Rishab Shetty: ಮಗನಿಗೆ ಯಕ್ಷಗಾನದ ಬಣ್ಣ; ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ!

ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮನೆಯ ಅಂಗಳದಲ್ಲಿ ಇತ್ತೀಚೆಗಷ್ಟೇ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ ಮಗ ರಣ್ವಿತ್ ಶೆಟ್ಟಿ ಯಕ್ಷಗಾನದ ವಿಶೇಷ ವೇಷ ತೊಟ್ಟು ಹಿರಿಯ ಕಲಾವಿದರ ಜೊತೆಗೆ ವೇದಿಕೆಯಲ್ಲಿ ನೃತ್ಯದ ಜತೆಗೆ ನಟಿಸಿದ್ದಾರೆ. 

Share this Video
  • FB
  • Linkdin
  • Whatsapp

ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರ ಮನೆಯ ಅಂಗಳದಲ್ಲಿ ಇತ್ತೀಚೆಗಷ್ಟೇ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿ ಮಗ ರಣ್ವಿತ್ ಶೆಟ್ಟಿ (Ranvit Shetty) ಯಕ್ಷಗಾನದ ವಿಶೇಷ ವೇಷ ತೊಟ್ಟು ಹಿರಿಯ ಕಲಾವಿದರ ಜೊತೆಗೆ ವೇದಿಕೆಯಲ್ಲಿ ನೃತ್ಯದ ಜತೆಗೆ ನಟಿಸಿದ್ದಾರೆ. ಮೊದಲ ಬಾರಿಗೆ ಮಗ ಬಣ್ಣಹಚ್ಚಿದ ದೃಶ್ಯ ಕಂಡು ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ತುಂಬಾ ಖುಷಿಪಟ್ಟಿದ್ದಾರೆ. ತಮ್ಮ ಮಗ ರಣ್ವಿತ್ ನೃತ್ಯ, ನಟನೆ ನೋಡಿದ ದಂಪತಿ ಚಪ್ಪಾಳೆ ತಟ್ಟಿ, ಪ್ರೋತ್ಸಾಹಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು

ಅಷ್ಟೇ ಅಲ್ಲ, ರಿಷಬ್ ಶೆಟ್ಟಿ ಮನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಟಿ ಅಮೂಲ್ಯ ಅವರ ಪತಿ ಜಗದೀಶ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದರು. ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..

Related Video