ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಈ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಿಂದ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಜಾರಿಗೆ ಬಂದಿರೋದನ್ನು ವಿದೇಶಾಂಗ ಕಾರ್ಯದರ್ಶಿಗಳಾದ ವಿಕ್ರಂ ಮಿಸ್ರಿ ಖಚಿಪಡಿಸಿದ್ದಾರೆ. ಭಾರತ ತನ್ನದೇ ಆದ ಷರತ್ತುಗಳ ಮೇಲೆ ಕದನ ವಿರಾಮವನ್ನು ಜಾರಿಗೆ ಸಮ್ಮತಿಸಿದೆ. ಪಾಕಿಸ್ತಾನವೇ ಕದನ ವಿರಾಮಕ್ಕಾಗಿ ಆಮೆರಿಕದ ಮುಂದೆ ಅಂಗಲಾಚಿಕೊಂಡಿತ್ತು. ಅಮೆರಿಕ, ಭಾರತ ಮತ್ತು ಪಾಲಿಸ್ತಾನದಿಂದ ಕದನ ವಿರಾಮ ಅಧಿಕೃತವಾಗಿ ಘೋಷಣೆಯಾಯ್ತು. ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಗೆ ಬಂದಿರೋದನ್ನು ವಿಕ್ರಂ ಮಿಸ್ರಿ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದರು. ಇದಾದ ಬಳಿಕ ಮೂರು ಸೇನಾಪಡೆಗಳ ಅಧಿಕಾರಿಗಳಾದ ಕಮೋಡೋರ್ ರಘು ಆರ್ ನಾಯರ್, ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್ ಮತ್ತು ಕರ್ನಲ್ ಸೋಫಿಯಾ ಖುರೇಷಿ ಅವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಲ್ ಸೋಫಿಯಾ ಖುರೇಷಿ, ಪಾಕಿಸ್ತಾನ ತನ್ನ ಸುದ್ದಿಗೋಷ್ಠಿಯಲ್ಲಿ ಭಾರತೀಯ ಸೇನೆ ಮಸೀದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಎಂದು ಸುಳ್ಳು ಹೇಳಿದೆ. ನಮ್ಮದು ನಿಖರ ದಾಳಿ ಮತ್ತು ಜವಾಬ್ದಾರಿಯುತವಾದ ಕ್ರಮವಾಗಿತ್ತು. ಭಾರತೀಯ ಸೇನೆ ಯಾವುದೇ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ದಾಳಿಯಿಂದ ಪಾಕಿಸ್ತಾನದ ಸೇನಾನಲೆಗಳಿಗೆ ಹಾನಿಯುಂಟಾಗಿದೆ ಎಂದು ತಿಳಿಸಿದರು.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾತನಾಡಿ, ಬ್ರಹ್ಮೋಸ್ ನೆಲೆಗೆ ಹಾನಿಯಾಗಿದೆ ಎಂಬ ಸುಳ್ಳು ಸುದ್ದಿಯನ್ನು ಪಾಕಿಸ್ತಾನ ಹರಡಿದೆ. ಇದು ಸಂಪೂರ್ಣವಾಗಿ ಸುಳ್ಳು. ನಾವು ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದ್ದೇವೆ. ಭಾರತೀಯ ಸೇನೆ ಭದ್ರತೆ ಒದಗಿಸುವ ಸಾಮರ್ಥ್ಯವನನ್ನು ಹೊಂದಿದೆ. ನಾವು ಯಾವುದೇ ಧಾರ್ಮಿಕ ಸ್ಥಳಕ್ಕೆ ಹಾನಿ ಮಾಡಿಲ್ಲ. ಪಾಕಿಸ್ತಾನದ ಅನೇಕ ಏರ್‌ಬಸ್‌ಗಳು ಹಾನಿಗೊಳಗಾಗಿವೆ ಎಂದು ಖಚಿತಪಡಿಸಿದರು.
ಕಾಂಡ್ಲಾ ಬಂದರಿನಲ್ಲಿ ಸರಕು ಕಾರ್ಯಾಚರಣೆ ಪುನರಾರಂಭ
ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ ನಂತರ ಕಾಂಡ್ಲಾ ಬಂದರಿನಲ್ಲಿ ಎಲ್ಲಾ ಸರಕು ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ. ಸರಕು ನಿರ್ವಹಣಾ ಚಟುವಟಿಕೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನರಾರಂಭಿಸಲು ಬಂದರು ಆಡಳಿತವು ಎಲ್ಲಾ ಹಡಗು ಏಜೆಂಟರು ತಮ್ಮ ಆಯಾ ಸ್ಟೀವಡೋರ್‌ಗಳು ಮತ್ತು ಕಸ್ಟಮ್ ಹೌಸ್ ಏಜೆಂಟ್‌ಗಳಿಗೆ (CHAs) ತಿಳಿಸುವಂತೆ ವಿನಂತಿಸಿದೆ. ಬಂದರಿನ ಅಧಿಕೃತ ಸೂಚನೆಯ ಪ್ರಕಾರ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹಡಗುಗಳ ಏಜೆಂಟರು ಕಾರ್ಯಾಚರಣೆಯನ್ನು ಆದಷ್ಟು ಬೇಗ ಮರಳಿ ಹಳಿಗೆ ತರಲು ಅಗತ್ಯ ವ್ಯವಸ್ಥೆಗಳನ್ನು ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ದುಃಸ್ವಪ್ನವಾಗಿ ಕಾಡಿದ DRDO ಅಭಿವೃದ್ಧಿ ಮಾಡಿದ ಡಿ4 Anti-Drone ವ್ಯವಸ್ಥೆ!
ವಿಕ್ರಂ ಮಿಸ್ರಿ ಹೇಳಿದ್ದೇನು?
ಇಂದು ಮಧ್ಯಾಹ್ನ ಪಾಕಿಸ್ತಾನದ ಡಿಜಿಎಂಒ ಅವರೇ ಮೊದಲುಉ ಫೋನ್ ಕರೆ ಮಾಡಿದರು. ತದನಂತರ ಚರ್ಚೆಗಳು ನಡೆದು ಒಮ್ಮತಕ್ಕೆ ಬರಲಾಯಿತು. ಬೇರೆ ಯಾವುದೇ ಸ್ಥಳದಲ್ಲಿ ಬೇರೆ ಯಾವುದೇ ವಿಷಯದ ಕುರಿತು ಮಾತುಕತೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ಇಂದು ಮಧ್ಯಾಹ್ನ 3:35 ಕ್ಕೆ ಭಾರತೀಯ DGMO ಅವರಿಗೆ ಕರೆ ಮಾಡಿದರು. ಭಾರತೀಯ ಸಮಯ 5:00 ರಿಂದ ಭೂಮಿ, ವಾಯು ಮತ್ತು ಸಮುದ್ರದಲ್ಲಿ ಎಲ್ಲಾ ರೀತಿಯ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಎರಡೂ ಕಡೆಯವರು ಒಪ್ಪಿಕೊಂಡರು. ಇಂದು ಈ ಒಪ್ಪಂದವನ್ನು ಜಾರಿಗೆ ತರಲು ಎರಡೂ ಕಡೆಯವರಿಗೆ ಸೂಚಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮೇ 12 ರಂದು ಮಧ್ಯಾಹ್ನ 12:00 ಕ್ಕೆ ಮತ್ತೆ ಮಾತನಾಡಲಿದ್ದಾರೆ ಎಂದು ವಿಕ್ರಂ ಮಿಸ್ರಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಸಂಜೆ 5:00 ಗಂಟೆಯ ನಂತರ, ಭೂ ಸೇನೆ, ವಾಯು ಎಲ್ಲಾ ರೀತಿಯ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಎರಡೂ ಕಡೆಯವರು ಒಪ್ಪಿಕೊಂಡರು. ಇಂದು ಈ ಒಪ್ಪಂದವನ್ನು ಜಾರಿಗೆ ತರಲು ಎರಡೂ ಕಡೆಯವರಿಗೆ ಸೂಚಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮೇ 12 ರಂದು ಮಧ್ಯಾಹ್ನ 12:00 ಕ್ಕೆ ಮತ್ತೆ ಮಾತನಾಡಲಿದ್ದಾರೆ ಎಂದು ವಿಕ್ರಂ ಮಿಸ್ರಿ ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕ್ ಜೊತೆ ಕದನ ವಿರಾಮವಷ್ಟೇ ಆದರೆ.... ಜೈ ಶಂಕರ್ ಖಡಕ್ ಟ್ವೀಟ್


