ಭಾರತದಿಂದ ಮರಳುತ್ತಿದ್ದ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ, 87 ಮಂದಿ ಸಾವು, 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅಮೆರಿಕ ಸಬ್‌ಮರೀನ್ ದಾಳಿಗೆ ಇರಾನ್ ನೌಕೆ ಹಿಂದೂ ಮಹಾಸಾಗರದಲ್ಲಿ ಮುಳುಗಿದೆ.
- Home
- News
- India News
- India Latest News Live: ಭಾರತದಿಂದ ಮರಳುತ್ತಿದ್ದ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ, 87 ಮಂದಿ ಸಾವು
India Latest News Live: ಭಾರತದಿಂದ ಮರಳುತ್ತಿದ್ದ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ, 87 ಮಂದಿ ಸಾವು

ನವದೆಹಲಿ: ಇರಾನ್ನ ಪ್ರತೀಕಾರದ ದಾಳಿಗೆ ತುತ್ತಾಗಿರುವ ಒಮಾನ್ನ ಸುಲ್ತಾನ ಹೈತಮ್ ಬಿನ್ ತಾರಿಕ್, ಕುವೈತ್ ರಾಜಕುಮಾರ ಶೇಖ್ ಸಬಾಹ್ ಅಲ್-ಖಾಲಿದ್ ಅಲ್-ಹಮದ್ ಅಲ್-ಮುಬಾರಕ್ ಅಲ್-ಸಬಾಹ್ ಮತ್ತು ಕತಾರ್ನ ಅಮೀರ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೂರವಾಣಿ ಮಾತುಕತೆ ನಡೆಸಿ, ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವೇಳೆ 3 ದೇಶಗಳ ಸಾರ್ವಭೌಮತ್ವದ ಉಲ್ಲಂಘನೆಯನ್ನು ಖಂಡಿಸಿದ ಅವರು, ಅಲ್ಲಿನ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಳೆದ 2 ದಿನಗಳಲ್ಲಿ ಮೋದಿ, ಇಸ್ರೇಲ್, ಬಹ್ರೈನ್, ಸೌದಿ ಅರೇಬಿಯಾ ಸೇರಿ 8 ರಾಷ್ಟ್ರಗಳ ಮುಖ್ಯಸ್ಥರಿಗೆ ಕರೆ ಮಾಡಿ
India Latest News Live 4 March 2026ಭಾರತದಿಂದ ಮರಳುತ್ತಿದ್ದ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ, 87 ಮಂದಿ ಸಾವು
India Latest News Live 4 March 202633 ಎಸೆತದಲ್ಲಿ ಅಲೆನ್ ಶತಕ ದಾಖಲೆ, ಸೌತ್ ಆಫ್ರಿಕಾ ಮಣಿಸಿದ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್
33 ಎಸೆತದಲ್ಲಿ ಅಲೆನ್ ಶತಕ ದಾಖಲೆ, ಸೌತ್ ಆಫ್ರಿಕಾ ಮಣಿಸಿದ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್, ಟಿ20 ವಿಶ್ವಕಪ್‌ನಲ್ಲಿ ಅತೀ ವೇಗದ ಸೆಂಚುರಿ ದಾಖಲಾಗಿದೆ. ಕೇವಲ 12.5 ಓವರ್‌ನಲ್ಲಿ ಪಂದ್ಯ ಮುಗಿಸಿ ನ್ಯೂಜಿಲೆಂಡ್ ಹೊಸ ಇತಿಹಾಸ ರಚಿಸಿದೆ.
India Latest News Live 4 March 2026ರಶ್ಮಿಕಾ ಮಂದಣ್ಣ ವಿಜಯ್ ಅದ್ಧೂರಿ ರೆಸೆಪ್ಶನ್, ಮೈಸೂರು ರೇಷ್ಮೆ ಸೀರೆಯಲ್ಲಿ ಮಿಂಚಿದ ಶ್ರೀವಲ್ಲಿ
ರಶ್ಮಿಕಾ ಮಂದಣ್ಣ ವಿಜಯ್ ಅದ್ಧೂರಿ ರೆಸೆಪ್ಶನ್, ಮೈಸೂರು ರೇಷ್ಮೆ ಸೀರೆಯಲ್ಲಿ ಮಿಂಚಿದ ಶ್ರೀವಲ್ಲಿ, ಹೈದರಾಬಾದ್‌ನಲ್ಲಿ ಸದ್ಯ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಸೆಲೆಬ್ರೆಟಿಗಳ ದಂಡೆ ಆಗಮಿಸಿದ್ದು, ಪ್ರಧಾನಿ ಮೋದಿ ಪಾಲ್ಗೊಳುವ ಸಾಧ್ಯತೆ ಕೇಳಿಬರುತ್ತಿದೆ.
India Latest News Live 4 March 2026ಪೈಲ್ಸ್ ಸರ್ಜರಿ ಆದ್ರೂ ನಂಬದ ರೈಲ್ವೇ ಅಧಿಕಾರಿ, ಪ್ಯಾಂಟ್ ಬಿಚ್ಚಿ ಅದನ್ನೇ ತೋರಿಸಿದ ಲೋಕೋ ಪೈಲೆಟ್
ಪೈಲ್ಸ್ ಸರ್ಜರಿ ಆದ್ರೂ ನಂಬದ ರೈಲ್ವೇ ಅಧಿಕಾರಿ, ಪ್ಯಾಂಟ್ ಬಿಚ್ಚಿ ಅದನ್ನೇ ತೋರಿಸಿದ ಲೋಕೋ ಪೈಲೆಟ್, ಅಧಿಕಾರಿಗೆ ಮುಂದೆ ಮೆಡಿಕಲ್ ಸರ್ಟಿಫಿಕೇಟ್, ಔಷಧಿ ಎಲ್ಲಾ ಮುಂದಿಟ್ಟರೂ ಅಧಿಕಾರಿ ನಂಬಲೇ ಇಲ್ಲ, ಬೇರೆ ದಾರಿ ಕಾಣದೆ ಪ್ಯಾಂಟ್ ಬಿಚ್ಚಿ ತೋರಿಸಿದ್ದಾನೆ.
India Latest News Live 4 March 2026ಇರಾನ್ ದಾಳಿಯಿಂದ ಖತಾರ್ LNG ಘಟಕ ಸ್ಥಗಿತ, ಭಾರತದ ಗ್ಯಾಸ್ ಆಮದು ಸಂಪೂರ್ಣ ಬಂದ್
ಇರಾನ್ ದಾಳಿಯಿಂದ ಖತಾರ್ LNG ಘಟಕ ಸ್ಥಗಿತ, ಭಾರತದ ಗ್ಯಾಸ್ ಆಮದು ಸಂಪೂರ್ಣ ಬಂದ್ , ಭಾರತ ವಾರ್ಷಿಕ ಶೇಕಡಾ 40 ರಷ್ಟು ಗ್ಯಾಸನ್ನು ಖತಾರ್‌ನಿಂದ ಆಮದು ಮಾಡಿಕೊಳ್ಳುತ್ತದೆ. ಇದೀಗ ಏಕಾಏಕಿ ಪೂರೈಕೆ ಸ್ಥಗಿತ ಭಾರತಕ್ಕೆ ತೀವ್ರ ಸಂಕಷ್ಟ ತರಲಿದೆ.
India Latest News Live 4 March 2026ಬಿಹಾರ ರಾಜಕೀಯದಲ್ಲಿ ಮಹಾ ತಿರುವು - ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ?
India Latest News Live 4 March 2026ವೆಬ್ ಸಿರೀಸ್‌ನಲ್ಲಿ ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸಿ ಪ್ರಖ್ಯಾತಿ ಪಡೆದ ನಟಿಗೆ ಸ್ತನ ಕ್ಯಾನ್ಸರ್!
'ಸೇಕ್ರೆಡ್ ಗೇಮ್ಸ್' ಖ್ಯಾತಿಯ ನಟಿ ರಾಜಶ್ರೀ ದೇಶಪಾಂಡೆ ಅವರಿಗೆ ಗ್ರೇಡ್ 1 ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಸಾಮಾನ್ಯ ತಪಾಸಣೆ ವೇಳೆ ರೋಗ ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಹಿತಿ ನೀಡಿದ್ದಾರೆ.
India Latest News Live 4 March 2026ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದ್ರೂ ಬಗ್ಗದ ಇರಾನ್, ಪ್ರತಿಕಾರದ ದಾಳಿಗೆ ಬೆದರಿದ ಟ್ರಂಪ್!
ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧ ತೀವ್ರಗೊಂಡಿದೆ. ನಾಯಕರ ಸಾವು ಮತ್ತು ಶಸ್ತ್ರಾಸ್ತ್ರ ನಷ್ಟದ ನಡುವೆಯೂ ಇರಾನ್ ಪ್ರತಿದಾಳಿ ನಡೆಸುತ್ತಿದ್ದು, ಪರ್ವತಗಳಡಿಯ 'ಕ್ಷಿಪಣಿ ನಗರ'ಗಳು ಅದರ ಪ್ರಮುಖ ಶಕ್ತಿಯಾಗಿವೆ. ಈ ಸಂಘರ್ಷವು ಜಾಗತಿಕ ತೈಲ ಬಿಕ್ಕಟ್ಟಿಗೆ ಕಾರಣವಾಗುವ ಆತಂಕ
India Latest News Live 4 March 202627 ವರ್ಷಗಳ ದಾಂಪತ್ಯಕ್ಕೆ 250 ಕೋಟಿ ರೂ? ದಳಪತಿ-ಸಂಗೀತಾ ಡಿವೋರ್ಸ್ಗೆ ಇದೇನಿದು ಟ್ವಿಸ್ಟ್?
27 ವರ್ಷಗಳ ದಾಂಪತ್ಯದ ನಂತರ, ನಟ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಗಂಭೀರ ಆರೋಪಗಳೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ, ವಿಜಯ್ ನ್ಯಾಯಾಲಯದ ಹೊರಗೆ ಪ್ರಕರಣವನ್ನು ಇತ್ಯರ್ಥಪಡಿಸಲು ಬಯಸಿದ್ದು, 250 ಕೋಟಿ ರೂ ಜೀವನಾಂಶವನ್ನು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
India Latest News Live 4 March 2026Sanju Weds Charu - ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅಂತರ್ಧರ್ಮೀಯ ರೋಚಕ ಫೇಸ್ಬುಕ್ ಲವ್ ಸ್ಟೋರಿ!
ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರ ಪ್ರೇಮಕಥೆ ಫೇಸ್‌ಬುಕ್‌ನಲ್ಲಿ ಒಂದು 'Hi' ಸಂದೇಶದಿಂದ ಪ್ರಾರಂಭವಾಯಿತು. ಹಿಂದೂ ಧರ್ಮದ ಚಾರುಲತಾ ಮತ್ತು ಕ್ರೈಸ್ತ ಸಮುದಾಯದ ಸಂಜು, ತಮ್ಮ ಕುಟುಂಬಗಳನ್ನು ಒಪ್ಪಿಸಿ ಅಂತರ್ಧರ್ಮೀಯ ವಿವಾಹವಾದರು.
India Latest News Live 4 March 2026ಬಾವಿಗೆ ಹಾರಿದ 27 ವರ್ಷದ ಪುತ್ರಿ ಆಕೆಯ ಹಿಂದೆಯೇ ಹಾರಿ ಮಗಳ ರಕ್ಷಿಸಿದ 55 ವರ್ಷದ ಅಮ್ಮ
ತಮಿಳುನಾಡಿನ ನಂಬಿಯೂರಿನಲ್ಲಿ, ಆತ್ಮ*ಹತ್ಯೆ ಮಾಡಿಕೊಳ್ಳಲು ಬಾವಿಗೆ ಹಾರಿದ ತನ್ನ 27 ವರ್ಷದ ಮಗಳನ್ನು ರಕ್ಷಿಸಲು 55 ವರ್ಷದ ತಾಯಿ ಕೂಡಲೇ ಬಾವಿಗೆ ಹಾರಿದ್ದಾರೆ. ಅಗ್ನಿಶಾಮಕ ದಳದವರು ಬರುವವರೆಗೂ ಮಗಳನ್ನು ನೀರಿನಲ್ಲಿ ಮುಳುಗದಂತೆ ಹಿಡಿದಿಟ್ಟುಕೊಂಡು ತಾಯಿ ಸಾಹಸ ಮೆರೆದಿದ್ದಾಳೆ.
India Latest News Live 4 March 2026ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ರೆ ಭಾರತಕ್ಕೆ ಟ್ರೋಫಿ ಖಚಿತ, ಟಿ20 ವಿಶ್ವಕಪ್‌ನಲ್ಲಿದೆ ಸಂಪ್ರದಾಯ
ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ರೆ ಟ್ರೋಫಿ ಖಚಿತ, ಟಿ20 ವಿಶ್ವಕಪ್‌ನಲ್ಲಿದೆ ಸಂಪ್ರದಾಯ , ಕಳೆದ ಎರಡು ಬಾರಿ ಈ ಸಂಪ್ರದಾಯ ಸರಿಯಾಗಿದೆ. ಇದರ ಜೊತೆಗೆ ಎರಡು ಪ್ರಮುಖ ಮೈಲಿಗಲ್ಲು ರಚನೆಯಾಗಲಿದೆ.
India Latest News Live 4 March 2026Viral Video - ರಾಮೇಶ್ವರಂ ಕೆಫೆ ಮುಂದೆ ಘರ್ಜಿಸಿದ ಜೆಸಿಬಿ; ಪಾಲಿಕೆಯಿಂದ ಅಕ್ರಮ ಒತ್ತುವರಿ ತೆರವು!
ಪುಣೆಯ ವಿಮಾನ್ ನಗರದಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದೆ. ಈ ವೇಳೆ, ರಾಮೇಶ್ವರಂ ಕೆಫೆ ಸೇರಿದಂತೆ ಹಲವು ವಾಣಿಜ್ಯ ಸಂಸ್ಥೆಗಳು ಫುಟ್‌ಪಾತ್ ಮೇಲೆ ನಿರ್ಮಿಸಿದ್ದ ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.
India Latest News Live 4 March 2026ಇಂಗ್ಲೆಂಡ್‌ನ ಈ ವೇಗಿ ಎದುರು ಸಂಜು ಸ್ಯಾಮ್ಸನ್ ಮೂರು ಸಲ ಡಕ್ ಔಟ್! ಸೆಮಿಫೈನಲ್‌ಗೂ ಮುನ್ನ ಫ್ಯಾನ್ಸ್‌ಗೆ ಶುರುವಾಯ್ತು ಹೊಸ ತಲೆನೋವು!
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೆಣಸಲಿದ್ದು, ಉತ್ತಮ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಅವರ ಕಳಪೆ ದಾಖಲೆ ತಂಡಕ್ಕೆ ಚಿಂತೆಗೀಡುಮಾಡಿದೆ. ವಿಶೇಷವಾಗಿ ವೇಗಿ ಜೋಫ್ರಾ ಆರ್ಚರ್ ಎದುರು ಸಂಜು ಪದೇ ಪದೇ ವಿಫಲರಾಗಿದ್ದು ಭಾರತದ ತಲೆನೋವು ಹೆಚ್ಚಿಸುವಂತೆ ಮಾಡಿದೆ.
India Latest News Live 4 March 2026ಒಂಟಿಯಾಗಿ ಬದುಕಿ ಬೇಸತ್ತಿದ್ದೇನೆ ನನಗೂ ಒಬ್ಬ ಗೆಳೆಯ ಬೇಕು - ಪತಿ ಸಾವಿನ 3 ವರ್ಷದ ನಂತರ ಮದುವೆ ಮಾತಾಡಿದ ನಟಿ
ಪತಿ, ನಟ ಕೊಲ್ಲಂ ಸುಧಿ ಅವರ ನಿಧನದ ಮೂರು ವರ್ಷಗಳ ನಂತರ, ಮಾಡೆಲ್ ರೇಣು ಸುಧಿ ಅವರು ಮರುಮದುವೆಯ ಬಗ್ಗೆ ಮಾತನಾಡಿದ್ದಾರೆ. ಒಂಟಿ ಜೀವನದಿಂದ ಬೇಸತ್ತಿದ್ದು, ತನ್ನನ್ನು ಹಾಗೂ ತನ್ನ ಮಕ್ಕಳನ್ನು ಅರ್ಥಮಾಡಿಕೊಳ್ಳುವ ಸಂಗಾತಿಯೊಬ್ಬರು ಬೇಕು ಎಂದು ಅವರು ಹೇಳಿಕೊಂಡಿದ್ದಾರೆ.
India Latest News Live 4 March 2026ಪ್ರಯೋಗಾಲಯದಲ್ಲಿ ತಯಾರಾಗ್ತಿವೆ ಮಿರಿಮಿರಿ ಮಿಂಚುವ ಚಿನ್ನ! ಬಂಗಾರ ಪ್ರಿಯರಿಗೆ ಸರ್ಪ್ರೈಸ್ - ಡಿಟೇಲ್ಸ್ ಇಲ್ಲಿದೆ
ಪ್ರಯೋಗಾಲಯದಲ್ಲಿ ತಯಾರಿಸಿದ ಚಿನ್ನವು ರಾಸಾಯನಿಕವಾಗಿ ಮತ್ತು ಭೌತಿಕವಾಗಿ ಗಣಿಗಾರಿಕೆಯ ಚಿನ್ನವನ್ನೇ ಹೋಲುತ್ತದೆ. ಈ ಲೇಖನವು ಲ್ಯಾಬ್ ಗೋಲ್ಡ್ ತಯಾರಿಸುವ ವಿಧಾನ, ಅದರ ಬೆಲೆ, ಮರುಮಾರಾಟ ಮೌಲ್ಯ, ಮತ್ತು ಹೂಡಿಕೆಯಾಗಿ ಅದರ ಸುರಕ್ಷತೆಯ ಬಗ್ಗೆ ವಿವರಿಸುತ್ತದೆ.
India Latest News Live 4 March 2026US-Iran Conflict - ಹೋರಾಡದೆ ಭಾರೀ ಬೆಲೆ ತೆರುತ್ತಿದೆ ಭಾರತ, ನಾಲ್ಕೇ ದಿನದಲ್ಲಿ 2,000 ಕೋಟಿ ರೂ. ನಷ್ಟವಾಗಿದ್ದು ಹೇಗೆ?
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆಯು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ನಾಲ್ಕೇ ದಿನಗಳಲ್ಲಿ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ದೇಶವು 2,000 ಕೋಟಿ ರೂಪಾಯಿಗೂ ಅಧಿಕ ಆರ್ಥಿಕ ಹೊರೆಯನ್ನು ಹೊತ್ತಿದೆ.
India Latest News Live 4 March 2026ದಳಪತಿ ವಿಜಯ್ ದಾಂಪತ್ಯ ಅಂತ್ಯಕ್ಕೆ ತ್ರಿಷಾ ಕಾರಣನಾ? ಹೊಸ ಜಯಲಲಿತಾ ಆಗ್ತಾರಾ ನಟಿ ತ್ರಿಷಾ? ನಿಗೂಢ ಪೋಸ್ಟ್ ಬಗ್ಗೆ ಬಿಸಿ ಬಿಸಿ ಚರ್ಚೆ!
ದಳಪತಿ ವಿಜಯ್ ದಾಂಪತ್ಯವು ವಿಚ್ಛೇದನದ ಅಂಚಿನಲ್ಲಿದ್ದು, ಇದಕ್ಕೆ ನಟಿ ತ್ರಿಷಾ ಜೊತೆಗಿನ ಅವರ ಸಂಬಂಧವೇ ಕಾರಣ ಎಂದು ಹೇಳಲಾಗುತ್ತಿದೆ. ಈ ಊಹಾಪೋಹಗಳ ಮಧ್ಯೆ, ವಿಜಯ್ ಅವರೊಂದಿಗೆ ತ್ರಿಷಾ ಕೂಡ ರಾಜಕೀಯಕ್ಕೆ ಪ್ರವೇಶಿಸಿ, ಜಯಲಲಿತಾ ಅವರಂತೆ ಆಗುತ್ತಾರೆಯೇ ಎಂಬ ಚರ್ಚೆ ತಮಿಳುನಾಡಿನಲ್ಲಿ ತೀವ್ರಗೊಂಡಿದೆ.
India Latest News Live 4 March 2026ಬೃಹತ್ ಭೂಗತ 'ಕ್ಷಿಪಣಿ ನಗರ' ಪ್ರದರ್ಶಿಸಿದ ಇರಾನ್; ಅಮೆರಿಕದ ದುಬಾರಿ ಅಸ್ತ್ರಗಳು ಖಾಲಿಯಾಗುವ ಭೀತಿ!
ಇರಾನ್ ತನ್ನ ಬೃಹತ್ ಭೂಗತ ಕ್ಷಿಪಣಿ ನಗರವನ್ನು ಅನಾವರಣಗೊಳಿಸುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದೆ. ಈ ಸಂಘರ್ಷವು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಆರ್ಥಿಕವಾಗಿ ದುಬಾರಿಯಾಗುತ್ತಿದೆ.
India Latest News Live 4 March 2026ಸಚಿನ್ ಅಂಜಲಿಯಂತೆ ಪುತ್ರ ಅರ್ಜುನ್ ಸಾನಿಯಾ ಜೋಡಿಯಲ್ಲಿದೆ ವಯಸ್ಸಿನ ಅಂತರ
ಸಚಿನ್ ಅಂಜಲಿಯಂತೆ ಪುತ್ರ ಅರ್ಜುನ್ ಸಾನಿಯಾ ಜೋಡಿಯಲ್ಲಿದೆ ವಯಸ್ಸಿನ ಅಂತರ, ಸಚಿನ್ ತನಗಿಂತ ಹಿರಿಯ ಅಂಜಲಿಯನ್ನು ಪ್ರೀತಿಸಿ ವಿವಾಹವಾಗಿದ್ದರೆ, ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರೀತಿ ಕೂಡ ಇದೇ ದಾರಿಯಲ್ಲಿ ಸಾಗಿದೆ.