ಕುರಿಕಾಯುತ್ತಿದ್ದ ಹುಡುಗ ಕರುನಾಡಿನ ಪಟ್ಟವೇರಿದ: ಅಸಹಾಯ ಶೂರ ಸಿದ್ದರಾಮಯ್ಯ.. ರೋಚಕ ಅಧ್ಯಾಯ!

ಅವರು, ಹಳ್ಳಿಯ ಮುಗ್ಧ ವಾತಾವರಣದಿಂದ ಬಂದವರು.. ಕರ್ನಾಟಕದ ರಾಜಕೀಯದಲ್ಲಿ ಸಿಂಹಸ್ವಪ್ನದಂತೆ ಬೆಳೆದವರು.. ಮಾಸ್ ಲೀಡರ್ ಅಂದ್ರೆ ಯಾರು ಅಂತ ಕೇಳೊ ಪ್ರಶ್ನೆಗೆ, ಉತ್ತರವಾಗಿ ನಿಂತವರು.. ಹೆಸರು ಸಿದ್ದರಾಮಯ್ಯ.

Share this Video
  • FB
  • Linkdin
  • Whatsapp

ಅವರು, ಹಳ್ಳಿಯ ಮುಗ್ಧ ವಾತಾವರಣದಿಂದ ಬಂದವರು.. ಕರ್ನಾಟಕದ ರಾಜಕೀಯದಲ್ಲಿ ಸಿಂಹಸ್ವಪ್ನದಂತೆ ಬೆಳೆದವರು.. ಮಾಸ್ ಲೀಡರ್ ಅಂದ್ರೆ ಯಾರು ಅಂತ ಕೇಳೊ ಪ್ರಶ್ನೆಗೆ, ಉತ್ತರವಾಗಿ ನಿಂತವರು.. ಹೆಸರು ಸಿದ್ದರಾಮಯ್ಯ.. ಮೈಸೂರಿನ ಸಿದ್ದರಾಮನಹುಂಡಿ ಅನ್ನೋ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಕುರಿ ಕಾಯ್ತಾ, ಕಡು ಬಡತನದಲ್ಲೇ ಬೆಳೆದ ಈ ಸಾಧಾರಣ ಹುಡುಗ ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಗಾದಿಗೆ ಏರ್ತಾರೆ ಅಂತ ಯಾರೂ ಊಹಿಸಿರಲಿಲ್ಲ.. ವಕೀಲಿ ವೃತ್ತಿಯಿಂದ ಬುದುಕು ಆರಂಭಿಸಿ, ರೈತ ಚಳವಳಿ, ಪ್ರಗತಿಪರ ಹೋರಾಟಗಳ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯ ಇವತ್ತು ರಾಜ್ಯಕಂಡ ಅಸಮಾನ್ಯ ಮುಖ್ಯಮಂತ್ರಿ ಅನ್ನಿಸಿಕೊಂಡಿದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದ್ರೆ ಈ ಜರ್ನಿ, ಅಷ್ಟು ಸಾಮಾನ್ಯವಾದ್ದಲ್ಲ.. ಅದು ಕಲ್ಲು ಮುಳ್ಳಿನ ಬೆಂಕಿಯದಾರಿ.. ಅದು ದಾಟಿ ಬಂದಿದ್ದು ಹೇಗೆ, ಸವಾಲುಗಳನ್ನು ಮೆಟ್ಟಿ ನಿಂತಿದ್ದು ಹೇಗೆ? ಇಲ್ಲಿದೆ ನೋಡಿ, ಆ ರೋಚಕ ಅಧ್ಯಾಯ. ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿಗೆ, ಅದ್ಭುತ ಶಕ್ತಿಯಾಗಿ ಸಿಕ್ಕಿದ್ರು.. ಅಹಿಂದ ಅನ್ನೋ ಬ್ರಹ್ಮಾಸ್ತ್ರ ಹಿಡಿದ ಬಂದ ಈ ಮಾಸ್ ಲೀಡರ್, ದೇಶದ ಯಾವ ಭಾಗದಲ್ಲೂ ಇಲ್ಲದಷ್ಟು ಬಲಿಷ್ಠವಾಗಿ, ಕರ್ನಾಟಕದಲ್ಲಿ ಕಾಂಗ್ರೆಸ್ ಕೋಟೆ ಕಟ್ಟಿದ್ರು.. ಅಲ್ಲಿಂದ ಇಲ್ಲೀ ತನಕ ಆಗಿದ್ದೇನೇನು. ಸಿದ್ದರಾಮಯ್ಯನವರು ಕಾಂಗ್ರೆಸ್ ಸೇರಿದ ಮೇಲೆ ಪಾರ್ಟಿಯ ಅದೃಷ್ಟವೇ ಬದಲಾಗಿಹೋಯ್ತು.

2013 ಮತ್ತು 2023ರಲ್ಲಿ ಕಾಂಗ್ರೆಸ್ ಭರ್ಹರಿಯಾಗಿ ಅಧಿಕಾರಕ್ಕೆ ಬರೋಕೆ ಇವರ ಮಾಸ್ಟರ್ ಪ್ಲಾನ್‌ಗಳೇ ಕಾರಣ. ಆ ರೋಚಕ ರಾಜಕೀಯ ಗೇಮ್ ಪ್ಲಾನ್ ಹೇಗಿತ್ತು ಗೊತ್ತಾ? ಕಾಂಗ್ರೆಸ್ನಲ್ಲಿ ಅಧಿಕಾರ ಹಸ್ತಾಂತರ ಅನ್ನೋದು ಅತಿ ದೊಡ್ಡ ಗಂಡಾಂತರ ಅಂತಲೇ ನೋಡ್ತಾ ಇದ್ವು ಪ್ರತಿಪಕ್ಷಗಳು.. ಆದ್ರೆ ಅದನ್ನೂ ಸಿದ್ದರಾಮಯ್ಯ ಹೇಗೆ ನಿಭಾಯಿಸಿದ್ರು ಗೊತ್ತಾ? ಸಾಮಾನ್ಯವಾಗಿ ಯಾವುದೇ ಪಕ್ಷದಲ್ಲಿ ಸಿಎಂ ಕುರ್ಚಿ ಬದಲಾವಣೆ ಅಂದ್ರೆ ಅದು ಬಂಡಾಯಕ್ಕೋ, ಒಳ ಸಂಘರ್ಷಕ್ಕೋ, ರಂಪಾಟಕ್ಕೋ ಕಾರಣವಾಗೋದು ಸಹಜ.. ಆದ್ರೆ ಈ ಬಾರಿ ಇಡೀ ದೇಶವೇ ಆಶ್ಚರ್ಯ ಪಡುವ ಹಾಗೆ ಯಾವೊಂದು ಅಡೆತಡೆ ಇಲ್ಲದೆ, ಆತಂಕವಿಲ್ಲದೆ ಆಗಿ ಪವರ್ ಶಿಫ್ಟ್ ನಡೀತು.

Related Video