- Home
- Life
- Relationship
- ಅಪ್ಪ ತೋರಿಸಿದ ಹುಡುಗನ ಮದ್ವೆಯಾಗ್ತೇನೆ ಅಂದಿದ್ದ ಮೊನಾಲಿಸಾಗೆ ಬ್ರೇನ್ವಾಷ್? ತಂದೆಯ ಕಣ್ಣೀರು- ಹೇಳಿದ್ದೇನು
ಅಪ್ಪ ತೋರಿಸಿದ ಹುಡುಗನ ಮದ್ವೆಯಾಗ್ತೇನೆ ಅಂದಿದ್ದ ಮೊನಾಲಿಸಾಗೆ ಬ್ರೇನ್ವಾಷ್? ತಂದೆಯ ಕಣ್ಣೀರು- ಹೇಳಿದ್ದೇನು
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ, ತನ್ನ ಪೋಷಕರ ಇಚ್ಛೆಗೆ ವಿರುದ್ಧವಾಗಿ ಫರ್ಮಾನ್ ಖಾನ್ ಎಂಬ ಯುವಕನನ್ನು ವಿವಾಹವಾಗಿದ್ದಾಳೆ. ಇದು ಲವ್ ಜಿಹಾದ್ ಅಲ್ಲ ಎಂದು ಪತಿ ಹೇಳಿದರೆ, ತನ್ನ ಮಗಳಿಗೆ ಬ್ರೈನ್‌ವಾಶ್ ಮಾಡಲಾಗಿದೆ ಎಂದು ತಂದೆ ಆರೋಪಿಸುತ್ತಿದ್ದಾರೆ.

ಆಗ ಹೇಳಿದ್ದೇ ಬೇರೆ
ಕುಂಭಮೇಳದ ವೈರಲ್ ಗರ್ಲ್ ಮೊನಾಲಿಸಾ ಇದೀಗ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿದ್ದಾಳೆ. ಮುಸ್ಲಿಂ ಯುವಕ ಫರ್ಮಾನ್ ಖಾನ್ ಜೊತೆ ಮದುವೆಯಾದ 18ರ ಮೊನಾಲಿಸಾ ಕೆಲ ತಿಂಗಳ ಹಿಂದಷ್ಟೇ, ನಾನು ಅಪ್ಪ-ಅಮ್ಮ ಹಾಕಿದ ಗೆರೆ ದಾಟುವವಳಲ್ಲ. ಅವರು ಹೇಳಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ಮಾಧ್ಯಮದವರ ಎದುರು ಹೇಳಿಕೊಂಡಿದ್ದಳು. ನನಗಿನ್ನೂ 17 ವರ್ಷ ವಯಸ್ಸು. ಮದುವೆಯ ವಯಸ್ಸಲ್ಲ. ಆದರೆ ಮದುವೆಯ ವಯಸ್ಸಿಗೆ ಬಂದರೂ ಅವರು ಹೇಳಿರುವ ಹುಡುಗನನ್ನೇ ಮದುವೆಯಾಗುವವಳು ಎಂದಿದ್ದಳು ಮೋನಾಲಿಸಾ.
ಅಪ್ಪ-ಅಮ್ಮನ ವಿರುದ್ಧ
ಆದರೆ, ಇದೀಗ ಎಲ್ಲವೂ ಬದಲಾಗಿದೆ. ಅಪ್ಪ-ಅಮ್ಮನಿಂದಲೇ ರಕ್ಷಣೆ ಕೋರಿ ಪೊಲೀಸ್ ಪ್ರೊಟೆಕ್ಷನ್ ಪಡೆದು ಉತ್ತರ ಪ್ರದೇಶದ ಯುವಕನನ್ನು ಕೇರಳದಲ್ಲಿ ಮದುವೆಯಾಗಿದ್ದಾಳೆ ಈಕೆ. ಇದಾಗಲೇ ಈ ಜೋಡಿ ಮೀಡಿಯಾ ಮುಂದೆ ಬಂದು ಎಲ್ಲಾ ಉತ್ತರ ಕೊಟ್ಟಿದೆ.
ಲವ್ ಜಿಹಾದ್ ಅಲ್ಲ
ನಾನು ಮದುವೆಗೆ ಒಪ್ಪಿರಲಿಲ್ಲ. ಮೊನಾಲಿಸಾಳೇ ಮದುವೆಗೆ ಒತ್ತಾಯಿಸಿದ್ದು ಎಂದು ಪತಿ ಫರ್ಮಾನ್ ಖಾನ್ ಹೇಳಿದ್ದಾನೆ. ಇದು ಲವ್ ಜಿಹಾದೂ ಅಲ್ಲ, ಆಕೆಯನ್ನು ಮತಾಂತರವೂ ಮಾಡುವುದಿಲ್ಲ ಎಂದು ಹೇಳಿದ್ದಾನೆ. ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ಹಣೆಗೆ ಕುಂಕುಮವನ್ನೂ ಇಟ್ಟುಕೊಂಡಿದ್ದಾನೆ ಫರ್ಮಾನ್.
ಬ್ರೈನ್ ವಾಷ್ ಆಗಿದೆ
ಆದರೆ, ಇವೆಲ್ಲವುಗಳ ನಡುವೆಯೇ, ಮೊನಾಲಿಸಾ ಅಪ್ಪ ಜೈ ಸಿಂಗ್ ಭೋಸ್ಲೆ ಹೇಳ್ತಿರೋದೇ ಬೇರೆ. ನನ್ನ ಮಗಳಿಗೆ ಬ್ರೈನ್ವಾಷ್ ಮಾಡಲಾಗಿದೆ. ಏನೇನೋ ಮಾತನಾಡುತ್ತಾಳೆ. ಕೆಲವು ತಿಂಗಳ ಹಿಂದೆ ಸರಿಯಾಗಿಯೇ ಇದ್ದಳು. ಈಗ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದು ಸಿಕ್ಕಾಪಟ್ಟೆ ಅನುಮಾನ ಮೂಡಿಸುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.
ದಿಕ್ಕು ತಪ್ಪಿಸಲಾಗಿದೆ
ನನ್ನ ಮಗಳು ನನ್ನನ್ನೇ ಧಿಕ್ಕರಿಸಿದಳು. ನಮ್ಮ ವಿರುದ್ಧವೇ ಪೊಲೀಸ್ ರಕ್ಷಣೆ ಕೋರಿದಳು. ಅವಳು ನಮಗೆ ವಾಪಸ್ ಬೇಕು. ಅವಳ ದಿಕ್ಕನ್ನು ತಪ್ಪಿಸಲಾಗಿದೆ. ಅವಳಿಗೆ ಏನೋ ಆಗುತ್ತಿದೆ. ಏನೂ ಸರಿಯಿಲ್ಲ ಎಂದು ಎನ್ನಿಸುತ್ತಿದೆ ಎಂದಿದ್ದಾರೆ ಅಪ್ಪ.
ಮುಂದೇನು?
ಒಟ್ಟಿನಲ್ಲಿ ಮೊನಾಲಿಸಾ, ಫರ್ಮಾನ್ ಖಾನ್ ಜೊತೆ ಸುಖವಾಗಿ ಬಾಳಲಿ ಎನ್ನುವುದು ಎಲ್ಲರ ಅಶಯವಾಗಿದ್ದರೆ, ಅಪ್ಪನ ನೋವನ್ನು ಮಾತ್ರ ನೋಡಲು ಆಗುತ್ತಿಲ್ಲ. ನಿಜಕ್ಕೂ ಆಗಿದ್ದೇನು ಎನ್ನುವುದು ಕೂಡ ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ ಅಷ್ಟೇ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

