ಡೋನಾಲ್ಡ್ ಟ್ರಂಪ್ ಕಸರತ್ತು ವ್ಯರ್ಥ, ಮರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಗೊಂಡಿದೆ, ಶಾಂತಿ ಪ್ರಶಸ್ತಿಗಾಗಿ ಭಾರಿ ಪ್ರಯತ್ನಿಸಿದ ಟ್ರಂಪ್‌ಗೆ ತೀವ್ರ ಮುಖಭಂಗವಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಯಾರು?
ವಾಶಿಂಗ್ಟನ್ (ಅ.10) ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾರಿ ಕಸರತ್ತು ನಡೆಸಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ನಿರಾಸೆಯಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟಗೊಂಡಿದ್ದು, ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವದ ಕ್ರಾಂತಿ ಮಾಡಿ ಸಾಮಾನ್ಯರಿಗೂ ಮೂಲಭೂತ ಹಕ್ಕು ಸಿಗುವಂತೆ ಮಾಡಿದ ಮರಿಯಾ ಕೊರಿನಾ ಮಚಾಡೋಗೆ ಪ್ರಶಸ್ತಿ ಘೋಷಣೆಯಾಗಿದೆ. ಇದೇ ಪ್ರಶಸ್ತಿಗಾಗಿ ಹಗಲಿರುಳು ಪ್ರಯತ್ನಿಸಿದ ಹಾಗೂ ಇದಕ್ಕಾಗಿ ಮಾಧ್ಯಮಗಳ ಮುಂದೆ ಬಿಲ್ಡಪ್ ಕೊಟ್ಟಿದ್ದ ಡೋನಾಲ್ಡ್ ಟ್ರಂಪ್‌ಗೆ ಭಾರಿ ಹಿನ್ನಡೆಯಾಗಿದೆ.
ಅಧಿಕಾರಶಾಹಿಯಿಂದ ಪ್ರಜಾಪ್ರಭುತ್ವದೆಡೆಗೆ
ವೆನೆಜುವೆಲಾಯದಲ್ಲಿ ಅಧಿಕಾರಿಶಾಹಿ ಆಡಳಿತಿಂದ ಪ್ರಜಾಪ್ರಭುತ್ವದೆಡೆಗೆ ಬದಲಾವಣೆಯಲ್ಲಿ ಮರಿಯಾ ಕೊರಿನಾ ಮಚಾಡೋ ಪಾತ್ರ ಪ್ರಮುಖವಾಗಿದೆ. ವೆನೆಜುವೆಲಾದಲ್ಲಿ ಜನ ಸಾಮಾನ್ಯರಿಗೆ ಮೂಲಭೂತ ಹಕ್ಕು ಸಿಗುವಂತೆ ಮಾಡುವಲ್ಲಿ ಮರಿಯಾ ಸತತ ಹೋರಾಟ ಮಾಡಿದ್ದಾರೆ. ಶಾಂತಿಯುತ ಹೋರಾಟದ ಮೂಲಕ ದೇಶದ ಜನರಿಗೆ ಹಕ್ಕುಗಳನ್ನು ಸಿಗುವಂತೆ ಮಾಡಿದ ಹೋರಾಟಗಾರ್ತಿಗೆ ಇದೀಗ ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ.
ನೊಬೆಲ್ ಶಾಂತಿ ಪ್ರಶಸ್ತಿಗೆ 338 ನಾಮಿನೇಷನ್
ಈ ಬಾರಿ ನೊಬೆಲ್ ಶಾಂತಿ ಪ್ರಶಶ್ತಿಗೆ ಬರೋಬ್ಬರಿ 338 ನಾಮಿನೇಷನ್ ಸ್ವೀಕತಗೊಂಡಿತ್ತು. ಇದರಲ್ಲಿ 244 ವೈಯುಕ್ತಿಕ ಹಾಗೂ 94 ಸಂಘ ಸಂಸ್ಥೆಗಳ ಅರ್ಜಿ ಸ್ವೀಕೃತವಾಗಿತ್ತು. ಸಮಿತಿ ಅಳೆದು ತೂಗಿ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ನೊಬೆಲ್ ಪ್ರಶಸ್ತಿ ಘೋಷಿಸಿದೆ. ವೆನೆಜುವೆಲಾದ ವಿರೋಧ ಪಕ್ಷ ಲೀಡರ್ ಮಚಾಡೋ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
