Maa Inti Bangaram OTT: ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರ ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಕೆಯ ಮೈಲಿಗಲ್ಲು ತಲುಪಿದೆ.
- Home
- News
- India News
- National News Live: ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್ - 'ಮಾ ಇಂಟಿ ಬಂಗಾರಂ' OTT ರಿಲೀಸ್ ಡೇಟ್ ಫಿಕ್ಸ್! ಯಾವಾಗ?
National News Live: ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್ - 'ಮಾ ಇಂಟಿ ಬಂಗಾರಂ' OTT ರಿಲೀಸ್ ಡೇಟ್ ಫಿಕ್ಸ್! ಯಾವಾಗ?

ನವದೆಹಲಿ (ಜು.13): ಉತ್ತರಾಖಂಡದ ಪ್ರಸಿದ್ದಬದರೀನಾಥ ದೇವಾಲಯದಲ್ಲೂ ಹುಂಡಿ ಕಳವು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್ ಐಟಿ), ಅಕ್ರಮ ನಡೆದಿ ರುವುದು ನಿಜ ಎಂದು ಬಹಿರಂಗಪಡಿಸಿದೆ. ಇದಕ್ಕೆ ಸಂಬಂಧಿಸಿದ 18 ಪುಟಗಳ ವರದಿ ಯನ್ನು ಬದರೀನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಸಿಇಒಗೆ ಸಲ್ಲಿಸಿದೆ. ಉತ್ತರಾಖಂಡ ಸರ್ಕಾರವು ಬಿಕೆಟಿಸಿಯ ಸಿಇಒಗೆ ತನಿಖಾ ವರದಿಯಲ್ಲಿ ಹೆಸರಿಸಲಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 13th July: ಸಮಂತಾ ಅಭಿಮಾನಿಗಳಿಗೆ ಗುಡ್ ನ್ಯೂಸ್ - 'ಮಾ ಇಂಟಿ ಬಂಗಾರಂ' OTT ರಿಲೀಸ್ ಡೇಟ್ ಫಿಕ್ಸ್! ಯಾವಾಗ?
India News Live 13th July: Trump Tax - ಹೊರ್ಮುಜ್ ಜಲಸಂಧಿ ಮೇಲೆ ಶೇ. 20 ತೆರಿಗೆ; ಭಾರತದ ಎಲ್‌ಪಿಜಿ ಪೂರೈಕೆಗೆ ಕುತ್ತು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳ ಮೇಲೆ ಶೇ. 20ರಷ್ಟು ಭದ್ರತಾ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇರಾನ್‌ಗೆ ಪಾಠ ಕಲಿಸುವ ಈ ಕ್ರಮದಿಂದ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.
India News Live 13th July: Rohit Chandel Arrest - ಕಿರುತೆರೆ ನಟ ರೋಹಿತ್ ಚಂದೆಲ್ ಅರೆಸ್ಟ್; ಮುಂಬೈನಲ್ಲಿ ಆ ಆರೋಪದಲ್ಲಿ ಸಿಕ್ಕಬಿದ್ದ ಈ ನಟ!
ಆರೋಪಿ ರೋಹಿತ್ ಚಂದೆಲ್ ನಿವಾಸದ ಮೇಲೆ ದಾಳಿ ನಡೆಸಿ, ಪೊಲೀಸರು ಜುಲೈ 10ರ ಶುಕ್ರವಾರದಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78 ಮತ್ತು 115(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
India News Live 13th July: ಖತಾರ್‌ನ ಮಾಜಿ ಅಮೀರ್ ಶೇಖ್ ಹಮದ್ ನಿಧನಕ್ಕೆ ಭಾರತದಲ್ಲಿ ರಾಷ್ಟ್ರೀಯ ಶೋಕಾಚರಣೆ
ಖತಾರ್ ದೇಶದ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರ ನಿಧನದ ಹಿನ್ನೆಲೆಯಲ್ಲಿ, ಗೌರವಸೂಚಕವಾಗಿ ಭಾರತ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ನಡೆಸಿದೆ. ಎಲ್ಲಾ ಸರ್ಕಾರಿ ಹಾಗೂ ಪ್ರಮುಖ ಕಟ್ಟಡಗಳ ಮೇಲೆ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿದೆ.
India News Live 13th July: ಆನೆ ಏರಿ, ಕೈಯಲ್ಲಿ ವೇಲ್ ಹಿಡಿದು ಬಂದ 'ತಮಿಳ್ ಮುರುಗನ್' - ಅಷ್ಟಕ್ಕೂ ಯಾರು ಈ ಸ್ಟಾರ್ ನಟ?
ನಟ ಧನುಷ್ ಅವರ ಬಹುನಿರೀಕ್ಷಿತ 'ತಮಿಳ್ ಮುರುಗನ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದು ನಿರ್ದೇಶಕ ವೆಟ್ರಿಮಾರನ್ ಜೊತೆಗಿನ ಧನುಷ್ ಅವರ ಐದನೇ ಸಿನಿಮಾ. ಪೋಸ್ಟರ್‌ನಲ್ಲಿ ಧನುಷ್ ಆನೆ ಮೇಲೆ ಕುಳಿತು, ಕೈಯಲ್ಲಿ ಭರ್ಜಿ ಹಿಡಿದು, ದೊಡ್ಡ ಸೈನ್ಯದ ಮುಂದೆ ನಿಂತಿದ್ದಾರೆ.
India News Live 13th July: ಮಹಿಳೆಯರ ಲಾರ್ಡ್ಸ್ ಟೆಸ್ಟ್ ಗೆಲುವಿನ ಹಿಂದಿದೆ ಸಟಿನ್ ಟಿಪ್ಸ್, ಪಂದ್ಯಕ್ಕೂ ಮೊದಲು ನೀಡಿದ್ರು ಪೆಪ್ ಟಾಕ್
ಭಾರತ ಮಹಿಳಾ ತಂಡ ಲಾರ್ಡ್ಸ್ ಟೆಸ್ಟ್ ಗೆದ್ದುಇತಿಹಾಸ ರಚಿಸಿದೆ. ವಿಶೇಷ ಅಂದರೆ ನಾಲ್ಕನೇ ದಿನ ಸಚಿನ್ ತೆಂಡೂಲ್ಕರ್ ಮಹಿಳಾ ತಂಡಕ್ಕೆ ಪೆಪ್ ಟಾಕ್ ನೀಡಿದ್ದರು. ಅದೇ ದಿನ ಮಹಿಳೆಯರು ಟೆಸ್ಟ್ ಗೆದ್ದು ಇತಿಹಾಸ ರಚಿಸಿದ್ದಾರೆ.
India News Live 13th July: 'ನಾನೇ ಅವಳನ್ನು ಬಿಟ್ಟಿದ್ದು' - ದೀಪಿಕಾ ಬಗ್ಗೆ ಮೊದಲ ಮಾಜಿ ಬಾಯ್‌ಫ್ರೆಂಡ್ ಸ್ಫೋಟಕ ಹೇಳಿಕೆ!
ದೀಪಿಕಾ ಪಡುಕೋಣೆ ಅವರ ಮೊದಲ ಬಾಯ್‌ಫ್ರೆಂಡ್ ಎನ್ನಲಾದ ಮುಝಮ್ಮಿಲ್ ಇಬ್ರಾಹಿಂ, ಹಲವು ವರ್ಷಗಳ ನಂತರ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸಂಬಂಧ ಶುರುವಾಗಿದ್ದು ಹೇಗೆ ಮತ್ತು ಬ್ರೇಕಪ್ ಮಾಡಿದ್ದು ಯಾರು ಎಂಬ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.
India News Live 13th July: ಬಿಲಾಸಪುರದಲ್ಲಿ ರೈಲು ಅಪಘಾತ, ಹಳಿ ತಪ್ಪಿದ ಮೂರು ಬೋಗಿಗಳಿಂದ ಸಂಚಾರದಲ್ಲಿ ವ್ಯತ್ಯಯ
ಬಿಲಾಸಪುರದಲ್ಲಿ ರೈಲು ಅಪಘಾತ ಸಂಭವಿಸಿದೆ. ಮೂರು ಬೋಗಿಗಳು ಹಳಿ ತಪ್ಪಿದ ಪರಿಣಾಮ ಇತರ ರೈಲು ಸಂಚಾರ ವಿಳಂಬವಾಗಿದೆ. ಈ ಮಾರ್ಗದಲ್ಲಿ ಚಲಿಸಬೇಕಿದ್ದ ಹಲವು ಪ್ರಯಾಣಿಕರ ರೈಲುಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
India News Live 13th July: ದೆಹಲಿ ಗಲಭೆಯಲ್ಲಿ ಇಂಟಲಿಜೆನ್ಸ್ ಅಧಿಕಾರಿ ಹತ್ಯೆ ಕೇಸ್ ತೀರ್ಪು, ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ದೋಷಿ
ದೆಹಲಿ ಗಲಭೆ ವೇಳೆ ಇಂಟಲಿಜೆನ್ಸ್ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದೆ. ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಜಾವೇದ್ ಸೇರಿದಂತೆ ನಾಲ್ವರು ದೋಷಿ ಎಂದಿದೆ.
India News Live 13th July: Shocking - Celina Jaitly - ಮದುವೆ-ಮಕ್ಕಳು-ಡಿವೋರ್ಸ್.. 'ಪ್ರಿನಪ್ ಒಪ್ಪಂದ'ದ ಬಗ್ಗೆ ಒತ್ತಿ ಹೇಳಿದ ಸೆಲಿನಾ ಜೇಟ್ಲಿ, ಕಾವೇರಿದ ಪರ-ವಿರೋಧ ಚರ್ಚೆ!
2010ರಲ್ಲಿ ಆಸ್ಟ್ರಿಯಾದ ಉದ್ಯಮಿ ಪೀಟರ್ ಹಾಗ್ ಕೈ ಹಿಡಿದಾಗ ಸೆಲಿನಾ ಬದುಕು ಹೂವಿನ ಹಾಸಿಗೆಯಂತೆ ಕಾಣುತ್ತಿತ್ತು. ಮೂವರು ಗಂಡು ಮಕ್ಕಳೊಂದಿಗೆ ಸಂಸಾರ ಸುಂದರವಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಸುಂದರ ದಾಂಪತ್ಯದ ಪರದೆಯ ಹಿಂದೆ 'ನರಕ' ಸದೃಶ್ಯ ಅನುಭವ ಏನಿತ್ತು? ಈ ಸ್ಟೋರಿ ನೋಡಿ..
India News Live 13th July: ಬೇಬಿ ಬಂಪ್‌ನಲ್ಲಿ ಮಿಂಚಿದ ದೀಪಿಕಾ - ರಣವೀರ್ ಜೊತೆ ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್
ಬಾಲಿವುಡ್‌ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ, ಸದ್ಯ ಗರ್ಭಾವಸ್ಥೆಯ ಮೂರನೇ ಹಂತದಲ್ಲಿದ್ದಾರೆ (third trimester).
India News Live 13th July: 12ನೇ ವಯಸ್ಸಲ್ಲೇ ಕಂಪೆನಿ CEO - 3 ದೇಶಗಳ ವಹಿವಾಟು; ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ಬಾಲೆ
India News Live 13th July: ಇ20 ಪೆಟ್ರೋಲ್‌ನಿಂದ ಮೈಲೇಜ್ ಕುಸಿತ, ಯೂಟ್ಯೂಬರ್ ಆರೋಪಕ್ಕೆ ಮರ್ಸಿಡೀಸ್ ಬೆಂಜ್ ಕೊಟ್ಟ ಉತ್ತರವೇನು?
ಇ20 ಪೆಟ್ರೋಲ್ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ಯೂಟ್ಯೂಬರ್ ತನ್ನ ಬೆಂಜ್ ಕಾರಿನ ಮೈಲೇಜ್ ಕುಸಿತವಾಗಿದ್ದು ಮಾತ್ರವಲ್ಲ ಎಂಜಿನ್ ಕೂಡ ಶೀಗ್ರದಲ್ಲೇ ಹಾಳಾಗಲಿದೆ ಎಂದು ಆರೋಪಿಸಿದ ವಿಡಿಯೋಗೆ ಖುದ್ದು ಮರ್ಸಿಡೀಸ್ ಬೆಂಜ್ ಉತ್ತರ ನೀಡಿದೆ.
India News Live 13th July: ಜಗಳದ ಭರದಲ್ಲಿ ಕೋಪದಿಂದ ಮೊಬೈಲ್ ಫೋನ್ ಎಸೆದ ಪತ್ನಿ - ತಲೆಗೆ ಬಿದ್ದು ಪತಿಯ ಸಾವು- ಆಗಿದ್ದೇನು
India News Live 13th July: 900ರೂ ಸ್ಕಾಲರ್‌ಶಿಪ್ ಡ್ರಾ ಮಾಡಲು ಹೋದ 7ನೇ ತರಗತಿ ಬಾಲಕಿಗೆ ಕಾದಿತ್ತು ಅಚ್ಚರಿ, 759 ಕೋಟಿ ರೂ ಜಾಕ್‌ಪಾಟ್
ಕಡು ಬಡತನದ ಕುಟುಂಬ. 7ನೇ ತರಗತಿ ಬಾಲಕಿ ಶೂ ಹರಿದಿತ್ತು. ಹೊಸ ಶೂ ಖರೀದಿಸಲು ಸ್ಕಾಲರ್‌ಶಿಪ್ ಹಣ ಡ್ರಾ ಮಾಡಲು ಅಣ್ಣನ ಜೊತೆ ಎಟಿಎಂ ಬಳಿ ತೆರಳಿದ್ದಾಳೆ. ಆದರೆ ಸ್ಕಾಲರ್‌ಶಿಪ್ ಚೆಕ್ ಮಾಡಿದಾಗ ಅಚ್ಚರಿ ಕಾದಿದೆ. ಕಾರಣ ಖಾತೆಯಲ್ಲಿದ್ದಿದ್ದು ಬರೋಬ್ಬರಿ 759 ಕೋಟಿ ರೂಪಾಯಿ.
India News Live 13th July: ಐಪಿಎಲ್‌ನಲ್ಲಿ ನೆಲಕಚ್ಚಿದ ಚೆನ್ನೈ - ಹಳೆ ಕುದುರೆಗಳಿಗೆ ಗೇಟ್‌ಪಾಸ್ ನೀಡಲು ಶುರು ಮಾಡಿದ ಸಿಎಸ್‌ಕೆ ಫ್ರಾಂಚೈಸಿ!
India News Live 13th July: ಮೀನುಗಾರನ ಬಲೆಗೆ ಬಿದ್ದ ಅಪರೂಪದ ಕಡಲ ಹಸು, ಆತ್ಮೀಯವಾಗಿ ಮರಳಿ ಸಮುದ್ರಕ್ಕೆ ಬಿಟ್ಟು ಮಾನವೀಯತೆ
ತಮಿಳುನಾಡಿನ ಪುದುಕ್ಕೊಟ್ಟೈ ಕರಾವಳಿಯಲ್ಲಿ, ಮೀನುಗಾರನೊಬ್ಬ ತನ್ನ ಬಲೆಗೆ ಸಿಕ್ಕ ಅಪರೂಪದ ಕಡಲ ಹಸುವನ್ನು (ಡುಗಾಂಗ್) ಪ್ರೀತಿಯಿಂದ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾನೆ. ಈ ಮಾನವೀಯ ಘಟನೆಯು, ವನ್ಯಜೀವಿ ಸಂರಕ್ಷಣಾ ಇಲಾಖೆಯು ವರ್ಷಗಳಿಂದ ನಡೆಸಿದ ಜಾಗೃತಿ ಕಾರ್ಯಕ್ರಮಗಳ ಯಶಸ್ಸಿಗೆ ಸಾಕ್ಷಿಯಾಗಿದೆ.
India News Live 13th July: S Janaki - ದಕ್ಷಿಣ ಭಾರತದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅನ್ಯಾಯ, ಸಿಡಿದೆದ್ದ ಎಸ್ ಜಾನಕಿ; ಮುಂದೆ ಆಗಿದ್ದು ಇತಿಹಾಸ!
2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. ಆ ಮೂಲಕ ಈ ಮೇರು ಗಾಯಕಿ ಇತಿಹಾಸ ಸೃಷ್ಟಿಸಿದ್ದಾರೆ.
India News Live 13th July: ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಆದೇಶವು ಚಾಲ್ತಿಯಲ್ಲಿರುವ 'ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958'ಕ್ಕೆ ವಿರುದ್ಧವಾಗಿದೆ ಎಂದಿದೆ.
India News Live 13th July: Cancer Risk - ಕ್ಯಾನ್ಸರ್ ಬರಲು ಕಾರಣವಾಗುವ ನಿಮ್ಮ 5 ಕೆಟ್ಟ ಹವ್ಯಾಸಗಳನ್ನು ಇಂದೇ ಬಿಟ್ಟುಬಿಡಿ! ಇದು WHO ವಾರ್ನಿಂಗ್
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 75 ವರ್ಷಕ್ಕಿಂತ ಮುಂಚೆ ಪ್ರತಿ 10 ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯಿತ್ತು. ಬದಲಾಗುತ್ತಿರುವ ಜೀವನಶೈಲಿ ಮತ್ತು ತಡವಾದ ರೋಗನಿರ್ಣಯದಿಂದಾಗಿ 2050ರ ವೇಳೆಗೆ ವಾರ್ಷಿಕವಾಗಿ 2.8 ದಶಲಕ್ಷ ಹೊಸ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.