ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕಳವಳಕಾರಿ ಮಟ್ಟಕ್ಕೆ ಕುಸಿದಿರುವ ಕಾರಣ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ (ಜಿಆರ್‌ಎಪಿ) 4ನೇ ಹಂತದ ಅಡಿಯಲ್ಲಿ ಮಾಲಿನ್ಯ ತಡೆ ನಿರ್ಬ೦ಧಗಳನ್ನು ಶನಿವಾರ ಜಾರಿಗೊಳಿಸಲಾಗಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕಳವಳಕಾರಿ ಮಟ್ಟಕ್ಕೆ ಕುಸಿದಿರುವ ಕಾರಣ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ (ಜಿಆರ್‌ಎಪಿ) 4ನೇ ಹಂತದ ಅಡಿಯಲ್ಲಿ ಮಾಲಿನ್ಯ ತಡೆ ನಿರ್ಬ೦ ಧಗಳನ್ನು ಶನಿವಾರ ಜಾರಿಗೊಳಿಸಲಾಗಿದೆ. ಇದರನ್ವಯ ಅನಗತ್ಯ ಕಟ್ಟಡ ನಿರ್ಮಾಣ, ಕಲ್ಲು ಕ್ವಾರಿ, ಗಣಿಗಾರಿಕೆ, ಹಳೆಯ ಡೀಸೆಲ್ ವಾಹನಗಳ ಚಾಲನೆ ಸೇರಿ ಹಲವು ಚಟುವಟಿಕೆಗಳಿಗೆ ನಿಷೇಧ ಬಿದ್ದಿದೆ.

ಶನಿವಾರ ದೆಹಲಿಯಲ್ಲಿ ಸರಾಸರಿ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) 431 ಅಂಕ ದಾಖಲಾಗಿದೆ. ಇದು 'ಗಂಭೀರ' ವಿಭಾಗದಲ್ಲಿ ಬರುತ್ತದೆ.

ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಭಾರತದ ನಂ.1 ಪ್ರಭಾವಿ ಮಹಿಳೆ: ವಿಶ್ವದ ಪ್ರಭಾವಿಗಳಲ್ಲಿ ಭಾರತದ ಮೂವರಿಗೆ ಸ್ಥಾನ

  • ವಾಜಿರ್‌ಪುರ (445) ಅತಿ ಹೆಚ್ಚು ವಾಯುಮಾಲಿನ್ಯ ಸೂಚ್ಯಂಕವನ್ನು ದಾಖಲಿಸಿದೆ,.
  • ನಂತರದ ಸ್ಥಾನದಲ್ಲಿ ವಿವೇಕ್ ವಿಹಾರ್ (444) 
  •  ಜಹಾಂಗೀರ್‌ಪುರಿ (442)
  • ಆನಂದ್ ವಿಹಾರ್ (439), 
  • ಅಶೋಕ್ ವಿಹಾರ್ (437)
  • ರೋಹಿಣಿ (437) ಕೂಡ ತೀವ್ರ ಮಾಲಿನ್ಯ ವರದಿ ಮಾಡಿವೆ. ದಟ್ಟವಾದ ವಿಷಕಾರಿ ಹೊಗೆ ಆವರಿಸಿದ್ದು, ಸಷ್ಟವಾದ ಗೋಚರತೆಯೇ ಇಲ್ಲದಾಗಿದೆ.

ಯಾವೆಲ್ಲಾ ಕೆಲಸಗಳಿಗೆ ನಿರ್ಬಂಧ ಜಾರಿ?

ಹೊಸ ನಿಯಮಗಳ ಪ್ರಕಾರ, ಅನಗತ್ಯ ಕಟ್ಟಡಗಳ ನಿರ್ಮಾಣ-ನೆಲಸಮ, ಕಲ್ಲು ಕ್ವಾರಿ, ಗಣಿಗಾರಿಕೆ ಮೊದಲಾದ ಕೆಲಸಗಳನ್ನು ನಿಷೇಧಿಸಲಾಗಿದೆ. ಹಳೆಯ ಡೀಸೆಲ್ ಚಾಲಿತ ಸರಕು ವಾಹನಗಳು ದೆಹಲಿ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ. 5ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಕೆಲವೇ ದಿನ ಶಾಲೆಗೆ ಬರುವಂತೆ ಸೂಚಿಸಲಾಗಿದೆ. ಶೇ.50ರಷ್ಟು ಉದ್ಯೋಗಿಗಳು ಮಾತ್ರ ಕಚೇರಿಗಳಿಗೆ ಬರುವಂತೆ, ಉಳಿದವರು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಲಾಗಿದೆ.

ಇದನ್ನೂ ಓದಿ: 

ಟ್ರಂಪ್ ನಿರ್ಧಾರಕ್ಕೆ 20 ರಾಜ್ಯಗಳ ಸೆಡ್ಡು: ಅಮೆರಿಕದಲ್ಲೇ ಶುರುವಾಯ್ತು ಸಮರ!

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎಕ್ಯುಐ

  •  0-50ರ ವರೆಗೆ ಉತ್ತಮ
  •  51-100 ಸಮಾಧಾನಕರ
  •  101- 200 ಮಧ್ಯಮ
  •  201-300 ಕಳಪೆ 
  •  301-400 ತೀರಾ ಕಳಪೆ
  •  401-500 ಗಂಭೀರ ಎಂದು ಗುರುತಿಸಿದೆ. ದಿಲ್ಲಿ ಅಂತಿಮ ಹಂತದಲ್ಲಿದೆ.