ಜಾಗತಿಕ ಒತ್ತಡದಿಂದ ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿತು. ಭಾರತ ಸಂಜೆ ೫ ಗಂಟೆಗೆ ಒಪ್ಪಿಕೊಂಡ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿ ಉಲ್ಲಂಘನೆ ಮಾಡಿತು. ಜಮ್ಮು-ಕಾಶ್ಮೀರದ ಹಲವೆಡೆ ಸ್ಫೋಟಗಳ ಸದ್ದು ಕೇಳಿಬಂತು. ಈ ಕೃತ್ಯಕ್ಕೆ ಒಮರ್ ಅಬ್ದುಲ್ಲಾ ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿ (ಮೇ 10): ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿದಾಳಿಗೆ ನಾವು ಎದೆಕೊಟ್ಟು ಹೋರಾಡಲು ಸಾಧ್ಯವಿಲ್ಲವೆಂದು ಕದನ ವಿರಾಮಕ್ಕೆ ಪಾಕಿಸ್ತಾನ ಬಂದಿತು. ಭಾರತ ಪಾಕಿಸ್ತಾನದ ಕದನ ವಿರಾಮವನ್ನು ಸಂಜೆ 5 ಗಂಟೆಗೆ ಘೋಷಣೆ ಮಾಡಿತು. ಇದಾಗ ಕೇವಲ 4 ಗಂಟೆಗಳ ಅಂತರದಲ್ಲಿ ಅಂದರೆ ರಾತ್ರಿ 8.30ರ ವೇಳೆಗೆ ಪಾಕಿಸ್ತಾನದಿಂದ ಡ್ರೋನ್ ದಾಳಿ ಮಾಡಲಾಗಿದೆ. ಶ್ರೀನಗರ ಈ ಬಗ್ಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಕದನ ವಿರಾಮಕ್ಕೆ ಈಗಷ್ಟೇ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಜಾಗತಿಕ ಮಟ್ಟದಲ್ಲಿ ಅಮೇರಿಕಾವನ್ನು ಮಧ್ಯಸ್ತಿಕೆಗೆ ಎಳೆದುಕೊಂಡ ಪಾಕಿಸ್ತಾನ ಕದಮ ವಿರಾಮಕ್ಕೆ ಒಪ್ಪಿಕೊಳ್ಳುತ್ತೇವೆ ಎಂದು ಮಂಡಿಯೂರಿಕೊಂಡು ಬಂದಿರು. ಇದಕ್ಕೆ ಒಪ್ಪಿಗೆ ಸೂಚಿಸಿದ ಭಾರತ ಯುದ್ಧ ನಿಯಮಗಳಿಗೆ ಬೆಲೆ ಕೊಡುವ ನಿಟ್ಟಿನಲ್ಲಿ ಶನಿವಾರ ಸಂಜೆ 5 ಗಂಟೆಗೆ ಕದನ ವಿರಾಮವನ್ನು (ಸೇನಾ ಕಾರ್ಯಾಚರಣೆಗಳ ಒಪ್ಪಂದಕ್ಕೆ) ಒಪ್ಪಿಕೊಂಡಿದೆ. ಇನ್ನು ಮೇ 12ರಂದು ಮಾತುಕತೆ ನಡೆಸಲು ಬದ್ಧತೆಯನ್ನು ಪ್ರದರ್ಶನ ಮಾಡಲಾಯಿತು. ಭಾರತದ ರಕ್ಷಣಾ ಪಡೆಯ ಮೂರು ಪಡೆಗಳ ಮುಖ್ಯಸ್ಥರು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನೂ ನೀಡಿದ್ದರು. ಹೀಗೆ ಕದನ ವಿರಾಮ ಘೋಷಣೆ ಮಾಡಿಕೊಂಡು ಕೇವಲ 3 ರಿಂದ 4 ಗಂಟೆಗಳ ಅವಧಿಯಲ್ಲಿ ಕದನ ವಿರಾಮವನ್ನು ಪಾಕಿಸ್ತಾನವೇ ಉಲ್ಲಂಘನೆ ಮಾಡಿ ಡ್ರೋನ್ ದಾಳಿಯನ್ನು ಮಾಡಲಾಗಿದೆ.
ಎಲ್ಲೆಲ್ಲಿ ದಾಳಿ ಮಾಡುತ್ತಿದೆ?
ಪಾಕಿಸ್ತಾನವು ಕದನ ವಿರಾಮವನ್ನು ಮಾಡಿ ಜಮ್ಮು ಕಶ್ಮೀರದ ವಿವಿಧೆಡೆ ದಾಳಿ ಮಾಡುತ್ತಿದೆ. ಉಧಮ್‌ಪುರ, ಅಖ್ನೂರ್, ನೌಶೇರಾ, ಪೂಂಚ್, ರಾಜೌರಿ, ಮೆಂಧರ್, ಜಮ್ಮು, ಸುಂದರ್‌ಬನಿ, ಆರ್‌ಎಸ್ ಪುರ, ಅರ್ನಿಯಾ ಹಾಗೂ ಕಥುವಾದಲ್ಲಿ ಡ್ರೋನ್ ಮೂಲಕ ಸ್ಪೋಟಕಗಳನ್ನು ಭಾರತದ ಮೇಲೆ ಹಾಕುತ್ತಿದೆ. ಈ ಬಗ್ಗೆ ಸ್ವತಃ ಕಿಡಿ ಕಾರಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, 'ಕದನ ವಿರಾಮಕ್ಕೆ ಈಗಷ್ಟೇ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳ ಸದ್ದು ಕೇಳಿಬಂದಿದೆ!' ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಮತ್ತೊಂದು ಟ್ವೀಟ್ ಮಾಡಿ ಇದರಲ್ಲಿ ವಿಡಿಯೋ ಹಂಚಿಕೊಂಡು ಇದು ಕದನ ವಿರಾಮವಲ್ಲ. ಶ್ರೀನಗರದ ಮಧ್ಯಭಾಗದಲ್ಲಿರುವ ವಾಯು ರಕ್ಷಣಾ ಘಟಕಗಳು ಇದೀಗಷ್ಟೇ ತೆರೆದುಕೊಂಡಿವೆ' ಎಂದು ದಾಳಿ ಕುರಿತಾದ ಮಾಹಿತಿ ಹಂಚಿಕೊಂಡಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಭಾರತ ನಡೆಸಿದ ಉಗ್ರರ ನೆಲೆಗಳ ಭಾರತದ ದಾಳಿ ಮಾಡಿತ್ತು. ಆದರೆ, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಭಾರತವು ನಾಗರೀಕ ನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ಸುಳ್ಳು ಹೇಳಿ ಭಾರತದ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳ ದಾಳಿಯನ್ನು ಮಾಡಿತ್ತು. ಇದಕ್ಕೆ ಭಾರತ ಎಲ್ಲಿಯೂ ಹಾನಿಗೆ ಒಳಗಾಗದೇ ಪ್ರತಿದಾಳಿ ಮಾಡಿ ಎಲ್ಲ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿತ್ತು. ಇದೀಗ ಪಾಕಿಸ್ತಾನದ ಪುನಃ ಕದನ ವಿರಾಮವನ್ನ ಉಲ್ಲಂಘನೆ ಮಾಡಿ ದಾಳಿಯನ್ನು ಮುಂದುವರೆಸಿದೆ.
ಇದಕ್ಕೆ ಭಾರತವೂ ಪ್ರತಿದಾಳಿ: ಪಾಕಿಸ್ತಾನದಿಂದ ಭಾರತದ ಮೇಲೆ ಡ್ರೋನ್ ದಾಳಿಯನ್ನು ಮಾಡಿದ ನಂತರ ಭಾರತವೂ ಇದಕ್ಕೆ ಪ್ರತಿದಾಳಿಯನ್ನು ಮಾಡಿದೆ. ಒಂದು ಅಂದಾಜಿನ ಪ್ರಕಾರ ಕೇವಲ 60 ನಿಮಿಷದಲ್ಲಿ ಬರೋಬ್ಬರಿ 100 ಡ್ರೋನ್‌ಗಳನ್ನು ಭಾರತದ ಮೇಲೆ ದಾಳಿ ಮಾಡಲು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ


