12:00 AM (IST) May 11

ಈ ನಟಿಯ ತಂದೆ ಸೇನಾಧಿಕಾರಿಯಾಗಿದ್ದರು, ಭಯೋತ್ಪಾದಕರು ಅಪಹರಿಸಿ ಕ್ರೂರವಾಗಿ ಕೊಂದರು!

ನಟಿ ನಿಮ್ರತ್ ಕೌರ್ ಅವರ ತಂದೆ ಮೇಜರ್ ಭೂಪೇಂದ್ರ ಸಿಂಗ್, 1994 ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹತ್ಯೆಯಾದರು. ಈ ದುರಂತ ಘಟನೆಯ ಬಗ್ಗೆ ನಿಮ್ರತ್ ಕೌರ್ ಅವರ ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಂದೆಯ ಸಾವಿನ ನಂತರವೂ ಧೈರ್ಯದಿಂದ ಜೀವನ ನಡೆಸುತ್ತಿರುವ ನಿಮ್ರತ್, ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಪೂರ್ತಿ ಓದಿ
11:13 PM (IST) May 10

Fact Check: ನಕಲಿ ಮಿಲಿಟರಿ ಖಾತೆಗಳ ಬಗ್ಗೆ ಎಚ್ಚರ, ವ್ಯೋಮಿಕಾ ಸಿಂಗ್, ಸೋಫಿಯಾ ಖುರೇಷಿ ಎಕ್ಸ್‌ ಖಾತೆ ಹೊಂದಿದ್ದಾರೆಯೇ?

ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಹೆಸರಿನಲ್ಲಿ ನಕಲಿ 'ಎಕ್ಸ್' ಖಾತೆಗಳು ಪತ್ತೆಯಾಗಿವೆ. ಸಾರ್ವಜನಿಕರು ಈ ಖಾತೆಗಳಿಂದ ಬರುವ ಪೋಸ್ಟ್‌ಗಳೊಂದಿಗೆ ತೊಡಗಿಸಿಕೊಳ್ಳದಂತೆ ಸರ್ಕಾರ ಎಚ್ಚರಿಕೆ ನೀಡಿದೆ.

ಪೂರ್ತಿ ಓದಿ
11:10 PM (IST) May 10

ಪಾಕಿಸ್ತಾನದಿಂದಲೇ ಕದನ ವಿರಾಮ ಉಲ್ಲಂಘನೆ, ಸೇನೆಗೆ ಸಂಪೂರ್ಣ ಫ್ರೀ ಹ್ಯಾಂಡ್: ವಿಕ್ರಂ ಮಿಸ್ರಿ

ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದಿಂದ ಡ್ರೋನ್ ದಾಳಿ ಹಿನ್ನೆಲೆ ಗಡಿ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸೇನೆಗೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ನೀಡಿದೆ.

ಪೂರ್ತಿ ಓದಿ
10:51 PM (IST) May 10

Bigg Boss ಹನುಮಂತನ ಅಣ್ಣನ ಬಳಿ ಇರೋ ಇಂಡಿಯನ್‌ ಕ್ರಿಕೆಟ್‌ ಟೀಂ ಆಟೋಗ್ರಾಫ್‌ ಇರೋ ಬ್ಯಾಟ್!‌ 70 ಕೋಟಿ ಕೊಟ್ರೂ ಕೊಡಲ್ವಂತೆ!

ಬಿಗ್ ಬಾಸ್ ಖ್ಯಾತಿಯ ಹನುಮಂತ ಅವರ ಅಣ್ಣ ಮಾರುತಿ ಕೂಡ ರಿಯಾಲಿಟಿ ಶೋ ಸ್ಪರ್ಧಿ ಎಂಬುದು ಬಹಿರಂಗವಾಗಿದೆ. 2015ರ 'ಹಳ್ಳಿ ಹೈದ ಪ್ಯಾಟೇಗ್ ಬಂದ' ಶೋನಲ್ಲಿ ಮಾರುತಿ ಭಾಗವಹಿಸಿದ್ದರು ಮತ್ತು ಡಾ. ರಾಯ್ ಅವರಿಂದ ವಿಶೇಷ ಕ್ರಿಕೆಟ್ ಬ್ಯಾಟ್ ಉಡುಗೊರೆಯಾಗಿ ಪಡೆದಿದ್ದಾರೆ.

ಪೂರ್ತಿ ಓದಿ
10:32 PM (IST) May 10

'ಇಷ್ಟೆಲ್ಲ ಆದ್ಮೇಲೂ ಭಾರತ...' ಕದನ ವಿರಾಮದ ಬಗ್ಗೆ ಅಜ್ಮೀರ್ ದರ್ಗಾದ ದಿವಾನ ಸೈಯದ್ ನಾಸಿರುದ್ದೀನ್ ಚಿಶ್ತಿ ಸ್ಫೋಟಕ ಹೇಳಿಕೆ!

ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆಯ ಕುರಿತು ಅಜ್ಮೀರ್ ಷರೀಫ್ ದರ್ಗಾದ ದಿವಾನ್ ಸೈಯದ್ ನಾಸಿರುದ್ದೀನ್ ಚಿಶ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಶಾಂತಿಪ್ರಿಯ ರಾಷ್ಟ್ರ, ಆದರೆ ದೇಶದ ಹೆಮ್ಮೆ ಮತ್ತು ಭದ್ರತೆಯ ವಿಷಯಕ್ಕೆ ಬಂದಾಗ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ಪಾಕಿಸ್ತಾನದ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
10:01 PM (IST) May 10

'ಕದನ ವಿರಾಮ ಜಾರಿಯಲ್ಲಿರಲಿ ಅಥವಾ ಇಲ್ಲದಿರಲಿ ಏನೂ ವ್ಯತ್ಯಾಸವಾಗದು, ಪ್ರಧಾನಿ ಮೋದಿಗೆ ಓವೈಸಿ ಪ್ರಶ್ನೆಗಳ ಸುರಿಮಳೆ!

ಪಾಕಿಸ್ತಾನ ಭಯೋತ್ಪಾದನೆಗೆ ತನ್ನ ನೆಲವನ್ನು ಬಳಸುವುದನ್ನು ನಿಲ್ಲಿಸುವವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಶ್ವತ ಶಾಂತಿ ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಕದನ ವಿರಾಮ ಘೋಷಣೆಯ ಬಗ್ಗೆಯೂ ಅವರು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೂರ್ತಿ ಓದಿ
09:56 PM (IST) May 10

ಪಾಕ್‌ನಿಂದ ಸಾಲು ಸಾಲು ಡ್ರೋನ್‌ಗಳು; ಜಮ್ಮು, ಶ್ರೀನಗರ, ಪಠಾಣ್‌ಕೋಟ್, ಜೈಸ್ಲ್ಮೇರ್ ಮತ್ತೆ ಬ್ಲ್ಯಾಕ್‌ಔಟ್‌

ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ನಡೆಸಿದೆ. ಶ್ರೀನಗರದಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಹಲವು ಜಿಲ್ಲೆಗಳಲ್ಲಿ ಗುಂಡಿನ ಚಕಮಕಿ ಮತ್ತು ವೈಮಾನಿಕ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ.

ಪೂರ್ತಿ ಓದಿ
09:41 PM (IST) May 10

ಪುಣ್ಯಕೋಟಿ ಯೋಜನೆಗೆ ಅನುದಾನ ನೀಡುವಂತೆ ಕೇಂದ್ರದ ಮೊರೆ ಹೋದ ಗೋಶಾಲೆಗಳು

ರಾಜ್ಯ ಸರ್ಕಾರದ ಪುಣ್ಯಕೋಟಿ ಯೋಜನೆಗೆ ಅನುದಾನ ಬಾರದೆ ಗೋಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ದಾನಿಗಳ ನೆರವಿನಿಂದ ನಡೆಯುತ್ತಿರುವ ಗೋಶಾಲೆಗಳಿಗೆ ಸರ್ಕಾರದಿಂದ ಸಹಾಯ ಸಿಗದ ಕಾರಣ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ. ಸಿಎಸ್‌ಆರ್ ಫಂಡ್‌ನಿಂದ ಗೋಶಾಲೆಗಳಿಗೆ 2000 ಕೋಟಿ ರೂ. ಮೀಸಲಿಡುವಂತೆ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ.

ಪೂರ್ತಿ ಓದಿ
09:29 PM (IST) May 10

ಕದನ ವಿರಾಮ ಉಲ್ಲಂಘಿಸಿದ ಪಾಕ್; ಶ್ರೀನಗರದಲ್ಲಿ ಭಾರೀ ಸ್ಪೋಟಕ ಸದ್ದು, ಸಿಎಂ ಒಮರ್ ಅಬ್ದುಲ್ಲಾ ಟ್ವೀಟ್!

ಜಾಗತಿಕ ಒತ್ತಡದ ನಡುವೆ ಪಾಕಿಸ್ತಾನ ಕದನ ವಿರಾಮ ಒಪ್ಪಿಕೊಂಡ ಕೆಲವೇ ಗಂಟೆಗಳಲ್ಲಿ ಡ್ರೋನ್ ದಾಳಿ ನಡೆಸಿದೆ. ಭಾರತ ಸೇನಾ ಕಾರ್ಯಾಚರಣೆಗಳ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ದಾಳಿಗಳು ನಡೆದಿವೆ. ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಡ್ರೋನ್ ದಾಳಿಗಳು ವರದಿಯಾಗಿವೆ.

ಪೂರ್ತಿ ಓದಿ
08:47 PM (IST) May 10

ಪತ್ರಿಕೆ ನೋಡಿಯೇ ನನ್ನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ತಿಳಿಯಿತು: ನಟ ಹರೀಶ್ ಕನಾರನ್!

ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ವಿಶೇಷವಾಗಿ ಒಬ್ಬ ವ್ಯಕ್ತಿಯ ಆರೋಗ್ಯದಂತಹ ಸೂಕ್ಷ್ಮ ವಿಷಯಗಳಲ್ಲಿ ಬೇಜವಾಬ್ದಾರಿತನದಿಂದ ವರ್ತಿಸುವುದು ಸರಿಯಲ್ಲ. ಇಂತಹ ವದಂತಿಗಳು ಸಂಬಂಧಪಟ್ಟ ವ್ಯಕ್ತಿಗೆ ಮಾತ್ರವಲ್ಲದೆ, ಅವರ ಇಡೀ ಕುಟುಂಬಕ್ಕೆ..

ಪೂರ್ತಿ ಓದಿ
08:46 PM (IST) May 10

'ಪ್ರಧಾನಿಗಳೇ ಅಮೆರಿಕವನ್ನು ತಂದೆಯಾಗಲು ಬಿಡಬೇಡಿ' ಕದನ ವಿರಾಮ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಯಾರು? ಪಪ್ಪು ಯಾದವ್ ಕಿಡಿ!

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಅಮೆರಿಕದ ಮಧ್ಯಸ್ಥಿಕೆ ವಹಿಸಿದೆ. ಆದರೆ ಟ್ರಂಪ್ ಘೋಷಣೆ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ಪಪ್ಪು ಯಾದವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದವು ಭಾರತದ ಷರತ್ತುಗಳಿಗೆ ಒಳಪಟ್ಟಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪೂರ್ತಿ ಓದಿ
08:42 PM (IST) May 10

ಭಾರತ-ಪಾಕ್ ಕದನ ವಿರಾಮ; ವಿಶ್ವದ ಪ್ರತಿಷ್ಠಿತ ಮಾಧ್ಯಮಗಳ ಹೆಡ್‌ಲೈನ್ ಏನು ಗೊತ್ತಾ?

ಆಪರೇಷನ್ ಸಿಂದೂರದ ನಂತರ ಪಾಕಿಸ್ತಾನ ಭಾರತದ ಮುಂದೆ ತನ್ನ ಸೋಲನ್ನು ಒಪ್ಪಿಕೊಂಡಿದೆ. ಎರಡೂ ದೇಶಗಳ ನಡುವೆ ಯುದ್ಧವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹಾಗಾದರೆ, ವಿಶ್ವದ ಪ್ರಮುಖ ಸುದ್ದಿ ಸಂಸ್ಥೆಗಳು ಏನು ವರದಿ ಮಾಡಿವೆ ಎಂಬುದನ್ನು ನೋಡೋಣ.

ಪೂರ್ತಿ ಓದಿ
08:40 PM (IST) May 10

ಅಯೋಧ್ಯೆಯಲ್ಲಿ ರವಿ ದಾಸರ ಮಂದಿರ ಉದ್ಘಾಟಿಸಿದ ಸಿಎಂ ಯೋಗಿ ಆದಿತ್ಯನಾಥ್

ಸಿಎಂ ಯೋಗಿ ಅಯೋಧ್ಯೆಯಲ್ಲಿ ಸಂತ ರವಿ ದಾಸರ ಮಂದಿರದ ಸುಂದರೀಕರಣ ಮತ್ತು ಹೊಸ ಸತ್ಸಂಗ ಭವನ ಉದ್ಘಾಟಿಸಿದರು. ಪಿಎಂ ಮೋದಿಯವರ ವಿಕಸಿತ ಭಾರತದ ಕನಸು ಸಂತ ರವಿ ದಾಸರಿಂದ ಪ್ರೇರಣೆ ಪಡೆದಿದೆ ಎಂದರು.

ಪೂರ್ತಿ ಓದಿ
08:23 PM (IST) May 10

ಐಪಿಎಲ್ 2025 ಪುನರಾರಂಭಕ್ಕೆ ಬಿಸಿಸಿಐ ಸಿದ್ಧತೆ, 3 ನಗರಗಳು ಶಾರ್ಟ್ ಲಿಸ್ಟ್

ಭಾರತ-ಪಾಕಿಸ್ತಾನ ಕದನ ವಿರಾಮದ ಹಿನ್ನೆಲೆಯಲ್ಲಿ ಐಪಿಎಲ್ 2025 ಅನ್ನು ಪುನರಾರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಪಂದ್ಯಾವಳಿ ನಡೆಸುವ ಸಾಧ್ಯತೆಗಳಿವೆ.

ಪೂರ್ತಿ ಓದಿ

08:03 PM (IST) May 10

ಕದನ ವಿರಾಮದಿಂದ ಉಗ್ರರ ದಾಳಿ ನಿಲ್ಲುತ್ತಾ? ಅಮೆರಿಕ ಮೂಗು ತೂರಿಸಿದ್ದೇಕೆ? ಭಾರತೀಯರ ಅಸಮಾಧಾನ?

ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದೆ. ಈ ಕ್ರಮವು ಭಯೋತ್ಪಾದನೆಯನ್ನು ನಿಲ್ಲಿಸುತ್ತದೆಯೇ ಅಥವಾ ಪಾಕಿಸ್ತಾನಕ್ಕೆ ಲಾಭವಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಭಾರತೀಯರಲ್ಲಿ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೂರ್ತಿ ಓದಿ
08:02 PM (IST) May 10

ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಂ ಮುನೀರ್ ಯಾರು? ಈ ಸ್ಥಾನಕ್ಕೆ ಬಂದಿದ್ದು ಹೇಗೆ?

ಪಾಕಿಸ್ತಾನದಲ್ಲಿ ಸೇನಾ ಮುಖ್ಯಸ್ಥರೇ ನಿಜವಾದ ಅಧಿಕಾರ ಕೇಂದ್ರ. ಜನರಲ್ ಅಸಿಮ್ ಮುನೀರ್, ಸೇನೆಯ ಮೇಲೆ ಬಿಗಿ ಹಿಡಿತ ಹೊಂದಿದ್ದು, ನ್ಯಾಯಾಂಗ ಮತ್ತು ರಾಜಕೀಯದ ಮೇಲೂ ಪ್ರಭಾವ ಬೀರುತ್ತಿದ್ದಾರೆ. 100ಕ್ಕೂ ಹೆಚ್ಚು ಕಂಪನಿಗಳನ್ನು ನಡೆಸುವ ಮೂಲಕ ಸೇನೆ ಆರ್ಥಿಕವಾಗಿಯೂ ಪ್ರಬಲವಾಗಿದೆ.

ಪೂರ್ತಿ ಓದಿ
07:43 PM (IST) May 10

ಈಗ್ಯಾಕೆ ಈ ಮ್ಯಾಟರ್?.. ವಿಜಯ್ ದೇವರಕೊಂಡ ಪರ ಬ್ಯಾಟ್ ಬೀಸಿದ ನಿರ್ಮಾಪಕ ನಾಗ ವಂಶಿ!

"ವಿಜಯ್ ತುಂಬಾ ಸರಳ ವ್ಯಕ್ತಿ ಮತ್ತು ತಮ್ಮ ಕೆಲಸದ ಬಗ್ಗೆ ಅತ್ಯಂತ ಬದ್ಧತೆ ಉಳ್ಳವರು. ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಯಾವುದೇ ಹಂತಕ್ಕೂ ಹೋಗಲು ಸಿದ್ಧರಿರುತ್ತಾರೆ. ಅಗತ್ಯಬಿದ್ದರೆ, ಚಿತ್ರದ ಗುಣಮಟ್ಟಕ್ಕಾಗಿ ಮರು-ಚಿತ್ರೀಕರಣಕ್ಕೂ ಅವರು ಸಂತೋಷದಿಂದ ಸಹಕರಿಸುತ್ತಾರೆ. ಅವರೊಂದಿಗೆ ಕೆಲಸ ಮಾಡುವುದು..

ಪೂರ್ತಿ ಓದಿ
07:12 PM (IST) May 10

ಸಿಂದೂರ ಕದನದಲ್ಲಿ ಹುತಾತ್ಮನಾದ ಅಗ್ನೀವೀರ ಮುರಳಿ ನಾಯ್ಕ್ ಮರಳಿ ಮನೆಗೆ!

ಆಪರೇಷನ್ ಸಿಂದೂರದಲ್ಲಿ ಪಾಕಿಸ್ತಾನದ ವಿರುದ್ಧದ ಕಾಳಗದಲ್ಲಿ ಹುತಾತ್ಮರಾದ ಆಂಧ್ರಪ್ರದೇಶದ ಮುರಳಿ ನಾಯ್ಕ್. ರೈಲ್ವೆ ಕೆಲಸ ಬಿಟ್ಟು ಸೇನೆ ಸೇರಿದ್ದ ಮುರಳಿಗೆ ಸ್ವಗ್ರಾಮದಲ್ಲಿ ಅಂತಿಮ ನಮನ.

ಪೂರ್ತಿ ಓದಿ
07:06 PM (IST) May 10

ಕದನ ವಿರಾಮ ಘೋಷಣೆ ಬೆನ್ನಲ್ಲೇ ರಕ್ಷಣಾ ಪಡೆಗಳಿಂದ ಮಾಹಿತಿ; ಪಾಕ್ ಸುಳ್ಳಿನ ಮುಖವಾಡ ಬಿಚ್ಚಿಟ್ಟ ಅಧಿಕಾರಿಗಳು

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಈ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಿಂದ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಪೂರ್ತಿ ಓದಿ
06:47 PM (IST) May 10

ಪಾಕ್ ಜೊತೆ ಕದನ ವಿರಾಮವಷ್ಟೇ ಆದರೆ.... ಜೈ ಶಂಕರ್‌ ಖಡಕ್ ಟ್ವೀಟ್‌

ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ. ಉಗ್ರವಾದದ ವಿರುದ್ಧ ಭಾರತದ ಹೋರಾಟ ಮುಂದುವರಿಯಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಮೇ 12 ರಂದು ಉಭಯ ದೇಶಗಳ ಡಿಜಿಎಂಒಗಳ ನಡುವೆ ಮಾತುಕತೆ ನಡೆಯಲಿದೆ.

ಪೂರ್ತಿ ಓದಿ