DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?

Suvarna Special: ದಂಡಂ ದಶಗುಣಂ.. ಸಹಕಾರ ಸಾಧನಂ.. ಬಂಡೆ ಚಾಣಕ್ಯ ತಂತ್ರ..! ಮೋದಿ ಸಭೆಗೆ ಹಾಜರ್.. ಸಿದ್ದು ಸಂಪ್ರದಾಯ ಮುರಿದ ಡಿಕೆ..! ಮೋದಿ ಡಿಕೆ 18 ಬೇಡಿಕೆ.. ಪಟ್ಟು ಹಾಕಿದ ಸಿಎಂ.!

Share this Video
  • FB
  • Linkdin
  • Whatsapp

ದಂಡಂ ದಶಗುಣಂ.. ಸಹಕಾರ ಸಾಧನಂ.. ಬಂಡೆ ಚಾಣಕ್ಯ ತಂತ್ರ..! ಮೋದಿ ಸಭೆಗೆ ಹಾಜರ್.. ಸಿದ್ದು ಸಂಪ್ರದಾಯ ಮುರಿದ ಡಿಕೆ..! ಮೋದಿ ಡಿಕೆ 18 ಬೇಡಿಕೆ.. ಪಟ್ಟು ಹಾಕಿದ ಸಿಎಂ.! ಕಿಡಿ ಕಿಚ್ಚಿನ ನಾಯಕನ ಗಾಂಧಿಮಂತ್ರ.. ಏನಿದು ತಂತ್ರ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಡಿಕೆ ಗಾಂಧಿಗಿರಿ. ಮುಖ್ಯಮಂತ್ರಿಯಾಗ್ತಾ ಇದ್ಹಾಗೆ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಸ್ಟೈಲ್ ಬದಲಾಗಿದೆ. ಅದ್ರಲ್ಲಿಯೂ ದೆಹಲಿ ಭೇಟಿ ಸಂದರ್ಭದಲ್ಲಿ ಅವರು ಇಟ್ಟಿರೋ ಒಂದೊಂದು ಹೆಜ್ಜೆಗಳು ರಾಜಕೀಯ ರಣತಂತ್ರಗಳನ್ನೇ ಚೇಂಜ್ ಮಾಡ್ತಾಯಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರ ಸರ್ಕಾರದ ಜೊತೆಗೆ ಸಂಘರ್ಷ ಅಥವಾ ಸಹಕಾರ ಈ ಎರಡರಲ್ಲಿ ಡಿಕೆ ಯಾವುದನ್ನ ಆರಿಸಿಕೊಳ್ತಾರೆ ಅನ್ನೋ ಪ್ರಶ್ನೆಗೆ ತಮ್ಮ ನಡೆಯ ಮೂಲಕವೇ ಉತ್ತರ ಕೊಟ್ಟಾಗಿದೆ ಕನಕಾಧಿಪತಿ. ಹಾಗಿದ್ರೆ, ದೆಹಲಿಯಂಗಳದಲ್ಲಿ ಸಿಎಂ ಡಿಕೆ ಇಟ್ಟಿರುವ ಆ ಅಚ್ಚರಿಯ ಹೆಜ್ಜೆಯೇನು..? ಸಂಘರ್ಷ, ಸಹಕಾರ ಈ ಎರಡರಲ್ಲಿ ಡಿಕೆ ಆಯ್ಕೆ ಯಾವುದು..? ಆ ಆಯ್ಕೆಯ ಹಿಂದಿನ ಅಸಲಿ ಕಾರಣವೇನು..? ಇಷ್ಟೆಕ್ಕೆ ಮುಗಿದಿಲ್ಲ ಡಿಕೆ ಸಹಕಾರ ತಂತ್ರ.. ಶುಕ್ರವಾರವೂ ಇಂಧ್ರಪ್ರಸ್ಥದಲ್ಲಿ ಸಹಕಾರ ದಾಳವನ್ನ ಡಿ.ಕೆ.ಶಿವಕುಮಾರ್ ಉರುಳಿಸಿದ್ದಾರೆ.

ಗುರುವಾರ ನೀತಿ ಆಯೋಗ ಸಭೆಯಲ್ಲಿ ಭಾಗಿಯಾಗಿ, ಆ ನಂತ್ರ ಪ್ರಧಾನಿಗೊಳೊಟ್ಟಿಗೆ ಮೀಟಿಂಗ್ ಮಾಡಿದ್ದ ಸಿಎಂ ಡಿಕೆಶಿ, ಶುಕ್ರವಾರವು ಹಲವರನ್ನ ಭೇಟಿಯಾಗಿದ್ದಾರೆ. ಅಲ್ಲಿಯೂ ಸಹಕಾರದ ದಾಳ ಉರುಳಿಸಿ ಅಭಿವೃದ್ಧಿಯ ಮಂತ್ರವನ್ನ ಜಪಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಇಲ್ಲಿ ಸಂಘರ್ಷಕ್ಕಿಂತ ಸಹಕಾರವೇ ಮುಖ್ಯವಾಗಿರೋದಕ್ಕೆ ಎರಡು ಕಾರಣ. ಒಂದು ಅಭಿವೃದ್ಧಿ.. ಹಾಗಿದ್ರೆ ಆ ಮತ್ತೊಂದು ಕಾರಣ ಏನು..? ಕಿಡಿ ಕಿಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ಅವರು ಗಾಂಧಿಗಿರಿಯ ಹಾದಿ ತುಳಿದಿರೋದು ಯಾಕೆ..? ಕೇಂದ್ರ ಸರ್ಕಾರ ಜೊತೆಗೆ ಸಂಘರ್ಷಕ್ಕಿಳಿಯೋದಕ್ಕಿಂತ ಸಹಕಾರಕ್ಕೆ ಒತ್ತು ಕೊಡ್ತಿರೋದು ಯಾಕೆ..? ಇಲ್ಲಿ ಅಭಿವೃದ್ಧಿ ಒಂದು ಕಾರಣವಾದ್ರೆ, ಇದ್ರ ಹಿಂದಿರೋ ಮತ್ತೊಂದು ಪ್ರಮುಖ ಕಾರಣ ಏನು.?

Related Video