ರೂಪಸಿಯಾದ ನಿವೇದಿತಾ ಗೌಡ, ಕಾಮೆಂಟ್ ಬಾಕ್ಸ್ ಕವಿಗಳಾದ ನೆಟ್ಟಿಗರು
ಬಿಗ್‌ಬಾಸ್ ಸ್ಪರ್ಧಿ ನಿವೇದಿತಾ ಗೌಡ ಹಸಿರು ಲಂಗ, ಕಿತ್ತಳೆ ಬ್ಲೌಸ್‌ನಲ್ಲಿ ಹೊಸ ಫೋಟೋಶೂಟ್ ಮಾಡಿಸಿದ್ದು, ವಿಡಿಯೋ ಹಂಚಿಕೊಂಡಿದ್ದಾರೆ. ಈ ಹಿಂದೆ ತುಂಡುಡುಗೆಗೆ ಟೀಕೆ ಎದುರಿಸುತ್ತಿದ್ದ ಅವರು, ಇದೀಗ ಸಾಂಪ್ರದಾಯಿಕ ಉಡುಗೆಯಲ್ಲಿನ ಸೌಂದರ್ಯಕ್ಕೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಗಳಿಸುತ್ತಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫ್ಯಾಶನ್, ಲೈಫ್‌ಸ್ಟೈಲ್ ಹಾಗೂ ಮಾಡೆಲಿಂಗ್ ಕಂಟೆಂಟ್ ಅನ್ನು ಹೆಚ್ಚಾಗಿ ಹಂಚಿಕೊಳ್ಳುವ ಬಿಗ್‌ಬಾಸ್ ಸೀಸನ್-5 ಸ್ಪರ್ಧಿ ನಿವೇದಿತಾ ಗೌಡ ಶುಕ್ರವಾರ ಸ್ಟನ್ನಿಂಗ್ ಫೋಟೋಶೂಟ್ ವಿಡಿಯೋ ರಿಲೀಸ್ ಮಾಡಿದ್ದಾರೆ.
ಹಸಿರು ಬಣ್ಣದ ಲಂಗ ಹಾಗೂ ಕಿತ್ತಳೆ ಬಣ್ಣದ ಬ್ಲೌಸ್ ತೊಟ್ಟು ಹೊಸ ಫೋಟೋಶೂಟ್ ಮಾಡಿಸಿರುವ ನಿವೇದಿತಾ ಗೌಡ ಎಂದಿನಂತೆ ಮುದ್ದಾಗಿ ಕಾಣುತ್ತಿದ್ದಾರೆ. ಸಾಮಾನ್ಯವಾಗಿ ಅವರ ಪೋಸ್ಟ್‌ಗೆ ಬರುತ್ತಿದ್ದ ಕೆಟ್ಟ ಕಾಮೆಂಟ್ಸ್‌ಗಳು ಈ ಬಾರಿ ನಾಪತ್ತೆಯಾಗಿವೆ.
ಹೆಚ್ಚಿನವರು ನಿವೇದಿತಾ ಗೌಡ ಅವರ ಅಂದವನ್ನು ಹೊಗಳಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿಯೇ ಕವಿಗಳಾಗಿ ಮಾರ್ಪಟ್ಟಿದ್ದಾರೆ. 'ಇಂಥ ಅಂದ ನೋಡೇ ಇಲ್ಲ, ಇಂಥ ಚಂದ ಕಂಡೇ ಇಲ್ಲ..' ಎಂದು ಬರೆಯುವ ಮೂಲಕ ರೂಪಸಿ ನಿವೇದಿತಾ ಗೌಡ ಅವರನ್ನು ಹೊಗಳಿದಿದ್ದಾರೆ.
ಫ್ಯಾಶನ್ ಹೆಸರಿನಲ್ಲಿ ತುಂಡುಡುಗೆ ತೊಟ್ಟು ನಿವೇದಿತಾ ಗೌಡ ಪೋಸ್ಟ್ ಮಾಡಿದ್ದಾಗ ಟೀಕೆ ಮಾಡುತ್ತಿದ್ದ ನೆಟ್ಟಿಗರೇ ಈ ಬಾರಿ ಆಕೆಯ ಸೌಂದರ್ಯವನ್ನು ಮನಸಾರೆ ಹೊಗಳಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಬಹಳ ಮುದ್ದಾಗಿ ಕಾಣಿಸುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ಬಿಗ್‌ಬಾಸ್ ಸೀಸನ್-5ನ ಅತ್ಯಂತ ಕಿರಿಯ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದ ನಿವೇದಿತಾ ಗೌಡ ಇದೇ ಸೀಸನ್‌ನಲ್ಲಿದ್ದ ಇನ್ನೊಬ್ಬ ಸ್ಪರ್ಧಿ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ.
ಮದುವೆಗೂ ಮುನ್ನ ಈಕೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಪರೇಷನ್ಸ್ ಅಸಿಸ್ಟೆಂಟ್ ಉದ್ಯೋಗ ಕೂಡ ಸಿಕ್ಕಿತ್ತು. ಆದರೆ, ಈ ಕೆಲಸವನ್ನು ಆಕೆ ಮುಂದುವರಿಸಿದ್ದರ ಬಗ್ಗೆ ಯಾವುದೇ ದಾಖಲೆಗಳು ನಂತರ ಉಳಿಯಲಿಲ್ಲ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಮಾಡುವ ಮೂಲಕವೇ ಹಣ ಮಾಡುತ್ತಿರುವ ನಿವೇದಿತಾ ಗೌಡ, ಇದರಿಂದಲೇ ತಮ್ಮ ಇಷ್ಟದ ವಸ್ತುಗಳು ಹಾಗೂ ವಿದೇಶಿ ಟ್ರಿಪ್‌ಗಳನ್ನು ಮಾಡುವುದಾಗಿ ಹಿಂದೊಮ್ಮೆ ಹೇಳಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

