ್ಮದ್‌ ಕಲೀಂಉಲ್ಲ ಅವರು ಇದನ್ನು ಗುರುತಿಸಿದ್ದು, ಗೋಪಾಲದೇವ ಎಂಬ ವ್ಯಕ್ತಿಯು ಬಸವ ಭಕ್ತರಿಗೆ ಭೂಮಿಯನ್ನು ದಾನವಾಗಿ ನೀಡಿದ ವಿಷಯವನ್ನು ಈ ಶಾಸನವು ಒಳಗೊಂಡಿದೆ.
Read Full Story
01:58 PM (IST) Jun 12

Karnataka News Live ರಾಮನ ಬಗ್ಗೆ ಅವಹೇಳನ - ತಲೆಹಿಡುಕ ಭಗವಾನ್‌ರನ್ನ ಬಂಧಿಸಿ, ಇಲ್ಲಂದ್ರೆ ನಾವೇ ಮನೆಗೆ ನುಗ್ಗಿ ಹೊಡ್ತೇವೆ - ಮುತಾಲಿಕ್ ವಾರ್ನ್!

ಬೆಳಗಾವಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಧರ್ಮಸ್ಥಳದ ವಿರುದ್ಧ 200 ಕೋಟಿ ರೂ. ವ್ಯವಹಾರದ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಸಂಚಿನಲ್ಲಿ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದು, ಎಲ್ಲರನ್ನೂ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. 

Read Full Story