ಉತ್ತರ ಪ್ರದೇಶದ ರಾಮ್‌ಪುರದಲ್ಲಿ, ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಿವಾಹಿತೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಚ್ಚರಿಯ ಘಟನೆ ನಡೆದಿದೆ. ಮದುವೆ ರಾತ್ರಿಯೇ ವಧು ಮಗುವಿಗೆ ಜನ್ಮ ನೀಡಿದ್ದು, ವರ ಸಿಹಿ ಹಂಚಿ ಸಂಭ್ರಮಿಸಿದ್ದಾನೆ.
ಮದುವೆ ನಡೆದ ಕೆಲ ಗಂಟೆಗಳಲ್ಲೇ ಮಗುವಿಗೆ ಜನ್ಮ ನೀಡಿದ ವಧು
ಮದುವೆ ನಡೆದ ಕೆಲ ಗಂಟೆಗಳಲ್ಲೇ ನವವಿವಾಹಿತೆಯೊಬ್ಬಳು ಮಗುವಿಗೆ ಜನ್ಮ ನೀಡಿದಂತಹ ಅಚ್ಚರಿಯ ಘಟನೆಯೊಂದು ಉತ್ತರ ಪ್ರದೇಶದ ರಾಮ್‌ಪುರದಲ್ಲಿ ನಡೆದಿದ್ದು, ಈಗ ಈ ವಿಚಾರವೂ ಟಾಕ್ ಆಫ್ ದಿ ಟೌನ್ ಆಗಿದೆ. ಮದುವೆಯಾದ ದಿನ ರಾತ್ರಿಯೇ ವಧು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ರಾಮ್‌ಪುರದ ಅಝಿಂನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕುಮ್ಹಾರಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಮದುವೆಯ ಸಂಭ್ರಮ ಇನ್ನೂ ಮುಗಿದಿರಲಿಲ್ಲ, ಅಷ್ಟರಲ್ಲಿ ವರನ ಮನೆಯಲ್ಲಿ ಮಗು ಅಳುವ ಸದ್ದು ಕೇಳಿ ಅಲ್ಲಿದ್ದವರು ಶಾಕ್ ಆಗಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ವರ ಕುಮ್ಹಾರಿಯಾ ಗ್ರಾಮದ ವರ ರಿಜ್ವಾನ್ ಎಂಬಾತ ನೆರೆಹೊರೆಯ ಗ್ರಾಮವಾದ ಬಹದ್ದೂರ್ ಗಂಜ್‌ನ ಯುವತಿಯನ್ನು ಮದುವೆಯಾಗಿದ್ದ. ಕೆಲ ಸಮಯದ ಹಿಂದೆ ಪರಿಚಿತರಾಗಿದ್ದ ಇವರಿಬ್ಬರಿಗೂ ಮದುವೆಗೂ ಮೊದಲೇ ಆತ್ಮೀಯ ಸಂಬಂಧವಿದ್ದು, ಇವರ ಮದುವೆಯ ಬಗ್ಗೆ ಕುಟುಂಬದವರು ಮಾತುಕತೆ ನಡೆಸುತ್ತಿದ್ದಾಗಲೇ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಕೆಲ ದಿನಗಳ ಹಿಂದೆ ಮಹಿಳೆ ಮುರ್ಸೈನಾ ಪೊಲೀಸ್ ಠಾಣೆಗೆ ಬಂದು ತಮ್ಮ ಮದುವೆಯನ್ನು ಅಧಿಕೃತ ಮಾಡುವಂತೆ ಕೇಳಿಕೊಂಡಿದ್ದಳು. ಇದಾದ ನಂತರ ಪೊಲೀಸರು ಹಾಗೂ ಕುಟುಂಬದವರು ಹಾಗೂ ಗ್ರಾಮದ ಮುಖಂಡರು ಒಂದು ನಿರ್ಧಾರಕ್ಕೆ ಬಂದರು. ಮದುವೆ ಡೇಟ್‌ನ್ನು ಫಿಕ್ಸ್ ಮಾಡಿದರು. ನಂತರ ಶನಿವಾರ ಸಮಜೆ ರಿಜ್ವಾನ್ ಬಹದೂರ್ ಗಂಜ್‌ನ ಯುವತಿ ಮನೆಗೆ ತನ್ನ ಸಂಬಂಧಿಗಳ ಜೊತೆಗೆ ಬಂದು ಮದುವೆಯ ಸಂಪ್ರದಾಯಗಳನ್ನು ನಡೆಸಿದರು ನಂತರ ರಾತ್ರಿಯೇ ವಧುವನ್ನು ಕರೆದುಕೊಂಡು ರಿಜ್ವಾನ್ ತನ್ನ ಮನೆಗೆ ಬಂದಿದ್ದಾನೆ.
ಇದನ್ನೂ ಓದಿ: ಗಣರಾಜ್ಯೋತ್ಸವಕ್ಕಾಗಿ ಕುರ್ಚಿಗಳ ಸಾಗಿಸುತ್ತಿದ್ದ ವೇಳೆ ಆಟೋರಿಕ್ಷಾದಿಂದ ಬಿದ್ದು 8ನೇ ಕ್ಲಾಸ್ ಬಾಲಕಿ ಸಾವು
ಇದಾಗಿ ಸ್ವಲ್ಪ ಹೊತ್ತಿನಲ್ಲಿ ವಧುವಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಮನೆಯವರಲ್ಲಿ ಆತಂಕ ಭಯಕ್ಕೆ ಕಾರಣವಾಗಿದೆ. ನಂತರ ಸ್ಥಳೀಯ ಮಹಿಳಾ ವೈದ್ಯೆಯನ್ನು ಸಹಾಯಕ್ಕಾಗಿ ಕರೆಸಿದ್ದಾರೆ. ನಂತರ ಭಾನುವಾರ ನಸುಕಿನ ಜಾವ ವಧು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದು, ಇದು ಮದುವೆ ಮನೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ಕೂಡಲೇ ವರ ಊರಿಗೆಲ್ಲಾ ಸಿಹಿ ಹಂಚಿ ಸಂಭ್ರಮಿಸಿದ ಎಂದು ವರದಿಯಾಗಿದೆ. ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಪತ್ನಿ ಚಿಕಿತ್ಸೆಗಾಗಿ ಸೈಕಲ್‌ನ್ನೇ ಹಾಸಿಗೆ ಮಾಡಿ 300 ಕಿಮೀ ಸೈಕಲ್ ತುಳಿದ 75ರ ವೃದ್ಧ


