ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವದ ಸಿದ್ಧತೆ ವೇಳೆ ಆಟೋರಿಕ್ಷಾದಿಂದ ಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಂಗೀತಾ ಸಾವನ್ನಪ್ಪಿದ್ದಾಳೆ. ಈ ದುರಂತ ಘಟನೆಗೆ ಶಾಲಾ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಕೇಳಿ ಬಂದಿದೆ.

ಆಟೋರಿಕ್ಷಾದಿಂದ ಬಿದ್ದು 8ನೇ ಕ್ಲಾಸ್ ಬಾಲಕಿ ಸಾವು

ಹೈದರಾಬಾದ್: ಗಣರಾಜ್ಯೋತ್ಸವಕ್ಕಾಗಿ ಕುರ್ಚಿಗಳನ್ನು ಸಾಗಿಸುತ್ತಿದ್ದ ವೇಳೆ ಆಟೋರಿಕ್ಷಾದಿಂದ ಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ ದಾರುಣ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಸಂಗೀತಾ ಮೃತಪಟ್ಟ ಬಾಲಕಿ, ಸಂಗೀತಾ ಬನ್ಸ್ವಾಡ ಮಂಡಲದ ಪರಿಶಿಷ್ಟ ಜಾತಿ ಸಮುದಾಯದ ವಿದ್ಯಾರ್ಥಿಗಳಿಗಾಗಿ ಮೀಸಲಿರುವ ಸರ್ಕಾರಿ ವಸತಿ ಗುರುಕುಲ ಶಾಲೆಯಲ್ಲಿ ಓದುತ್ತಿದ್ದಳು.

ಇಂದು ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಇದ್ದಿದ್ದರಿಂದ ಶಾಲೆಗೆ ಬರುವ ಅಥಿತಿಗಳಿಗಾಗಿ ನಿನ್ನೆ ಆಟೋರಿಕ್ಷಾದಲ್ಲಿ ಕುರ್ಚಿಗಳನ್ನು ತರುತ್ತಿದ್ದಾಗ ಈ ಘಟನೆ ಸಂಭವಿಸಿದೆ . ಆಟೋದಿಂದ ಆಯತಪ್ಪಿ ಕೆಳಗೆ ಬಿದ್ದ ಬಾಲಕಿ ಸಾವನ್ನಪ್ಪಿದ್ದು, ನಿನ್ನೆ ಸಂಜೆ 7.40ಕ್ಕೆ ಈ ಘಟನೆ ನಡೆದಿದೆ. ಶಾಲೆಯ ಆಡಳಿತದ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ. ಮಾಡ್ನೂರ್ ಮಂಡಲದ ಕೋಡಿಚೆರ್ಲಾ ಗ್ರಾಮದಲ್ಲಿರುವ ವಸತಿ ಶಾಲೆಯಲ್ಲಿ ಬಾಲಕಿ ಸಂಗೀತಾ ಓದುತ್ತಿದ್ದಳು.

ಸೋಮವಾರದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಪ್ಲಾಸ್ಟಿಕ್ ಕುರ್ಚಿಗಳನ್ನು ಹೊತ್ತುಕೊಂಡು ಕ್ಯಾಂಪಸ್‌ಗೆ ಆಟೋರಿಕ್ಷಾ ಪ್ರವೇಶಿಸಿದೆ . ಈ ವೇಳೆ ಮಕ್ಕಳು ಕುರ್ಚಿಗಳನ್ನು ಇಳಿಸಲು ಸಹಾಯ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಳಿಸಿದ ನಂತರ, ನಾಲ್ವರು ಹುಡುಗಿಯರು ಶಾಲೆಯ ಗೇಟ್‌ಗೆ ಅಂದರೆ ಸ್ವಲ್ಪ ದೂರದವರೆಗೆ ಪ್ರಯಾಣಿಸಲು ಆಟೋ ಹತ್ತಿದ್ದಾರೆ ಎಂದು ವರದಿಯಾಗಿದೆ.

ಶಾಲೆಯ ಗೇಟ್ ಬಳಿಗೆ ತಲುಪಿದಾಗ ಬಾಲಕಿಯರು ಕೆಳಗೆ ಇಳಿಯಲು ಚಾಲಕ ಗೇಟ್ ಬಳಿ ಆಟೋದ ವೇಗವನ್ನು ಕಡಿಮೆ ಮಾಡಿದ್ದಾನೆ. ಆದರೆ ಆಟೋ ನಿಲ್ಲುವ ಮೊದಲೇ ಇಳಿಯಲು ಹೋಗಿ ಓರ್ವ ಬಾಲಕಿ ಸಿಮೆಂಟ್ ರಸ್ತೆಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಳಿದ ಮೂವರು ಮಕ್ಕಳು ಯಾವುದೇ ಅಪಾಯವಿಲ್ಲದೇ ವಾಹನದಿಂದ ಇಳಿದಿದ್ದಾರೆ. ಗಾಯಗೊಂಡ ಬಾಲಕಿಯನ್ನು ಶಾಲಾ ಸಿಬ್ಬಂದಿ ಕೂಡಲೇ ಬನ್ಸ್ವಾಡಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಕ್ಕಳಲ್ಲಿ ಸಂಗೀತಾ ಕೂಡ ಒಬ್ಬರು. ಇದ್ದಕ್ಕಿದ್ದಂತೆ, ಅವರು ಸಮತೋಲನ ಕಳೆದುಕೊಂಡು ಚಲಿಸುತ್ತಿದ್ದ ವಾಹನದಿಂದ ಬಿದ್ದರು.

ಅವರನ್ನು ಬನ್ಸ್ವಾಡಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅವರ ಕಿವಿಗಳಿಂದ ತೀವ್ರ ರಕ್ತಸ್ರಾವವಾಗಿದ್ದು, ಮುಖ ಮತ್ತು ಕೈಗಳಿಗೆ ಹಲವು ಗಾಯಗಳಾಗಿವೆ ಅವಳು ಉಸಿರಾಡುತ್ತಿರಲಿಲ್ಲ ಮತ್ತು ಹೃದಯ ಚಟುವಟಿಕೆಯೂ ಇರಲಿಲ್ಲ ಎಂದು ಸಂಗೀತಾಳನ್ನು ತಪಾಸಣೆ ನಡೆಸಿದ ಕರ್ತವ್ಯದಲ್ಲಿದ್ದ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಪತ್ನಿ ಚಿಕಿತ್ಸೆಗಾಗಿ ಸೈಕಲ್‌ನ್ನೇ ಹಾಸಿಗೆ ಮಾಡಿ 300 ಕಿಮೀ ಸೈಕಲ್ ತುಳಿದ 75ರ ವೃದ್ಧ

ಘಟನೆ ನಡೆದ ಸಮಯದಲ್ಲಿ ತಾನು ಅಲ್ಲಿ ಇರಲಿಲ್ಲ ಹಾಗೂ ಮಕ್ಕಳು ಆಟೋಗೆ ಹತ್ತಿದ್ದನ್ನು ಸಿಬ್ಬಂದಿ ಗಮನಿಸಲಿಲ್ಲ ಎಂದು ಹೇಳಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಈಗ ಆಟೋ ಚಾಲಕ ಮತ್ತು ಶಾಲಾ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ರೆಸ್ಟೋರೆಂಟ್‌ಗಳ ಜೊತೆ ಡೀಲ್‌: ಬಂಬಲ್ ಟಿಂಡರ್‌ ಅಲ್ಲಿ ಸಿಕ್ಕ ಹುಡುಗಿರ ಕರ್ಕೊಂಡು ಹೋಟೆಲ್‌ಗೆ ಹೋದ್ರೆ ಗೋವಿಂದ

ಈ ಪ್ರದೇಶದ ಉಸ್ತುವಾರಿ ಐಎಎಸ್ ಅಧಿಕಾರಿ ಕಿರಣ್ಮಯಿ ಕೊಪ್ಪಿಸೆಟ್ಟಿ ಮಾತನಾಡಿ, ಚಾಲಕ ಹಾಸ್ಟೆಲ್‌ಗೆ ನಿಯಮಿತವಾಗಿ ಬರುತ್ತಿದ್ದ ಮತ್ತು ಆಗಾಗ್ಗೆ ಮಕ್ಕಳನ್ನು ತನ್ನ ಆಟೋದಲ್ಲಿ ಬಿಡುತ್ತಿದ್ದ. ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು. ಬಾಲಕಿಯ ಸಾವು ಖಂಡಿಸಿ ಆಕೆಯ ಕುಟುಂಬ ಮತ್ತು ವಿವಿಧ ವಿದ್ಯಾರ್ಥಿ ಸಂಘಗಳು ಪ್ರತಿಭಟನೆ ನಡೆಸಿದ್ದಾರೆ. ಪ್ರಾಂಶುಪಾಲರಾದ ಸುನೀತಾ ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.

Scroll to load tweet…