ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
ಭಾರತದ ಬಳಿಯೂ ಇದೆ.. ಹಾರ್ಮುಜ್ನಂಥ ಬ್ರಹ್ಮಾಸ್ತ್ರ. ಮಲಕ್ಕಾ ಜಲಸಂಧಿ 900ಕಿ.ಮೀ ಉದ್ದ.. 2.8 ಕಿ.ಮೀ ಅಗಲ.. ವಿಶ್ವದ 40% ಸರಕುಗಳ ವ್ಯಾಪಾರ ಮಾರ್ಗ.ಈ ಜಲಸಂಧಿಗೆ ಭಾರತವೇ ಬಾಸ್.. ಕೆಣಕಿದವರು ಖಲ್ಲಾಸ್
ಅಮೆರಿಕ-ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ಯುದ್ಧ ಶುರುಮಾಡಿದ ಮೇಲೆ ಇರಾನ್ ಹಾರ್ಮುಜ್ ಜಲಸಂಧಿಯನ್ನ ಬಂದ್ ಮಾಡಿ ಪ್ರಪಂಚಕ್ಕೆ ಶಾಕ್ ಕೊಟ್ಟಿತ್ತು. ವಿಶ್ವದ ಒಟ್ಟು ಸಮುದ್ರ ಮಾರ್ಗದ ತೈಲ ವ್ಯಾಪಾರದ ಸುಮಾರು 20 ರಿಂದ 30% ಈ ಮಾರ್ಗದ ಮೂಲಕವೇ ನಡೀತಾ ಇದ್ದು, ಇರಾನ್ ಈ ಜಲಸಂಧಿಯನ್ನ ಬಂದ್ ಮಾಡಿದ್ರಿಂದ ಇಡೀ ಜಗತ್ತಿನ ಅರ್ಥವ್ಯವಸ್ಥೆಯೇ ಅಲ್ಲೋಲ ಕಲ್ಲೋಲ ಆಗೋಯ್ತು. ಈ ಹಾರ್ಮುಜ್ನ ಇರಾನ್ ಒಂದು ಬ್ರಹ್ಮಾಸ್ತ್ರದಂತೆ ಬಳಕೆ ಮಾಡ್ತು. ಭಾರತದ ಬಳಿಯೂ ಇಂಥದ್ದೊಂದು ಬ್ರಹ್ಮಾಸ್ತ್ರ ಇದೆ. ಅದುವೇ ಮಲಕ್ಕಾ ಜಲಸಂಧಿ.