ನಟ ದರ್ಶನ್ ಬೇಲ್‌ಗೆ ಮತ್ತೆ ಹಿನ್ನಡೆ: ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮೀ ಪ್ರಯತ್ನ ಫಲ ಕೊಡುತ್ತಾ?

ನಟ ದರ್ಶನ್​ ವಿವಾಹ ವಾರ್ಷಿಕೋತ್ಸವ ಒಂದು ಕಡೆ ಆದ್ರೆ, ಜೈಲಿನಿಂದ ಹೊರ ಬರೋ ಪರದಾಟ ಮತ್ತೊಂದು ಕಡೆ. ಅದಕ್ಕಾಗಿ ಪತ್ನಿ ವಿಜಯಲಕ್ಷ್ಮೀ ತನ್ನಲ್ಲಿದ್ದ ಶತ ಪ್ರಯತ್ನಗಳನ್ನೆಲ್ಲಾ ಮಾಡುತ್ತಲೇ ಇದ್ದಾರೆ.

Share this Video
  • FB
  • Linkdin
  • Whatsapp

ಕಷ್ಟ ಸುಖದಲ್ಲಿ ಸದಾ ಕಾಲ ಜೊತೆಗಿರೋದು ಹೆಂಡತಿ ಒಬ್ಬಳೇ ಅನ್ನೋದು ದರ್ಶನ್ ವಿಷಯದಲ್ಲಿ ಮತ್ತೆ ಪ್ರ್ಯೂ ಆಗಿದೆ. ದರ್ಶನ್ ಎಷ್ಟೇ ಭಾರಿ ಜೈಲು ಸೇರಿದ್ರು, ದಾಸನ ಬೆನ್ನ ಹಿಂದೆ ನಿಂತು ಧೈರ್ಯ ತುಂಬಿ ಹೊರಗೆ ಕರೆದುಕೊಂಡು ಬರೋದಕ್ಕೆ ವಿಜಯಲಕ್ಷ್ಮೀ ಪ್ರಯತ್ನಿಸುತ್ತಾನೆ ಇದ್ದಾರೆ. ಹಾಗಾದ್ರೆ ದಾಸ ಮತ್ತೆ ಜೈಲಿನಿಂದ ಹೊರ ಬರೋದಕ್ಕೆ ಆಗುತ್ತಾ.? ಇದಕ್ಕೆ ವಿಜಯಲಕ್ಷ್ಮೀ ಏನೆಲ್ಲಾ ಪ್ರಯತ್ನ ಪಡಬೇಕು.

Add Asianetnews Kannada as a Preferred SourcegooglePreferred

ನಟ ದರ್ಶನ್​ ವಿವಾಹ ವಾರ್ಷಿಕೋತ್ಸವ ಒಂದು ಕಡೆ ಆದ್ರೆ, ಜೈಲಿನಿಂದ ಹೊರ ಬರೋ ಪರದಾಟ ಮತ್ತೊಂದು ಕಡೆ. ಅದಕ್ಕಾಗಿ ಪತ್ನಿ ವಿಜಯಲಕ್ಷ್ಮೀ ತನ್ನಲ್ಲಿದ್ದ ಶತ ಪ್ರಯತ್ನಗಳನ್ನೆಲ್ಲಾ ಮಾಡುತ್ತಲೇ ಇದ್ದಾರೆ. ಆದ್ರೆ ಇನ್ನೊಂದು ವರ್ಷದಲ್ಲಿ ಪ್ರಕರಣದ ವಿಚಾರಣೆ ಮುಗಿಯಲಿ ಆಮೇಲೆ ಜಾಮೀನು ಬಗ್ಗೆ ಮಾತಾಡೋಣ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಇದು ದಾಸನ ಚಿಂತೆಗೆ ಮತ್ತೆ ತುಪ್ಪ ಸುರಿದಂಗಾಗಿದೆ.

ಇನ್ನು ನಟ ದರ್ಶನ್​​ ಜೈಲಿನಲ್ಲಿ ಒಬ್ಬೊಂಟಿ ಅನ್ನೋದು ನಿಜ. ಆಗಸ್ಟ್ 2025 ರಿಂದ 2026 ಮೇ ವರೆಗೆ ದರ್ಶನ್ ಬರೋಬ್ಬರಿ 70 ಬಾರಿ ಕುಟುಂಬದವರನ್ನ ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲ 73 ಸಾರಿ ಫೋನ್​ನಲ್ಲಿ ಮಾತನಾಡೋದಕ್ಕೂ ಅವಕಾಶ ಸಿಕ್ಕಿದೆ. ಜೊತೆಗೆ 2025 ಆಗಸ್ಟ್‌ ನಿಂದ 28 ಬಾರಿ ವಕೀಲರ ಭೇಟಿಗೂ ಅವಕಾಶ ನೀಡಲಾಗಿದೆ. ಇಷ್ಟು ಬಾರಿ ಭೇಟಿಗೆ ಅವಕಾಶ ಸಿಕ್ಕಿದ್ರೂ ದಾಸ ಕುಟುಂಬದ ಬೇಟಿಗೆ ಮುಕ್ತ ಅವಕಾಶ ಬೇಕು ಅಂತ ಕೇಳುತ್ತಿದ್ದಾರೆ.

ದರ್ಶನ್ ಬ್ಯಾರಕ್ ನಲ್ಲಿ ಕಾರ್ಪೆಟ್‌, ಕಂಬಳಿ, ಬೆಡ್ ಶೀಟ್‌, ಸ್ಟೇನ್‌ಲೆಸ್ ಸ್ಟೀಲ್ ತಟ್ಟೆ, ಕಪ್, ಬೌಲ್ ಮತ್ತು ಗ್ಲಾಸ್ ಗಳಿವೆಯಂತೆ. ಕೋರ್ಟ್ ಆದೇಶದಂತೆ ಕಂಬಳಿ ವ್ಯವಸ್ಥೆ ಮಾಡಲಾಗಿದೆ. ಸೋ ಜೈಲು ಮ್ಯಾನುವೆಲ್​ನಲ್ಲಿರೋದನ್ನೆಲ್ಲಾ ದರ್ಶನ್​ಗೆ ನೀಡಲಾಗಿದೆ. ದಾಸ ಇರೋ ಬ್ಯಾರಕ್​​ಗೆ ಸಂಪೂರ್ಣ ಸೆಕ್ಯರಿಟಿ ಇದೆ. ದಚ್ಚು ಜೈಲು ಊಟ ಇನ್ನೂ ಒಂದು ವರ್ಷ ಖಾಯಂ ಅನ್ನೋದಂತು ಕಾತ್ರಿ. ಏನೇ ಖುಷಿ ಕ್ಷಣಗಳನ್ನೂ ಕಳೆಯಬೇಕು ಅಂದ್ರೆ ಅದು ಜೈಲನ್ನೇ ಅನ್ನೋದು ನಿಜ.

Related Video