ಬಡಮಕ್ಕಳ ಓದಿಗಾಗಿ ‘ಅವಿರತ’ಶ್ರಮ; ಈ ಸಂಸ್ಥೆಗಿರಲಿ ನಿಮ್ಮದೊಂದು ಸಲಾಂ!
Nov 5, 2018, 8:34 PM IST
ಶಾಲಾ ವಿದ್ಯಾರ್ಥಿಗಳಿಗೆ ಬರೇ ಪಠ್ಯಪುಸ್ತಕಗಳಿದ್ದರೆ ಸಾಲದು, ಅಭ್ಯಾಸಕ್ಕಾಗಿ ನೋಟ್ ಪುಸ್ತಕಗಳೂ ಬೇಕು. ಆದರೆ ಎಷ್ಟೋ ವಿದ್ಯಾರ್ಥಿಗಳಿಗೆ ಈಗಲೂ ನೋಟ್ ಪುಸ್ತಕಗಳು ಈಗಲೂ ‘ಐಷಾರಾಮಿ’ ವಸ್ತು ಆಗಿದೆಯೆಂದರೆ ಅತಿಶಯೋಕ್ತಿಯಾಗಲಾರದು.
ಒಂದೊಮ್ಮೆ ಯಾವುದೋ ಕಾರ್ಯಕ್ಕೆ ಶಾಲೆಯೊಂದಕ್ಕೆ ಭೇಟಿ ನೀಡಿದಾಗ, ನೋಟ್ ಬುಕ್ಕ್‌ಗಾಗಿ ಅಲ್ಲಿ ಕಲಿಯುವ ಬಡಮಕ್ಕಳ ಪರದಾಟ ಕಂಡ ಕೆಲ ಯುವ-ಗೆಳೆಯರಿಗೆ ದಿಗಿಲಾಗಿತ್ತು. ಕ್ಷಣಾರ್ಧದಲ್ಲೇ ಆ ದಿಗಿಲು ಸಂಕಟವಾಗಿ ರೂಪುಗೊಂಡು, ಯುವ-ಗೆಳೆಯರಲ್ಲಿ ಸ್ಫೂರ್ತಿಯಾಗಿ ಹೊರಹೊಮ್ಮಿತು. ಆ ಸೇವಾ ಮನೋಭಾವದ ಒಂದು ಆಶಾ ಕಿರಣ ಇಂದು ‘ಅವಿರತ’ ಹೆಸರಿನೊಂದಿಗೆ ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳ ಪಾಲಿಗೆ ವರವಾಗಿ ಪರಿಣಮಿಸಿದೆ.
ಅವಿರತ ಸಂಸ್ಥೆಯು ಕಳೆದ 10 ವರ್ಷಗಳಿಂದ ಬಡ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ಹಂಚುತ್ತಿದೆ. ಬರೇ 2018ರಲ್ಲಿ ರಾಜ್ಯದ 306 ಶಾಲೆಗಳಲ್ಲಿ, 27 ಲಕ್ಷ ರೂ. ಮೌಲ್ಯದ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಪುಸ್ತಕಗಳನ್ನು ಹಂಚಿರುವುದು ಅವಿರತ ಪರಿಶ್ರಮಕ್ಕೆ ಸಾಕ್ಷಿ. ಅವಿರತ ಸಂಸ್ಥೆಯ ಧೇಯ್ಯೋದ್ದೇಶ, ಕಾರ್ಯನೀತಿ, ಚಟುವಟಿಕೆಗಳು ಇತರರಿಗೂ ದಾರಿದೀಪವಾಗಲಿ ಎಂಬ ಆಶಯದೊಂದಿಗೆ, ಇಲ್ಲೊಂದು ಸಣ್ಣ ಪರಿಚಯ...