ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?

ಜೂನ್ 10 ರಂದು, ನರೇಂದ್ರ ಮೋದಿಯವರು ಜವಾಹರಲಾಲ್ ನೆಹರು ಅವರ 4,398 ದಿನಗಳ ಆಡಳಿತದ ದಾಖಲೆಯನ್ನು ಮುರಿದು, ಭಾರತದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿಯಾಗಲಿದ್ದಾರೆ. ಈ 11 ವರ್ಷಗಳ ಆಡಳಿತದಲ್ಲಿ,  ದೀರ್ಘಕಾಲದ ಸವಾಲುಗಳಿಗೆ ಪರಿಹಾರ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಭಾರತದ ರಾಜಕೀಯ ಇತಿಹಾಸದಲ್ಲಿ ಜೂನ್ 10 ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಆ ದಿನ ದೇಶದಲ್ಲೇ ಅತಿ ಹೆಚ್ಚು ದಿನಗಳ ಕಾಲ ನಿರಂತರವಾಗಿ ಆಡಳಿತ ನಡೆಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಲಿದ್ದಾರೆ. ಮೇ 13, 1952 ರಿಂದ ಮೇ 27, 1964 ರವರೆಗೆ ಚುನಾಯಿತ ಪ್ರಧಾನಿಯಾಗಿ 4,398 ದಿನಗಳ ಕಾಲ ಆಡಳಿತ ನಡೆಸಿದ್ದ ನೆಹರು ಅವರ ದಾಖಲೆ ಅಂದಿಗೆ ಬ್ರೇಕ್ ಆಗಲಿದೆ. ಬರೋಬ್ಬರಿ 11 ವರ್ಷಗಳ ಮೋದಿ ಪಾರುಪತ್ಯ ಹೇಗಿತ್ತು? ಈ ಮಹಾ ದಾಖಲೆಯ ಹಿಂದಿನ ರಹಸ್ಯವೇನು? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನರೇಂದ್ರ ಮೋದಿ ಅವರ 4,399 ದಿನಗಳ ಸುದೀರ್ಘ ಆಡಳಿತವನ್ನು ವಿಶ್ಲೇಷಿಸಿದರೆ, ಅವರು ಕೇವಲ ಸಾಂಪ್ರದಾಯಿಕ ಆಡಳಿತಗಾರನಾಗಿ ಉಳಿಯದೆ 'ಬದಲಾವಣೆಯ ಹರಿಕಾರ'ನಾಗಿ ನಿಂತಿದ್ದು ಕಾಣುತ್ತೆ. ದಶಕಗಳಿಂದ ಯಾರೂ ಮುಟ್ಟಲು ಧೈರ್ಯ ಮಾಡದ ಸವಾಲುಗಳನ್ನ ಮೋದಿ ಕೈಗೆತ್ತಿಕೊಂಡರು ಮತ್ತು ಅವುಗಳಿಗೆ ಶಾಶ್ವತ ಪರಿಹಾರ ನೀಡಿದ್ರು.

ನರೇಂದ್ರ ಮೋದಿ ಅವರ ಈ 4,399 ದಿನಗಳ ಆಡಳಿತ ಕೇವಲ ಒಂದು ಅಂಕಿ ಅಂಶವಲ್ಲ, ಅದೊಂದು ಭಾರತೀಯರ ನಂಬಿಕೆಯ ಸಂಕೇತ. 2047ರ ಹೊತ್ತಿಗೆ 'ವಿಕಸಿತ ಭಾರತ' ನಿರ್ಮಾಣದ ಸಂಕಲ್ಪ ತೊಟ್ಟಿರುವ ಮೋದಿಯವರ ಹೆಜ್ಜೆಗಳು ಈಗ ಮತ್ತಷ್ಟು ವೇಗ ಪಡೆದುಕೊಂಡಿವೆ.

Related Video