MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • Rain Yellow Alert: ಮುಂದಿನ 3 ಗಂಟೆ ಭಾರಿ ಎಲ್ಲೋ ಅಲರ್ಟ್‌, ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ

Rain Yellow Alert: ಮುಂದಿನ 3 ಗಂಟೆ ಭಾರಿ ಎಲ್ಲೋ ಅಲರ್ಟ್‌, ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ

ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

1 Min read
Author : Santosh Naik
Published : Jun 12 2026, 06:03 PM IST
Share this Photo Gallery
  • FB
  • TW
  • Linkdin
  • Whatsapp
15
ಮುಂದಿನ 3 ಗಂಟೆ ಭಾರಿ ಮಳೆ ಮುನ್ಸೂಚನೆ
Image Credit : Asianet News

ಮುಂದಿನ 3 ಗಂಟೆ ಭಾರಿ ಮಳೆ ಮುನ್ಸೂಚನೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಈ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' (Yellow Alert) ಘೋಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎಲ್ಲೋ ಅಲರ್ಟ್ ಘೋಷಿತ ಜಿಲ್ಲೆಗಳು
Image Credit : Asianet News

ಎಲ್ಲೋ ಅಲರ್ಟ್ ಘೋಷಿತ ಜಿಲ್ಲೆಗಳು

ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ Yellow Alert ನೀಡಿದೆ.

Related Articles

Related image1
ಆ.27ರಿಂದ ರಾಜ್ಯದಲ್ಲಿ ಮತ್ತೆ ಮಳೆ ಚುರುಕು: ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌
Related image2
ಮೂರು ಜಿಲ್ಲೇಲಿ ಮಳೆಯಬ್ಬರ: ಕರಾವಳಿಗೆ 4 ದಿನ ಯೆಲ್ಲೋ ಅಲರ್ಟ್‌, ಬಳ್ಳಾರೀಲಿ 100 ಮರ ಧರೆಗೆ
35
ಬೆಂಗಳೂರಿನ ಹಲವೆಡೆ ಸುರಿಯುತ್ತಿರುವ ಮಳೆ
Image Credit : Asianet News

ಬೆಂಗಳೂರಿನ ಹಲವೆಡೆ ಸುರಿಯುತ್ತಿರುವ ಮಳೆ

ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಈಗಾಗಲೇ ವರುಣನ ಆರ್ಭಟ ಶುರುವಾಗಿದೆ. ಪ್ರಮುಖವಾಗಿ ವಿಧಾನಸೌಧ, ವಸಂತನಗರ, ಶಿವಾಜಿನಗರ, ಕೆ.ಆರ್. ಸರ್ಕಲ್ ಪರಿಸರದಲ್ಲಿ ಭಾರಿ ಮಳೆಯಾಗುತ್ತಿರುವುದು ವರದಿಯಾಗಿದೆ.

45
ವ್ಯಾಪಾರ ಹಾಗೂ ಸಾರಿಗೆ ಕೇಂದ್ರಗಳೂ ಜಲಾವೃತ
Image Credit : Asianet News

ವ್ಯಾಪಾರ ಹಾಗೂ ಸಾರಿಗೆ ಕೇಂದ್ರಗಳೂ ಜಲಾವೃತ

ನಗರದ ಪ್ರಮುಖ ಆಯಕಟ್ಟಿನ ಜಾಗಗಳಾದ ಕೆ.ಆರ್. ಮಾರ್ಕೆಟ್, ಚಿಕ್ಕಪೇಟೆ, ಯಶವಂತಪುರ ಹಾಗೂ ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಮಳೆ ಸುರಿಯುತ್ತಿದ್ದು, ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ.

55
ವಾಹನ ಸವಾರರ ಪರದಾಟ, ಫ್ಲೈಓವರ್‌ಗಳೇ ಆಸರೆ
Image Credit : Asianet News

ವಾಹನ ಸವಾರರ ಪರದಾಟ, ಫ್ಲೈಓವರ್‌ಗಳೇ ಆಸರೆ

ಕಚೇರಿ ಹಾಗೂ ಇತರೆ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಈ ದಿಢೀರ್ ಮಳೆಯಿಂದಾಗಿ ಪರದಾಡುವಂತಾಗಿದೆ. ರಸ್ತೆಯಲ್ಲೇ ಸಿಲುಕಿಕೊಂಡ ಬೈಕ್ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಹತ್ತಿರದ ಬಸ್ ನಿಲ್ದಾಣಗಳು ಹಾಗೂ ಫ್ಲೈಓವರ್‌ಗಳ ಕೆಳಗೆ ಆಶ್ರಯ ಪಡೆದಿರುವುದು ಕಂಡುಬಂದಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಮಳೆ
ಕರ್ನಾಟಕ ಸುದ್ದಿ
ಹವಾಮಾನ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆ
ಸುದ್ದಿ

Latest Videos
Recommended Stories
Recommended image1
ಗಮನದಲ್ಲಿರಲಿ: ಯಶವಂತಪುರದಿಂದ ಹೊರಡುವ 2 ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿಸ್ತರಣೆ, ಇಲ್ಲಿದೆ ಸಂಪೂರ್ಣ ಮಾಹಿತಿ
Recommended image2
ಹಾಸನ ಲೈಂಗಿಕ ಹಗರಣಕ್ಕೆ ಭರ್ತಿ 2 ವರ್ಷ: ಪೆನ್‌ಡ್ರೈವ್ ಸ್ಫೋಟದಿಂದ ಜೀವಾವಧಿಯವರೆಗೆ ಪ್ರಜ್ವಲ್ ರೇವಣ್ಣ ಜೈಲು ಜೀವನ
Recommended image3
ಬೆಂಗಳೂರಿನಲ್ಲಿ ನಿಮ್ಮ ಮನೆ ಕಾಂಪೌಂಡ್ ಹೇಗಿದೆ? 1.5 ಮೀ.ಗಿಂತ ಎತ್ತರವಿದ್ರೆ ನೆಲಸಮ ಫಿಕ್ಸ್!
Related Stories
Recommended image1
ಆ.27ರಿಂದ ರಾಜ್ಯದಲ್ಲಿ ಮತ್ತೆ ಮಳೆ ಚುರುಕು: ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌
Recommended image2
ಮೂರು ಜಿಲ್ಲೇಲಿ ಮಳೆಯಬ್ಬರ: ಕರಾವಳಿಗೆ 4 ದಿನ ಯೆಲ್ಲೋ ಅಲರ್ಟ್‌, ಬಳ್ಳಾರೀಲಿ 100 ಮರ ಧರೆಗೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved