ಆಪರೇಷನ್ ಸಿಂದೂರ ವೇಳೆ ಪಾಕಿಸ್ಥಾನದ ವಿರುದ್ಧದ ಸೆಣೆಸಾಟದಲ್ಲಿ ನಮ್ಮ ದೇಶದ ಹಲವು ಸೈನಿಕರು ಹುತಾತ್ಮರಾಗಿದ್ದಾರೆ. ಈ ಪೈಕಿ ನೆರೆಯ ಆಂಧ್ರಪ್ರದೇಶ ಸತ್ಯಸಾಯಿ ಜಿಲ್ಲೆಯ ಕಲ್ಲಿ ತಾಂಡಾದ ಹೆಮ್ಮೆಯ ಪುತ್ರ ಮುರಳಿ ನಾಯಕ್ ಕೂಡ ಹುತಾತ್ಮರಾಗಿದ್ದಾರೆ. 

ರವಿಕುಮಾರ್ ವಿ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ (ಮೇ.10):
ಆಪರೇಷನ್ ಸಿಂದೂರ ವೇಳೆ ಪಾಕಿಸ್ಥಾನದ ವಿರುದ್ಧದ ಸೆಣೆಸಾಟದಲ್ಲಿ ನಮ್ಮ ದೇಶದ ಹಲವು ಸೈನಿಕರು ಹುತಾತ್ಮರಾಗಿದ್ದಾರೆ. ಈ ಪೈಕಿ ನೆರೆಯ ಆಂಧ್ರಪ್ರದೇಶ ಸತ್ಯಸಾಯಿ ಜಿಲ್ಲೆಯ ಕಲ್ಲಿ ತಾಂಡಾದ ಹೆಮ್ಮೆಯ ಪುತ್ರ ಮುರಳಿ ನಾಯಕ್ ಕೂಡ ಹುತಾತ್ಮರಾಗಿದ್ದಾರೆ. 

2022 ರಲ್ಲಿ ಅಗ್ನೀ ವೀರ್ ಮೂಲಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದ ಮುರಳಿ ನಾಯ್ಕ್ ಕಳೆದ ಎರಡೂವರೆ ವರ್ಷಗಳಿಂದ ಜಮ್ಮಕಾಶ್ಮೀರದಲ್ಲಿ ಸೇವೆ ಮಾಡುತ್ತಿದ್ದರು. ಕಳೆದ 7 ರಂದು ಕುಟುಂಬದ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದ ಮುರುಳಿ ಭಯಪಡಬೇಡಿ ನಾನು ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿಲ್ಲ. ನಾನು ಪಂಜಾಬ್ ನಲ್ಲಿದ್ದೇನೆ ಎಂದು ಪೋಷಕರಿಗೆ ಧೈರ್ಯ ತುಂಬಿದ್ದನು. ಆದ್ರೆ ಮರುದಿನ 8 ರ ರಾತ್ರಿ ನಡೆದ ಕ್ಷೀಪಣಿ ದಾಳಿ ವೇಳೆ ಗಡಿಯಲ್ಲಿ ಪಾಕಿಸ್ತಾನ ವಿರುದ್ಧದ ಗುಂಡಿನ ಕಾಳಗದಲ್ಲಿ ಮುರುಳಿ ಹುತಾತ್ಮರಾಗಿದ್ದಾರೆ. 

ಕಡುಬಡತನದಲ್ಲೆ ಹುಟ್ಟಿ ಬೆಳೆದಿದ್ದ ಮುರುಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಸೇನೆಗೆ ಸೇರಬೇಕೆಂಬ ಆಸೆಯಿಟ್ಟುಕೊಂಡಿದ್ದ. ರೈಲ್ವೆ ಕೆಲಸ ಸಿಕ್ಕಿದ್ರು, ನಾನು ಸೇನೆಯಲ್ಲೆ ದೇಶಕ್ಕಾಗಿ ಕೆಲಸ ಮಾಡಬೇಕೆಂಬ ಹಠದಿಂದಲೇ ಭಾರತೀಯ ಸೇನೆಗೆ ಸೇರಿದ್ದ ಮುರುಳಿ ದೇಶಕ್ಕಾಗಿ ಬಲಿದಾನವಾಗಿದ್ದಾನೆ. ಇನ್ನೂ ತಮ್ಮ ಪುತ್ರನ ಬಗ್ಗೆ ಮಾತನಾಡಿದ ಪೋಷಕರು ನನ್ನ ಮಗನ ಬಗ್ಗೆ ನಮಗೆ ಅಪಾರವಾದ ಗೌರವ, ಹೆಮ್ಮೆಯಿದೆ, ಸದಾ ದೇಶಕ್ಕಾಗಿ ದುಡಿಯಬೇಕೆಂಬ ಅವನ ಆಸೆ ನೋಡಿ ನಮಗೂ ಖುಷಿಯಾಗಿತ್ತು, ಆದ್ರೆ ಶತ್ರು ದೇಶ ಪಾಕಿಸ್ಥಾನದ ವಿರುದ್ಧ ಯುದ್ಧದಲ್ಲಿ ನಮ್ಮ ಮಗ ಹುತಾತ್ಮನಾಗಿದ್ದಾನೆ ಎಂದರು.

 ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ವಗ್ರಾಮ ಸತ್ಯಸಾಯಿ ಜಿಲ್ಲೆಯ ಕಲ್ಲಿ ತಾಂಡಾದ ವರೆಗೂ ಎಲ್ಲಾ ಕಡೆ ಜನರು ಮುರುಳಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು, ಎಲ್ಲಾ ಕಡೆ ಜೈಹೋ ಮುರುಳಿ ಘೋಷಣೆ ಕೇಳಿಬಂದವು. ಇಂದು ಸೇನೆಯಿಂದ ಗೌರವ ಸಮರ್ಪಣೆ ಮೂಲಕ ಅಂತ್ಯಕ್ರಿಯೆ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಸರ್ಕಾರದ ಪರವಾಗಿ ಡಿಸಿಎಂ ಪವನ್ ಕಲ್ಯಾಣ್, ಸಚಿವ ನಾರಾ ಲೋಕೇಶ್ ಸೇರಿ ಹಲವು ಸಚಿವರು, ಶಾಸಕರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಪಾಕ್ ಜೊತೆ ಕದನ ವಿರಾಮವಷ್ಟೇ ಆದರೆ.... ಜೈ ಶಂಕರ್‌ ಖಡಕ್ ಟ್ವೀಟ್‌

ವಿದ್ಯಾರ್ಥಿದೆಸೆಯಿಂದಲೇ ಸೇನೆಗೆ ಸೇರಬೆಕೆಂಬ ಹಂಬಲ

ಹೌದು ಮುರಳಿ ನಾಯ್ಕ್, ಅನಂತಪುರದ ಖಾಸಗಿ ಕಾಲೇಜಿನಲ್ಲೇ ಪದವಿ ವ್ಯಾಸಾಂಗ ಮಾಡುತಿದ್ದ ವೇಳೆ ಎನ್ ಸಿಸಿಯಲ್ಲಿ ಸಕ್ರಿಯನಾಗರುತ್ತಾನೆ, ಅಂದಿನಿಂದಲೂ ನಾನೊಬ್ಬ ಸೈನಿಕನಾಗಬೇಕೆಂದು ಕನಸು ಕಂಡಿರುತ್ತಾನೆ, ಅದರಂತೆ ಅಗ್ನೀವೀರ್ ಪರೀಕ್ಷೆಯನ್ನು ತೆಗೆದುಕೊಂಡು ಎಲ್ಲಾ ಹಂತಗಳಲ್ಲಿ ತೆರ್ಗಡೆಯಾಗಿ ಕೊನೆಗೂ ಭಾರತೀಯ ಸೇನೆಗೆ ಆಯ್ಕೆಯಾಗುತ್ತಾನೆ.. 

ರೈಲ್ವೆ ಕೆಲಸ ಸಿಕ್ಕಿದ್ರು ಸೇನೆಗೆ ತೆರಳಿದ ಮುರುಳಿ

ಹೌದು ಸೇನೆಗೆ ಆಯ್ಕೆಯಾಗುವ ವೇಳೆಯೆ ರೈಲ್ವೆ ಇಲಾಖೆಗೂ ಕೂಡ ಮುರಳಿ ಆಯ್ಕೆಯಾಗುತ್ತಾನೆ, ಈ ವೇಳೆ ಮುರುಳಿ ಪೋಷಕರು ಎಲ್ಲರು ಇರೋದು ಒಬ್ಬನೇ ಮಗ ನೀನು ರೈಲ್ವೆ ಕೆಲಸಕ್ಕೆ ಹೋಗು ಸೇನೆಗೆ ಬೇಡ ಅಂತಾರೆ, ಆದ್ರೆ ಮುರುಳಿ ಮಾತ್ರ ನಾನು ಸೇನೆಗೆ ಹೋಗೋದು ಒಂದು ದಿನ ಆದ್ರು ನಾನು ಮಿಲಿಟರಿ ಸಮವಸ್ತ್ರ ಧರಿಸಿ ದೇಶಕ್ಕಾಗಿ ಕೆಲಸ ಮಾಡಬೇಕು ಅಂತಾ ಪೋಷಕರನ್ನು ಒಪ್ಪಿಸುತ್ತಾನೆ ವೀರ ಸೈನಿಕ ಮುರುಳಿ. 

ಇದನ್ನೂ ಓದಿ: ಭಾರತದ ದಾಳಿಗೆ ಬೆದರಿ ಕದನ ವಿರಾಮಕ್ಕೆ ಅಂಗಲಾಚಿದ ಪಾಕ್!

ಎಲ್ಲಾ ಕಡೆ ಜೈಹೋ ಮುರುಳಿ ಎಂದು ಘೋಷಣೆ

ಬೆಂಗಳೂರು ವಿಮಾನ ನಿಲ್ದಾಣದಿಂದ ಸ್ವಗ್ರಾಮಕ್ಕೆ ಬರುವ ವರೆಗೂ ಮಾರ್ಗ ಮಧ್ಯೆ ಚಿಕ್ಕಬಳ್ಳಾಪುರ, ಬಾಗೇಪಲ್ಲಿಯ ವಿವಿಧಡೆ ಜನರು ಮಳೆಯನ್ನು ಲೆಕ್ಕಿಸದೇ ಮುರುಳಿ ಅವರ ಪಾರ್ಥಿವ ಶರೀರವನ್ನು ನೋಡಲು ಹಾಗೂ ಧೇಶಕ್ಕಾಗಿ ಹುತಾತ್ಮನಾದ ಮರುಳಿಗೆ ಅಂತಿಮ ನಮನ ಸಲ್ಲಿಸಿದ್ರು.