ಬದ್ರಿನಾಥ್ -ಕೇದಾರನಾಥಕ್ಕೆ ಮುಕೇಶ್ ಅಂಬಾನಿ ಭೇಟಿ, 10 ಕೋಟಿ ರೂ ದೇಣಿಗೆ ನೀಡಿದ್ದಾರೆ. ಪ್ರತಿ ವರ್ಷ ಎರಡೂ ದೇವಸ್ಥಾನಗಳಿಗೆ ಬೇಟಿ ನೀಡುವ ಮುಕೇಶ್ ಅಂಬಾನಿ ಈ ಬಾರಿಯೂ ಭೇಟಿ ನೀಡಿ ದೇಣಿಗೆ ನೀಡಿದ್ದಾರೆ.
India News Live: ಬದ್ರಿನಾಥ್ -ಕೇದಾರನಾಥಕ್ಕೆ ಮುಕೇಶ್ ಅಂಬಾನಿ ಭೇಟಿ, 10 ಕೋಟಿ ರೂ ದೇಣಿಗೆ

ನವದೆಹಲಿ (ಅ.10): ರಾಜಕೀಯವಾಗಿ ಅತ್ಯಂತ ಮಹತ್ವದ್ದಾಗಿರುವ ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯ ಪಕ್ಷಗಳ ಭರವಸೆ ದಿನೇದಿನೇ ಪರಾಕಾಷ್ಟೆ ತಲುಪುತ್ತಿದೆ. ಚುನಾವಣೆಯಲ್ಲಿ ಇಂಡಿಯಾ ಕೂಟ ಗೆದ್ದರೆ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುತ್ತದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಘೋಷಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 10th October: ಬದ್ರಿನಾಥ್ -ಕೇದಾರನಾಥಕ್ಕೆ ಮುಕೇಶ್ ಅಂಬಾನಿ ಭೇಟಿ, 10 ಕೋಟಿ ರೂ ದೇಣಿಗೆ
India News Live 10th October: ಅಮಿರ್ ಮುಟ್ಟಾಖಿ ಭಾರತ ಭೇಟಿ ಬೆನ್ನಲ್ಲೇ ಆಫ್ಘಾನಿಸ್ತಾನ ನಂ.1 ಶತ್ರು ಎಂದು ಘೋಷಿಸಿದ ಪಾಕಿಸ್ತಾನ
ಅಮಿರ್ ಮುಟ್ಟಾಖಿ ಭಾರತ ಭೇಟಿ ಬೆನ್ನಲ್ಲೇ ಆಫ್ಘಾನಿಸ್ತಾನ ನಂ.1 ಶತ್ರು ಎಂದು ಘೋಷಿಸಿದ ಪಾಕಿಸ್ತಾನ, ಭಾರತದ ನಡೆ ವಿರುದ್ಧ ಆತಂಗೊಂಡಿರುವ ಪಾಕಿಸ್ತಾನಕ್ಕೆ ಇತ್ತ ಆಫ್ಘಾನಿಸ್ತಾನವೂ ಗುನ್ನ ಇಟ್ಟಿದೆ. ತಾಲಿಬಾನ್ ಸಚಿವ ಭಾರತ ಭೇಟಿ ಬೆನ್ನಲ್ಲೇ ಆಫ್ಘಾನ್ ನಂ.1 ಶತ್ರು ರಾಷ್ಟ್ರ ಎಂದು ಘೋಷಿಸಿದೆ.
India News Live 10th October: ಝೋಹೋ to ಝಿರೋಧ, ಭಾರತದ ಯಶಸ್ವಿ ಉದ್ಯಮಿಗಳ ಹಿಂದಿದೆ Z ಸೀಕ್ರೆಟ್
ಝೋಹೋ to ಝಿರೋಧ, ಭಾರತದ ಯಶಸ್ವಿ ಉದ್ಯಮಿಗಳ ಹಿಂದಿದೆ Z ಸೀಕ್ರೆಟ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಭಾರತದ ಹಲವು ಸ್ಟಾರ್ಟ್‌ಅಪ್, ಉದ್ಯಮಗಳು ಹೆಸರು ಝೆಡ್‌ನಿಂದ ಆರಂಭಗೊಳ್ಳುತ್ತಿದೆ. ಹಾಗಾದರೆ ಭಾರತದಲ್ಲಿ ಯಶಸ್ಸು A ನಿಂದ ಆರಂಭಗೊಳ್ಳುತ್ತಿಲ್ಲವೇ?
India News Live 10th October: ಗೂಗಲ್ ಎಲ್ಲಿಂದ ಬೇಕಾದರೂ ಕೆಲಸ ನೀತಿಯಲ್ಲಿ ಮಹತ್ವದ ಬದಲಾವಣೆ, ಹೊಸ ರೂಲ್ಸ್ ಜಾರಿ
ಗೂಗಲ್ ಎಲ್ಲಿಂದ ಬೇಕಾದರೂ ಕೆಲಸ ನೀತಿಯಲ್ಲಿ ಮಹತ್ವದ ಬದಲಾವಣೆ, ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಕೋವಿಡ್ ಸಮಯದಲ್ಲಿ ಜಾರಿಗೆ ಬಂದಿದ್ದ ವರ್ಕ್ ಫ್ರಮ್ ಎನಿವೇರ್ ನೀತಿಯಲ್ಲಿ ಆಗಿರುವ ಬದಲಾವಣೆ ಏನು?
India News Live 10th October: ಕೊಹ್ಲಿ- ರೋಹಿತ್ 2027ರ ವಿಶ್ವಕಪ್ ಆಡ್ತಾರಾ? ಖಡಕ್ ಉತ್ತರ ಕೊಟ್ಟ ಶುಭ್‌ಮನ್ ಗಿಲ್
ನವದೆಹಲಿ: ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ರೋಹಿತ್ ಶರ್ಮಾ ಕೆಳಗಿಳಿಸಿ ಶುಭ್‌ಮನ್ ಗಿಲ್‌ಗೆ ಭಾರತ ಏಕದಿನ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇದರ ಬೆನ್ನಲ್ಲೇ ರೋಹಿತ್-ಕೊಹ್ಲಿ ಕ್ರಿಕೆಟ್ ಬದುಕು ಮುಗಿಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಈ ಬಗ್ಗೆ ಗಿಲ್ ಖಡಕ್ ಉತ್ತರ ನೀಡಿದ್ದಾರೆ.
India News Live 10th October: ವಿಂಡೀಸ್ ಬೌಲರ್‌ಗಳನ್ನು ಚೆಂಡಾಡಿದ ಜೈಸ್ವಾಲ್; ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದ ಭಾರತ
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನ, ಯಶಸ್ವಿ ಜೈಸ್ವಾಲ್ ಅವರ ಅಜೇಯ ಶತಕ (173*) ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕದ (87) ನೆರವಿನಿಂದ ಭಾರತ 2 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಿದೆ.
India News Live 10th October: ದೀಪಾವಳಿಗೆ ಮಕ್ಕಳಿಗಾದರೂ ಪಟಾಕಿಗೆ ಅವಕಾಶ ನೀಡಿ, ಸುಪ್ರೀಂಗೆ ಎನ್‌ಸಿಆರ್ ರಾಜ್ಯಗಳ ಮನವಿ
ದೀಪಾವಳಿಗೆ ಮಕ್ಕಳಿಗಾದರೂ ಪಟಾಕಿಗೆ ಅವಕಾಶ ನೀಡಿ, ಸುಪ್ರೀಂಗೆ ಎನ್‌ಸಿಆರ್ ರಾಜ್ಯಗಳ ಮನವಿ ಮಾಡಲಾಗಿದೆ. ಪಟಾಕಿ ನಿಷೇಧ ಕೇವಲ 2 ದಿನಕ್ಕಾದರೂ ತೆರವುಗೊಳಿಸುವಂತೆ ಸಾಲಿಸಿಟರ್ ಜನರಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಜೊತೆ ಮನವಿ ಮಾಡಿದ್ದಾರೆ.
India News Live 10th October: ಕನ್ನಡಿಗ ಐಎಎಸ್ ಅಧಿಕಾರಿ ನಾಗಾರ್ಜುನ್ ಗೌಡ ವಿರುದ್ಧವೇ ಭ್ರಷ್ಟಾಚಾರದ ಆರೋಪ
Iಮಧ್ಯಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಕರ್ನಾಟಕ ಮೂಲದ ನಾಗಾರ್ಜುನ್ ಗೌಡ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಖಂಡ್ವಾ ಜಿಲ್ಲೆ ಪಂಚಾಯತ್ ಸಿಇಒ ಆಗಿರುವ ನಾಗಾರ್ಜುನ್ ಗೌಡ ಅವರ ವಿರುದ್ಧ ಲಂಚ ಪಡೆದು ಸಂಸ್ಥೆಯೊಂದರ ಪರ ಕೆಲಸ ಮಾಡಿದ ಆರೋಪ ಕೇಳಿ ಬಂದಿದೆ.
India News Live 10th October: ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಕೊರಿನಾಗೆ ಸಿಗುವ ಮೊತ್ತವೆಷ್ಟು? ಜೀವನ ಬದಲಿಸಲಿದೆ ಪ್ರೈಝ್
ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಕೊರಿನಾಗೆ ಸಿಗುವ ಮೊತ್ತವೆಷ್ಟು? ಜೀವನ ಬದಲಿಸಲಿದೆ ಪ್ರೈಝ್ ಮೊತ್ತ. 338 ನಾಮಿನೇಶನ್ ಪೈಕಿ ಮರಿಯಾ ಕೊರಿನಾ ಮಚಾಡೋ ನೊಬೆಲ್ ಪ್ರಶಸ್ತಿ ಜೊತೆ ದುಬಾರಿ ಮೊತ್ತ ಪಡೆಯಲಿದ್ದಾರೆ.
India News Live 10th October: IPL 2026 ಹರಾಜಿನ ಕುರಿತಾದ ಮಹತ್ವದ ಅಪ್‌ಡೇಟ್ ಔಟ್; ಆಟಗಾರರ ರೀಟೈನ್‌ಗೆ ಡೆಡ್‌ಲೈನ್ ಫಿಕ್ಸ್!
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇದೀಗ ತಯಾರಿಗಳು ಆರಂಭವಾಗಿದ್ದು, ಮುಂಬರುವ ಐಪಿಎಲ್ ಹರಾಜಿನ ಕುರಿತಂತೆ ಮಹತ್ವದ ಅಪ್‌ಡೇಟ್ ಬಹಿರಂಗವಾಗಿದ್ದು, ಆಟಗಾರರ ರೀಟೈನ್‌ಗೂ ಡೆಡ್ ಲೈನ್ ಫಿಕ್ಸ್ ಅಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
India News Live 10th October: 7 ಯುದ್ದ ನಿಲ್ಲಿಸಿದ ಟ್ರಂಪ್‌ಗೆ ಶಾಕ್, ಮರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪ್ರಶಸ್ತಿ
7 ಯುದ್ದ ನಿಲ್ಲಿಸಿದ ಟ್ರಂಪ್‌ಗೆ ಶಾಕ್, ಮರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಗೊಂಡಿದೆ, ಶಾಂತಿ ಪ್ರಶಸ್ತಿಗಾಗಿ ಭಾರಿ ಪ್ರಯತ್ನಿಸಿದ ಟ್ರಂಪ್‌ಗೆ ತೀವ್ರ ಮುಖಭಂಗವಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಯಾರು?
India News Live 10th October: ಅಫ್ಘಾನಿಸ್ತಾನದ ಕಾಬೂಲ್ ಮೇಲೆ ಏರ್‌ಸ್ಟ್ರೈಕ್ ಮಾಡಿದ ಪಾಕಿಸ್ತಾನ!
Pakistan Airstrikes Kabul Targeting TTP ಪಾಕಿಸ್ತಾನವು ಕಾಬೂಲ್‌ನಲ್ಲಿ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗುರಿಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಇದರಲ್ಲಿ ಟಿಟಿಪಿ ಮುಖ್ಯಸ್ಥ ಮುಫ್ತಿ ನೂರ್ ವಾಲಿ ಮೆಹ್ಸೂದ್ ಹತ್ಯೆಯಾಗಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
India News Live 10th October: ಡೆಲ್ಲಿ ಟೆಸ್ಟ್ - ವಿಂಡೀಸ್ ಎದುರು ಭರ್ಜರಿ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದ ಯಶಸ್ವಿ ಜೈಸ್ವಾಲ್!
India News Live 10th October: ಮಳೆಗೆ ಮರ್ಲಿನ್ ಮನ್ರೋ ಲಂಗದ ಕೆಳಗೆ ಆಶ್ರಯ ಪಡೆದ ಜನ - ಫೋಟೋ ಭಾರಿ ವೈರಲ್
ಮರ್ಲಿನ್ ಮನ್ರೋ ಐಕಾನಿಕ್ ಪೋಸ್ ಆಗಿರುವ ಒಳಗಿರುವ ಒಳಉಡುಪು ಕಾಣುವಂತೆ ಗಾಳಿಗೆ ಹಾರುವ ಮಿನಿಸ್ಕರ್ಟ್ ಪೋಸ್ ಸರ್ವಕಾಲಕ್ಕೂ ಫೇಮಸ್. ಇದೇ ಪೋಸ್‌ನಲ್ಲಿ ಇರುವ ಅವರ ದೊಡ್ಡ ಪ್ರತಿಮೆಯೊಂದು ಈಗ ದಾರಿಹೋಕರನ್ನು ಮಳೆಯಿಂದ ರಕ್ಷಿಸಿದ್ದು, ಈ ಫೋಟೋ ಭಾರಿ ವೈರಲ್ ಆಗ್ತಿದೆ.
India News Live 10th October: WPL ಆಟಗಾರ್ತಿಯರ ರೀಟೈನ್‌ಗೆ ಡೆಡ್‌ಲೈನ್ ಫಿಕ್ಸ್; ಆರ್‌ಸಿಬಿ ಯಾರನ್ನೆಲ್ಲಾ ಉಳಿಸಿಕೊಳ್ಳುತ್ತೆ?
ಮುಂಬೈ: ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮೊದಲು ಆಟಗಾರ್ತಿಯರ ರೀಟೈನ್ ಮಾಡಿಕೊಳ್ಳಲು ಡೆಡ್‌ಲೈನ್ ನೀಡಲಾಗಿದೆ. ಆರ್‌ಸಿಬಿ ಯಾರನ್ನು ಯಾರನ್ನು ರೀಟೈನ್ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ.
India News Live 10th October: ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ - ಎಸ್‌ಐಟಿಯಿಂದ ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿಯ ಬಂಧನ
ಸಿಂಗಾಪುರದಲ್ಲಿ ಸಾವಿಗೀಡಾದ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಸಾವು ಪ್ರಕರಣ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಸೋದರ ಸಂಬಂಧಿ, ಸಹ ಗಾಯಕರು, ಬ್ಯಾಂಡ್‌ಮೇಟ್‌ಗಳು, ಕಾರ್ಯಕ್ರಮ ಸಂಘಟಕರ ಬಂಧನದ ನಂತರ ಈಗ ಜುಬೀನ್ ಗಾರ್ಗ್ ಅವರ ಭದ್ರತಾ ಸಿಬ್ಬಂದಿಯ ಬಂಧನವಾಗಿದೆ.
India News Live 10th October: ಟೆಸ್ಲಾ ಮಾಡೆಲ್ Y ಕಾರು ಖರೀದಿಸಿದ ರೋಹಿತ್ ಶರ್ಮಾ; ಏನಿದರ ವಿಶೇಷತೆ ಗೊತ್ತಾ?
ಭಾರತದ ಸ್ಟಾರ್ ಕ್ರಿಕೆಟಿಗ ರೋಹಿತ್ ಶರ್ಮಾ ಟೆಸ್ಲಾ ಕಾರು ಖರೀದಿಸಿದ್ದಾರೆ. ಹಿಟ್‌ಮ್ಯಾನ್ ಖರೀದಿಸಿದ ಟೆಸ್ಲಾ ಮಾಡೆಲ್ Y ಕಾರು ಮತ್ತು ಅದರ ನಂಬರ್ ಪ್ಲೇಟ್ ಬಹಳ ವಿಶೇಷವಾಗಿದೆ.
India News Live 10th October: ಸಾವಿನಿಂದ ಜಸ್ಟ್ ಮಿಸ್ - ಕಾರಿನ ಡ್ಯಾಶ್‌ಕ್ಯಾಮ್ ವೀಡಿಯೋ ಭಾರಿ ವೈರಲ್
Boulders Roll Down on Car:ಹಿಮಾಚಲ ಪ್ರದೇಶದ ರಸ್ತೆಯೊಂದರಲ್ಲಿ ವಾಹನ ಚಾಲನೆ ಮಾಡುತ್ತಿದ್ದಾಗ ಬಂಡೆಯೊಂದು ವಾಹನದ ಮುಂದೆಯೇ ಉರುಳಿ ಹೋದಂತಹ ಘಟನೆ ನಡೆದಿದ್ದು, ಈ ದೃಶ್ಯ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
India News Live 10th October: ದಕ್ಷಿಣ ಆಫ್ರಿಕಾ ಬೌಲರ್ ಚೆಂಡಾಡಿದ ರಿಚಾ ಘೋಷ್ ಯಾರು? ಈಕೆ ಹಿನ್ನಲೆ ಏನು?
ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಎದುರು ಸ್ಪೋಟಕ 94 ರನ್ ಚಚ್ಚಿದ ರಿಚಾ ಘೋಷ್ ಯಾರು? ಆಕೆಯ ಹಿನ್ನೆಲೆ ಏನು ಎನ್ನುವುದನ್ನು ನೋಡೋಣ ಬನ್ನಿ.
India News Live 10th October: ಗ್ಯಾರಂಟಿ ಪರಾಕಾಷ್ಠೆ: ಬಿಹಾರ ಪ್ರತಿ ಮನೆಗೂ ಸರ್ಕಾರಿ ಹುದ್ದೆಯ ಆಫರ್!
ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊತ್ತಿನಲ್ಲೇ ರಾಜಕೀಯ ಪಕ್ಷಗಳ ಭರವಸೆ ದಿನೇದಿನೇ ಪರಾಕಾಷ್ಠೆ ತಲುಪುತ್ತಿದೆ. ಚುನಾವಣೆಯಲ್ಲಿ ಇಂಡಿಯಾ ಕೂಟ ಗೆದ್ದರೆ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುತ್ತದೆ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಘೋಷಿಸಿದ್ದಾರೆ.