12:06 PM (IST) Jan 26

India News Live 26th January:Republic Day - ಕರ್ತವ್ಯಪಥದಲ್ಲಿ ಆಪರೇಷನ್‌ ಸಿಂದೂರ್‌ ಫ್ಲೈಟ್‌ ಫಾರ್ಮೇಷನ್‌ ಜಗತ್ತಿಗೆ ತಿಳಿಸಿದ ಭಾರತ!

77ನೇ ಗಣರಾಜ್ಯೋತ್ಸವದಂದು ಕರ್ತವ್ಯಪಥದಲ್ಲಿ ನಡೆದ ಭವ್ಯ ಪರೇಡ್‌ನಲ್ಲಿ, ಭಾರತವು 'ಆಪರೇಷನ್ ಸಿಂಧೂರ್'ನ ರಹಸ್ಯವನ್ನು ಜಗತ್ತಿಗೆ ಅನಾವರಣಗೊಳಿಸಿತು. ಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಬಳಸಲಾಗಿದ್ದ ರಫೇಲ್, ಸುಖೋಯ್-30 ಎಂಕೆಐ, ಮಿಗ್-29 ಹಾಗೂ ಜಾಗ್ವಾರ್ ಯುದ್ಧವಿಮಾನಗಳ ಮಿಶ್ರ ಫಾರ್ಮೇಷನ್‌ ಪ್ರದರ್ಶಿಸಿತು.

Read Full Story
12:05 PM (IST) Jan 26

India News Live 26th January:85 ಶತಕೋಟಿ ಡಾಲರ್​ ಮೌಲ್ಯದ 1 ಸಾವಿರ ಟನ್​ ಚಿನ್ನದ ನಿಧಿ ಪತ್ತೆ! ಭೂಮಿಯೊಳಗೆ ಸಿಕ್ಕ ಅನ್ಯಗ್ರಹದ ಲೋಹಗಳು

ಚೀನಾದ ಹುನಾನ್ ಪ್ರಾಂತ್ಯದಲ್ಲಿ 85 ಶತಕೋಟಿ ಡಾಲರ್ ಮೌಲ್ಯದ ಬೃಹತ್ ಚಿನ್ನದ ನಿಧಿ ಪತ್ತೆಯಾಗಿದೆ. ಇದರ ಜೊತೆಗೆ, ಸ್ಪೇನ್‌ನಲ್ಲಿ ಕಂಚಿನ ಯುಗದ ನಿಧಿಯೊಂದಿಗೆ ಭೂಮಿಗೆ ಸೇರದ, ಅನ್ಯಗ್ರಹದಿಂದ ಬಂದ ಲೋಹಗಳು ಕೂಡ ಪತ್ತೆಯಾಗಿದ್ದು, ಸಂಶೋಧಕರನ್ನು ಅಚ್ಚರಿಗೊಳಿಸಿದೆ.
Read Full Story
11:27 AM (IST) Jan 26

India News Live 26th January:ಅಶೋಕ ಚಕ್ರ ದೇಶದ ಜನರು ಒಟ್ಟಾಗಿ ನನಗೆ ನೀಡಿರುವ ಆಶೀರ್ವಾದ - ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ

ಭಾರತದ ಎರಡನೇ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು 77ನೇ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳಿಂದ ಅಶೋಕ ಚಕ್ರ ಪ್ರಶಸ್ತಿ ಸ್ವೀಕರಿಸಿದರು. ಭಾರತದ ಜನರ ಸಾಮೂಹಿಕ ಆಶೀರ್ವಾದವೆಂದು ಬಣ್ಣಿಸಿದ ಅವರು, ಭವಿಷ್ಯದ ಮಾನವ ಬಾಹ್ಯಾಕಾಶ ಯಾತ್ರೆಗಳಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

Read Full Story
10:12 AM (IST) Jan 26

India News Live 26th January:ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನ ಸಂಪ್ರದಾಯದ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕ್ಕೆ ಭೇಟಿ ನೀಡಿ, ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸಿದರು. ಷುಷ್ಪನಮನ ಸಲ್ಲಿಸಿದ ಬಳಿಕ 2 ನಿಮಿಷ ಮೌನಾಚರಣೆ ಮಾಡಿದರು.

10:08 AM (IST) Jan 26

India News Live 26th January:ಗಣರಾಜ್ಯೋತ್ಸದ ಶುಭ ಕೋರಿದ ಪ್ರಧಾನಿ ಮೋದಿ

Scroll to load tweet…

10:05 AM (IST) Jan 26

India News Live 26th January:ಕರ್ತವ್ಯಪಥ ಪರೇಡ್‌: ಏಷ್ಯಾನೆಟ್‌ ಸುವರ್ಣನ್ಯೂಸ್‌ LIVE

Live: Republic Day Parade 2026 | ಗಣರಾಜ್ಯೋತ್ಸ ನೇರಪ್ರಸಾರ | Kartavya Path Parade | Suvarna News

10:01 AM (IST) Jan 26

India News Live 26th January:77ನೇ ಗಣರಾಜ್ಯೋತ್ಸವ ಸಂಭ್ರಮ - ಕರ್ತವ್ಯ ಪಥದಲ್ಲಿ ಅಲೆಅಲೆಯಾಗಿ ಮೊಳಗಲಿದೆ 'ವಂದೇ ಮಾತರಂ'

ದೇಶವು ತನ್ನ 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವರ್ಷದ ಮೆರವಣಿಗೆಯು 'ವಂದೇ ಮಾತರಂ' ಮತ್ತು 'ಆತ್ಮನಿರ್ಭರ ಭಾರತ' ಥೀಮ್‌ನಡಿಯಲ್ಲಿ ನಡೆಯಲಿದೆ.

Read Full Story
09:43 AM (IST) Jan 26

India News Live 26th January:ಹೆಂಡ್ತಿಯ ಕೂದಲು ಉದುರುತ್ತಿದೆ ಅನ್ನೋ ಕಾರಣಕ್ಕೆ ವಿಚ್ಛೇದನ ಕೊಟ್ಟ ಪತಿ!

Man Divorces Wife After 16 Years Due to Her Hair Loss in China 16 ವರ್ಷಗಳ ಕಾಲ ಮದುವೆಯಾಗಿದ್ದ ದಂಪತಿ ಇತ್ತೀಚೆಗೆ ಬೇರೆಬೇರೆಯಾಗಿದ್ದಾರೆ. ಹೆಂಡ್ತಿಯ ಕೂದಲು ವಿಪರೀತವಾಗಿ ಉದುರಿದ್ದ ಕಾರಣಕ್ಕೆ ವಿಚ್ಛೇದನ ನೀಡಿರುವುದಾಗಿ ಪತಿ ಹೇಳಿದ್ದಾನೆ.

Read Full Story
07:58 AM (IST) Jan 26

India News Live 26th January:ಟಿ20 ವಿಶ್ವಕಪ್‌ ಆಡದಿದ್ರೆ ಕ್ರಿಕೆಟ್‌ ಭವಿಷ್ಯವೇ ಖತಂ: ಪಾಕಿಸ್ತಾನಕ್ಕೆ ಐಸಿಸಿ ಖಡಕ್ ವಾರ್ನಿಂಗ್!

ಟಿ20 ವಿಶ್ವಕಪ್ ಬಹಿಷ್ಕರಿಸುವ ಪೊಳ್ಳು ಬೆದರಿಕೆ ಹಾಕಿದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಖಡಕ್ ಎಚ್ಚರಿಕೆ ನೀಡಿದೆ. ಒಂದು ವೇಳೆ ಟೂರ್ನಿಯಲ್ಲಿ ಆಡದಿದ್ದರೆ, ದ್ವಿಪಕ್ಷೀಯ ಸರಣಿ, ಪಿಎಸ್‌ಎಲ್‌ ಮತ್ತು ಏಷ್ಯಾಕಪ್‌ನಿಂದಲೂ ಹೊರಹಾಕುವುದಾಗಿ ಎಚ್ಚರಿಸಿದೆ.

Read Full Story
07:57 AM (IST) Jan 26

India News Live 26th January:ಅಭಿಷೇಕ್-ಸೂರ್ಯಕುಮಾರ್ ಯಾದವ್ ಆರ್ಭಟಕ್ಕೆ ಕಿವೀಸ್‌ ಕಂಗಾಲು; ಭಾರತಕ್ಕೆ ಸತತ 9ನೇ ಟಿ20 ಸರಣಿ ಜಯ!

ನ್ಯೂಜಿಲೆಂಡ್‌ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, 5 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಅಭಿಷೇಕ್ ಶರ್ಮಾ ಅವರ 14 ಎಸೆತಗಳ ಸ್ಫೋಟಕ ಅರ್ಧಶತಕ ಮತ್ತು ಸೂರ್ಯಕುಮಾರ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಐತಿಹಾಸಿಕ ಗೆಲುವು ದಾಖಲಿಸಿತು.

Read Full Story
07:57 AM (IST) Jan 26

India News Live 26th January:ದೇಶದ ಮೊದಲ ಗಣರಾಜ್ಯೋತ್ಸವ ಸಂಭ್ರಮಕ್ಕೆ ಆಗಿದ್ದ ವೆಚ್ಚ ಎಷ್ಟು ? ಕುತೂಹಲಕಾರಿ ಸಂಗತಿಯಿದು

77ನೇ ಗಣರಾಜ್ಯೋತ್ಸವಕ್ಕೆ ದೇಶ ಸಜ್ಜಾಗಿದೆ. ದೇಶದ ಸೇನಾ, ಸಾಂಸ್ಕೃತಿಕ ಸಾಮರ್ಥ್ಯವನ್ನು ಜಗತ್ತಿನೆದುರಿಗೆ ತೆರೆದಿಡುವ ಕಾರ್ಯಕ್ರಮಕ್ಕೆ ಈ ಬಾರಿ ವಂದೇ ಮಾತರಂ ಪರಿಕಲ್ಪನೆ ಇನ್ನಷ್ಟು ಮೆರಗು ನೀಡಲಿದೆ.

Read Full Story
07:57 AM (IST) Jan 26

India News Live 26th January:ಆರ್‌ಜೆಡಿ ನಂ.2 ಹುದ್ದೆ ತೇಜಸ್ವಿ ಪಾಲು

ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್‌ ಅವರನ್ನು ನೇಮಿಸಲಾಗಿದೆ. ಇದು ಪಕ್ಷದ ನಂ.2 ಹುದ್ದೆ ಆಗಿದ್ದು, ತನ್ಮೂಲಕ ತೇಜಸ್ವಿ ಅವರು ತಮ್ಮ ಉತ್ತರಾಧಿಕಾರಿ ಎಂದು ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ ಪರೋಕ್ಷವಾಗಿ ಸಾರಿದ್ದಾರೆ.

Read Full Story
07:56 AM (IST) Jan 26

India News Live 26th January:ಇಂದು ‘ವಂದೇ..’ ಪರಿಕಲ್ಪನೆಯಲ್ಲಿ 77ನೇ ಗಣರಾಜ್ಯ ದಿನ

ಈ ಬಾರಿ 77ನೇ ಗಣರಾಜ್ಯೋತ್ಸವವನ್ನು ವಂದೇ ಮಾತರಂ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ಪ್ರಜಾಪ್ರಭುತ್ವದ ಸಂಭ್ರಮ, ಸೇನಾ ಶಕ್ತಿ ಹಾಗೂ ವೈವಿಧ್ಯತೆಯ ಅನಾವರಣಕ್ಕೆ ಇಡೀ ದೇಶ ಸಾಕ್ಷಿಯಾಗಲಿದೆ.

Read Full Story
07:56 AM (IST) Jan 26

India News Live 26th January:ಹಿರಿಯ ಪತ್ರಕರ್ತ ಮಾರ್ಕ್‌ ಟಲ್ಲಿ ನಿಧನ

ಬಿಬಿಸಿ ಭಾರತದ ಮುಖ್ಯಸ್ಥರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹೆಸರಾಂತ ಹಿರಿಯ ಪತ್ರಕರ್ತ, ಪದ್ಮಭೂಷಣ ಬ್ರಿಟಿಷ್‌ ಸಂಜಾತ ಭಾರತೀಯ ಪತ್ರಕರ್ತ ಮಾರ್ಕ್‌ ಟಲ್ಲಿ (90) ಅವರು ಭಾನುವಾರ ದೆಹಲಿಯಲ್ಲಿ ನಿಧನರಾದರು.

Read Full Story