ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರುವ ಹಾದಿಯಲ್ಲಿ ಹೂವಿನಹಡಗಲಿಯ ಮೈಲಾರಲಿಂಗನ ಕೃಪೆ ಮತ್ತು ದೈವಾನುಗ್ರಹದ ಕಥೆ ಮತ್ತೆ ಚರ್ಚೆಗೆ ಬಂದಿದೆ.

Share this Video
  • FB
  • Linkdin
  • Whatsapp

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೇರುವ ಹಾದಿಯಲ್ಲಿ ಹೂವಿನಹಡಗಲಿಯ ಮೈಲಾರಲಿಂಗನ ಕೃಪೆ ಮತ್ತು ದೈವಾನುಗ್ರಹದ ಕಥೆ ಮತ್ತೆ ಚರ್ಚೆಗೆ ಬಂದಿದೆ. ಮೈಲಾರ ದೇವಸ್ಥಾನದ ಗೋಪುರದ ಮೇಲೆ ಹೆಲಿಕಾಪ್ಟರ್ ಹಾರಿಸಿದ ಘಟನೆ ಬಳಿಕ ದೇವರ ಮುನಿಸಿಗೆ ಗುರಿಯಾಗಿದ್ದರು ಎಂಬ ನಂಬಿಕೆ ಭಕ್ತರಲ್ಲಿ ಇದೆ. ನಂತರ 1 ಕೆಜಿ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆ ನೀಡಿ ಕ್ಷಮೆ ಕೋರಿದ ಬಳಿಕ ಸಂಕಷ್ಟಗಳು ದೂರವಾಗಿ ದೈವ ಕೃಪೆ ದೊರೆಯಿತು ಎನ್ನಲಾಗುತ್ತಿದೆ. ಮೈಲಾರ ಕಾರ್ಣಿಕದ “ತುಂಬಿದ ಕೊಡ ತುಳುಕಿತಲೇ ಪರಾಕ್” ಎಂಬ ನುಡಿ ಡಿಕೆ ಅವರ ಮುಖ್ಯಮಂತ್ರಿ ಯೋಗದ ಸಂಕೇತವೆಂದು ಭಕ್ತರು ವಿಶ್ಲೇಷಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video