ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!

ಬಂಗಾಳ ಚುನಾವಣೆಯಲ್ಲಿ ಗೆದ್ದ ನಂತರ, ಬಿಜೆಪಿ ಈಗ ಉತ್ತರ ಪ್ರದೇಶದತ್ತ ಗಮನ ಹರಿಸಿದೆ. ಮುಂದಿನ ವರ್ಷ ನಡೆಯಲಿರುವ ಯುಪಿ ಚುನಾವಣೆಯನ್ನು ಗೆಲ್ಲಲು, ಸೋತ ಜಾಗದಲ್ಲೇ ಗೆಲ್ಲುವ ಸಿದ್ಧಾಂತದೊಂದಿಗೆ ಕೇಸರಿ ಪಡೆ ವಿಶೇಷ ತಂತ್ರಗಾರಿಕೆ ಮತ್ತು ರಣವ್ಯೂಹವನ್ನು ಸಿದ್ಧಪಡಿಸಿಕೊಂಡಿದೆ.

Share this Video
  • FB
  • Linkdin
  • Whatsapp

ಈಗಷ್ಟೇ ದೀದಿ ಕೋಟೆಯವನ್ನು ಧ್ವಂಸಗೊಳಿಸಿ, ಬಂಗಾಳ ಗೆದ್ದು, ಕೇಸರಿ ಪತಾಕೆ ಹಾರಿಸ್ತಾ ಇದೆ ಬಿಜೆಪಿ.. ಆದ್ರೆ ಆ ಗೆಲುವಿನಿಂದ ಮೈಮರೆಯದ ಪಕ್ಷ, ಅದೇ ಗೆಲುವನ್ನೇ ಸೂತ್ರವಾಗಿಸಿಕೊಂಡು, ನೆಕ್ಸ್ಟ್ ಟಾರ್ಗೆಟ್ ಕಡೆ ಹೊರಟಿದೆ.. ಬಂಗಾಳದ ರಾಜಸೂಯದ ನಂತರ, ಉತ್ತರ ಪ್ರದೇಶದ ಅಶ್ವಮೇಧಕ್ಕೆ ಸನ್ನದ್ಧವಾಗಿ ನಿಂತಿದೆ.. ಇನ್ನೊಂದು ವರ್ಷದಲ್ಲಿ ನಡೆಯಲಿರೋ ಆ ಮಹಾಸಂಗ್ರಾಮಕ್ಕೆ ಹೇಗೆ ಸಿದ್ಧವಾಗಿದೆ, ಯುಪಿ ಅಖಾಡ? ಏನು ಇಷ್ಟು ಮಾಡಿದ ಮಾತ್ರಕ್ಕೇ ಬಿಜೆಪಿ ಗೆದ್ದುಬಿಡುತ್ತಾ? ಇಲ್ಲ.. ಉಪಿ ಗದ್ದುಗೆ ಗೆಲ್ಲೋಕೆ ಇದಿಷ್ಟು ಏನೇನೂ ಸಾಲದು.. ಅದಕ್ಕೆ ಬೇರೆಯದೇ ತಂತ್ರವೂ ಬೇಕು.. ಅದನ್ನೂ ಸಿದ್ಧವಾಗಿಸಿಕೊಂಡಿದೆ ಕೇಸರಿ ಪಡೆ.

ತಂತ್ರಗಾರಿಕೆ ಹೆಣೆಯೋದರಲ್ಲಿ, ಎದುರಾಳಿಗೆ ಖೆಡ್ಡಾ ತೋಡೋದರಲ್ಲಿ ಬಿಜೆಪಿ ಬಹಳ ಮುಂದಿದೆ.. ಈ ಮಾತು ಹೇಳೋಕೆ ಕಾರಣ ಏನು ಗೊತ್ತಾ? ಅದೊಂದು ಸೂತ್ರ. ಇದೇ ಸೂತ್ರ ಇಟ್ಕೊಂಡೇ ಬಿಜೆಪಿ ರಣವ್ಯೂಹ ನಡೆಸಿದೆ.. ಆದ್ರೆ ಹೇಳದೇ ಉಳಿದ ಇನ್ನೊಂದು ಸಂಗತಿ ಬಾಕಿ ಇದೆ. ಸೋತ ಜಾಗದಲ್ಲೇ ಗೆದ್ದುಬರಬೇಕು ಅನ್ನೋದು, ಕೇಸರಿ ಪಾಳಯ ಕಂಡುಕೊಂಡಿರೋ ಸತ್ಯ,. ಅದಕ್ಕೋಸ್ಕರ ಏನ್ ಮಾಡ್ತಾ ಇದೆ ಗೊತ್ತಾ? ಈ ವಿಡಿಯೋ ನೋಡಿ. 

Related Video