77ನೇ ಗಣರಾಜ್ಯೋತ್ಸವದಂದು ಕರ್ತವ್ಯಪಥದಲ್ಲಿ ನಡೆದ ಭವ್ಯ ಪರೇಡ್‌ನಲ್ಲಿ, ಭಾರತವು 'ಆಪರೇಷನ್ ಸಿಂಧೂರ್'ನ ರಹಸ್ಯವನ್ನು ಜಗತ್ತಿಗೆ ಅನಾವರಣಗೊಳಿಸಿತು. ಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಬಳಸಲಾಗಿದ್ದ ರಫೇಲ್, ಸುಖೋಯ್-30 ಎಂಕೆಐ, ಮಿಗ್-29 ಹಾಗೂ ಜಾಗ್ವಾರ್ ಯುದ್ಧವಿಮಾನಗಳ ಮಿಶ್ರ ಫಾರ್ಮೇಷನ್ ಪ್ರದರ್ಶಿಸಿತು.
ನವದೆಹಲಿ (ಜ.26): ದೇಶವು ಇಂದು ತನ್ನ 77 ನೇ ಗಣರಾಜ್ಯೋತ್ಸವವನ್ನು ಸಂಭ್ರಮವನ್ನು ಆಚರಿಸಿದ್ದು, ಕರ್ತವ್ಯಪಥದಲ್ಲಿ ಭವ್ಯ ಪರೇಡ್ ನಡೆಯುತ್ತಿದೆ. ಇದೇ ವೇಳೆ ಭಾರತ ಆಪರೇಷನ್ ಸಿಂದೂರ್‌ನಲ್ಲಿ ಬಳಸಿದ ಹಲವು ವಸ್ತುಗಳನ್ನು ಜಗತ್ತಿಗೆ ತಿಳಿಸಿತು. ಆಪರೇಷನ್ ಸಿಂಧೂರ್‌ನಲ್ಲಿ ಬಳಸಲಾದ ಇಂಟಿಗ್ರೇಟೆಡ್ ಕಮಾಂಡ್ ಪ್ರದರ್ಶನವನ್ನೂ ನೀಡಿತು. ಸುಖೋಯ್ ಮತ್ತು ರಫೇಲ್ ವಿಮಾನಗಳು ಸೇರಿದಂತೆ ಇಪ್ಪತ್ತೊಂಬತ್ತು ವಿಮಾನಗಳು ಭಾಗವಹಿಸಿದ್ದವು. ಪ್ಯಾರಾಟ್ರೂಪರ್‌ಗಳು ಬಂದಿಳಿದವು. ಆರಂಭದಲ್ಲಿ MI-17 ಹೆಲಿಕಾಪ್ಟರ್‌ಗಳು ಹೂವುಗಳ ಸುರಿಮಳೆಗೈದವು. ಇದಕ್ಕೂ ಮೊದಲು, ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಧ್ವಜಾರೋಹಣ ಮಾಡಿದರು. ರಾಷ್ಟ್ರಗೀತೆ ನುಡಿಸಲಾಯಿತು, ನಂತರ 21-ಗನ್ ಸೆಲ್ಯೂಟ್ ಮಾಡಲಾಯಿತು. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಅಶೋಕ ಚಕ್ರವನ್ನು ನೀಡಲಾಯಿತು.
ಪರೇಡ್ ಆರಂಭವಾದ ಕೆಲ ಹೊತ್ತಿನಲ್ಲಿಯೇ ಭಾರತ ಆಪರೇಷನ್ ಸಿಂದೂರ್‌ನ ಫ್ಲೈಟ್ ಫಾರ್ಮೇಷನ್‌ಅನ್ನು ಜಗತ್ತಿಗೆ ತಿಳಿಸಿತು. ಇಲ್ಲಿಯವರೆಗೂ ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ವಾಯುಸೇನೆ ಯಾವ ರೀತಿಯ ಯುದ್ಧವಿಮಾನಗಳನ್ನು ಬಳಸಿತ್ತು ಅನ್ನೋದು ಜಗತ್ತಿಗೆ ಊಹಾಪೋಹವೇ ಆಗಿತ್ತು. ಆದರೆ, ಗಣರಾಜ್ಯೋತ್ಸವದಲ್ಲಿ ಭಾರತ ಇದರ ಫ್ಲೈಟ್ ಫಾರ್ಮೇಷನ್ ವಿವರಗಳನ್ನು ಜಗತ್ತಿಗೆ ತಿಳಿಸಿದೆ.
ಪಾಕಿಸ್ತಾನ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಡೆದ ರಣಭೀಕರ ದಾಳಿಯಲ್ಲಿ ಭಾರತೀಯ ವಾಯುಸೇನೆಯ ಎಲ್ಲಾ ಯುದ್ಧವಿಮಾನಗಳನ್ನೂ ಒಳಗೊಂಡ ಫ್ಲೈಟ್ ಫಾರ್ಮೇಷನ್ ಸಿದ್ದ ಮಾಡಿತ್ತು.
ಹೇಗಿತ್ತು ಫ್ಲೈಟ್ ಫಾರ್ಮೇಷನ್
ಎರಡು ರಫೇಲ್, ಎರಡು ಸುಖೋಯ್-30 ಎಂಕೆಐ ಯದ್ಧವಿಮಾನ, ಎರಡು ಮಿಗ್-29 ಫ್ಲೈಟರ್ ಜೆಟ್ ಹಾಗೂ ಒಂದು ಜಾಗ್ವಾರ್ ಯುದ್ಧವಿಮಾನದ ಫಾರ್ಮೇಷನ್‌ಅನ್ನು ಭಾರತ ಮಾಡಿತ್ತು. ಇದೇ ಆರ್ಡರ್‌ನಲ್ಲಿ ಪಾಕ್ ಮೇಲೆ ದಾಳಿ ಮಾಡಲಾಗಿತ್ತು.ಈ ಮಿಶ್ರ ಫಾfಮೇಷನ್ ಭಾರತೀಯ ವಾಯುಪಡೆಯು ಕಾರ್ಯಾಚರಣೆಯಲ್ಲಿ ವೈವಿಧ್ಯತೆ ಮತ್ತು ವೈಮಾನಿಕ ಸಮನ್ವಯವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿತ್ತು.
ಕರ್ತವ್ಯಪಥದಲ್ಲಿ ಈ ಯುದ್ಧವಿಮಾನದಲ್ಲಿ ಹಾರಾಟ ಮಾಡುತ್ತಿದ್ದಂತೆ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಹಾರಾಟವು ಭಾರತದ ಮುಂದುವರಿದ ಯುದ್ಧ ವಾಯುಯಾನ ಸಾಮರ್ಥ್ಯಗಳನ್ನು ಎತ್ತಿ ತೋರಿಸಿತು. ಪ್ರಧಾನಿ ನರೇಂದ್ರ ಮೋದಿ ಬಂದಿದ್ದ ಅತಿಥಿಗಳಿಗೆ ಇದರ ಮಾಹಿತಿಯನ್ನು ನೀಡೋದರಲ್ಲಿ ಬ್ಯುಸಿ ಆಗಿದ್ದರು.
ಇದಕ್ಕೂ ಮುನ್ನ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‌ಗಳು ಆಪರೇಷನ್ ಸಿಂದೂರ್ ಧ್ವಜವನ್ನು ಕೂಡ ಪ್ರದರ್ಶನ ಮಾಡಿದವು. ಮೂರು ಹೆಲಿಕಾಪ್ಟರ್ ಫಾರ್ಮೇಷನ್‌ನಲ್ಲಿ ಕಪ್ಪು ಬಣ್ಣದ ಧ್ವಜದ ಮೇಲೆ ಆಪರೇಷನ್ ಸಿಂದೂರ್ ಎಂದು ಬರೆದಿದ್ದ ಧ್ಬಜವನ್ನು ಪ್ರದರ್ಶನ ಮಾಡಿದವು.


