ಬದ್ರಿನಾಥ್ -ಕೇದಾರನಾಥಕ್ಕೆ ಮುಕೇಶ್ ಅಂಬಾನಿ ಭೇಟಿ, 10 ಕೋಟಿ ರೂ ದೇಣಿಗೆ ನೀಡಿದ್ದಾರೆ. ಪ್ರತಿ ವರ್ಷ ಎರಡೂ ದೇವಸ್ಥಾನಗಳಿಗೆ ಬೇಟಿ ನೀಡುವ ಮುಕೇಶ್ ಅಂಬಾನಿ ಈ ಬಾರಿಯೂ ಭೇಟಿ ನೀಡಿ ದೇಣಿಗೆ ನೀಡಿದ್ದಾರೆ.

ಬದ್ರಿನಾಥ (ಅ.10) ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅಪಾರ ದೈವ ಭಕ್ತ. ದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಇಷ್ಟೇ ಅಲ್ಲ ಭೇಟಿ ನೀಡಿದ ಬಹುತೇಕ ದೇವಸ್ಥಾನಗಳಿಗೆ ದೇಣಿಗೆ ನೀಡುತ್ತಾರೆ. ಇದೀಗ ಪ್ರತಿ ವರ್ಷದಂತೆ ಈ ವರ್ಷವೂ ಮುಕೇಶ್ ಅಂಬಾನಿ ಬದ್ರಿನಾಥ ಹಾಗೂ ಕೇದಾರನಾಥ ದೇವಸ್ಥಾಗಳಿಗೆ ಬೇಟಿ ನೀಡಿದ್ದಾರೆ. ಹೆಲಿಕಾಪ್ಟರ್ ಮೂಲಕ ದೇವಸ್ಥಾನಕ್ಕೆ ಆಗಮಿಸಿದ ಮುಕೇಶ್ ಅಂಬಾನಿಯನ್ನು ದೇವಸ್ಥಾನದ ಸಮಿತಿ ಸದಸ್ಯರು ಸ್ವಾಗತಿಸಿದ್ದಾರೆ. ದೇವರ ಬದ್ರಿನಾಥ ಹಾಗೂ ಕೇದಾರನಾಥನ ದರ್ಶನ ಪಡೆದ ಮುಕೇಶ್ ಅಂಬಾನಿ 10 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

20 ವರ್ಷಗಳಿಂದ ಕೇದಾರನಾಥ -ಬದ್ರಿನಾಥಕ್ಕೆ ಅಂಬಾನಿ ಭೇಟಿ

ಭಾರತದ ಹಿಂದೂ ಧಾರ್ಮಿಕ ಕ್ಷೇತ್ರಗಳ ಪೈಕಿ ಕೇದರನಾಥ ಹಾಗೂ ಬದ್ರಿನಾಥ ಅತ್ಯಂತ ಪವಿತ್ರ ಕ್ಷೇತ್ರ. ಕಳೆದ 20 ವರ್ಷಗಳಿಂದ ಮುಕೇಶ್ ಅಂಬಾನಿ ಈ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪ್ರತಿ ವರ್ಷ ಬದ್ರಿನಾಥ್ -ಕೇದಾರನಾಥ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ಹಲವು ಬಾರಿ ಕುಟುಂಬ ಸಮೇತ ಬೇಟಿ ನೀಡಿದ್ದಾರೆ.

ಚಾರ್‌ಧಾಮ ಯಾತ್ರೆಗೆ ಎಲ್ಲಾ ನೆರವು, ಅಂಬಾನಿ ಭರವಸೆ

ಬದ್ರಿನಾಥ್ -ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಸಮಿತಿ ಸದಸ್ಯರು ಹಾಗೂ ಭಕ್ತರ ಜೊತೆ ಮಾತನಾಡಿದ ಮುಕೇಶ್ ಅಂಬಾನಿ, ಇಲ್ಲಿ ಅಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಕಲ್ಪಿಸಲಾಗಿದೆ. ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಹೀಗಾಗಿ ಮುಂದಿನ 10 ವರ್ಷಗಳಲ್ಲಿ ಭಕ್ತರ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ಇದೇ ವೇಳೆ ಚಾರ್‌ಧಾಮ ಯಾತ್ರೆಗೆ ಯಾವುದೇ ನೆರವು ನೀಡಲು ಸಿದ್ಧ ಎಂದು ಮುಕೇಶ್ ಅಂಬಾನಿ ಭರವಸೆ ನೀಡಿದ್ದಾರೆ.

ಬದ್ರಿನಾಥ್ -ಕೇದಾರನಾಥ ದೇಗುಲಕ್ಕೆ ಅಂಬಾನಿ ಹಲವು ಕೊಡುಗೆ

ಪ್ರತಿ ವರ್ಷ ಮುಕೇಶ್ ಅಂಬಾನಿ ಬದ್ರಿನಾಥ್ -ಕೇದಾರನಾಥ ದೇಗುಲಕ್ಕೆ ಬೇಟಿ ನೀಡುತ್ತಿದ್ದಾರೆ. ಪ್ರತಿ ವರ್ಷ ಕೋಟಿ ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಎರಡೂ ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯ, ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಅಂಬಾನಿ ಕೊಡುಗೆ ಅಪಾರವಿದೆ. ಈ ಬಾರಿ ಎರಡು ದೇಗುಲಕ್ಕೆ 10 ಕೋಟಿ ರೂಪಾಯಿ ದೇಣಿಗೆ ನೀಡಿ ನೆರವಾಗಿದ್ದಾರೆ.

ಮೇ 4ರಂದು ತೆರೆದ ಬದ್ರಿನಾಥ ಧಾಮವನ್ನು ನವೆಂಬರ್ 25, ಮಧ್ಯಾಹ್ನ 2.56ಕ್ಕೆ ಮುಚ್ಚಲಾಗುತ್ತದೆ. ಇತ್ತ ಕೇದರನಾಥ ಧಾಮ ಅಕ್ಟೋಬರ್ 23ರಂಂದು ಮುಚ್ಚಲಾಗುತ್ತದೆ. ಚಳಿ ಹಾಗೂ ಹಿಮದ ಕಾರಣದಿಂದ ಈ ಸಮಯದಲ್ಲಿ ಬಾಗಿಲು ಮುಚ್ಚಲಾಗುತ್ತದೆ.