ರಾಮಾಯಣ ಸಿನಿಮಾದಲ್ಲಿ ನಟಿಸಿರುವ ಹೀರೋ ಹೀರೋಯಿನ್‌ಗಳು ಪಡೆದ ಸಂಭಾವನೆ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಚಿತ್ರದಲ್ಲಿ ರಾಕ್ಷಸನ ಪಾತ್ರ ಮಾಡಿರುವ ವಿವೇಕ್ ಒಬೇರಾಯ್, ಒಂದೇ ಒಂದು ರೂಪಾಯಿ ಹಣವನ್ನ ಸ್ವಂತಕ್ಕೆ ಪಡೆದಿಲ್ಲ. ಬದಲಾಗಿ ಯಾರಿಗೆ ಕೊಟ್ಟಿದ್ದಾರೆ ಗೊತ್ತಾ?
- Home
- News
- India News
- India News Live: ‘ರಾಮಾಯಣ’ ಸಂಭಾವನೆಯ ಒಂದೇ ಒಂದು ರೂಪಾಯಿಯನ್ನೂ ಇಟ್ಟುಕೊಳ್ಳದ ವಿವೇಕ್ ಒಬೆರಾಯ್! 50 ಮಕ್ಕಳ ಪಾಲಿಗೆ ದೇವರಾದ ನಟ
India News Live: ‘ರಾಮಾಯಣ’ ಸಂಭಾವನೆಯ ಒಂದೇ ಒಂದು ರೂಪಾಯಿಯನ್ನೂ ಇಟ್ಟುಕೊಳ್ಳದ ವಿವೇಕ್ ಒಬೆರಾಯ್! 50 ಮಕ್ಕಳ ಪಾಲಿಗೆ ದೇವರಾದ ನಟ

‘ಯಾವುದೇ ಗುಂಪು ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಸ್ಥಳವನ್ನು ಶಾಶ್ವತವಾಗಿ ಅಥವಾ ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕಟು ಅಭಿಪ್ರಾಯ ವ್ಯಕ್ತಪಡಿಸಿದೆ.
‘ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಸ್ಥಳಗಳ ನಿರ್ಬಂಧಗಳಿಂದ ತಮಗೆ ತೊಂದರೆ ಆಗುತ್ತಿದೆ. ಪ್ರತಿಭಟನೆಗಳ ಸಂದರ್ಭದಲ್ಲಿ ಅಂಗಡಿಗಳನ್ನು ಮುಚ್ಚಿದ್ದರಿಂದ ಕೋಟ್ಯಂತರ ರುಪಾಯಿ ನಷ್ಟವಾಗಿದೆ’ ಎಂದು ಆರೋಪಿಸಿ ವ್ಯಾಪಾರಿಗಳ ಸಂಘಟನೆಯ ಅರ್ಜಿ ಅಲ್ಲಿಸಿತ್ತು,
ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನ್ಯಾ। ಸೂರ್ಯಕಾಂತ್ ನೇತೃತ್ವದ ಪೀಠ, ‘ಪ್ರತಿಭಟಿಸುವ ಹಕ್ಕು ಸಂವಿಧಾನಾತ್ಮಕ ಹಕ್ಕು ಹೌದು, ಆದರೆ ಇದರೊಂದಿಗೆ ವ್ಯಾಪಾರಿಗಳು, ಕಾರ್ಮಿಕರು ಮತ್ತು ಸಾಮಾನ್ಯ ಜನರ ಕೆಲಸ ಹಾಗೂ ಓಡಾಟದ ಹಕ್ಕು ಕೂಡ ಇದೆ. ಅದನ್ನು ಕೂಡ ಸಮತೋಲನಗೊಳಿಸಬೇಕು’ ಎಂದು ಸರ್ಕಾರಕ್ಕೆ ಸೂಚ್ಯವಾಗಿ ಚಾಟಿ ಬೀಸಿತು.
‘ನೀವು ಯಾವಾಗಲೂ ಒಂದು ಸ್ಥಳವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಜಂತರ್ ಮಂತರ್ನಂತಹ ನಿರ್ದಿಷ್ಟ ಪ್ರತಿಭಟನಾ ಸ್ಥಳಗಳಿಗೂ ಒಂದು ನಿರ್ದಿಷ್ಟ ಸಮಯದ ಮಿತಿ ಇರಬೇಕು’ ಎಂದಿತು.
India News Live ‘ರಾಮಾಯಣ’ ಸಂಭಾವನೆಯ ಒಂದೇ ಒಂದು ರೂಪಾಯಿಯನ್ನೂ ಇಟ್ಟುಕೊಳ್ಳದ ವಿವೇಕ್ ಒಬೆರಾಯ್! 50 ಮಕ್ಕಳ ಪಾಲಿಗೆ ದೇವರಾದ ನಟ
India News Live ಕನ್ನಡದಲ್ಲೂ ರಜನಿಕಾಂತ್ ಅಬ್ಬರ - ಕರ್ನಾಟಕದಲ್ಲಿ ಆ ಸಿನಿಮಾದ ದಾಖಲೆ ಪುಡಿಗಟ್ಟಿದ ಜೈಲರ್ 2 - ಹೇಗೆ?
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಕರ್ನಾಟಕದಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿಯ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಯಾದ ಮೊದಲ 18 ದಿನಗಳಲ್ಲಿ ಚಿತ್ರದ ಕನ್ನಡ ಆವೃತ್ತಿ ₹9.54..
India News Live 'ಗರ್ಲ್‌ಫ್ರೆಂಡ್ ಜತೆ ಒಟ್ಟಿಗೆ ಸಮಯ ಕಳೆಯುವಾಗ ಇಂತಹ ಡ್ಯಾನ್ಸ್ ಮಾಡ್ತೇವೆ' - ವಿಭಿನ್ನ ಸೆಲೆಬ್ರೇಷನ್ ಗುಟ್ಟು ಬಿಚ್ಚಿಟ್ಟ ಅರ್ಶದೀಪ್ ಸಿಂಗ್
India News Live Salman Khan - 'ಒಂದು ಕ್ಷಮೆ ಸಾಕು' ಸಲ್ಮಾನ್ಖಾನ್ಗೆ ಬಿಷ್ಣೋಯ್ ಸಂಬಂಧಿ ಸಲಹೆ; ರಿಯಾಕ್ಷನ್ ಬಂದಿರೋದು ಏನು?
ಸಲ್ಮಾನ್ ಖಾನ್ ಈ ಮನವಿಗೆ ಪ್ರತಿಕ್ರಿಯಿಸುತ್ತಾರೆಯೇ? ದೇವಸ್ಥಾನಕ್ಕೆ ಭೇಟಿ ನೀಡುವ ನಿರ್ಧಾರ ಕೈಗೊಳ್ಳುತ್ತಾರೆಯೇ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸದ್ಯ ಈ ಬೆಳವಣಿಗೆ ಬಾಲಿವುಡ್ ಹಾಗೂ ಬಿಷ್ಣೋಯ್ ಸಮುದಾಯದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಏನ್ ಹೇಳ್ತಾರೆ? ನೋಡಿ..
India News Live ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗ - 31 ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ನೇಮಕಾತಿ
India News Live IND vs NZ - ಏಕದಿನ ಕ್ರಿಕೆಟ್‌ನಲ್ಲಿ ಯಾವ ದಿಗ್ಗಜನೂ ಮಾಡಿರದ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ..! ಈ ರೆಕಾರ್ಡ್ ಬ್ರೇಕ್ ಆಗೋದು ಡೌಟ್
India News Live ಪ್ರಾರ್ಥನೆಗೆ ಅವಕಾಶ ಕೊಟ್ಟ ಜಾಗದಲ್ಲಿ ಮಸೀದಿ ನಿರ್ಮಾಣ - ಶತಮಾನದ ಕಟ್ಟಡಕ್ಕೆ ಬುಲ್ಡೋಜರ್ ಭೀತಿ?
ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ದೆಹಲಿಯ ಕೃಷಿ ಭವನದಲ್ಲಿರುವ 100 ವರ್ಷಗಳ ಹಳೆಯ ಖಾದೀಮಿ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಸರ್ಕಾರಿ ಕಚೇರಿ ಸಂಕೀರ್ಣದಲ್ಲಿ ಶಾಶ್ವತ ಧಾರ್ಮಿಕ ರಚನೆಗೆ ಅವಕಾಶ ನೀಡುವುದು ಆಸ್ತಿಯ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗಿದೆ ಎಂದು ಸರ್ಕಾರ ವಾದಿಸಿದೆ.
India News Live ಅಮೆರಿಕದ ಚುನಾವಣೆ ಗೆದ್ದ ಭಟ್ಕಳದ ಅಳಿಯ; ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿಗೆ ಸೋಲು
ಅಮೆರಿಕದ ಮಿಶಿಗನ್ ಸೆನೆಟ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸಿ ಡಾ. ಅಬ್ದುಲ್ ಅಲ್ ಸಯೀದ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಇವರು ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ಈಜಿಪ್ಟ್ ಮೂಲದ ಅಮೆರಿಕನ್ ಆಗಿದ್ದಾರೆ.
India News Live ಸಾಯ್ ಅನುದಾನ ಸ್ಥಗಿತ - ಸ್ವಂತ ಖರ್ಚಲ್ಲೇ ಆಡಿ ಗೆದ್ದ ಪಿ.ವಿ. ಸಿಂಧು, ಲಕ್ಷ್ಯ ಸೇನ್!
India News Live India Pride - ಕಳೆದ 10 ದಿನಗಳಲ್ಲಿ ವಿಶ್ವವನ್ನೇ ನಿಬ್ಬೆರಗಾಗಿಸಿದ ಭಾರತದ ಸಾಧನೆಗಳು, ನೀವು ಹೆಮ್ಮೆಪಡ್ತೀರಿ!
ಕಳೆದ 10 ದಿನಗಳಲ್ಲಿ ಭಾರತವು ಬಾಹ್ಯಾಕಾಶ, ರೈಲ್ವೆ, ಆರ್ಥಿಕತೆ ಮತ್ತು ಕಡಲ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುವ ಸಾಧನೆಗಳನ್ನು ಮಾಡಿದೆ. ISRO ಉಪಗ್ರಹ ಉಡಾವಣೆ, ಬುಲೆಟ್ ರೈಲು ಕಾಮಗಾರಿ, ಬಡತನ ಇಳಿಕೆ ಮತ್ತು ಜಿಯೋ ಐಪಿಒ ದಾಖಲೆಗಳು ದೇಶದ ಪ್ರಗತಿಯನ್ನು ಎತ್ತಿ ತೋರಿಸುತ್ತವೆ.
India News Live Tiger Case - ಟೈಗರ್ ಶ್ರಾಫ್ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹರಿಯಾಣದ 22 ವರ್ಷದ ಯುವತಿ ಅರೆಸ್ಟ್!
ಟೈಗರ್ ಶ್ರಾಫ್ ಗುಂಡಿನ ದಾಳಿ ಪ್ರಕರಣದಲ್ಲಿ ಒಂದೊಂದೇ ಕೊಂಡಿಗಳು ಹೊರಬರುತ್ತಿದ್ದು, ಪೊಲೀಸರ ತನಿಖೆ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸ್ಫೋಟಕ ಮಾಹಿತಿ ಹೊರಬರುತ್ತದೆಯೇ ಎಂಬ ಕುತೂಹಲ ಬಾಲಿವುಡ್ ವಲಯದಲ್ಲಿ ಮೂಡಿದೆ.
India News Live Diwali Crackers - ದೀಪಾವಳಿ ಹಬ್ಬದಂದು ಮಾತ್ರವಲ್ಲ, ಈ ಹಬ್ಬಗಳಲ್ಲೂ ಪಟಾಕಿ ಸಿಡಿಸಲಾಗುತ್ತೆ!
Diwali Crackers 2026: ಭಾರದಲ್ಲಿ ದೀಪಾವಳಿ ಹಬ್ಬದಂದು ಮಾತ್ರವಲ್ಲದೆ ಈ ಹಬ್ಬಳ್ಳಲ್ಲೂ ಹೆಚ್ಚು ಪಟಾಕಿ ಸಿಡಿಸಲಾಗುತ್ತದೆ. ಆ ಹಬ್ಬಗಳು ಯಾವವು ತಿಳಿಯಲು ಮುಂದೆ ಓದಿ.
India News Live ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್‌ವರ್ಕ್ ನೆಫ್ರೋಪ್ಲಸ್ ಲಾಭದಲ್ಲಿ ಭರ್ಜರಿ ಏರಿಕೆ, ಕಜಕಿಸ್ತಾನಕ್ಕೂ ಕಾಲಿಟ್ಟ ಭಾರತದ ಕಂಪನಿ
2026-27ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 585.2 ಕೋಟಿ ರೂ. ಆದಾಯ, ಶೇ. 23.6ರಷ್ಟು ಏರಿಕೆ
ನಿವ್ವಳ ಲಾಭದಲ್ಲಿ ಶೇ. 34.7ರಷ್ಟು ಭಾರಿ ಜಿಗಿತ, ₹76.1 ಕೋಟಿ ಲಾಭ ದಾಖಲು
ಕಜಕಿಸ್ತಾನ್ ಪ್ರವೇಶದೊಂದಿಗೆ 6 ದೇಶಗಳಿಗೆ ಸೇವೆ ವಿಸ್ತರಣೆ, ಒಟ್ಟು 570 ಕ್ಲಿನಿಕ್‌ಗಳ ಬೃಹತ್ ಜಾಲ.
ಕಂಪನಿಯ ಒಟ್ಟು ಆದಾಯದಲ್ಲಿ ವಿದೇಶಿ ವಹಿವಾಟಿನ ಪಾಲು ಶೇ. 47ಕ್ಕೆ ಏರಿಕೆ
India News Live ಟೀಂ ಇಂಡಿಯಾ ಬಿಗಿ ದಾಳಿಗೆ ಅಲ್ಪ ಮೊತ್ತಕ್ಕೆ ಕಿವೀಸ್ ಆಲೌಟ್; ಕಮ್‌ಬ್ಯಾಕ್ ಪಂದ್ಯದಲ್ಲಿ ರೋಹಿತ್ ಶರ್ಮಾ ಗಳಿಸಿದ ರನ್ ಎಷ್ಟು?
India News Live ಭಾರತದ ಬೀದಿ ಬದಿ ವ್ಯಾಪಾರಿಯಾದ ಟ್ರಂಪ್ ಮೀಮ್ಸ್, ಅಮೆರಿಕ ಚುನಾವಣೆ ಫಲಿತಾಂಶ ಬೆನ್ನಲ್ಲೇ ಫುಲ್ ಟ್ರೋಲ್
ಅಮೆರಿದ ಮಧ್ಯಂತರ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಡೋನಾಲ್ಡ್ ಟ್ರಂಪ್ ಮೀಮ್ಸ್ ಹರಿದಾಡುತ್ತಿದೆ. ಟ್ರಂಬ್ ಬೆಂಬಲಿತ ವೀವೆಕ್ ರಾಮಸ್ವಾಮಿ ಹಿನ್ನಡೆ ಅನುಭವಿಸುತ್ತಿದ್ದಂತೆ ಟ್ರಂಪ್ ಫುಲ್ ಟ್ರೋಲ್ ಆಗಿದ್ದಾರೆ.
India News Live ಬಿಡುಗಡೆ ಹೊತ್ತಲ್ಲಿ 'ರಾಮಾಯಣ' ಚಿತ್ರತಂಡಕ್ಕೆ ನೆಮ್ಮದಿ; ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ಮಧ್ಯಂತರ ಆದೇಶ ಜಾರಿ
ಈ ಪ್ರಕರಣದಲ್ಲಿ ಗೂಗಲ್ ಎಲ್‌ಎಲ್‌ಸಿ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಪರ ವಕೀಲರು ಕೂಡ ಪೈರಸಿ ಸಂಬಂಧಿತ ದೂರುಗಳ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಚಿತ್ರದ ಅನಧಿಕೃತ ದೃಶ್ಯಗಳು ಆನ್‌ಲೈನ್‌ನಲ್ಲಿ ಹರಡುವುದನ್ನು ತಡೆಯಲು ಚಿತ್ರತಂಡಕ್ಕೆ ಮತ್ತಷ್ಟು ನೆರವು ಸಿಕ್ಕಂತಾಗಿದೆ.