Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!

ಉತ್ತರಾಖಂಡದ ರುದ್ರಪ್ರಯಾಗದಲ್ಲಿರುವ ನಾಗರಸು ಗುರುದ್ವಾರವನ್ನು ಆಯುಧಧಾರಿ ನಿಹಾಂಗ್ ಸಿಖ್ ಯೋಧರು ತಮ್ಮ ವಶಕ್ಕೆ ಪಡೆದಿದ್ದಾರೆ. ಬಂಧಿತರ ಬಿಡುಗಡೆಗೆ ಆಗ್ರಹಿಸಿರುವ ಅವರು, ಗುರುದ್ವಾರವನ್ನೇ ರಕ್ಷಾಕವಚವನ್ನಾಗಿ ಮಾಡಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಉತ್ತರಾಖಂಡ್ (ಜೂ.25): ಹಿಮಾಲಯದ ಮಡಿಲಿನಲ್ಲಿರುವ ರುದ್ರಪ್ರಯಾಗದ ನಾಗರಸು ಗುರುದ್ವಾರವನ್ನು ಸದ್ಯ ಆಯುಧಧಾರಿ ನಿಹಾಂಗ್ ಸಿಖ್ ಯೋಧರು ತಮ್ಮ ಹತೋಟಿಗೆ ಪಡೆದುಕೊಂಡಿದ್ದು, ಧಾರ್ಮಿಕ ಕಿಚ್ಚು ಭುಗಿಲೆದ್ದಿದೆ. ಕತ್ತಿ, ಕೊಡಲಿ ಹಾಗೂ ಖಡ್ಗಗಳನ್ನು ಹಿಡಿದು ಬಂದಿರುವ ಈ ಯೋಧರು ಬಂಧಿತರ ಬಿಡುಗಡೆಗಾಗಿ ಸರ್ಕಾರಕ್ಕೆ ರಣವೀಳ್ಯ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಖ್‌ ವಿರೋಧಿ ದಂಗೆಯ1 ಕೇಸಲ್ಲಿ ಸಜ್ಜನ್‌ ಖುಲಾಸೆ -ಇನ್ನೊಂದು ಕೇಸಲ್ಲಿ ಜೀವಾವಧಿ ಶಿಕ್ಷೆ

ಪವಿತ್ರ ಗುರುದ್ವಾರವನ್ನೇ ರಕ್ಷಾಕವಚವನ್ನಾಗಿ ಮಾಡಿಕೊಂಡಿರುವ ನಿಹಾಂಗ್ ಯೋಧರ ಈ ಆಕ್ರೋಶ, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಧರ್ಮ ಸಂಘರ್ಷದ ಭೀಕರತೆ ಸದ್ಯ ಇಂದಿರಾ ಗಾಂಧಿ ಕಾಲದ, ಸ್ವರ್ಣ ಮಂದಿರದಲ್ಲಿ ರಕ್ತ ಹರಿದಿದ್ದ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ಇತಿಹಾಸವನ್ನು ನೆನಪಿಸುತ್ತಿದ್ದು, ಪರಿಸ್ಥಿತಿ ಮತ್ತೊಂದು ಮಿಲಿಟರಿ ಕಾರ್ಯಾಚರಣೆಗೆ ಕಾರಣವಾಗಲಿದೆಯೇ ಎಂಬ ಆತಂಕ ಸೃಷ್ಟಿಸಿದೆ.

Related Video