ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಾಣದ ಚಿತ್ರವನ್ನು ಕಂಡು ಖ್ಯಾತ ರ‍್ಯಾಪರ್ ಬಾದ್‌ಶಾ ಬೆರಗಾಗಿ ಹೋಗಿದ್ದಾರಂತೆ. ಈ ಬಗ್ಗೆ ಟ್ವಿಟರ್‍‌ನಲ್ಲಿ ಪ್ರತಿಕ್ರಿಯಿಸಿರುವ ಅವರು.. ಇದು ನಿಜಕ್ಕೂ ಕಣ್ಣೀರು ಹಾಕುವಂತಹ ಚಿತ್ರ. ನಾನೂ ಕೂಡ ಅತ್ತುಬಿಟ್ಟೆ ಎಂದು ಕೊಂಡಾಡಿದ್ದಾರೆ.

ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ ರಾಮಾಯಣ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಈ ಮಧ್ಯೆ ನವೆಂಬರ್ 3 ರಂದು ಮುಂಬೈನಲ್ಲಿ ಚಿತ್ರದ ವಿಶೇಷ ಪ್ರದರ್ಶನ ನಡೆಯಿತು. ಆ ಮೂಲಕ ರಾಮಾಯಣ ಮೊದಲ ಭಾಗವನ್ನು ಅನೇಕ ಬಾಲಿವುಡ್ ತಾರೆಯರು ವೀಕ್ಷಣೆ ಮಾಡಿದರು. ಇದೀಗ ಚಿತ್ರದ ಬಗ್ಗೆ ಒಬ್ಬೊಬ್ಬರೇ ತಮ್ಮ ಮನದಾಳವನ್ನು ಹಂಚಿಕೊಳ್ಳುತ್ತಿದ್ದಾರೆ.

ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಾಣದ ಚಿತ್ರವನ್ನು ಕಂಡು ಖ್ಯಾತ ರ‍್ಯಾಪರ್ ಬಾದ್‌ಶಾ ಬೆರಗಾಗಿ ಹೋಗಿದ್ದಾರಂತೆ. ಈ ಬಗ್ಗೆ ಟ್ವಿಟರ್‍‌ನಲ್ಲಿ ಪ್ರತಿಕ್ರಿಯಿಸಿರುವ ಅವರು.. ಇದೂ ನಿಜಕ್ಕೂ ಕಣ್ಣೀರು ಹಾಕುವಂತಹ ಚಿತ್ರ. ನಾನೂ ಕೂಡ ಅತ್ತುಬಿಟ್ಟೆ ಎಂದು ಕೊಂಡಾಡಿದ್ದಾರೆ.

ಏನು ಹೇಳಿದ್ರು ಬಾದ್‌ಶಾ?

ನೀವೆಲ್ಲರೂ ರಾಮಾಯಣ ನೋಡಲೇಬೇಕು. ಪ್ರತಿ ಫ್ರೇಮ್ ಕೂಡ ಉಸಿರುಕಟ್ಟುವಂತಿದೆ. ಅದನ್ನು ನಮಿತ್ ಮಾಡಿ ತೋರಿಸಿದ್ದಾರೆ. ಪ್ರತಿಯೊಂದು ಪಾತ್ರವೂ ತುಂಬಾ ನೈಜ ಮತ್ತು ಪ್ರಾಮಾಣಿಕವೆನಿಸುತ್ತದೆ. ಅದು ನನ್ನನ್ನು ಅಳುವಂತೆ ಮಾಡಿತು. ಖಂಡಿತ! ನಾವೆಲ್ಲರೂ ಈ ಕಥೆಯನ್ನು ಬಾಲ್ಯದಿಂದಲೂ ನೋಡುತ್ತಿದ್ದೇವೆ. ಆದರೂ ಚಿತ್ರವು ಒಂದು ಅದ್ಭುತ ಅನುಭವ. ಹಿನ್ನೆಲೆ ಸಂಗೀತ ಅತ್ಯುತ್ತಮವಾಗಿದೆ. ರಣಬೀರ್, ಸಾಯಿ ಪಲ್ಲವಿ, ರವಿ ದುಬೆ, ಯಶ್, ಲಾರಾ ದತ್ತ, ಅರುಣ್ ಗೋವಿಲ್ ಮತ್ತು ರಾಕುಲ್ ಸೇರಿದಂತೆ ಎಲ್ಲರೂ ಉತ್ತಮ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಬರುವ ಜಟಾಯು ದೃಶ್ಯ ಅದ್ಭುತವಾಗಿದೆ. ಮತ್ತು ಭೂಮಿ ಮತ್ತು ಆಕಾಶದ ಥೀಮ್ ಕ್ಷಣಕ್ಕಾಗಿ ಕಾಯಿರಿ..ನೀವು ಸೀನ್‌ಗೆ ಚಪ್ಪಾಳೆ ತಟ್ಟಲೇಬೇಕು ಎಂದು ಕೊಂಡಾಡಿದ್ದಾರೆ.

ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿರುವ ಈ ಬೃಹತ್ ಸಿನಿಮಾ ತೆರೆಕಾಣಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಾಳೆ ಅಭಿಮಾನಿಗಳ ಎಕ್ಸೈಟ್‌ಮೆಂಟ್‌ಗೆ ಹ್ಯಾಪಿ ಎಂಡಿಂಗ್ ಸಿಗಲಿದೆ. ವಿಶ್ವದಾದ್ಯಂತ ನಾಳೆ ಬೆಳಗ್ಗೆ ತೆರೆ ಕಾಣುತ್ತಿದ್ದು, ಸಿನಿಮಾ ರಸಿಕರಿಗೆ ದೀಪಾವಳಿಯ ಧಮಾಕಾ ಸೃಷ್ಟಿಯಾಗಿದೆ.

ಬರೋಬ್ಬರಿ 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಪೌರಾಣಿಕ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮೂರನೇ ಭಾಗ ಬರುವ ಸುಳಿವು ಕೂಡ ಅನಧಿಕೃತವಾಗಿ ಸಿಗುತ್ತಿದೆ. ಇನ್ನು ಮೊದಲ ಭಾಗ ಬಿಡುಗಡೆಯಾಗುವ ಮೊದಲೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅದರಲ್ಲೂ ಮುಂಗಡ ಟಿಕೆಟ್ ಬುಕಿಂಗ್ ವಿಚಾರದಲ್ಲಿ ಚಿತ್ರ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ₹100 ಕೋಟಿ ಗಡಿ ದಾಟಿದೆ. ಭಾರತೀಯ ಸಿನಿಮಾಗಳಲ್ಲಿ ಈ ರೀತಿಯ ಸಾಧನೆ ಮಾಡಿರುವ ಚಿತ್ರಗಳ ಸಂಖ್ಯೆ ಬಹಳ ಕಡಿಮೆ. ಇದೀಗ ಆ ವಿಶೇಷ ಪಟ್ಟಿಗೆ 'ರಾಮಾಯಣ' ಕೂಡ ಸೇರ್ಪಡೆಯಾಗಿದೆ.