ರಾಯಚೂರು: ಸಾಲಕ್ಕೆ ಸಿಗರೇಟ್‌ ಕೊಡಲ್ಲ ಎಂದ ಅಂಗಡಿ ಮಾಲೀಕ, ನಡುರಸ್ತೆಯಲ್ಲೇ ಕೊಚ್ಚಿ ಕೊಂ* ಹಂತಕ!

ರಾಯಚೂರಿನ ಎಲ್‌ಬಿಎಸ್ ನಗರದಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದ ನರಸಿಂಹಯ್ಯ ಶೆಟ್ಟಿ ಎಂಬುವವರ ಮೇಲೆ ಭೀಕರ ಹಲ್ಲೆ ನಡೆದಿದೆ. ಸಾಲವಾಗಿ ಸಿಗರೇಟ್ ಕೇಳಿದಾಗ ಹಣ ಕೇಳಿದ್ದಕ್ಕೆ ಆರೋಪಿ ತಿಲಕ್ ಸಿಂಗ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

Share this Video
  • FB
  • Linkdin
  • Whatsapp

ರಾಯಚೂರು (ಅ.29): ಆತ ಟೀ ಸ್ಟಾಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ, ನಿತ್ಯ ನೂರಾರು ಜನರು ಟೀ ಸ್ಟಾಲ್ ಗೆ ಬಂದು ಹೋಗುತ್ತಿದ್ದರು. ಆದ್ರೆ ಹಂತಕನೊಬ್ಬ ಸಾಲವಾಗಿ ಸಿಗರೇಟ್ ಕೇಳಿದ್ದಾನೆ. ಆ ಟೀ ಸ್ಟಾಲ್ ಮಾಲೀಕ ದುಡ್ಡು ಕೊಡಿ ಅಂತ ಕೇಳಿದಕ್ಕೆ ಈಗ ಜೀವವೇ ತೆಗೆದಿದ್ದಾನೆ. 

ರಾಯಚೂರು ನಗರದ ಎಲ್‌ಬಿಎಸ್ ನಗರದಲ್ಲಿ ನಡೆದಿರುವ ಈ ಘಟನೆ ಸ್ಥಳೀಯರನ್ನ ಬೆಚ್ಚಿಬೀಳಿಸಿದೆ.40 ವರ್ಷದ ನರಸಿಂಹಯ್ಯ ಶೆಟ್ಟಿಎಲ್ ಬಿಎಸ್ ನಗರದ ಸರ್ಕಲ್ ನಲ್ಲಿ ಅಂಗಡಿ ಇಟ್ಟುಕೊಂಡಿದ್ದ.ಟೀ ಸ್ಟಾಲ್ ಜೊತೆಗೆ ಟಿಫನ್,ಬಜ್ಜಿ ಮಾರಾಟ ಮಾಡ್ತಿದ್ದ.ತಾನಾಯ್ತು,ತನ್ನ ಕೆಲಸ ಆಯ್ತು ಅಂತ ಇರ್ತಿದ್ದ ನರಸಿಂಹಯ್ಯ ಶೆಟ್ಟಿ. ಆ ದಿನ ಎಂದಿನಂತೆ ಅಂಗಡಿಗೆ ಬಂದಿದ್ದ.. ಮಧ್ಯಾಹ್ನದ ವೇಳೆ ಅಂಗಡಿ ಬಳಿಯ ಕಸ ಸ್ವಚ್ಛಗೊಳಿಸೋಕೆ ಹೊರ ಬಂದಾಗ ಘಟನೆ ನಡೆದಿದೆ.

ನೋಡನೋಡುತ್ತಲೇ ಹಂತಕ ತಿಲಕ್ ಸಿಂಗ್ ಎಂಬಾತ ಅಂಗಡಿ ಮಾಲೀಕರಾದ ನರಸಿಂಹಯ್ಯ ಶೆಟ್ಟಿ ಮೇಲೆ ಮಚ್ಚು ಬೀಸಿದ್ದ.ಏಳು ಬಾರೀ ಮನಸ್ಸೋ ಇಚ್ಛೆ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ ತಿಲಕ್ ಸಿಂಗ್,ಅಂಗಡಿ ಮಾಲೀಕ ನರಸಿಂಹಯ್ಯ ಶೆಟ್ಟಿಯನ್ನ ಬರ್ಬರವಾಗಿ ಕೊಚ್ಚಿ ಕೊಂ**ದ್ದಾನೆ.

Related Video