ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?

ಕರ್ನಾಟಕದ  ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಡಿಕೆ ಶಿವಕುಮಾರ್, 1400 ಕೋಟಿ ರೂಪಾಯಿ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಸಿಎಂ ಎಂಬ ದಾಖಲೆ ಬರೆದಿದ್ದಾರೆ. ಅವರ ಈ ಯಶಸ್ಸಿನ ಹಿಂದೆ ನಾಲ್ಕು ದಶಕಗಳ ಪರಿಶ್ರಮವಿದ್ದು, ದೇಶದ ಅಗ್ರ 3 ಶ್ರೀಮಂತ ಮುಖ್ಯಮಂತ್ರಿಗಳು ದಕ್ಷಿಣ ಭಾರತದವರೇ ಆಗಿದ್ದಾರೆ.

Share this Video
  • FB
  • Linkdin
  • Whatsapp

 ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್​​ ಪ್ರಮಾಣ ತೆಗೆದ್ಕೊಳ್ತಿದ್ದಾಗೆ ದಾಖಲೆ ಬರೆದಿದ್ದಾರೆ.. ಅದು ಅಂತಿಂಥಹ ದಾಖಲೆಯಲ್ಲ, ಇಡೀ ದೇಶದಲ್ಲಿಯೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.. ರಾಜ್ಯದ ಪಾಲಿಗೂ ಕುಬೇರನಂತಹ ಸಿಎಂ ಹಿಂದೆಂದೂ ಯಾರು ಆಗಿರಲಿಲ್ಲ. ಅವರ 1400 ಕೋಟಿ ಆಸ್ತಿ ಹಿಂದಿದೆ 4 ದಶಕದ ಪರಿಶ್ರಮ! ಸ್ವಂತ ಬ್ರ್ಯಾಂಡ್ ಸಿಎಂ ಪಟ್ಟ. ಕೆಂಪೇಗೌಡರ ಮಗ ಏರಿದ್ದು ಹೇಗೆ ಯಶೋಶಿಖರ..?ಡಿಕೆ ಅಧಿಕೃತ ಆಸ್ತಿ ಎಷ್ಟು..? ಎಲ್ಲೆಲ್ಲಿ? ಏನೇನು? ಡಿಕೆಶಿ ಮಾಡಿರೋ ಸಾಲ 265 ಕೋಟಿ ರೂಪಾಯಿ. 2008ರ ಚುನಾವಣೆ ವೇಳೆ ಡಿಕೆಶಿ ಆಸ್ತಿ 75.59 ಕೋಟಿ ರೂ.

ದೇಶದ ಟಾಪ್​​ ಶ್ರೀಮಂತ ಮುಖ್ಯಮಂತ್ರಿಗಳ ಲಿಸ್ಟ್​​​ನಲ್ಲಿ ಟಾಪ್​​​ ತ್ರಿ ಸ್ಥಾನ ದಕ್ಷಿಣಕ್ಕೆ ಸಿಕ್ಕಿದೆ.. ವಿಚಿತ್ರ ಅಂದ್ರೆ, ಈ ಸ್ಥಾನದಲ್ಲಿ ಮೊದಲು ಇದ್ದಿದ್ದು ಉತ್ತರ ಭಾರತದ ಸಿಎಂಗಳು.. ಆದ್ರೆ, ಕೆಲವೇ ತಿಂಗಳುಗಳಲ್ಲಿ ಈ ಬದಲಾವಣೆಯಾಗಿದ್ದು, ದಕ್ಷಿಣದ ಶ್ರೀಮಂತ ಮುಖ್ಯಮಂತ್ರಿಗಳು ಆ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಟಾಪ್​​ 3 ಮುಖ್ಯಮಂತ್ರಿಗಳು ಯಾರು ಗೊತ್ತಾ ? ಡಿಕೆಗೂ ಮೊದಲು ನಂ.​1 ಸ್ಥಾನದಲ್ಲಿದ್ದ ಆಂಧ್ರ ಸಿಎಂ ನಾಯ್ಡು. ದಳಪತಿ ವಿಜಯ್​​ 3ನೇ ಶ್ರೀಮಂತ ಮುಖ್ಯಮಂತ್ರಿ. ದಕ್ಷಿಣದಲ್ಲೇ ಮೂವರು ಶ್ರೀಮಂತ ಮುಖ್ಯಮಂತ್ರಿಗಳು.

Related Video