FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ

ಕೊಪ್ಪಳದಲ್ಲಿ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದ ವಿದ್ಯಾರ್ಥಿಯೊಬ್ಬ, ಮೊಬೈಲ್ ಕಸಿದಿದ್ದಕ್ಕೆ ತನ್ನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘೋರ ಕೃತ್ಯದಲ್ಲಿ ತಂದೆ ಮತ್ತು ಅಕ್ಕ ಸಾವನ್ನಪ್ಪಿದ್ದು, ತಾಯಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಕೊಪ್ಪಳ (ಜೂ.12): ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 93 ಹಾಗೂ ಪಿಯುಸಿಯಲ್ಲಿ ಶೇ. 85 ಅಂಕ ಗಳಿಸಿದ್ದ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಇಡೀ ಕುಟುಂಬವನ್ನೇ ಮಸಣವಾಗಿಸಿದ ಘೋರ ಘಟನೆ ಕೊಪ್ಪಳದ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದಿದೆ. ಹಗಲು-ರಾತ್ರಿ ಎನ್ನದೆ ಮೊಬೈಲ್ ಗೇಮ್ಸ್ ಆಡುತ್ತಿದ್ದ ಮಗನ ಚಟ ಬಿಡಿಸಲು ಹೆತ್ತವರು ಮೊಬೈಲ್ ಕೊಡುವುದನ್ನು ನಿಲ್ಲಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಪ್ಪಳದ ಸೊಸೆ ಮೈಮೇಲೆ ಬಂದ ಮಾವನ ಆತ್ಮ! ಬೀಡಿ ಸೇಯುತ್ತಾ ದಂಗು ಬಡಿಸಿದ ಮಹಿಳೆ- ವಿಡಿಯೋ ವೈರಲ್

ಇದರಿಂದ ತೀವ್ರ ಆಕ್ರೋಶಗೊಂಡ ಯುವಕ, ತಡರಾತ್ರಿ ಎದ್ದು ಇಡೀ ಕುಟುಂಬದ ಮೇಲೆ ಚಾಕುವಿನಿಂದ ಭೀಕರ ದಾಳಿ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ತಂದೆ ಸ್ಥಳದಲ್ಲೇ ಮೃತಪಟ್ಟರೆ, ಅಕ್ಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ತಾಯಿ ಸದ್ಯ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮನೆಮಂದಿಯನ್ನೆಲ್ಲಾ ಕತ್ತರಿಸಿ ಕ್ರೌರ್ಯ ಮೆರೆದ ಯುವಕ, ನಂತರ ತಾನೂ ಸಹ ಕತ್ತು ಕೊಯ್ದುಕೊಂಡು ಆ*ತ್ಮಹ*ತ್ಯೆಗೆ ಯತ್ನಿಸಿದ್ದಾನೆ. ಈ ಆಘಾತಕಾರಿ ಡಬಲ್ ಮರ್ಡರ್ ಪ್ರಕರಣ ಸದ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಮಕ್ಕಳ ಕೈಗೆ ಮೊಬೈಲ್ ನೀಡುವ ಪೋಷಕರಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.

Related Video