ದೀಪಾವಳಿಗೆ ಮಕ್ಕಳಿಗಾದರೂ ಪಟಾಕಿಗೆ ಅವಕಾಶ ನೀಡಿ, ಸುಪ್ರೀಂಗೆ ಎನ್‌ಸಿಆರ್ ರಾಜ್ಯಗಳ ಮನವಿ ಮಾಡಲಾಗಿದೆ. ಪಟಾಕಿ ನಿಷೇಧ ಕೇವಲ 2 ದಿನಕ್ಕಾದರೂ ತೆರವುಗೊಳಿಸುವಂತೆ ಸಾಲಿಸಿಟರ್ ಜನರಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಜೊತೆ ಮನವಿ ಮಾಡಿದ್ದಾರೆ.
ನವದೆಹಲಿ (ಅ.10) ದೇಶದ ಹಲವೆಡೆ ಪಟಾಕಿ ನಿಷೇಧ ಮಾಡಲಾಗಿದೆ. ದೀಪಾವಳಿ ಹಬ್ಬಕ್ಕೆ ಸಿಡಿಸುವ ಪಟಾಕಿಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ ಅನ್ನೋ ಕಾರಣಕ್ಕೆ ನಿಷೇಧ ಮಾಡಲಾಗಿದೆ. ಪ್ರಮುಖವಾಗಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಾಯು ಮಾಲಿನ್ಯ ವಿಪರೀತವಾಗಿರುವ ಕಾರಣ ಪಟಾಕಿ ನಿಷೇಧ ಮಾಡಲಾಗಿದೆ. ಇದೀಗ ದೆಹಲಿ ಸೇರಿದಂತೆ ರಾಷ್ಟ್ರ ರಾಜಧಾನಿ ಸುತ್ತ ಮುತ್ತಲಿನ ರಾಜ್ಯಗಳು ಕನಿಷ್ಢ 2 ದಿನ ಮಕ್ಕಳು ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಲು ಸುಪ್ರೀಂ ಕೋರ್ಟ್ ಅವಕಶ ಮಾಡಿಕೊಡಬೇಕು ಎಂದು ಮನವಿ ಮಾಡಿದೆ.
ಚೀಫ್ ಜಸ್ಟೀಸ್ ಬಿಆರ್ ಗವಾಯಿ ಮುಂದೆ ಮನವಿ
ದೆಹಲಿ ಸೇರಿದಂತೆ ರಾಜಧಾನಿ ವ್ಯಾಪ್ತಿ ರಾಜ್ಯಗಳ ಪರವಾಗಿ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅರ್ಜಿ ಸಲ್ಲಿಸಿ ವಾದ ಮುುಂದಿಟ್ಟಿದ್ದದಾರೆ. ಸುಪ್ರೀಂ ಕೋರ್ಟ್ ಚೀಫ್ ಜಸ್ಟೀಸ್ ಬಿಆರ್ ಗವಾಯಿ ಮುಂದೆ ಮನವಿ ಮಾಡಿದ್ದಾರೆ. ಕನಿಷ್ಠ ಮಕ್ಕಳಿಗೆ ಹಸಿರು ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಲು ಅವಕಾಶ ನೀಡಬೇಕು. ಪರಿಸರಕ್ಕೆ ಹೆಚ್ಚು ಮಾಲಿನ್ಯ ಮಾಡದ ಹಸಿರು ಪಟಾಕಿ ಮೂಲಕ ಕನಷ್ಠ 2 ದಿನ ಮಕ್ಕಳು ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ತುಷಾರ್ ಮೆಹ್ತ ಮನವಿ ಮಾಡಿದ್ದರೆ.
ರಾತ್ರಿ 8 ಗಂಟೆಯಿಂದ10 ಗಂಟೆ ವರೆಗೆ ಮಾತ್ರ
ದೀಪಾವಳಿ ಹಬ್ಬದ ಕೇವಲ 2 ದಿನ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಹಸಿರು ಪಟಾಕಿ ಸಿಡಿಸಲು ಅಕಾಶ ನೀಡಬೇಕು. ಇದು ಮಕ್ಕಳು ತಮ್ಮ ಹಬ್ಬ ಆಚರಿಸಿ ಸಂಭ್ರಮಿಸಲು ಅವಕಾಶ ಕೊಡಬೇಕು ಎಂದು ಮನವಿ ಮಾಡಲಾಗಿದೆ. ಕೆಲ ನಿರ್ಬಂಧನೆ ಮೂಲಕ ಅವಕಾಶ ನೀಡಬೇಕು. ಈ ಕುರಿತು ಸರ್ಕಾರಗಳು ರೂಪುರೇಶೆ ಸಿದ್ದಪಡಿಸಿದೆ. ಅದರಂತೆ ಕನಿಷ್ಠ ಸಮಯಕ್ಕೆ ಪಟಾಕಿ ಸಿಡಿಸಿ ಹಬ್ಬ ಆಚರಿಸಲು ಅವಕಾಶ ಕೊಡಿ ಎಂದು ತುಷಾರ್ ಮೆಹ್ತ ಮನವಿ ಮಾಡಿದ್ದಾರೆ.
ಲೈಸೆನ್ಸ್ ಟ್ರೇಡರ್ ಮೂಲಕ ಮಾರಾಟ
ಕೇವಲ ಲೈಸೆನ್ಸ್ ಟ್ರೇಡರ್ ಮೂಲಕ ಹಸಿರು ಪಟಾಕಿ ಮಾರಾಟ ಮಾಡಲು ಅವಕಾಶ ನೀಡಬೇಕು. ಇದು ಕೇವಲ ಲೈಸೆನ್ಸ್ ಟ್ರೇಡರ್ ಮೂಲಕ ಮಾರಾಟ ಮಾಡಿದರೆ ಎಲ್ಲವೂ ನಿಯಮದ ಚೌಕಟ್ಟಿನಲ್ಲಿ ಇರಲಿದೆ. ಬ್ಯಾಲೆನ್ಸ್ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಬೇಕು ಎಂದು ತುಷಾರ್ ಮೆಹ್ತ ಮನವಿ ಮಾಡಿದ್ದಾರೆ.
