ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ

ಸ್ಯಾಂಡಲ್​ವುಡ್​​ನಲ್ಲಿ ಮತ್ತೆ ನೆಪೋಟಿಸಂ ಚರ್ಚೆ ಶುರುವಾಗಿದೆ. ಇತ್ತೀಚಿಗೆ ಕಿಚ್ಚ ಸುದೀಪ್ ನೆಪೋಟಿಸಂ ಕುರಿತ ಪ್ರಶ್ನೆಗೆ ಉತ್ತರ ಕೊಡೋ ನೆಪದಲ್ಲಿ ರಾಜ್ ಫ್ಯಾಮಿಲಿಯನ್ನ ಎಳೆತಂದಿದ್ರು. ಈಗ ಅದೇ ಕಿಚ್ಚನ ಪಕ್ಕ ನಿಂತು ಅದಕ್ಕೆ ಉತ್ತರ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್​ವುಡ್​​ನಲ್ಲಿ ಮತ್ತೆ ನೆಪೋಟಿಸಂ ಚರ್ಚೆ ಶುರುವಾಗಿದೆ. ಇತ್ತೀಚಿಗೆ ಕಿಚ್ಚ ಸುದೀಪ್ ನೆಪೋಟಿಸಂ ಕುರಿತ ಪ್ರಶ್ನೆಗೆ ಉತ್ತರ ಕೊಡೋ ನೆಪದಲ್ಲಿ ರಾಜ್ ಫ್ಯಾಮಿಲಿಯನ್ನ ಎಳೆತಂದಿದ್ರು. ಈಗ ಅದೇ ಕಿಚ್ಚನ ಪಕ್ಕ ನಿಂತು ಅದಕ್ಕೆ ಉತ್ತರ ಕೊಟ್ಟಿದ್ದಾರೆ ಶಿವರಾಜ್​ಕುಮಾರ್. ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ವಿಷ್ಯ ಸದ್ದು ಮಾಡ್ತಾ ಇದೆ. ಅಷ್ಟಕ್ಕೂ ಇದರ ಚರ್ಚೆ ಶುರುವಾಗಿದ್ದು ಕಿಚ್ಚ ಸುದೀಪ್​ ಕೊಟ್ಟ ಒಂದು ಉತ್ತರದಿಂದ. ಸುದೀಪ್ ತನ್ನ ಅಕ್ಕನ ಮಗ ಸಂಜೀತ್ ಸಂಜೀವ್​ನನ್ನ ನಾಯಕನನ್ನಾಗಿ ಮ್ಯಾಂಗೋ ಪಚ್ಚ ಅನ್ನೋ ಸಿನಿಮಾ ನಿರ್ಮಸಿದ್ದಾರೆ, ಅದೇ ಸಿನಿಮಾ ವೇದಿಕೆಲಿ ನೆಪೋಟಿಸಂ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋ ಪ್ರಶ್ನೆ ತೇಲಿಬಂದಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ರರಂಗದಲ್ಲಿ ನೆಪೋಟಿಸಂ ಕುರಿತ ಚರ್ಚೆ ಹೊತನೇನೂ ಅಲ್ಲ. ಬಹುತೇಕ ಎಲ್ಲಾ ನಟರ ಎದುರೂ ಈ ಪ್ರಶ್ನೆ ಬಂದೇ ಬರುತ್ತೆ. ಅದಕ್ಕೆ ಕಿಚ್ಚ ಕೂಲ್ ಆಗಿ ಉತ್ತರ ಕೊಟ್ಟಿದ್ರೇ ಮುಗಿದೇ ಹೋಗಿರೋದು. ಆದ್ರೆ ನೆಪೋಟಿಸಂ ಅಂತಾ ಕೇಳ್ತಾನೇ ರಾಜವಂಶದ ಹೆಸರು ಎಳೆತಂದ್ರು ಸುದೀಪ್. ಇದು ಸಹಜವಾಗೇ ಡಾ.ರಾಜ್​ ಕುಟುಂಬದ ಫ್ಯಾನ್ಸ್​ಗೆ ಕೋಪ ತರಿಸಿತ್ತು. ಅವರ ಅಕ್ಕನ ಮಗನ ಬಗ್ಗೆ ಪ್ರಶ್ನೆ ಕೇಳಿದ್ರೆ ಅಣ್ಣಾವ್ರ ಮಕ್ಕಳ ಬಗ್ಗೆ ಇವರ್ಯಾಕೆ ಮಾತನಾಡಿದ್ರು ಅಂತ ಫ್ಯಾನ್ಸ್ ಕಿಚ್ಚನ ಮೇಲೆ ಗರಂ ಆಗಿದ್ರು. ಇನ್ನೇನೂ ದೊಡ್ಡದಾಗಬೇಕಿದ್ದ ಈ ವಿವಾದವನ್ನ ಶಿವರಾಜ್​ಕುಮಾರ್ ಕೂಲ್ ಮಾಡಿದ್ದಾರೆ. ಸುದೀಪ್ ಜೊತೆಗೆ ಮ್ಯಾಂಗೋ ಪಚ್ಚ ಸಿನಿಮಾ ನೋಡಿ ಮೆಚ್ಚುಗೆ ಮಾತನಾಡಿದ್ದಾರೆ.

ಅಷ್ಟೇ ಅಲ್ಲ ನೆಪೋಟಿಸಂ ಕುರಿತ ಸುದೀಪ್ ಹೇಳಿಕೆಗೆ , ನೀವು ಕೇಳಿದ್ದಕ್ಕೆ ಅವರು ಹಾಗೆ ಹೇಳಿದ್ದಾರೆ ಹೋಗಲಿ ಬಿಡಿ ಅಂತ ಕೇಸ್ ಕ್ಲೋಸ್ ಮಾಡಿದ್ದಾರೆ. ನೆಪೋಟಿಸಂ ಅಥವಾ ವಂಶಪಾರಂಪರ್ಯ ಅನ್ನೋದು ಚಿತ್ರರಂಗಕ್ಕೆ ಹೊಸದೇನಲ್ಲ. ಆದರೆ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ, ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಬಹುತೇಕರು ಯಾವುದೇ ಗಾಡ್ ಫಾದರ್ ಇಲ್ಲದೆ ಬಂದವರು. ರೆಬೆಲ್ ಸ್ಟಾರ್ ಅಂಬರೀಶ್ ಇರಬಹುದು, ಕರಾಟೆ ಕಿಂಗ್ ಶಂಕರ್ ನಾಗ್ ಇರಬಹುದು, ಇವತ್ತಿನ ಗ್ಲೋಬಲ್ ಸ್ಟಾರ್ ಯಶ್ ಇರಬಹುದು ಅಥವಾ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇರಬಹುದು-ಇವರೆಲ್ಲರೂ ತಮ್ಮ ಸ್ವಂತ ಪರಿಶ್ರಮದಿಂದಲೇ ಸಾಮ್ರಾಜ್ಯ ಕಟ್ಟಿದವರು. ಗಾಡ್ ಫಾದರ್ ಇದ್ದವರು ಚಿತ್ರರಂಗದ ಒಳಗೆ ಸುಲಭವಾಗಿ 'ಎಂಟ್ರಿ' ಪಡಿಬಹುದು. ಆದರೆ ಜನರ ಹೃದಯಕ್ಕೆ 'ಎಂಟ್ರಿ' ಕೊಡಬೇಕಾದರೆ ಪ್ರತಿಭೆ ಇರಬೇಕು. ಎನಿವೇ ಇಂಥದ್ದೊಂದು ಸತ್ಯವನ್ನ ಹೇಳ್ತಾನೇ ನೆಪೋಟಿಸಂ ಕುರಿತ ವಾರ್​ಗೆ ಮಂಗಳ ಹಾಡಿದ್ದಾರೆ ಶಿವರಾಜ್​ಕುಮಾರ್..!

Related Video