
ಲೇಡಿ ಕಾನ್ಸ್ಟೇಬಲ್ಗೆ ಸಬ್ಇನ್ಸ್ಪೆಕ್ಟರ್ ಮೇಲೆ ಲವ್..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು, ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಲೇಡಿ ಕಾನ್ಸ್ಟೇಬಲ್ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಆಕೆ ಬೇರೊಬ್ಬರೊಂದಿಗೆ ಮದುವೆಯಾಗುತ್ತಿದ್ದು, ಅದನ್ನು ನಿಲ್ಲಿಸುವಂತೆ ಕೋರಿ ಪಿಎಸ್ಐ ಮತ್ತೊಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಆತ ಪೊಲೀಸ್ ಸಬ್ ಇನ್ಸ್ಪೆಕ್ಟರ್.. ಕಷ್ಟಪಟ್ಟು ಓದಿ ಆ ಹುದ್ದೆಗೇರಿದ್ರು.. ಕ್ರೈಂ ಆಗಲಿ.. ಮೋಸವಾಗಲಿ.. ಕಳ್ಳತನವಾಗಲಿ.. ಆ ಭಾಗದ ಜನ ಈತನ ಬಳಿಯೇ ಬರ್ತಿದ್ರು.. ಪ್ರತೀ ನಿತ್ಯ ಹತ್ತಾರು ಮಂದಿಯ ಕಷ್ಟ ಆಲಿಸುತ್ತಿದ್ದ ಇದೇ ಪೊಲೀಸಪ್ಪ ಇವತ್ತು ತಾನೇ ನ್ಯಾಯ ಕೊಡಿಸಿ ಅಂತ ಮತ್ತೊಂದು ಪೊಲೀಸ್ ಠಾಣೆ ಏರಿದ್ದಾನೆ.. ಇನ್ನೂ ಆತನಿಗೆ ಮೋಸವಾಗಿರೋದು ತನ್ನದೇ ಠಾಣೆಯಲ್ಲಿ ಒಂದು ಸಮಯದಲ್ಲಿ ಕೆಲಸ ಮಾಡ್ತಿದ್ದ ಲೇಡಿ ಕಾನ್ಸ್ಟೇಬಲ್ನಿಂದ.. ಆ ಲೇಡಿ ಕಾನ್ಸ್ಟೇಬಲ್ ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ್ರಂತೆ.. ಅಷ್ಟಕ್ಕೂ ಆ ಲೇಡಿ ಕಾನ್ಸ್ಟೇಬಲ್ ಯಾರು..? ಇವರ ಪ್ರೀತಿ ಹುಟ್ಟಿದ್ದೇಗೆ..? ಆಕೆ ಮಾಡಿದ ಮೋಸ ಎಂಥದ್ದು..? ಒಂದು ಪೊಲೀಸ್ ಲವ್ ಸ್ಟೋರಿಯ ಕಂಪ್ಲೀಟ್ ಡಿಟೇಲ್ಸ್ ಇವತ್ತಿನ ಎಫ್.ಐ.ಆರ್
ಇವತ್ತು ಪೊಲೀಸಪ್ಪನ ಲವ್ ಸ್ಟೋರಿ ಬೀದಿಗೆ ಬಂದಿದೆ.. ನಾಳೆ ಆ ಹೆಣ್ಣುಮಗಳ ಮದುವೆ.. ಮದುವೆ ನಿಲ್ಲಿಸಿ ಅಂತ ಪಿಎಸ್ಐ ಠಾಣೆ ಮೆಟ್ಟಿಲ್ಲೇರಿದ್ದಾರೆ.. ಮುಂದೆ ಏನ್ಮಾಡಬೇಕು ಅನ್ನೋದನ್ನ ಕಾನೂನು ಹೆಳುತ್ತೆ.. ಆದ್ರೆ ಒಬ್ಬ ಹೆಣ್ಣುಮಗಳು ನೀನು ಬೇಡ ಅಂತ ತಿರಸ್ಕರಿಸಿ ಹೊಸ ದಾರಿಯನ್ನ ಹಿಡಿದಿದ್ದಾಳೆ.. ಅವಳ ಪಾಡಿಗೆ ಅವಳನ್ನ ಬಿಟ್ರೆ ಒಳ್ಳೆದು..