ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಘೋಷಣೆಯ ಕುರಿತು ಅಜ್ಮೀರ್ ಷರೀಫ್ ದರ್ಗಾದ ದಿವಾನ್ ಸೈಯದ್ ನಾಸಿರುದ್ದೀನ್ ಚಿಶ್ತಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತ ಯಾವಾಗಲೂ ಶಾಂತಿಪ್ರಿಯ ದೇಶವಾಗಿದೆ. ಭಾರತ ಎಂದಿಗೂ ಯುದ್ಧ ಅಥವಾ ಸಂಘರ್ಷದಲ್ಲಿ ನಂಬಿಕೆ ಇಟ್ಟಿಲ್ಲ. ಆದರೆ ದೇಶದ ಹೆಮ್ಮೆ, ಘನತೆ ಮತ್ತು ಭದ್ರತೆಯ ವಿಷಯಕ್ಕೆ ಬಂದಾಗ ಭಾರತ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ಅಜ್ಮೀರ್ (ಮೇ.10): ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಘೋಷಣೆಯ ಕುರಿತು ಅಜ್ಮೀರ್ ಷರೀಫ್ ದರ್ಗಾದ ದಿವಾನ್ ಸೈಯದ್ ನಾಸಿರುದ್ದೀನ್ ಚಿಶ್ತಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತ ಯಾವಾಗಲೂ ಶಾಂತಿಪ್ರಿಯ ದೇಶವಾಗಿದೆ. ಭಾರತ ಎಂದಿಗೂ ಯುದ್ಧ ಅಥವಾ ಸಂಘರ್ಷದಲ್ಲಿ ನಂಬಿಕೆ ಇಟ್ಟಿಲ್ಲ. ಆದರೆ ದೇಶದ ಹೆಮ್ಮೆ, ಘನತೆ ಮತ್ತು ಭದ್ರತೆಯ ವಿಷಯಕ್ಕೆ ಬಂದಾಗ ಭಾರತ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯು ಇಡೀ ದೇಶದಲ್ಲಿ ಕೋಪ ಮತ್ತು ಭಾವನಾತ್ಮಕ ನೋವನ್ನು ಉಂಟುಮಾಡಿತ್ತು ಎಂದು ಚಿಶ್ತಿ ಅವರು,ಭಾರತ ಸರ್ಕಾರ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು, ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಸೂಕ್ತ ಉತ್ತರ ನೀಡಿತು. ಆಪರೇಷನ್ ಸಿಂದೂರ ಮೂಲಕ ಭಯೋತ್ಪಾದಕರಿಗೆ ತಕ್ಕ ಶಾಸ್ತಿಯನ್ನು ನೀಡಲಾಯಿತು. ಭಾರತದ ದಾಳಿಗಳು ನಾಗರಿಕರಿಗೆ ಹಾನಿಯಾಗದಂತೆ ಕೇವಲ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿದ್ದವು ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: 'ಕದನ ವಿರಾಮ ಜಾರಿಯಲ್ಲಿರಲಿ ಅಥವಾ ಇಲ್ಲದಿರಲಿ ಏನೂ ವ್ಯತ್ಯಾಸವಾಗದು, ಪ್ರಧಾನಿ ಮೋದಿಗೆ ಓವೈಸಿ ಪ್ರಶ್ನೆಗಳ ಸುರಿಮಳೆ!

ಪಾಕಿಸ್ತಾನವನ್ನು ನಂಬುವಂತಿಲ್ಲ:
ಕದನ ವಿರಾಮದ ನಿರ್ಧಾರವನ್ನು ಭಾರತ ಸರ್ಕಾರ ಮತ್ತು ಸೇನೆಯು ಎಚ್ಚರಿಕೆಯಿಂದ ಪರಿಗಣಿಸಿ ತೆಗೆದುಕೊಂಡಿರಬೇಕು. ಭಾರತದ ನಿಲುವು ತುಂಬಾ ಸ್ಪಷ್ಟವಾಗಿದೆ. ಆದರೆ, ಪಾಕಿಸ್ತಾನ ಸರ್ಕಾರ ಮತ್ತು ಅದರ ಸೈನ್ಯದ ವಿಶ್ವಾಸಾರ್ಹತೆಯ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ದುಷ್ಟ ಉದ್ದೇಶಗಳು ಅವರ ಹೃದಯದಲ್ಲಿ ಬೇರೂರಿವೆ. ಅವರು ಯಾವುದೇ ಸಮಯದಲ್ಲಿ ಏನು ಬೇಕಾದರೂ ಮಾಡಬಹುದು. ದೇಶವಾಸಿಗಳು ಈ ಬಾರಿ ಪಿಒಕೆಯನ್ನು ಭಾರತದೊಂದಿಗೆ ಮತ್ತೆ ಸಂಯೋಜಿಸುವ ಆಕಾಂಕ್ಷೆಯನ್ನು ಹೊಂದಿದ್ದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 'ಪ್ರಧಾನಿಗಳೇ ಅಮೆರಿಕವನ್ನು ತಂದೆಯಾಗಲು ಬಿಡಬೇಡಿ' ಕದನ ವಿರಾಮ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಯಾರು? ಪಪ್ಪು ಯಾದವ್ ಕಿಡಿ!

ಭಾರತಕ್ಕೆ ಮಂಡಿಯೂರಿದ ಪಾಕಿಸ್ತಾನ:
ಪಾಕಿಸ್ತಾನವು ಕಳೆದ ಮೂರು ದಿನಗಳಿಂದ ಭಿಕ್ಷೆ ಬೇಡುತ್ತಿದೆ. ಭಾರತದ ದಾಳಿಗಳನ್ನು ತಡೆಯಲು ದೊಡ್ಡ ರಾಷ್ಟ್ರಗಳ ಬಾಗಿಲಿಗೆ ಬಂದು ನಿಂತಿದೆ. ಭಾರತ ಸರ್ಕಾರ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಪಾಕಿಸ್ತಾನವನ್ನು ಮಂಡಿಯೂರಿಸಿದೆ ಎಂದು ಚಿಶ್ತಿ ಶ್ಲಾಘಿಸಿದ್ದಾರೆ. ಭಾರತ ಸರ್ಕಾರ ಮತ್ತು ಸೈನ್ಯದ ಪ್ರತಿಯೊಂದು ನಿರ್ಧಾರದೊಂದಿಗೆ ನಾವು ನಿಲ್ಲುತ್ತೇವೆ.ಆದರೆ ನಾವು ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. 

Scroll to load tweet…